ಕೈತುಂಬಾ ಬಳೆತೊಟ್ಟು ಬಳೆಗಾರನಿಗೆ ಅಮೃತಧಾರೆ ಭೂಮಿಕಾ ಕೊಟ್ಟಳು ಈ ಸಂದೇಶ- ಸೂಪರ್​ ಎಂದ ಫ್ಯಾನ್ಸ್

Published : Jun 09, 2024, 12:48 PM ISTUpdated : Jun 09, 2024, 01:59 PM IST
ಕೈತುಂಬಾ ಬಳೆತೊಟ್ಟು ಬಳೆಗಾರನಿಗೆ ಅಮೃತಧಾರೆ ಭೂಮಿಕಾ ಕೊಟ್ಟಳು ಈ ಸಂದೇಶ- ಸೂಪರ್​ ಎಂದ ಫ್ಯಾನ್ಸ್

ಸಾರಾಂಶ

ಅಮೃತಧಾರೆ ಸೀರಿಯಲ್​ ಭೂಮಿಕಾ ಕೈತುಂಬಾ ಬಳೆ ತೊಟ್ಟು ಬಳೆಗಾರನಿಗೆ ಕೊಡ್ತಿರೋ ಸಂದೇಶವೇನು? ರೀಲ್ಸ್​ ನೋಡಿ ಫ್ಯಾನ್ಸ್​ ಫಿದಾ   

ಸದ್ಯ ಸೀರಿಯಲ್​ ಪ್ರೇಮಿಗಳ ಮನಸ್ಸನ್ನು ಗೆಲ್ಲುತ್ತಿರುವ ಸೀರಿಯಲ್​ಗಳ ಪೈಕಿ ಜೀ ಕನ್ನಡದ ಅಮೃತಧಾರೆ ಅಗ್ರಸ್ಥಾನ ಪಡೆದಿದೆ. ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಅಳುಮುಂಜಿ ಮಹಿಳೆಯರು, ವಿಲನ್​ಗಳೇ ಭರ್ಜರಿ ಗೆಲುವು ಸಾಧಿಸುತ್ತಿರುವುದನ್ನು ನೋಡಿ ನೋಡಿ ಬೇಸತ್ತ ವೀಕ್ಷಕರಿಗೆ ಅಮೃತಧಾರೆ ನಿಜಕ್ಕೂ ಅಮೃತವನ್ನೇ ಉಣಬಡಿಸುತ್ತಿದೆ. ಇದಕ್ಕೆ ಕಾರಣ, ಎಲ್ಲಾ ಸೀರಿಯಲ್​ಗಳಂತೆ ಇಲ್ಲಿ ಲೇಡಿ ವಿಲನ್​ ಇದ್ದರೂ ಸದಾ ಇಲ್ಲಿ ವಿಲನ್​ ಸೋಲುತ್ತಿದ್ದಾಳೆ. ವಿಲನ್​ ಆಗಿರೋ ಶಕುಂತಲಾ ದೇವಿ ಇನ್ನೇನು ಕೆಟ್ಟದ್ದು ಮಾಡುತ್ತಾಳೋ ಎನ್ನುವಷ್ಟರಲ್ಲಿಯೇ ನಾಯಕಿ ಭೂಮಿಕಾ ಅವಳ ಎಲ್ಲಾ ಪ್ಲ್ಯಾನ್​ಗಳನ್ನು ಠುಸ್ ಮಾಡುವ ಕಾರಣ, ವೀಕ್ಷಕರಿಗೆ ಈ ಸೀರಿಯಲ್​ ವಿಭಿನ್ನವಾಗಿ ಕಾಣಿಸುತ್ತಿದೆ. ಅದರ ಜೊತೆ ಮಧ್ಯ ವಯಸ್ಸಿನಲ್ಲಿ ಮದುವೆಯಾದ ಜೋಡಿಯ ನವೀರಾದ ಪ್ರೇಮ ಕಥೆಯೂ ಇಷ್ಟವಾಗುತ್ತಿದೆ.

ಈ ಸೀರಿಯಲ್​ ಎಲ್ಲರ ಮನ ಗೆಲ್ಲುವಲ್ಲಿ ಕಾರಣ, ಗೌತಮ್​ ಪಾತ್ರಧಾರಿ ರಾಜೇಶ್​ ಹಾಗೂ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್​ ಅವರ ಅಭಿನಯ. ಛಾಯಾ ಸಿಂಗ್​ ಅವರ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ನಟಿ ಕೈತುಂಬಾ ಬಳೆ ತೊಟ್ಟು ಭಾಗ್ಯದ ಬಳೆಗಾರ ಹೋಗಿ ಬಾ ನನ್​ ತವರಿಗೆ ಹಾಡಿಗೆ ರೀಲ್ಸ್​ ಮಾಡಿದ್ದು, ಇದನ್ನು ಅಭಿಮಾನಿಗಳು ಸಕತ್​ ಇಷ್ಟಪಡುತ್ತಿದ್ದಾರೆ. ನೀವೆಂದ್ರೆ ನಮಗೆ ಇಷ್ಟ ಎನ್ನುತ್ತಿದ್ದಾರೆ. ಅಮೃತಧಾರೆಯಲ್ಲಿ ಅವರ ನಟನೆಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. 

ಒಂದು ಜೋಕ್​ ಹೇಳ್ತೀನಿ ಅಂತ ಇಂಥ ಜೋಕ್​ ಹೇಳೋದಾ ಸೀತಾರಾಮ ಪ್ರಿಯಾ?

ಇನ್ನು ಛಾಯಾ ಸಿಂಗ್​ ಕುರಿತು ಹೇಳುವುದಾದರೆ,  ಇನ್ನು ಛಾಯಾ ಅವರ ಹಿನ್ನೆಲೆ ಕುರಿತು ಹೇಳುವುದಾದರೆ, ಇವರ  ಪಾಲಕರು ಉತ್ತರ ಪ್ರದೇಶದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದ ರಜಪೂತರು. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಛಾಯಾ, ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲಿ ನಟಿಸಿದ್ದಾರೆ.  ಕನ್ನಡ ಸಿನಿಮಾರಂಗದಿಂದ ನಟನೆ ಆರಂಭಿಸಿದ ಛಾಯಾ ಸಿಂಗ್, 2000ನೇ ಇಸವಿಯಲ್ಲಿ ತೆರೆಕಂಡ ಪಿ ಶೇಷಾದ್ರಿ ನಿರ್ದೇಶನದ `ಮುನ್ನಡಿ' ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇವರು ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಬಳಿಕ ರಾಷ್ಟ್ರಗೀತೆ, ಚಿಟ್ಟೆ, ಗುಟ್ಟು ಸಿನಿಮಾಗಳಲ್ಲಿ ನಟಿಸಿದರು. ನಂತರ ಅನಿರುದ್ಧ್ ನಟನೆಯ 'ತುಂಟಾಟ' ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. 

ಅಮೃತಧಾರೆಯ ರೀಲ್​ ಲೈಫ್​ನಲ್ಲಿ ಗೌತಮ್​ ಈಕೆಯ ಪತಿಯಾದರೆ, ರಿಯಲ್​ ಲೈಫ್​ ಪತಿಯ ಹೆಸರು. ಕೃಷ್ಣ. ಕೃಷ್ಣ ಎನ್ನುವವರ ಜೊತೆ ಛಾಯಾ ಅವರ ಮದುವೆಯಾಗಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ಅವರು ಪತಿಯ ಜೊತೆ ಆಗಾಗ ಫೋಟೋ ಶೇರ್​  ಮಾಡಿಕೊಳ್ಳುತ್ತಿರುತ್ತಾರೆ.  ಮದುವೆಯಾಗಿ 11 ವರ್ಷಗಳೇ ಕಳೆದಿವೆ. ಬೆಂಗಳೂರಿನ ಬೆಡಗಿ  ಛಾಯಾ ಸಿಂಗ್ ನಿಜ ಜೀವನದಲ್ಲಿ ತುಂಬಾ ಸಾಫ್ಟ್​ ಅಂತೆ. ಅವರಿಗೆ  ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ  ನಟಿಸುವ ಸಮಯದಲ್ಲಿ.  ಕೃಷ್ಣ ಅವರೂ  ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ.  

ರೀಲ್ಸ್​ ಜೋಡಿಯ ಕಣ್ಣೀರ ಕಥೆ... ನಿವೇದಿತಾಗೆ ಇದನ್ನು ತೋರಿಸಿ ಬುದ್ಧಿ ಹೇಳಿ ಅಂತಿದ್ದಾರೆ ನೆಟ್ಟಿಗರು!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial: ತೇಜಸ್‌ ತಪ್ಪಿಸ್ಕೊಂಡು ಹೊರಬಂದಾಯ್ತು; ಈಗ ಸಮಸ್ಯೆ ಬಗೆಹರಿಯೋದಿಲ್ಲ, ಅಸಲಿಗೆ ಶುರುವಾಗತ್ತೆ
ಪತ್ನಿ, ಮಗಳ ಜೊತೆ ಹೋಗಿ ಮನೆಗೆ ಹೊಸ ಕಾರ್‌ ತಂದ Amruthadhaare Serial ನಟ ರಾಜೇಶ್‌ ನಟರಂಗ!