
ಜಯಂತ್ ಹೆಸರು ಕೇಳಿದ್ರೆನೇ ಎಷ್ಟೋ ಹೆಣ್ಣುಮಕ್ಕಳು ಬೆಚ್ಚಿಬೀಳುತ್ತಿದ್ದಾರೆ. ಇದಕ್ಕೆ ಕಾರಣ, ಲಕ್ಷ್ಮೀ ನಿವಾಸ ಸೀರಿಯಲ್ ನಾಯಕ ಸೈಕೋ ಜಯಂತ್! ಸೀರಿಯಲ್ ವೀಕ್ಷಕರಿಗೆ ತಿಳಿದಿರುವಂತೆ, ಜಯಂತ್ ಸೈಕೋ. ತಮ್ಮನ್ನು ಹುಚ್ಚನಂತೆ ಪ್ರೀತಿಸೋ ಗಂಡ ಬೇಕು ಎಂದು ಬಯಸುವ ಹೆಣ್ಣುಮಕ್ಕಳು ಈ ಜಯಂತ್ನನ್ನು ಒಮ್ಮೆ ನೋಡಿಬಿಟ್ಟರೆ ಲೈಫ್‌ನಲ್ಲಿ ಮದ್ವೆನೇ ಬೇಡಪ್ಪಾ ಎನ್ನುತ್ತಾರೆ. ಅಂಥ ಕ್ಯಾರೆಕ್ಟರ್ ಈತನದ್ದು. ಏಕೆಂದರೆ ಈ ಸೀರಿಯಲ್ ನಾಯಕ ಜಯಂತ್ ಸೈಕೋಪಾತ್ ಎನ್ನುವುದು ಈ ಸೀರಿಯಲ್ ವೀಕ್ಷಕರಿಗೆ ಗೊತ್ತು. ಈತನಿಗೆ ಪತ್ನಿಯ ಮೇಲೆ ಅದೆಷ್ಟು ಪ್ರೀತಿ ಎಂದರೆ ಅದೇ ಮುಳ್ಳಾಗುತ್ತಿದೆ. ಏಕೆಂದರೆ, ಈತನಿಗೆ ಪತ್ನಿಯ ಮೇಲೆ ಇರುವುದು ಕೇವಲ ಪ್ರೀತಿ ಅಲ್ಲ, ಇದು Obsessive Love Disorder. ಇದೇ ಕಾರಣಕ್ಕೆ ಪ್ರತಿ ಕ್ಷಣವೂ ಆತನಿಗೆ ಪತ್ನಿಯ ಮೇಲೆ ಸಂಶಯ. ಹಾಗೆಂದು ಸಂಶಯದ ಪಿಶಾಚಿ ಎಂದಲ್ಲ. ಕೆಲವು ಗಂಡಸರಿಗೆ ಮತ್ತು ಹೆಂಗಸರಿಗೆ ಕೂಡ ಸಂಶಯ ಎನ್ನುವುದು ಇರುತ್ತದೆ. ಪತಿ-ಪತ್ನಿ ಯಾರ ಜೊತೆಯಾದ್ರೂ ನಗುತ್ತಾ ಮಾಡಿದರೆ ಅದನ್ನು ಸಹಿಸುವುದಿಲ್ಲ. ಆದರೆ ಇಲ್ಲಿ ಜಯಂತ್ ಕ್ಯಾರೆಕ್ಟರ್ ಹಾಗಲ್ಲ. ಈತನಿಗೆ ಇರುವುದು ಪ್ರೇಮದ ಗೀಳು. ಪತ್ನಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಾನೆ. ಆದರೆ ಆಕೆ ಮಾತ್ರ ತನ್ನವಳಾಗಿಯೇ ಇರಬೇಕು ಎನ್ನುವ ಸ್ಥಿತಿ.
ಇಂಥ ಸೈಕೋ ಜಯಂತ್ ನಾಯಕಿಯಾಗ್ತಾನೆ ಅಂದ್ರೆ ನಂಬ್ತೀರಾ? ನಿಜರೀ... ನಾಯಕ ಅಲ್ಲ ನಾಯಕಿನೇ... ಹೆಣ್ಣಿನ ರೋಲ್ ಇವರದ್ದು. ಈ ಚಿತ್ರದ ಹೆಸರು ಮಿಸ್ಟರ್ ರಾಣಿ (Mister Rani). ಈ ಚಿತ್ರ ಇದೇ 7ರಂದು ಬಿಡುಗಡೆಯಾಗಲಿದೆ. ಇದಾಗಲೇ ಈ ಸಿನಿಮಾದ ಪೋಸ್ಟರ್ ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿದ್ದು ಈ ರಾಣಿಯನ್ನು ನೋಡಿದ್ರೆ, ನಿಜವಾಗಿಯೂ ಈ ರಾಣಿ, ಸೈಕೋ ಜಯಂತಾ ಎಂದು ಕೇಳುವುದು ಉಂಟು. ಹುಡುಗನೋ, ಹುಡುಗಿಯೋ ಗೊತ್ತಾಗದ ರೀತಿಯಲ್ಲಿ ಜಯಂತ್ ಪಾತ್ರಧಾರಿ ದೀಪಕ್ ಸುಬ್ರಹ್ಮಣ್ಯ ಕಾಣಿಸುತ್ತಿದ್ದಾರೆ. ಪುರುಷ ಒಬ್ಬ ಮಹಿಳೆಯ ರೋಲ್ ಎಂದರೆ, ಅದು ಹಾಸ್ಯಮಯವೇ ಆಗಿರಲು ಸಾಧ್ಯ. ವಿನೂತನ ಶೈಲಿಯ ಕಾಮಿಡಿ ಎಂಟರ್ ಟೈನರ್ ಚಿತ್ರ ಇದಾಗಿದೆ. ಈ ಚಿತ್ರವನ್ನು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಖ್ಯಾತಿಯ ನಿರ್ದೇಶಕ ಮಧುಚಂದ್ರ ನಿರ್ದೇಶಿಸಿದ್ದಾರೆ. ಇದರ ಕಥೆ ಏನೆಂದರೆ, ಹೀರೋ ಆಗಬೇಕೆಂದು ಸಿನಿಮಾಕ್ಕೆ ಬಂದ ಹುಡುಗ ಹೀರೋಯಿನ್ ಆಗುವ ಕಥೆ!
ಮದ್ವೆ ಫಿಕ್ಸ್ ಆದಾಗ್ಲೂ ನನ್ನಮ್ಮಂಗೆ ಆ ಜಯಂತನೇ ಕಾಡ್ತಿದ್ದ, ಮದ್ವೆ ಮಾಡಿಸೋಕೆ ಹೆದರಿದ್ರು ಎಂದ 'ಚಿನ್ನುಮರಿ'
ಇದೀಗ ಈ ಸೈಕೋ ಜಯಂತ್, ಕೀರ್ತಿ ಎಂಟರ್ಟೇನ್ಮೆಂಟ್ ಚಾನೆಲ್ಗೆ ತಮ್ಮ ಲಕ್ಷ್ಮೀ ನಿವಾಸ ಜೋಡಿ ಚಿನ್ನುಮರಿಯ ಜೊತೆ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ತಮ್ಮ ಜೀವನದ ಹಲವು ಪಯಣದ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಚಿತ್ರದ ಪ್ರಮೋಷನ್ ಕೂಡ ಡಿಫರೆಂಟ್ ರೀತಿಯಲ್ಲಿ ಮಾಡಿದ್ದಾರೆ. ಫೆ.7ರಂದು ತಮ್ಮ ಚಿತ್ರವನ್ನು ನೋಡಲು ಸೀರಿಯಲ್ ಪತ್ನಿಗೆ ಕರೆಯುವಾಗಲೂ ಸೈಕೋ ಜಯಂತ್ ಮೈಮೇಲೆ ಬಂದವರ ರೀತಿಯಲ್ಲಿ ಮಾತನಾಡಿದ್ದು, ವಿಭಿನ್ನ ರೀತಿಯಲ್ಲಿ ಪ್ರಮೋಷನ್ ಮಾಡಿದ್ದಾರೆ.
ಇನ್ನು ದೀಪಕ್ ಸುಬ್ರಮಣ್ಯ ಕುರಿತು ಹೇಳುವುದಾದರೆ, ಇವರು ರಂಗಭೂಮಿ ಕಲಾವಿದ. ಎರಡು ದಶಕಗಳ ಬಣ್ಣದ ಲೋಕದಲ್ಲಿ ಪಳಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ಇದಾಗಲೇ, ಸಾಲಗಾರ , ಜಾರು ಬಂಡೆ , ಪಿಂಕಿ ಎಲ್ಲಿ..? , ಶುದ್ಧಿ , ಆಯಾನಾ , ಸಾರಾಂಶ ಸೇರಿದಂತೆ ಹಲವು ಸಿನಿಮಾ ಮಾಡಿದ್ದಾರೆ. ಸಿನಿಮಾ ರಂಗ, ರಂಗಭೂಮಿ ಹಾಗೂ ಕಿರುತೆರೆ ಮೂರರಲ್ಲೂ ಈಗ ದೀಪಕ್ ಸುಬ್ರಮಣ್ಯ ಬಿಜಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷ ಪ್ರಸಾರವಾಗಿದ್ದ ದಾಸ ಪುರಂದರ ಧಾರಾವಾಹಿಯಲ್ಲಿ ಪುರಂದರನಾಗಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು. ಈ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಪಡೆದರು. ಇದೀಗ ಲಕ್ಷ್ಮಿ ನಿವಾಸದಲ್ಲಿ ಸಕತ್ ಫೇಮಸ್ ಆಗಿದ್ದಾರೆ.
ಮೊದಲು ಮೀಟ್ ಆದಾಗ್ಲೇ ಹೈಫೈ ಇಂಗ್ಲಿಷ್ ಮಾತಾಡಿ ನನ್ನನ್ನು ಅಳಿಸೇ ಬಿಟ್ರು: ಲಕ್ಷ್ಮೀ ನಿವಾಸ ಚಿನ್ನುಮರಿ ಕಥೆ ಕೇಳಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.