
ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಹೋಗಿಬಂದ ಧಾರಾವಾಹಿ ನಟಿ ಇದೀಗ ಗಂಡನಿಂದ ದೂರವಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮುಕ್ತವಾಗಿ ಬೇರೊಬ್ಬ ವ್ಯಕ್ತಿಯನ್ನು ಸ್ನೇಹಿತನನ್ನಾಗಿ ಮಾಡಿಕೊಂಡಿದ್ದೇ ಗಂಡನ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಗಂಡನಿಂದ ಡಿವೋರ್ಸ್ ಕೇಳಲಾಗಿದೆ ಎಂಬ ವಿವಾದ ಹರಡಿದ್ದು, ಇದಕ್ಕೆ ಸ್ವತಃ ನಟಿಯೇ ಉತ್ತರ ನೀಡಿದ್ದಾರೆ.
ದಕ್ಷಿಣ ಭಾರತದ ಮಲೆಯಾಳಂ ಸಿನಿಮಾ ಮತ್ತು ಧಾರಾವಾಹಿ ನಟಿಯಾಗಿರುವ ವೀಣಾ ನಾಯರ್ ಅವರು ತಮ್ಮ ವೈಯಕ್ತಿಕ ಜೀವನ, ಮಗನ ವಿಚಾರ ಮತ್ತು ಇತರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಪತಿಯಿಂದ ದೂರವಾಗಿ ವಾಸ ಮಾಡುತ್ತಿದ್ದರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲ ಎಂದು ಆನ್‌ಲೈನ್ ಮಲಯಾಳಿ ಮನೋರಂಜನಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.
'ನನ್ನ ಮಗ ತುಂಬಾ ಸಂತೋಷವಾಗಿದ್ದಾನೆ. ಅವನು ನಮ್ಮಿಬ್ಬರನ್ನೂ ಮಿಸ್ ಮಾಡಿಕೊಳ್ಳುತ್ತಿಲ್ಲ. ಅವನ ತಂದೆ ಬಂದಾಗ ಅವರ ಜೊತೆ ಹೊರಗೆ ಹೋಗುತ್ತಾನೆ. ನಾನು ಒಬ್ಬ ತಾಯಿಯ ಪ್ರೀತಿಯನ್ನು ಮಾತ್ರ ಕೊಡಬಲ್ಲೆ. ತಂದೆಯ ಪ್ರೀತಿ ಕೊಡಲು ಸಾಧ್ಯವಿಲ್ಲ. ಅದು ಅವನಿಗೆ ಅವರಪ್ಪನ ಮೂಲಕವೇ ಸಿಗುತ್ತಿದೆ', ಎಂದು ವೀಣಾ ನಾಯರ್ ಹೇಳಿದರು. ನಮ್ಮಿಬ್ಬರ ನಡುವಿನ ಸಮಸ್ಯೆಯಿಂದ ದೂರವಾಗಿದ್ದೇವೆ ಮತ್ತು ಅದು ನನ್ನ ಮಗನ ಮೇಲೆ ಪರಿಣಾಮ ಬೀರಬಾರದು ಎಂದು ನಾನು ಬಯಸುತ್ತೇನೆ ಎಂದು ಹೇಳಿದರು. ಬಿಗ್‌ಬಾಸ್ ತಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರಿದೆ ಎಂಬ ವದಂತಿಗಳನ್ನು ನಿರಾಕರಿಸಿದರು.
ಇದನ್ನೂ ಓದಿ: ಮೊದಲು ಸಿಕ್ಕಿದ್ದು 1500 ರೂಪಾಯಿ; ಕೊನೆಗೂ ಸಂಬಳ ರಿವೀಲ್ ಮಾಡಿದ ಬಿಗ್ ಬಾಸ್ ತ್ರಿವಿಕ್ರಮ್
ತಾನು ಎದುರಿಸುತ್ತಿರುವ ಬಾಡಿ ಶೇಮಿಂಗ್ ಬಗ್ಗೆಯೂ ವೀಣಾ ಮುಕ್ತವಾಗಿ ಮಾತನಾಡಿದರು. 'ಇಂತಹ ಕಾಮೆಂಟ್‌ಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಹೇಳುವವರು ಹೇಳುತ್ತಲೇ ಇರುತ್ತಾರೆ. ಮೊದಲು ಕೆಲವರು ತಮಾಷೆಯಾಗಿ ಕೇಳುತ್ತಿದ್ದರು, ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಕೇಳಲು ಪ್ರಾರಂಭಿಸಿದ್ದಾರೆ. ತೂಕ ಹೆಚ್ಚಾಗಿದೆ ಎಂದು ನನಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ನಾನು ಚಿಕ್ಕಂದಿನಿಂದಲೂ ಹೀಗೆಯೇ ಇದ್ದೇನೆ. ಎರಡು ಮೂರು ವರ್ಷಗಳ ಹಿಂದೆ 20 ಕೆಜಿ ತೂಕ ಇಳಿಸಿಕೊಂಡಾಗ ನನ್ನನ್ನು ಸ್ವಲ್ಪ ತೂಕ ಕಡಿಮೆಯಾಗಿ ಎಲ್ಲರೂ ನೋಡಿರಬಹುದು. ಶಾಲೆಯಲ್ಲಿ ಓದುವಾಗ ತೂಕದ ಕಾರಣದಿಂದ ನನ್ನನ್ನು ಕೀಟಲೆ ಮಾಡುತ್ತಿದ್ದರು. ಹೇಳುವವರು ಹೇಳಲಿ ಬಿಡಿ, ಇದಕ್ಕೆ ನಾನು ಯಾವುದೇ ತಲೆ ಕೆಡಿಸಿಕೊಳ್ಳದೇ ಮುಂದೆ ಹೋಗುವುದರ ಬಗ್ಗೆ ಆಲೋಚನೆ ಮಾಡುತ್ತೇನೆ' ಎಂದು ವೀಣಾ ಹೇಳಿದರು.
ಇದನ್ನೂ ಓದಿ: BBK 11: ಮತ್ತೆ ಅನುಮಾನ ಸೃಷ್ಟಿ ಮಾಡಿದ ಗೌತಮಿ ಜಾದವ್ ಮಾವ ಗಣೇಶ್ ಕಾಸರಗೋಡು ಪೋಸ್ಟ್!
ಕಿರುತೆರೆ ಧಾರಾವಾಹಿಗಳ ಮೂಲಕ ಅಭಿನಯ ಕ್ಷೇತ್ರಕ್ಕೆ ಪ್ರವೇಶಿಸಿದ ವೀಣಾ ನಾಯರ್, ಹಾಸ್ಯನಟಿಯಾಗಿ ಗುರುತಿಸಿಕೊಂಡಿದ್ದರು. ನಂತರ ಸಿನಿಮಾಗಳಲ್ಲೂ ಸಕ್ರಿಯರಾದರು. 'ವೆಳ್ಳಿಮೂಂಗ' ಚಿತ್ರದಲ್ಲಿನ ಅವರ ಪಾತ್ರ ಗಮನ ಸೆಳೆಯಿತು. ಬಿಗ್ ಬಾಸ್ ಮಲಯಾಳಂನ 2ನೇ ಸೀಸನ್‌ನಲ್ಲಿ ಸ್ಪರ್ಧಿಸಿದ್ದರು. ಇದಾದ ನಂತರ ಗಂಡ ತಮ್ಮಿಂದ ದೂರವಾಗುತ್ತಿದ್ದಾರೆ ಎಂಬ ಮಾಹಿತಿ ಸುಳ್ಳು ಎಂದು ಹೇಳಿಕೊಂಡಿದ್ದಾರೆ. ಈಗ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.