
Lakshmi Nivasa Serial Episode: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಲಲಿತಾ-ವಿಶ್ವ ಮನೆಯಲ್ಲಿ ಜಾಹ್ನವಿ ಇರೋದು ಜಯಂತ್‌ಗೆ ಗೊತ್ತಾಗಿದೆ. ಚಿನ್ನುಮರಿಯನ್ನು ಪಡೆದುಕೊಳ್ಳಲು ಅವನು ಏನು ಬೇಕಿದ್ರೂ ಮಾಡ್ತಾನೆ, ಈಗ ಅವನು ಕೊಲೆ ಮಾಡಿದ್ದಾನಾ?
ಇನ್ನು ಲಕ್ಷ್ಮೀ ತನ್ನ ಮನೆಗೆ ಬಂದರೆ, ಮಾವ ಸರಿ ಹೋಗ್ತಾರೆ ಎಂದು ಲಲಿತಾ ಬಯಸಿದ್ದಳು. ಶ್ರೀನಿವಾಸ್‌ನನ್ನು ಮದುವೆ ಆಗಿದ್ದಕ್ಕೆ ಲಕ್ಷ್ಮೀ ತನ್ನ ತವರು ಮನೆಯಿಂದ ದೂರ ಆಗಿದ್ದಳು. ಇಷ್ಟು ವರ್ಷದಲ್ಲಿ ಅಪ್ಪ ಹೇಗಿದ್ದಾರೆ ಎಂದು ಲಕ್ಷ್ಮೀ ಒಮ್ಮೆಯೂ ಕೇಳಿರಲಿಲ್ಲ. ಅಣ್ಣನಿಗೆ ಮಗ ಇರೋದು ಲಕ್ಷ್ಮೀಗೆ ಗೊತ್ತಿದ್ದರೂ ಕೂಡ, ಅವನು ವಿಶ್ವ ಎನ್ನೋದು ಗೊತ್ತಿರಲಿಲ್ಲ.
ಮಾವನ ಆರೋಗ್ಯ ಸರಿ ಹೋಗಬೇಕು ಎಂದು ಲಲಿತಾ ಬಯಸಿದ್ದಳು. ಹೀಗಾಗಿ ಅವಳು ಲಕ್ಷ್ಮೀಗೆ ಮನೆಗೆ ಬರಲೇಬೇಕು ಎಂದು ಒತ್ತಾಯ ಮಾಡಿದ್ದಳು. ಇನ್ನೊಂದು ಕಡೆ ತನ್ನ ಮಗಳು ಜಾನು ಸತ್ತು ಹೋಗಿದ್ದಾಳೆ ಎಂದು ಲಕ್ಷ್ಮೀ ಅಂದುಕೊಂಡಿದ್ದಳು. ಆದರೆ ಆ ಜಾನು ತನ್ನ ಮನೆಯಲ್ಲಿದ್ದಾಳೆ ಎಂದು ಲಕ್ಷ್ಮೀಗೆ ಹೇಳೋಣ ಎಂದು ಲಲಿತಾ ಬಯಸಿದ್ದಳು. ಒಟ್ಟೂ ಎರಡು ಕೆಲಸ ಆದಂತಾಯ್ತು, ಹೀಗಾಗಿ ಲಕ್ಷ್ಮೀ ತನ್ನ ಮನೆಗೆ ಬರಲಿ ಎಂದು ಲಲಿತಾ ಬಯಸಿದರೆ ಆಗಿದ್ದೇ ಬೇರೆ.
ನೀನು ಏನೇ ಮಾಡಿದರೂ ಕೂಡ ನಾನು ಜಾಹ್ನವಿಯನ್ನು ನಿನಗೆ ಸಿಗೋಕೆ ಬಿಡೋದಿಲ್ಲ ಎಂದು ಲಲಿತಾ, ಜಯಂತ್‌ಗೆ ಹೇಳಿದ್ದಳು. ಜಯಂತ್ ಕೂಡ ಅವಳ ಮನೆಗೆ ಹೋಗಿದ್ದಾನೆ. ಅಲ್ಲಿ ಅವನು ಬಾಗಿಲು ಒಪನ್ ಮಾಡಿದ್ದಾನೆ. ಇನ್ನು ಮರೆಯಲ್ಲಿ ನಿಂತು ಸಂತೋಷ್ ನೋಡುತ್ತ ನಿಂತಿದ್ದನು. ಮನೆಯಿಂದ ಹೋಗಿಲ್ಲ ಎಂದರೆ ಯಜಮಾನರಿಗೆ ಹೇಳಿ, ಮನೆಯಿಂದ ಹೊರಹಾಕ್ತೀನಿ ಎಂದು ಲಲಿತಾ, ಜಯಂತ್‌ಗೆ ವಾರ್ನ್ ಮಾಡಿದ್ದಳು. ಆಗ ಜಯಂತ್ ಸಿಟ್ಟಾಗಿದ್ದಾನೆ. ಅವನು ಅಸಲಿ ಅವಾತರ ಪ್ರದರ್ಶನ ಮಾಡಿದ್ದಾನೆ.
“ನನ್ನ ಮಗ ಜಾಹ್ನವಿಯನ್ನು ಪ್ರೀತಿ ಮಾಡಿದ್ದನು ಎನ್ನೋದು ಗೊತ್ತಿದ್ದರೆ, ನಾನು ಜಾಹ್ನವಿಯನ್ನು ಸೊಸೆ ಮಾಡಿಕೊಳ್ಳುತ್ತಿದ್ದೆ, ಇದರಿಂದ ನಮ್ಮ ಮನೆಯ ಎಲ್ಲ ಸಮಸ್ಯೆ ಬಗೆಹರಿಯುತ್ತಿತ್ತು. ನನ್ನ ಗಂಡನ ತಂಗಿ ಲಕ್ಷ್ಮೀ ಮಗಳು ಜಾಹ್ನವಿ ಎನ್ನೋದು ನಿನಗೆ ಗೊತ್ತಿಲ್ಲ. ಜಾಹ್ನವಿ ನಿನ್ನಂಥ ರಾಕ್ಷಸನನ್ನು ಮದುವೆ ಆಗಿರೋದು ನಮ್ಮ ಹಣೆಬರಹ, ನಿನ್ನ ನಾಟಕವನ್ನು ಎಲ್ಲರ ಮುಂದೆ ಹೇಳಿ ಅವಳಿಂದ ನಿನ್ನನ್ನು ದೂರ ಮಾಡುತ್ತಾನೆ” ಎಂದು ಲಲಿತಾ, ಜಯಂತ್‌ಗೆ ಹೇಳಿದ್ದಳು.
ಜಾಹ್ನವಿಯನ್ನು ಅವಳ ಪಾಲಕರಿಗೆ ಒಪ್ಪಿಸ್ತೀನಿ, ನೀನು ಜೈಲಿನಲ್ಲಿರಬೇಕು ಎಂದು ಲಲಿತಾ ಹೇಳಿದ್ದಾಳೆ. ಚಿನ್ನುಮರಿಗೋಸ್ಕರ ಜಯಂತ್, ಏನು ಬೇಕಿದ್ದರೂ ಮಾಡುತ್ತಾನೆ. ಈಗಾಗಲೇ ಅವನು ಸಾಕಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾನೆ. ನನ್ನ ದಾರಿಗೆ ಅಡ್ಡ ಬರಬೇಡಿ ಎಂದು ಜಯಂತ್ ಹೇಳಿದರೂ ಕೂಡ ಲಲಿತಾ ತಡೆಯುವ ಪ್ರಯತ್ನ ಮಾಡಿದ್ದಾನೆ. ಆಗ ಜಯಂತ್, ಲಲಿತಾಳನ್ನು ನೂಕಿದ್ದಾನೆ, ಆಗ ಲಲಿತಾ ಬಿದ್ದಿದ್ದಾಳೆ, ಅಲ್ಲೇ ಸತ್ತು ಹೋಗಿದ್ದಾಳೆ.
ಇದೆಲ್ಲವನ್ನು ಸಂತೋಷ್ ಮರೆಯಲ್ಲಿ ನಿಂತು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ. ಅಲ್ಲಿಗೆ ಜಯಂತ್ ಬಳಿ ವಿಡಿಯೋ ತೋರಿಸಿ, ಬ್ಯಾಕ್‌ಮೇಲ್ ಮಾಡಿ ಹಣ ಪಡೆಯುವ ಉದ್ದೇಶ ಇಟ್ಟುಕೊಂಡಿರುತ್ತಾನೆ. ಅಂದಹಾಗೆ ಇಂದು ಹೊಸ ಪ್ರೋಮೋ ರಿಲೀಸ್ ಆಗಿದ್ದು, ಬೆಳಗ್ಗೆ ಎದ್ದ ಜಾಹ್ನವಿಗೆ ಲಲಿತಾ ಅವರು ಬಿದ್ದಿರೋದು ಗೊತ್ತಾಗಿದೆ. ಎಲ್ಲರೂ ಬಂದು ನೋಡಿದಾಗ ಲಲಿತಾ ಪ್ರಾಣಪಕ್ಷಿ ಹೊರಟು ಹೋಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.