ಮಗಳ ಜೊತೆ ಸಕತ್​ ರೀಲ್ಸ್​ ಮಾಡಿದ ಲಕ್ಷ್ಮೀ ನಿವಾಸ ಗರತಿ ಭಾವನಾ: ಹೇಗಿದೆ ನೋಡಿ ಈ ಸ್ಟೈಲ್​?

Published : Feb 06, 2025, 05:04 PM ISTUpdated : Feb 06, 2025, 05:10 PM IST
ಮಗಳ ಜೊತೆ ಸಕತ್​ ರೀಲ್ಸ್​ ಮಾಡಿದ ಲಕ್ಷ್ಮೀ ನಿವಾಸ ಗರತಿ ಭಾವನಾ: ಹೇಗಿದೆ ನೋಡಿ ಈ ಸ್ಟೈಲ್​?

ಸಾರಾಂಶ

ಲಕ್ಷ್ಮೀ ನಿವಾಸ ಧಾರಾವಾಹಿಯ ಭಾವನಾ ಪಾತ್ರಧಾರಿ ದಿಶಾ ಮದನ್, ಕಿರುತೆರೆ ಮತ್ತು ರಿಯಾಲಿಟಿ ಶೋಗಳಲ್ಲಿ ಹೆಸರುವಾಸಿ. ವಿವಾಹಿತೆಯಾಗಿದ್ದು ಇಬ್ಬರು ಮಕ್ಕಳ ತಾಯಿ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಆಧುನಿಕ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 'ಫ್ರೆಂಚ್ ಬಿರಿಯಾನಿ' ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಮಹಿಳಾ ಸಾಧಕಿ ಪ್ರಶಸ್ತಿ ಪಡೆದಿದ್ದಾರೆ.

ಲಕ್ಷ್ಮೀ ನಿವಾಸದ ಭಾವನಾ ರೋಲ್​ ಹಲವರಿಗೆ ಇಷ್ಟವಾಗುತ್ತಿದೆ. ಸದಾ ಸೀರೆಯನ್ನುಟ್ಟು ಸಿಂಪಲ್​ ಆಗಿ ಡ್ರೆಸ್​ ಮಾಡಿಕೊಂಡಿರುವ ಭಾವನಾ ಮದುವೆಯಾದರೂ ದಾಂಪತ್ಯ ಜೀವನ ನಡೆಸದಾಕೆ. ಗಟ್ಟಿಗಿತ್ತಿಯಾದರೂ, ಈಗಷ್ಟೇ ಪತಿಯ ಮೇಲೆ ಲವ್​ ಶುರುವಾಗಿದೆ. ಆದರೂ ಈಕೆಯ ಕ್ಯಾರೆಕ್ಟರ್​ ಅಂದ್ರೆ ಅಭಿಮಾನಿಗಳಿಗೆ ಅದೇನೊ ಒಂಥರಾ ಇಷ್ಟ. ಭಾವನಾಳ ರಿಯಲ್​ ಹೆಸರು ದಿಶಾ ಮದನ್. ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಗಂಡ-ಹೆಂಡತಿ ಒಂದಾಗಿಲ್ಲ ನಿಜ. ಆದರೆ ಅಸಲಿ ಜೀವನದಲ್ಲಿ ದಿಶಾ ಅವರಿಗೆ ಇಬ್ಬರು ಮಕ್ಕಳು. ಕನ್ನಡ ಕಿರುತೆರೆಯಲ್ಲಿ ಕಳೆದ ಒಂದು ದಶಕದಿಂದಲೂ ನಟಿ ದಿಶಾ ಮದನ್ ಕಾಣಿಸಿಕೊಳ್ಳುತ್ತಿದ್ದಾರೆ. ಡಾನ್ಸ್ ಇಂಡಿಯಾ ಡಾನ್ಸ್, ಇಸ್ಮಾರ್ಟ್ ಸೂಪರ್ ಜೋಡಿ ಸೇರಿದಂತೆ ಕೆಲವು ರಿಯಾಲಿಟಿ ಷೋಗಳಲ್ಲಿಯೂ ಕಾಣಿಸಿಕೊಂಡಿದ್ದರು.   ಶಶಾಂಕ್ ವಾಸುಕಿ ಅವರನ್ನು ಮದುವೆಯಾದ ಬಳಿಕ ಚಿಕ್ಕ ಗ್ಯಾಪ್​ ತೆಗೆದುಕೊಂಡಿದ್ದ ನಟಿ ಮತ್ತೆ ಲಕ್ಷ್ಮೀ ನಿವಾಸದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಅಂದಹಾಗೆ, ಈ ಸೀರಿಯಲ್​ನಲ್ಲಿ ಗರತಿ ಗೌರಮ್ಮನ ರೀತಿ ಇರೋ ಭಾವನಾ ಅರ್ಥಾತ್​ ದಿಶಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇದ್ದು, ಹಾಟ್​ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿರುತ್ತಾರೆ. ಇವರನ್ನು ಮೊದಲಿಗೆ ನೋಡದವರು ನಿಜಕ್ಕೂ ಈಕೆ ಭಾವವನಾ ಎಂದು ಅಚ್ಚರಿಪಟ್ಟುಕೊಳ್ಳುವುದು ಉಂಟು. ಹಾಗಿರುತ್ತೆ ಇವರ ಗೆಟಪ್​. ಇದೀಗ ನಟಿ, ತಮ್ಮ ಪುತ್ರಿಯ ಜೊತೆ ಸಕತ್​ ರೀಲ್ಸ್​ ಮಾಡಿದ್ದು, ಅದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಬಾಬ್​ಕಟ್​ನಲ್ಲಿ ಕಾಣಿಸಿಕೊಂಡಿರೋ ದಿಶಾ ಅವರು ಮಗಳ ಜೊತೆ ಚಿಕ್ಕದೊಂದು ರೀಲ್ಸ್​ ಮಾಡಿ ಅದನ್ನು ಶೇರ್​ ಮಾಡಿಕೊಂಡಿದ್ದಾರೆ.  ದಿಶಾ ಮದನ್ ನಿಜ ಜೀವನದಲ್ಲಿ ಮಾಡರ್ನ್ ಲೇಡಿ. ತನಗೆ ಇಷ್ಟವೆನಿಸಿದ ಔಟ್‌ಫಿಟ್ ಅನ್ನು ಧರಿಸುತ್ತಾರೆ. ಇತ್ತೀಚೆಗೆ ನಟಿ ಸೈಮಾ ಪ್ರಶಸ್ತಿ ಸಮಾರಂಭಕ್ಕೆ ಹೋಗಿದ್ದರು. ಈ ವೇಳೆ ಹಸಿರು ಬಣ್ಣದ ಡಿಸೈನರ್ ಗೌನ್ ಧರಿಸಿದ್ದು ನೆಟ್ಟಿಗರ ಗಮನ ಸೆಳೆದಿದ್ದರು. 

ನವವಧು ಚಂದನಾಗೆ ಪ್ರಾಂಕ್​ ಕಾಲ್​ ಮಾಡಿ ಸುಸ್ತು ಮಾಡಿದ ಲಕ್ಷ್ಮೀ ನಿವಾಸ ಸೈಕೋ ಜಯಂತ್​! ಹೀಗಿತ್ತು ನೋಡಿ ಮಜಾ

ಈಗ ದಿಶಾ ಮದನ್ ಅವರು ಪತಿ, ಮಕ್ಕಳ ಜೊತೆಗೆ ಹಾಂಗ್‌ಕಾಂಗ್ ಪ್ರವಾಸ ಮಾಡಿದ್ದಾರೆ. ಈಗಾಗಲೇ ಕೆಲ ದೇಶಗಳನ್ನು ಸುತ್ತಿರುವ ಈ ಜೋಡಿ ಈಗ ಹಾಂಗ್‌ಕಾಂಗ್ ಟ್ರಿಪ್‌ಗೆ ಹೋಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದರು. ಅಂದಹಾಗೆ, ಸುನಾಮಿ ಕಿಟ್ಟಿಗೆ ಜೊತೆ 'ಡ್ಯಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಹೆಜ್ಜೆ ಹಾಕಿದ್ದ ದಿಶಾ ಮದನ್ ಅವರು 'ಕುಲವಧು' ಧಾರಾವಾಹಿಯಲ್ಲಿ ವಚನಾ ಆಗಿ ನಟಿಸಿದ್ದರು.  

ಇನ್ನು ದಿಶಾ ಕುರಿತು ಹೇಳುವುದಾದರೆ ಇವರು ಬೆಳ್ಳಿ ಪರದೆಯ ಮೇಲೂ ಮಿಂಚಿದ್ದಾರೆ.  ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ  ನಟಿಸಿದ್ದಾರೆ.  'ಹಂಬಲ್ ಪೊಲಿಟಿಷಿಯನ್ ನಾಗರಾಜ್' ವೆಬ್ ಸೀರೀಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನೂ ಒಂದು ವಿಶೇಷ ಎಂದರೆ ಈಚೆಗಷ್ಟೇ ದಿಶಾ ಅವರಿಗೆ ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್‌ ಲಭಿಸಿತ್ತು. 2024ನೇ ಸಾಲಿನ ಪ್ರಶಸ್ತಿ ಇವರ ಪಾಲಿಗೆ ಬಂದಿದೆ. ನಟಿಯ  ನಟನಾ ಪಯಣವನ್ನು ಗಮನಿಸಿ, ಈ ಪ್ರಶಸ್ತಿ ನೀಡಲಾಗಿದೆ.   
 

ಮೊದಲು ಮೀಟ್​ ಆದಾಗ್ಲೇ ಹೈಫೈ ಇಂಗ್ಲಿಷ್ ಮಾತಾಡಿ ನನ್ನನ್ನು ಅಳಿಸೇ ಬಿಟ್ರು: ಲಕ್ಷ್ಮೀ ನಿವಾಸ ಚಿನ್ನುಮರಿ ಕಥೆ ಕೇಳಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಕ್ಷಿತಾ ಶೆಟ್ಟಿ ನಿಷ್ಕಲ್ಮಶ ನಗುವಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಂಡ ಅಭಿಮಾನಿಗಳು
Bigg Bossಗೆ ವೋಟ್​ ಮಾಡುವ ಅಭಿಮಾನಿಗಳಿಗೆ 'ಲಕ್ಷ್ಮೀ ನಿವಾಸ' ನಟಿ ಹೇಳಿರೋ ಕಿವಿಮಾತೇನು?