ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇರುವ ನೇಹಾ ಗೌಡ......ಗುಡ್ ಹೇಳಿದಾಗ ಚಂದನ್ ಶಾಕ್ ಆಗಲಿಲ್ಲ.....
ಕನ್ನಡ ಕಿರುತೆರೆಯ ಸೆಲೆಬ್ರಿಟಿ ಜೋಡಿ ನೇಹಾ ಗೌಡ ಮತ್ತು ನಟ ಚಂದನ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದ್ಧೂರಿಯಾಗಿ ಸೀಮಂತ ಮತ್ತು ಬೇಬಿ ಶವರ್ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ನೇಹಾ ಇದೀಗ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ.
ಈ ವರ್ಷ ಅನುಬಂಧ ಅವಾರ್ಡ್‌ನಲ್ಲಿ ನೇಹಾ ಗೌಡ ಮತ್ತು ಕವಿತಾ ಗೌಡ ಇಬ್ಬರಿಗೂ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ವೇದಿಕೆ ಮೇಲೆ ಅದ್ಧೂರಿಯಾಗಿ ಸೀಮಂತ ಮಾಡಿ ಆಗಮಿಸಿದ್ದ ಪ್ರತಿಯೊಬ್ಬ ಗೆಸ್ಟ್ ಬಳಿ ಅಕ್ಷತೆ ಹಾಕಿಸಿ ಆಶೀರ್ವಾದ ಮಾಡಿಸಿದ್ದಾರೆ. 'ನನ್ನ ತಾಯಿತನವನ್ನು ಅದ್ಭುತವಾಗಿ ಎಂಜಾಯ್ ಮಾಡುತ್ತಿದ್ದೀನಿ. ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ಬಂದು ಪ್ರತಿಯೊಬ್ಬರ ಆಶೀರ್ವಾದ ಸಿಗುತ್ತಿದೆ, ಪ್ರಮುಖವಾಗಿ ವೀರೇಂದ್ರ ಹೆಗ್ಗಡೆ ಸರ್ ಆಶೀರ್ವಾದ ಸಿಕ್ಕಿದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ನೇಹಾ ಗೌಡ ಮಾತನಾಡಿದ್ದಾರೆ.
TRP ಗೋಸ್ಕರ ಕಥೆ ಕಟ್ಟುತ್ತಿದ್ದಾರೆ, ನನ್ನ ಮೇಲೆ ಜವಾಬ್ದಾರಿಗಳು ಜಾಸ್ತಿ ಇದೆ: ಮಾಧ್ಯಮಗಳ ವಿರುದ್ಧ ವರ್ಷ ಕಾವೇರಿ ಗರಂ
'ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ನಾನು ಕವಿತಾ ಗೌಡ ಜೊತೆ ಒಂದು ಕ್ಲೋಸ್ ಬಾಂಡ್ ಶೇರ್ ಮಾಡಿಕೊಂಡಿದ್ದೆ ಆ ಸಂಬಂಧವನ್ನು ಜನರು ಕೂಡ ಅಷ್ಟೇ ಇಷ್ಟ ಪಟ್ಟಿದ್ದಾರೆ. ಸೀರಿಯಲ್ ಮುಗಿದ ಮೇಲೂ ನಮ್ಮಿಬ್ಬರ ಬಾಂಡ್ ಅಷ್ಟೇ ಚೆನ್ನಾಗಿತ್ತು, ಕವಿತಾ ಮತ್ತು ನಾನು ಪ್ರಗ್ನೆಂಟ್ ಆಗಿರುವುದು ಯಾವುದೇ ಪ್ಲ್ಯಾನ್‌ನಿಂದ ಅಲ್ಲ co-incidentally ಇದೆಲ್ಲಾ ಆಗಿರುವುದು. ಸೀರಿಯಲ್‌ನಲ್ಲಿ ಇದ್ದಾಗಲೂ ಹೀಗೆ ನಮ್ಮ ರಿಯಲ್ ಲೈಫ್‌ನಲ್ಲಿ ಕೆಲವೊಂದು ಘಟನೆಗಳು ನಡೆಯುತ್ತಿತ್ತು. 5 ನಿಮಿಷ ಏನೋ ಮಾತನಾಡಬೇಕು ಎಂದು ಕಾಲ್ ಮಾಡಿರುತ್ತೀನಿ ಅಮೇಲೆ ನೋಡಿದರೆ 1 ಗಂಟೆ ಮಾತನಾಡಿರುತ್ತೀನಿ. ಇನ್ನು ನಮ್ಮ ಪ್ರೆಗ್ನೆನ್ಸಿ ಲಕ್ಷಗಳು ಕೂಡ ಕೆಲವೊಂದು ಸೇಮ್ ಟು ಸೇಮ್ ಇದೆ' ಎಂದು ನೇಹಾ ಗೌಡ ಹೇಳಿದ್ದಾರೆ.
'ಬಸುರಿ ಬಯಕೆಗಳ ಬಗ್ಗೆ ನಾನು ಕೇಳಿದ್ದೀನಿ ಆದರೆ ನನಗೆ ಯಾವುದೇ ರೀತಿಯಲ್ಲಿ ಭಯಕೆ ಆಗಿಲ್ಲ ಆದರೆ ಮನೆ ಊಟವನ್ನು ಚೆನ್ನಾಗಿ ತಿನ್ನುತ್ತಿದ್ದೀನಿ ಸ್ವೀಟ್ ಒಂದು ಇಷ್ಟ ಆಗುತ್ತಿಲ್ಲ. ಏನನ್ನೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಿನ್ನುತ್ತಿಲ್ಲ ಏನೇ ಬೇಕಿದ್ದರೂ ಮನೆಯಲ್ಲಿ ಮಾಡಿ ಕೊಡುತ್ತಿದ್ದಾರೆ. ನನ್ನ ಗಂಡನ ಜೊತೆ ಜಾಸ್ತಿ ಸಮಯ ಕಳೆಯಬೇಕು ಅನ್ನೋ ಬಯಕೆ ಇದೆ..ಅನುಬಂಧ ಅವಾರ್ಡ್ ನಂತರ ಅವನಿಗೆ ರಜೆ ಕೊಟ್ಟರೆ ನನಗೆ ಅದೇ ಖುಷಿ. ಮದುವೆಯಾಗಿ 6 ವರ್ಷ ಆದ್ಮೇಲೆ ನಾವು ಮಗು ಮಾಡಿಕೊಂಡಿರುವುದು ಇದು ನಾವು ಮಾಡಿರುವ ಪ್ಲ್ಯಾನ್ ಏಕೆಂದರೆ ನಮಗೆ ಕೆಲಸದ ಕಮಿಟ್ಮೆಂಟ್ ಇತ್ತು. ನನ್ನ ಫ್ಯಾಮಿಲಿಯನ್ನು ಇದು ಮೊದಲ ಮಗು ಆಗಿರುವ ಕಾರಣ ಎಲ್ಲರೂ ಖುಷಿಯಾಗಿದ್ದಾರೆ. ನನ್ನ ಗಂಡನ ಮನೆ ಕಡೆ ನಾನು ಕೊನೆಯ ಸೊಸೆ ಆಗಿರುವ ಕಾರಣ ಈಗಾಗಲೆ ಮೂರು ಮಕ್ಕಳಿಗೆ ನಾನು ಚಿಕ್ಕಮ್ಮ ಆಗಿರುವೆ...ಅದರಲ್ಲಿ ಮೊದಲ ವಾರ್ಗಿತ್ತಿ ಮಗಳು ಖುಷಿ ಸುದ್ದಿಯನ್ನು ಕೇಳಿ ಕಣ್ಣೀರಿಟ್ಟಳು' ಎಂದಿದ್ದಾರೆ ನೇಹಾ ಗೌಡ.
'ನಾನು ಪ್ರೆಗ್ನೆಂಟ್ ಅನ್ನೋ ಸಣ್ಣ ಅನುಮಾನ ಶುರುವಾಯ್ತು ತಕ್ಷಣವೇ ಮನೆಯಲ್ಲಿ ಟೆಸ್ಟ್ ಮಾಡಿಸಿದೆ ಪಾಸಿಟಿವ್ ಎಂದು ಬಂದ ತಕ್ಷಣ ಚಂದನ್‌ಗೆ ಹೇಳಿದೆ. ಪುಟ್ಟ ನಾನು ಪ್ರೆಗ್ನೆಂಟ್ ಅನ್ಸುತ್ತೆ ಎಂದು ಹೇಳಿದಾಗ ಹೌದಾ ಪಕ್ಕನಾ ಎಂದು ಎರಡು ಮೂರು ಸಲ ಕೇಳಿದ ಏಕೆಂದರೆ ನಾನು ಡಾಕ್ಟರ್ ಬಳಿ ಹೋಗಿರಲಿಲ್ಲ. ಒಂದು ವಾರ ಶೂಟಿಂಗ್ ಮುಗಿಸಿಕೊಂಡು ನಾನು ಡಾಕ್ಟರ್ ಬಳಿ ಹೋಗಿದೆ. ಎರಡು ಮೂರು ದಿನ ಆದ್ಮೇಲೆ ಚಂದನ್ ಕಣ್ಣಲ್ಲಿ ನೀರು ನೋಡಿ...ಸಮಯ ತೆಗೆದುಕೊಂಡು ರಿಯಾಲಿಟಿ ಗೊತ್ತಾಗಿದೆ. ಮಗು ಬಂದ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ನಾನು ಪ್ಲ್ಯಾನ್ ಮಾಡಿಕೊಂಡು ಪ್ರೆಗ್ನೆಂಟ್ ಆಗಿರುವ ಕಾರಣ ಏನೇ ಇದ್ದರೂ ಗಟ್ಟಿಯಾಗಿ ಎದುರಿಸಬೇಕು ಹಾಗೂ ಎಂಜಾಯ್ ಮಾಡಬೇಕು ಎಂದು ನಾನು ನಿರ್ಧಾರ ಮಾಡಿಕೊಂಡಿದ್ದೆ. ನನ್ನ ಕುಟುಂಬದವರು ಮಾಡಿದ ಸೀಮಂತ, ಸ್ನೇಹಿತರು ಮಾಡಿದ ಬೇಬಿ ಶವರ್ ನೆನಪಿಸಿಕೊಂಡರೆ ಖುಷಿಯಾಗುತ್ತದೆ ಏಕೆಂದರೆ ಇಲ್ಲಿ ನಾನು ಮಾತ್ರ ಖುಷಿಯಾಗಿರುವುದು ಅಲ್ಲ ನನ್ನ ಸುತ್ತ ಇರುವ ಪ್ರತಿಯೊಬ್ಬರು ಖುಷಿಯಾಗಿದ್ದಾರೆ ಹಾಗೂ ತುಂಬಾ ಕಾಳಜಿಯಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ' ಎಂದು ನೇಹಾ ಹೇಳಿದ್ದಾರೆ.