ನನ್ನ ಮಗ ನನ್ನ ಹತ್ತಿರ ಇರಬೇಕು. ನನ್ನ ಮುಷ್ಠಿಯಲ್ಲಿ ಇರಬೇಕು. ನಾನು ಹೇಳಿದ ಹಾಗೆ ಕೇಳಬೇಕು, ನನ್ನ ಮತ್ತು ಅವನ ಪ್ರೀತಿಯ ಮಧ್ಯೆ ಇನ್ನೊಬ್ಬರು ಎಂಟ್ರಿ ಕೊಡಬಾರದು ಎನ್ನುವ ಆಸೆ ಬಿಟ್ಟರೆ ಬೇರೇನೂ ಕೆಟ್ಟ ಯೋಚನೆಯೇ ಇಲ್ಲದ ಲಕ್ಷ್ಮೀ ಬಾರಮ್ಮ ಸೀರಿಯಲ್ ಕಾವೇರಿ ವಿಲನ್ ಆಗಿ ಕಾಣಿಸ್ತಾಳಲ್ವಾ? ಹಾಗಿದ್ರೆ...?
ನನ್ನ ಮಗ, 9 ತಿಂಗಳು ಹೊತ್ತು ಹೆತ್ತ ಮಗ, ನಾನು ಕಷ್ಟಪಟ್ಟು ಸಾಕಿ ಬೆಳೆಸಿದ ಮಗ, ನನ್ನೆಲ್ಲಾ ಆಸೆಗಳನ್ನು ಬದಿಗಿಟ್ಟು ಆತನನ್ನು ಸಲಹಿಸಿದ ಮಗ, ನಾನೆಂದರೆ ಜೀವ ಎನ್ನುತ್ತಿದ್ದ ಮಗ... ಈಗ ಪತ್ನಿ ಬಂದ ಮೇಲೆ ನನಗಿಂತ ಅವಳ ಮೇಲೆ ಹೆಚ್ಚು ವ್ಯಾಮೋಹ ತೋರಬಹುದಾ? ನನಗಿಂತ ಅವಳಿಗೆ ಹೆಚ್ಚು ಟೈಮ್ ಕೊಡಬಹುದಾ? ನನಗಿಂತ ಅವಳ ಆಸೆ ಆಕಾಂಕ್ಷೆಗಳ ಮೇಲೆ ಹೆಚ್ಚು ಗಮನ ಕೊಡ್ಬೋದಾ..? ಸಾಧ್ಯನೇ ಇಲ್ಲ. ಏಕೆಂದ್ರೆ ಅವಳು ನಿನ್ನೆ ಮೊನ್ನೆ ಬಂದಾಕೆ, ನಾನು ಆತನನ್ನು ಹುಟ್ಟಿಸಿದಾಕೆ. ಪತ್ನಿಗಿಂತ ತಾಯಿಯೇ ಮೇಲು. ನನ್ನ ಮತ್ತು ಮಗನ ಮಧ್ಯೆ ಬರುವ ಯಾರನ್ನೂ ನಾನು ಸುಮ್ಮನೇ ಬಿಡಲಾರೆ, ಅವರನ್ನು ಸಾಯಿಸಲೂ ನಾನು ಅಂಜಲಾರೆ...
ಹೌದು. ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಲಕ್ಷ್ಮೀ ಬಾರಮ್ಮಾದ ಕಾವೇರಿಯ ಕ್ಯಾರೆಕ್ಟರ್. ತನ್ನ ಮಗನ ಪ್ರೀತಿ ನನಗೆ ಮಾತ್ರ ಸೀಮಿತ. ಆತ ಈ ಪ್ರೀತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಅಷ್ಟೇ ಏಕೆ ಪತ್ನಿಯೊಂದಿಗೂ ಆತ ನನಗಿಂತ ಹೆಚ್ಚಿಗೆ ಪ್ರೀತಿ ಹಂಚಿಕೊಳ್ಳಬಾರದು ಎನ್ನುವ ಕ್ಯಾರೆಕ್ಟರ್ ಈಕೆಯದ್ದು. ನನ್ನ ಮಗ ನನ್ನ ಹತ್ತಿರ ಇರಬೇಕು. ನನ್ನ ಮುಷ್ಠಿಯಲ್ಲಿ ಇರಬೇಕು. ನಾನು ಹೇಳಿದ ಹಾಗೆ ಕೇಳಬೇಕು ಎನ್ನೋದು ಅವಳ ಆಸೆ. ಅಷ್ಟಕ್ಕೂ ಈ ಸೀರಿಯಲ್ನಲ್ಲಿ ಇವಳದ್ದು ವಿಲನ್ ರೋಲ್ ಎಂದೇ ಬಿಂಬಿತವಾಗಿದೆ. ಸೊಸೆಯನ್ನು ಗುಡ್ಡದಿಂದ ನೂಕಿ ಕೊಲೆ ಮಾಡಿದ್ದಾಳೆ. ಇದಕ್ಕೆ ಕಾರಣ ನನ್ನ ಮತ್ತು ಮಗನ ನಡುವೆ ಆಕೆ ಬಂದಿದ್ದಾಳೆ ಎನ್ನುವುದು. ಈ ಸೀರಿಯಲ್ ನೋಡುವಾಗ ಕಾವೇರಿಯ ಮೇಲೆ ದ್ವೇಷ ಉಕ್ಕಿ ಹರಿಯುತ್ತದೆ. ಮುಗ್ಧೆಯಾಗಿರುವ ಸೊಸೆಯನ್ನು ಕೊಲೆ ಮಾಡಿರುವುದಕ್ಕೆ ಈಕೆಗೆ ಮರಣದಂಡನೆ ಕೊಡಿ ಎಂದೂ ಎಷ್ಟೋ ಕಮೆಂಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಹೇಳುವುದೂ ಇದೆ. ಇವೆಲ್ಲವೂ ಸರಿ. ಆದರೆ ಕಾವೇರಿಯ ಪಾತ್ರ ಸೀರಿಯಲ್ನಲ್ಲಿ ಮಾತ್ರವೆ ಎನ್ನುವ ಪ್ರಶ್ನೆಯೊಂದು ಈಗ ಶುರುವಾಗಿದೆ.
undefined
ಲಕ್ಷ್ಮೀ ನಿವಾಸದ ವಿಲನ್ ಕಾವೇರಿ ಡಾನ್ಸ್ ನೋಡಿರುವಿರಾ? ಸೈಂಟಿಸ್ಟ್ ಆದಾಕೆ ನಟಿಯಾದ ರಿಯಲ್ ಸ್ಟೋರಿ ಇಲ್ಲಿದೆ...
ನಿಜ ಜೀವನದಲ್ಲಿಯೂ ಎಷ್ಟೋ ಅಮ್ಮಂದಿರ ಒಳಗೆ ಈ ಕಾವೇರಿ ಇರುತ್ತಾಳೆ. ಗೊತ್ತೋ ಗೊತ್ತಿಲ್ಲದೆಯೋ ಈಕೆ ನುಸುಳಿಕೊಂಡಿರುತ್ತಾಳೆ. ಮಗನ ಸಂಸಾರ ಚೆನ್ನಾಗಿರಬೇಕು. ಸೊಸೆಯನ್ನು ನಾನು ನನ್ನ ಮಗಳಂತೆ ನೋಡಿಕೊಳ್ಳಬೇಕು ಎಂದು ಕನಸು ಕಾಣುವ ಗಂಡುಮಗನ ಅಮ್ಮಂದಿರ ಪೈಕಿ ಕೆಲವರಿಗೆ ಮಗ ಸೊಸೆಯ ಕಡೆ ವಾಲುತ್ತಿದ್ದಾನೆ ಎಂದಾಕ್ಷಣ ಏನೋ ಧರ್ಮಸಂಕಟ. ಮದುವೆಯಾದ ಹೊಸತನದಲ್ಲಿ ದಂಪತಿ ನಡುವೆ ಸರಸ ಹೆಚ್ಚಾಗಿಯೇ ಇರುತ್ತದೆ, ಈ ಸಮಯದಲ್ಲಿ ಪತಿ ಕೂಡ ತನ್ನ ಪತ್ನಿಯ ಆಸೆಯಂತೆ ಹೊಸ ಹೊಸ ಗಿಫ್ಟ್ ತಂದುಕೊಡುವುದೋ, ಆಕೆಯನ್ನು ಎಲ್ಲಿಯೋ ಕರೆದುಕೊಂಡು ಹೋಗುವುದನ್ನು ಮಾಡುತ್ತಾರೆ. ಆದರೆ ಇದನ್ನು ಸಹಿಸುವುದು ಕೆಲ ಅಮ್ಮಂದಿರಿಗೆ ಸಹ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಪತಿ-ಪತ್ನಿಯನ್ನು ದೂರ ಮಾಡುವ ಅಮ್ಮಂದಿರ ಉದಾಹರಣೆಗಳೂ ಸಾಕಷ್ಟಿವೆ!
ಇನ್ನು ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್ ಜಯಂತ್‌ಗೂ, ಲಕ್ಷ್ಮೀ ಬಾರಮ್ಮಾ ಸೀರಿಯಲ್ ಕಾವೇರಿಗೂ ಹೆಚ್ಚೇನೂ ವ್ಯತ್ಯಾಸ ಇಲ್ಲ. ಅಲ್ಲಿ ಜಯಂತ್ಗೆ ತನ್ನ ಪತ್ನಿ ಯಾರೊಂದಿಗೂ ಮಾತನಾಡಬಾರದು. ಅದು ಎಷ್ಟರಮಟ್ಟಿಗೆ ಎಂದರೆ ಅವಳ ಅಪ್ಪ-ಅಮ್ಮ ಸೇರಿದಂತೆ ಸ್ವಂತ ಸಂಬಂಧಿಕರ ಜೊತೆ ತನಗಿಂತ ಹೆಚ್ಚು ಕಾಲ ಕಳೆದರೆ ಆತ ಸಹಿಸಲ್ಲ. ಕಾವೇರಿಯ ಪಾತ್ರ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಮಗ ನನ್ನವನು ಅಷ್ಟೇ ಎನ್ನುವುದು. ಧಾರಾವಾಹಿ ನೋಡುವಾಗ ಕಾವೇರಿಯೂ ವಿಲನ್ ಆಗಿ ಕಾಣ್ತಾಳೆ, ಸೀರಿಯಲ್ ಹೀರೋ ಜಯಂತ್ ಕೂಡ ವಿಲನ್ ಆಗಿಯೇ ಕಾಣಿಸ್ತಾನೆ. ಆದರೆ ಅಂಥದ್ದೇ ವಿಲನ್ಗಳು ನಮ್ಮೊಳಗೂ ಇರಬಹುದು ಎನ್ನುವುದು ನಿಜ ಜೀವನದಲ್ಲಿ ಗೊತ್ತೇ ಆಗಲ್ಲ, ಅಲ್ವಾ?
ಲಕ್ಷ್ಮಿ ಕೀರ್ತಿಯಾಗಿ ಬದಲಾಗಿದ್ದು ಹೇಗೆ? ಶೂಟಿಂಗ್ ಸಮಯದಲ್ಲಿ ನಡೆದದ್ದೇನು? ಮೇಕಿಂಗ್ ವಿಡಿಯೋ ವೈರಲ್