Lakshmi Baramma Serial Climax Episode: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮುಗಿಯಲಿದೆಯಾ ಎನ್ನೋದು ಒಂದು ಕಡೆಯಾದ್ರೆ, ಕ್ಲೈಮ್ಯಾಕ್ಸ್ ಏನಾಗುವುದು ಎಂಬ ಪ್ರಶ್ನೆ ಇನ್ನೊಂದು ಕಡೆಯಾಗಿದೆ.
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್ ಎರಡನೇ ಮದುವೆ ಆಗ್ತಾನಾ ಎನ್ನುವ ಪ್ರಶ್ನೆ ಒಂದು ಕಡೆಯಾದ್ರೆ, ಈ ಸೀರಿಯಲ್ ಮುಗಿಯಲಿದೆಯಾ ಎಂಬ ಪ್ರಶ್ನೆ ಇನ್ನೊಂದು ಕಡೆಯಾಗಿದೆ. ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ನಟರೋರ್ವರು ಈ ಸೀರಿಯಲ್ ಕೊನೆಯ ದಿನದ ಶೂಟಿಂಗ್ ಫೋಟೋ ಹಂಚಿಕೊಂಡಾಗಿನಿಂದ ಈ ಪ್ರಶ್ನೆ ಎದ್ದಿದೆ.
ಈ ಧಾರಾವಾಹಿ ಅಂತ್ಯ ಆಗ್ತಿರೋದು ನಿಜಾನಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಟಾಪ್ 3 ಸೀರಿಯಲ್ ಆಗಿರುವ ʼಲಕ್ಷ್ಮೀ ಬಾರಮ್ಮʼ ( Lakshmi Baramma Serial ) ಹೇಗೆ ಎಂಡ್ ಆಗತ್ತೆ ಎನ್ನೋದು ಒಂದು ಕಡೆಯಾದ್ರೆ, ಇನ್ನೊಂದು ಕಡೆ ʼಭಾಗ್ಯಲಕ್ಷ್ಮೀʼ ಧಾರಾವಾಹಿ ತಂಡದ ಜೊತೆ ಮತ್ತೆ ಸೇರ್ಪಡೆಯಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ. ಇನ್ನು ವೈಷ್ಣವ್ ಪಾತ್ರದಲ್ಲಿ ಶಮಂತ್ ಬ್ರೊ ಗೌಡ ಅವರು ಸಿನಿಮಾದತ್ತ ಮುಖ ಮಾಡಿದ್ದಾರೆ. ಇನ್ನು ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್ ಅವರು ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಈ ಸೀರಿಯಲ್ ಮುಗಿಸ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಸೀರಿಯಲ್ ಟಿಆರ್‌ಪಿ ಚೆನ್ನಾಗಿದ್ದರೂ ಕೂಡ, ಪಾತ್ರಧಾರಿಗಳು ಬದಲಾದ್ರೆ ಅವರನ್ನು ವೀಕ್ಷಕರು ಒಪ್ಪಿಕೊಳ್ಳೋದು ತುಂಬ ಕಷ್ಟ. ಹೀಗಿರುವಾಗ ರಿಸ್ಕ್ ತಗೊಳ್ಳದೆ ಸೀರಿಯಲ್ ಎಂಡ್ ಮಾಡೋದುಂಟು.
ಶೀಘ್ರದಲ್ಲಿ ಅಂತ್ಯ ಕಾಣಲಿದೆ ಕಲರ್ಸ್ ಕನ್ನಡದ ಸೂಪರ್ ಹಿಟ್ ಸೀರಿಯಲ್ 'ಲಕ್ಷ್ಮೀ ಬಾರಮ್ಮ'…!
ಮುಂದೆ ಏನಾಗಹುದು?
ವೈಷ್ಣವ್ ಎರಡನೇ ಮದುವೆಗೆ ಒಪ್ಪಿಗೆ ಕೊಟ್ಟಿದ್ರೂ ಕೂಡ, ಮದುವೆ ಆಗೋದಿಲ್ಲ. ಸುಪ್ರೀತಾ ಅವನ ಕೆನ್ನೆಗೆ ಬಾರಿಸಿ ಹೆಂಡ್ತಿಗೆ ಮೋಸ ಮಾಡ್ತಿದ್ಯಾ ಅಂತ ಪ್ರಶ್ನೆ ಮಾಡಿದಾಗ, “ನೀವು ಬೆಳೆಸಿದ ಹುಡುಗ ನಾನು, ತಪ್ಪು ಮಾಡ್ತೀನಾ?” ಅಂತ ಪ್ರಶ್ನೆ ಮಾಡಿದ್ದನು. ಆಗಲೇ ಅವನು ಇನ್ನೇನೋ ಪ್ಲ್ಯಾನ್ ಮಾಡ್ತಿರೋದು ಬಯಲಾಗಿತ್ತು. ಇನ್ನು ಕಾವೇರಿ ಕರೆತಂದ ಹೆಂಗಸು ಅವಳಿಗೆ ನಶೆಯ ಮಾತ್ರೆ ಹಾಕಿ, ಈ ಹಿಂದೆ ಮಾಡಿದ್ದ ಎಲ್ಲ ಕುತಂತ್ರಗಳನ್ನು ಕಾವೇರಿ ಬಾಯಲ್ಲಿ ಹೇಳಿಸಿದ್ದಳು. ಇದೆಲ್ಲವೂ ಅವಳ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಇನ್ನು ಈ ದೃಶ್ಯ ಪ್ರಸಾರ ಆಗುವಾಗ ಸೆರೆಯಲ್ಲಿ ವೈಷ್ಣವ್ ನೆರಳು ಕೂಡ ಕಾಣಿಸಿತ್ತು. ಸತ್ಯ ಏನು ಅಂತ ಕಂಡುಹಿಡಿಯಲು ವೈಷ್ಣವ್ ಆ ಹೆಂಗಸಿಗೆ ದುಡ್ಡು ಸತ್ಯ ಹೊರಗಡೆ ಹಾಕುತ್ತಿರಬಹುದಾ ಎಂಬ ಪ್ರಶ್ನೆ ಕಾಡುತ್ತಿದೆ. ಕಾವೇರಿ ನೀಡುವ ಹಣದಾಸೆಗೆ ಕೆಟ್ಟ ಕೆಲಸ ಮಾಡಲು ಮುಂದಾದ ಆ ಹೆಂಗಸು, ಈಗ ವೈಷ್ಣವ್ ಹೆಚ್ಚಿನ ಹಣ ಕೊಟ್ಟರೆ ಅವಳ ಮಾತನ್ನು ಕೂಡ ಕೇಳಬಹುದು ಅಲ್ವಾ? ಪಕ್ಕಾ ಇದೇ ರೀತಿ ಆಗುವುದು. ವೈಷ್ಣವ್‌ನಿಂದಲೇ ಕಾವೇರಿ ಸತ್ಯ ಬಯಲಾಗತ್ತೆ, ಅವಳು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಆಗತ್ತೆ.
ಅಬ್ಬಾ! 'ಲಕ್ಷ್ಮೀ ಬಾರಮ್ಮ' ಕೀರ್ತಿಯ ಅದ್ಭುತ ನೃತ್ಯಕ್ಕೆ ಬೆರಗಾದ ಫ್ಯಾನ್ಸ್: ಬಿಗ್ಬಾಸ್ ಕಿಶನ್ ಜೊತೆ ಮೋಡಿ!
ಈ ಧಾರಾವಾಹಿ ಕಥೆ ಏನು?
ಕಾವೇರಿ ನಿಜಕ್ಕೂ ಪೊಸೆಸ್ಸಿವ್ ತಾಯಿ. ತನ್ನ ಮಗ ವೈಷ್ಣವ್‌ಗೆ ನಾನು ಮಾತ್ರ ಆದ್ಯತೆ ಆಗಿರಬೇಕು ಅಂತ ಬಯಸುವ ಅವಳು ಈಗಾಗಲೇ ಅತ್ತೆಯನ್ನು ಕೊಂದಿದ್ದಾಳೆ. ತನ್ನ ಮಗ ನನ್ನ ಕೈತಪ್ಪಿ ಹೋಗಬಾರದು ಅಂತ ಅವಳು ಮಗ ವೈಷ್ಣವ್ ಪ್ರೀತಿಸಿದ್ದ ಕೀರ್ತಿಯನ್ನು ವಿಲನ್ ಆಗಿ ಮಾಡಿ, ಅವರಿಬ್ಬರ ಮದುವೆ ತಡೆದಳು. ಅಷ್ಟೇ ಅಲ್ಲದೆ ಲಕ್ಷ್ಮೀ ಎನ್ನುವ ಬಡವರ ಮನೆ ಹುಡುಗಿ ಜೊತೆ ವೈಷ್ಣವ್ ಮದುವೆ ಮಾಡಿದಳು. ಲಕ್ಷ್ಮೀಯೂ ಇವಳ ಮಾತನ್ನು ಎದುರು ಹಾಕಿಕೊಂಡಾಗ ಅವಳನ್ನು ಮನೆಯಿಂದ ಹೊರಗಡೆ ಹಾಕಿದಳು. ಈಗ ವೈಷ್ಣವ್‌ಗೆ ಇನ್ನೊಂದು ಮದುವೆ ಮಾಡಲು ರೆಡಿಯಾಗಿದ್ದಾಳೆ.
ಪಾತ್ರಧಾರಿಗಳು
ವೈಷ್ಣವ್- ನಟ ಶಮಂತ್ ಬ್ರೋ ಗೌಡ
ಲಕ್ಷ್ಮೀ- ಭೂಮಿಕಾ ರಮೇಶ್
ಕೀರ್ತಿ- ತನ್ವಿ ರಾವ್
ಕಾವೇರಿ- ಸುಷ್ಮಾ ನಾಣಯ್ಯ
ಸುಪ್ರೀತಾ - ರಜನಿ ಪ್ರವೀಣ್