'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟ ಚಂದು ಬಿ ಗೌಡ ಅವರು ತೆಲುಗು ಶೋವೊಂದರಲ್ಲಿ ಮಗಳಿಗೆ ಅಕ್ಷರಾಭ್ಯಾಸ ಮಾಡಿದ್ದಾರೆ. ವಾಹಿನಿಯು ವಿಶೇಷವಾದ ಪ್ರೋಮೋ ಹಂಚಿಕೊಂಡಿದೆ.
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಟ ಚಂದು ಗೌಡ ಅವರು ತೆಲುಗು ಶೋವೊಂದರಲ್ಲಿ ಮಗಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ. ಈ ಹಿಂದೆ ಪ್ರಸಾರ ಆಗುತ್ತಿದ್ದ ʼಲಕ್ಷ್ಮೀ ಬಾರಮ್ಮʼ, ʼಗೃಹಲಕ್ಷ್ಮೀʼ ಧಾರಾವಾಹಿಯಲ್ಲಿ ಚಂದು ನಟಿಸಿದ್ದರು. ನಟ ಚಂದು ಬಿ ಗೌಡ ಅವರು ಕೆಲ ವರ್ಷಗಳಿಂದ ತೆಲುಗು ಕಿರುತೆರೆಯಲ್ಲಿ ಆಕ್ಟಿವ್ ಆಗಿದ್ದಾರೆ. ಈ ವೇಳೆ ಶೋವೊಂದರಲ್ಲಿ ಅವರ ಮಗಳು ಸಮೈರಾಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ.
ಸಮೈರಾಗೆ ಬೆಳ್ಳಿ ಕಾಲ್ಗೆಜ್ಜೆ ಉಡುಗೊರೆ!
ಈ ಬಗ್ಗೆ ಚಂದು ಬಿ ಗೌಡ, ತೆಲುಗು ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಂಡಿದೆ. ಈ ಶೋನಲ್ಲಿ ಚಂದು ಅವರು ಮಗಳ ಕೈ ಹಿಡಿದುಕೊಂಡು ʼಅʼ ಎಂದು ಬರೆಸಿರೋದು ಪ್ರೋಮೋದಲ್ಲಿ ರಿವೀಲ್ ಆಗಿದೆ. ಇನ್ನು ವಾಹಿನಿಯವರು ಸಮೈರಾಗೆ ಬೆಳ್ಳಿ ಕಾಲ್ಗೆಜ್ಜೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. “ಮಗಳು ಹೆಮ್ಮೆ ಪಡುವ ತಂದೆಯಾಗಿ ನಾನು ಇರ್ತೀನಿ, ನನ್ನ ಮಗಳು ಒಳ್ಳೆಯ ಮನುಷ್ಯಳಾಗ್ತಾಳೆ” ಎಂದು ಚಂದು ಬಿ ಗೌಡ ಅವರು ಇದೇ ವೇದಿಕೆಯಲ್ಲಿ ಹೇಳಿದ್ದಾರೆ.
ಪುಟ್ಟ ಕಂದಮ್ಮನನ್ನು ಊರು ಜಾತ್ರೆಗೆ ಕರ್ಕೊಂಡು ಹೋದ್ರು ಕವಿತಾ ಗೌಡ; ನಾನು ಎಂದು ಕಾಮೆಂಟ್ ಮಾಡಿದ ಚಂದು!
ಕನ್ನಡಕ್ಕೆ ಮತ್ತೆ ಕಂಬ್ಯಾಕ್!
ಚಂದು ಬಿ ಗೌಡ ಅವರು ಕನ್ನಡದಲ್ಲಿ ಕೂಡ ನಟಿಸಲಿದ್ದಾರೆ. ಕಾವ್ಯಾ ಮಹದೇವ್ ಹಾಗೂ ಚಂದು ಬಿ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ʼಸ್ನೇಹದ ಕಡಲಲ್ಲಿʼ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದೆ. ವರ್ಷಗಳ ಗ್ಯಾಪ್ ಬಳಿಕ ಚಂದು ಬಿ ಗೌಡ ಅವರು ಕಿರುತೆರೆಗೆ ಮರಳಿದ್ದಾರೆ.
ಕಿರುತೆರೆಯಲ್ಲಿ ಫುಲ್ ಆಕ್ಟಿವ್!
‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಹೀರೋ ಪಾತ್ರಧಾರಿಗಳು ಸಾಕಷ್ಟು ಬಾರಿ ಬದಲಾಗಿದ್ದಾರೆ. ಅಂತೆಯೇ ಚಂದನ್ ಪಾತ್ರದಲ್ಲಿ ಚಂದು ಬಿ ಗೌಡ ನಟಿಸಿದ್ದರು. ಈ ಸೀರಿಯಲ್ ಮುಗಿದ ನಂತರ ಚಂದು ಅವರು ʼಚಾಟ್ ಕಾರ್ನರ್ʼ ಎನ್ನುವ ಟಾಕಿಂಗ್ ಶೋ ನಿರೂಪಣೆ ಮಾಡಿದ್ದರು. ಆ ಬಳಿಕ ತೆಲುಗು ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ʼತ್ರಿನಯನಿʼ ಧಾರಾವಾಹಿಯಲ್ಲಿ ನಟಿಸಿದ್ದರು. ಇದು ತೆಲುಗಿನಲ್ಲಿ ನಂ 1 ಸೀರಿಯಲ್ ಆಗಿತ್ತು.
ಏಕಾಏಕಿ ನಾಯಿಯಂತೆ ನಡೆದ ರುಂಡ ಇಲ್ಲದ ಅಜ್ಜಿ! ನಡುರಾತ್ರಿ ಕಂಡ ಬೆಚ್ಚಿ ಬೀಳೋ ಘಟನೆ ನೆನೆದ ನಟ ಚಂದು ಗೌಡ
ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಜೋಡಿ!
ಚಂದು ಬಿ ಗೌಡ ಅವರು 4 ವರ್ಷಗಳ ಕಾಲ ಶಾಲಿನಿ ಅವರನ್ನು ಪ್ರೀತಿಸಿ ಮದುವೆಯಾದರು. ಶಾಲಿನಿ ಅವರು ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡಿದ್ದರು. ಕಾಮನ್ ಫ್ರೆಂಡ್ಸ್ ಮೂಲಕ ಈ ಜೋಡಿಯ ಪರಿಚಯ ಆಗಿತ್ತು. 2020ರಲ್ಲಿ ಇವರಿಬ್ಬರು ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಈ ಮದುವೆಯಲ್ಲಿ ಕಿರುತೆರೆ ಗಣ್ಯರು ಆಗಮಿಸಿದ್ದರು. ಆ ನಂತರದಲ್ಲಿ 2022ರಲ್ಲಿ ಈ ಜೋಡಿ ಮೊದಲ ಮಗುವನ್ನು ಬರಮಾಡಿಕೊಂಡಿದೆ. ವಿಶೇಷ ಫೋಟೋಶೂಟ್ ಮೂಲಕ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ಈ ಜೋಡಿ ಹೇಳಿಕೊಂಡಿತ್ತು. ಇನ್ನು ಮಗಳ ಜೊತೆಗಿನ ಮುದ್ದಾದ ಕ್ಷಣಗಳನ್ನು ಚಂದು ಬಿ ಗೌಡ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಶಾಲಿನಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಮಗಳ ಜೊತೆಗಿನ ಫೋಟೋ ಶೇರ್ ಮಾಡುತ್ತಿರುತ್ತಾರೆ.
ಸಿನಿಮಾಗಳಲ್ಲಿ ನಟನೆ!
ಚಂದು ಬಿ ಗೌಡ ಅವರು ಕಿರುತೆರೆ ಜೊತೆಗೆ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ದರ್ಶನ್ ನಟನೆಯ ʼರಾಬರ್ಟ್ʼ, ʼಕಮರೊಟ್ಟುʼ, ʼಕುಷ್ಕ, ʼಜಾಕ್‌ಪಾಟ್ʼ, ʼಚೆಕ್‌ಪೋಸ್ಟ್ʼ, ʼಶ್ರೀ, ʼದ್ವಿಪಾತ್ರʼ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಳ್ಳೆಯ ಕಥೆ ಇರುವ ಸಿನಿಮಾಗಳಲ್ಲಿ ನಟಿಸಲು ಚಂದು ಅವರು ಎದುರು ನೋಡುತ್ತಿದ್ದಾರೆ. ಸಿನಿಮಾದಲ್ಲಿ ಗೆಲ್ಲಬೇಕು ಎಂಬ ಹಂಬಲ ಅವರಿಗೆ ತುಂಬಾನೇ ಇದೆ.