ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್ 'ಲಕ್ಷಣ'ದಲ್ಲಿ ಇಂಟರೆಸ್ಟಿಂಗ್ ಅಂಶವೊಂದು ರಿವೀಲ್ ಆಗಿದೆ. ಭೂಪತಿ ಬಹಳ ಇಷ್ಟ ಪಡ್ತಿದ್ದ ಆರ್ ಜೆ ಸಖಿ ನಕ್ಷತ್ರನೇ ಅಂತ ತಿಳಿದುಹೋಗಿದೆ. ಡಬ್ಬಲ್ ಗೇಮ್ ಆಡ್ತಿದ್ದ ಶ್ವೇತಾ ಮೋಸ ಗೊತ್ತಾಗಿದೆ. ನೆಕ್ಸ್ಟ್ ಭಾಗದಲ್ಲಿ ಏನಾಗಬಹುದು?
ಲಕ್ಷಣ ಸೀರಿಯಲ್ ಇಂಟರೆಸ್ಟಿಂಗ್ ಘಟ್ಟ ತಲುಪಿದೆ. ಇದು ಮೈ ಬಣ್ಣಕ್ಕೆ ಸಂಬಂಧಿಸಿ ಬಂದ ಸೀರಿಯಲ್. ಕಪ್ಪು ಮೈಬಣ್ಣದ ನಕ್ಷತ್ರ ಲೈಫಿನ ಕಷ್ಟ ಸುಖಗಳ ಮೇಲೆ ಈ ಸೀರಿಯಲ್ ನಿಂತಿದೆ. ಆಕೆಯ ಬಣ್ಣದ ಕಾರಣಕ್ಕೆ ಹೀಗಳಿಕೆ, ಹಾಸ್ಯಕ್ಕೆ ತುತ್ತಾಗಿದ್ದರೂ ಅದನ್ನೆಲ್ಲ ಮೆಟ್ಟಿನಿಂತು ಪ್ರಾಮಾಣಿಕವಾಗಿ ಬದುಕುತ್ತಿರುವ ಹುಡುಗಿ ನಕ್ಷತ್ರ. ಅವಳ ಲೈಫಲ್ಲಿ ಏನೋನೋ ಘಟನೆಗಳಾಗಿ ಕೋಟ್ಯಾಧಿಪತಿ ಉದ್ಯಮಿ ಭೂಪತಿಯ ಕೈ ಹಿಡಿಯುತ್ತಾಳೆ. ಇದು ಭೂಪತಿಯಿಂದ ಹಿಡಿದು ಆತನ ಅಮ್ಮ, ತಮ್ಮ ಯಾರಿಗೂ ಇಷ್ಟ ಇಲ್ಲ. ಇದೀಗ ಅವರೆಲ್ಲರ ಮನಸ್ಸನ್ನು ಗೆಲ್ಲುತ್ತಾ ಬಂದ ನಕ್ಷತ್ರ ಕೊನೆಯ ಹಂತದಲ್ಲಿ ಭೂಪತಿಯ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಈವರೆಗೆ ವಿಲನ್ ಶ್ವೇತಾ ತಾನೇ ಆರ್ ಜೆ ಸಖಿ ಅನ್ನುತ್ತಾ ಬಂದಿದ್ದಳು. ಆದರೆ ನಿಜವಾಗಿ ಆ ಕಾರ್ಯಕ್ರಮ ಮಾಡುತ್ತಿದ್ದದ್ದು ನಕ್ಷತ್ರ. ಈ ಕಾರ್ಯಕ್ರಮ ಮಾಡುತ್ತಿದ್ದ
ಆರ್ ಜೆ ಮೇಲೆ ಭೂಪತಿಗೆ ಕ್ರಶ್ ಆಗಿತ್ತು. ಇಲ್ಲೀವರೆಗೆ ಆ ಪ್ರೋಗ್ರಾಂ ನಡೆಸುತ್ತಿರೋದು ಶ್ವೇತಾನೆ ಅಂತ ಭೂಪತಿ ತಿಳ್ಕೊಂಡಿದ್ದ. ಇದೀಗ ಸತ್ಯ ಬಯಲಾಗಿದೆ.
ಇಷ್ಟು ದಿನ ನಕ್ಷತ್ರ ಮೇಲೆ ಪ್ರೀತಿ ಇಲ್ಲ ಅಂತ ಭೂಪತಿ ಹೇಳುತ್ತಲೇ ಇದ್ದನು. ಆದ್ರೀಗ, ನಕ್ಷತ್ರ ಮೇಲೆ ಭೂಪತಿಗೆ ಪ್ರೀತಿ ಹುಟ್ಟೋ ಲಕ್ಷಣ ಕಾಣುತ್ತಿದೆ. ನಕ್ಷತ್ರನೇ RJ ಸಖಿ ಎಂಬ ಗುಟ್ಟು ಭೂಪತಿ ಮುಂದೆ ರಟ್ಟಾಗಿದೆ. ಹಿಂದೆ ನಕ್ಷತ್ರಳ ತಾಳಿಯನ್ನು ಶ್ವೇತಾ ಕಳೆದು ಹಾಕಿದ್ದಳು. ಆಗ ಭೂಪತಿ ಮರು ಮಾಂಗಲ್ಯಧಾರಣೆ ಮಾಡಿದ್ದ. ಈ ನಡುವೆ ಭೂಪತಿ ತಾಯಿ ಶಕುಂತಳಾ ದೇವಿ ಕಡಿಮೆ ಹಣದಲ್ಲಿ ಮನೆ ನಡೆಯೋ ಟಾಸ್ಕ್ ಕೊಡುತ್ತಾಳೆ. ಅದರಲ್ಲಿ ಸಿಂಪಲ್ಲಾಗೊಂದು ಚಿತ್ರಾನ್ನ ಮಾಡಿ ನಕ್ಷತ್ರ ಗೆಲ್ಲುತ್ತಾಳೆ. ಆಗ ತಾನು ಕೊಟ್ಟ ಮಾತಿನಂತೆ ನಕ್ಷತ್ರಳನ್ನ ಶಾಸ್ತ್ರೋಕ್ತವಾಗಿ ಮನೆ ತುಂಬಿಸಿಕೊಳ್ಳುತ್ತಾರೆ ಶಕುಂತಲಾ ದೇವಿ. ನಕ್ಷತ್ರಳನ್ನ ಸೊಸೆ ಅಂತ ಶಕುಂತಲಾ ದೇವಿ ಒಪ್ಪಿಕೊಳ್ಳುತ್ತಾರೆ. ಈಗ ನಕ್ಷತ್ರಳನ್ನ ಪತ್ನಿ ಅಂತ ಭೂಪತಿ ಸ್ವೀಕರಿಸುವ ಸಮಯ ಬಂದಿದೆ. ನಕ್ಷತ್ರ ಹಾಗೂ ಭೂಪತಿ ಮಧ್ಯೆ ಲವ್ ಸ್ಟೋರಿ ಶುರುವಾಗಲಿದೆ.
Guppedantha Manasu: ಕನ್ನಡತಿ ರೀತಿಯೇ ಈಗ ಈ ತೆಲುಗು ಸೀರಿಯಲ್ ಮೇಲೆ ವೀಕ್ಷಕರ ಸಿಟ್ಟು!
ಎಸ್‌ಎಫ್‌ಎಂನಲ್ಲಿ ನಕ್ಷತ್ರ ‘ಆರ್ ಜೆ ಸಖಿ’ ಎಂಬ ಟಾಕ್ ಶೋ ನಡೆಸುತ್ತಿರುತ್ತಾಳೆ. ಆದರೆ, ನಕ್ಷತ್ರನೇ ಈ ಆರ್ ಜೆ ಸಖಿ ಎಂಬ ಸತ್ಯ ಯಾರಿಗೂ ಗೊತ್ತಿರೋದಿಲ್ಲ. ಆರ್ ಜೆ ಸಖಿಗೆ ಭೂಪತಿ ದೊಡ್ಡ ಫ್ಯಾನ್(Fan). ಇದನ್ನ ತಿಳಿದ ಶ್ವೇತಾ ತಾನೇ ಆರ್‌ಜೆ ಸಖಿ ಅಂತ ಭೂಪತಿ ಬಳಿ ಸುಳ್ಳು ಹೇಳಿರುತ್ತಾಳೆ. ಅದನ್ನೇ ಭೂಪತಿ ಕೂಡ ನಂಬಿರುತ್ತಾನೆ. ಇದೀಗ ನಿಜವಾಗಿಯೂ ಆರ್‌ಜೆ ಸಖಿ ಯಾರು ಅನ್ನೋದು ಭೂಪತಿ ಮುಂದೆ ಬಹಿರಂಗವಾಗಿದೆ.
ಎಸ್‌ಎಫ್‌ಎಂಗೆ ಮುಖ್ಯಸ್ಥಳಾಗಿದ್ದವಳು ಶ್ವೇತಾ. ಹೀಗಾಗಿ ಆಕೆಯ ಇಷ್ಟದಂತೆಯೇ ‘ಆರ್‌ಜೆ ಸಖಿ’ ಶೋ ಮಾಡಿಕೊಂಡಿರಲಿ ಎಂದು ಭೂಪತಿ ಅಂದುಕೊಳ್ಳುತ್ತಾನೆ. ಇದೇ ವಿಷಯವನ್ನ ತಿಳಿಸಿ ಶ್ವೇತಾ ಹಾಗೂ ನಕ್ಷತ್ರಗೆ ಸರ್‌ಪ್ರೈಸ್ ಕೊಡಲು ಭೂಪತಿ ಮುಂದಾಗುತ್ತಾನೆ. ಎಸ್‌ಎಫ್‌ಎಂ ಕಚೇರಿಗೆ ಬಂದ್ಮೇಲೆ ‘ಆರ್‌ಜೆ ಸಖಿ’ ಶೋ ಮಾಡಬೇಕು ಅಂದಾಗ ಶ್ವೇತಾ ಶಾಕ್ ಆಗುತ್ತಾಳೆ. ಹೇಗಾದರೂ ಮಾಡಿ ಭೂಪತಿಯಿಂದ ತಪ್ಪಿಸಿಕೊಳ್ಳಬೇಕು ಎಂದು ಅನಾರೋಗ್ಯದ ನಾಟಕವಾಡುತ್ತಾಳೆ. ಅಲ್ಲಿಗೆ, ‘ಆರ್‌ಜೆ ಸಖಿ’ ಶೋ ನಡೆಯಲ್ಲ ಅಂತ ಬೇಸರಗೊಂಡಿದ್ದಾಗಲೇ ಭೂಪತಿಗೆ ಸರ್‌ಪ್ರೈಸ್ (Surprise)ಸಿಕ್ಕಿದೆ. ‘ಆರ್‌ಜೆ ಸಖಿ’ ಬೇರೆ ಯಾರೂ ಅಲ್ಲ.. ತನ್ನ ಪತ್ನಿ ನಕ್ಷತ್ರ ಎಂಬ ಸತ್ಯ (Truth)ಭೂಪತಿಗೆ ಅರಿವಾಗಿದೆ.
ಅಮ್ಮಮ್ಮನ ಕಾಫಿ ಅಂಗಡಿ ರೆಡಿ ಆಯ್ತು! ಕನ್ನಡತಿ ಕೊನೆ ಹೇಗಿರುತ್ತೆ?
ಹೇಳಿ ಕೇಳಿ ಭೂಪತಿ ಆರ್‌ಜೆ ಸಖಿ ಫ್ಯಾನ್. ಅವಳ ಸ್ವರ ಭೂಪತಿಗೆ ಸಿಕ್ಕಾಪಟ್ಟೆ ಇಷ್ಟ(Like). ಇದೀಗ ತನ್ನ ಪತ್ನಿಯೇ ಆ ಆರ್‌ಜೆ ಅಂತ ಗೊತ್ತಾದ್ಮೇಲೆ ನಕ್ಷತ್ರ ಮೇಲೆ ಭೂಪತಿಗೆ ಪ್ರೀತಿ ಹುಟ್ಟುತ್ತಾ? ಅದಾಗಲೇ ಶಕುಂತಲಾ ದೇವಿಯ ನಂಬಿಕೆ ಕಳೆದುಕೊಂಡಿರುವ ಶ್ವೇತಾಳಿಂದ ಇದೀಗ ಭೂಪತಿ ಕೂಡ ದೂರವಾಗ್ತಾನ? ಮುಂದೆ ಭೂಪತಿ ಮತ್ತು ನಕ್ಷತ್ರಾ ನಡುವೆ ರೊಮ್ಯಾಂಟಿಕ್ ಲೈಫ್(Romantic life) ಶುರುವಾಗುತ್ತಾ ಅನ್ನೋ ಪ್ರಶ್ನೆ ವೀಕ್ಷಕರ ಮುಂದಿದೆ.