ನಾನು ಪ್ರೆಗ್ನೆಂಟ್ ಅನ್ನೋದು ನನಗೆ ಗೊತ್ತಿಲ್ಲ, ಪಾಳು ಬಂಗಲೆಗೆ ಹೋಗಬೇಕು; ನಿವೇದಿತಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಶಾಕ್

By Vaishnavi Chandrashekar  |  First Published Jan 31, 2023, 11:30 AM IST

2022 ಹೇಗಿತ್ತು ಎಂದು ಹಂಚಿಕೊಂಡ ನಿವೇದಿತಾ ಗೌಡ. ಕಾರು ಬೇಕು, ಸೋಲೋ ಟ್ರಿಪ್ ಮಾಡಬೇಕು.....ಲಿಸ್ಟ್‌ ಕೇಳಿ ಒಮ್ಮೆ....


ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ 2022ರಲ್ಲಿ ನೇಮ್, ಫೇಮ್ ಅಂಡ್ ಮನಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಸುಂದರಿ 2022 ವರ್ಷ ಹೇಗಿತ್ತು? 2023ರಲ್ಲಿ ಹೇಗಿರಬೇಕು ಅಂದುಕೊಂಡಿದ್ದಾರೆಂದು ಹಂಚಿಕೊಂಡಿದ್ದಾರೆ.

'2022 ಹೇಗಿತ್ತು ಎಂದು ಒಮ್ಮೆ ನಾನು ಫ್ಲಾಶ್‌ ಬ್ಯಾಕ್ ಹೋಗಿ ನಿಮ್ಮ ಜೊತೆ ಹಂಚಿಕೊಳ್ಳುವೆ. ಈಗಾಗಲೆ ಒಂದಷ್ಟು ಪ್ರಶ್ನೆಗಳು ರೆಡಿಯಾಗಿದೆ' ಎಂದು ಹೇಳುವ ಮೂಲಕ ವಿಡಿಯೋ ಆರಂಭಿಸಿದ್ದಾರೆ ನಿವೇದಿತಾ ಗೌಡ. 

Tap to resize

Latest Videos

ಪ್ರಶ್ನೆ: ನಿಮ್ಮ ಹೆಸರು?
ನಿವಿ ಉತ್ತರ: ನಿವೇದಿತಾ ಗೌಡ

ಪ್ರಶ್ನೆ: ಇವತ್ತಿನ ದಿನಾಂಕ?
ನಿವಿ ಉತ್ತರ: (ದಿನಾಂಕ ಏನೆಂದು ಒಮ್ಮೆ ಯೋಚಿಸಿ ನಿಂತು ಬಿಟ್ಟರು)

ಪ್ರಶ್ನೆ: ನಿಮ್ಮ ಯೂಟ್ಯೂಬ್‌ ಸಬ್‌ಸ್ಕ್ರೈಬರ್ ಎಷ್ಟಿದ್ದಾರೆ?
ನಿವಿ ಉತ್ತರ: 202K ಇದ್ದಾರೆ.

ಪ್ರಶ್ನೆ: ಇನ್‌ಸ್ಟಾಗ್ರಾಂ ಫಾಲೋವರ್ಸ್‌?
ನಿವಿ ಉತ್ತರ: 1.5 ಮಿಲಿಯನ್ 

ಪ್ರಶ್ನೆ: ನಿವಿ ಅಪ್ಲೋಡ್ ಮಾಡಿರುವ ವಿಡಿಯೋಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡಿರುವ ವಿಡಿಯೋ ಯಾವುದು?
ನಿವಿ ಉತ್ತರ:  ಚಿಕನ್ ಫ್ರೈ ಮಾಡಿರುವ ವಿಡಿಯೋ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಅದು ಬಿಟ್ಟರೆ ನನ್ನ ಡಯಟ್ ಪ್ಲ್ಯಾನ್

ಪ್ರಶ್ನೆ: ಯಾವ ವಿಡಿಯೋ ಈ ವರ್ಷ ವೈರಲ್ ಆಯ್ತು?
ನಿವಿ ಉತ್ತರ: ಮುದ್ದೆ ಮಾಡುವ ವಿಡಿಯೋ ತುಂಬಾ ವೈರಲ್ ಆಗಿ ಟ್ರೋಲ್ ಆಗಿತ್ತು. 

ಪ್ರಶ್ನೆ: ಬಕೆಟ್‌ ಲಿಸ್ಟ್‌ನಲ್ಲಿರುವ ಒಂದು ಕೆಲಸ ಈ ವರ್ಷ ನೀವು ಮಾಡಿರುವುದು
ನಿವಿ ಉತ್ತರ: ಸೋಲೋ ಟ್ರ್ಯಾವಲ್ ಮಾಡಬೇಕು ಅಂದುಕೊಂಡಿದ್ದೆ ಅದನ್ನು ಸಾಧಿಸಿರುವೆ.

ಪ್ರಶ್ನೆ: ನಿಮಗೆ ನೀವೆ ಹಾಕಿಕೊಳ್ಳುವ ಚಾಲೆಂಜ್ ಯಾವುದು?
ನಿವಿ ಉತ್ತರ: ಸ್ಕೈ ಡೈವಿಂಗ್ ಮತ್ತು ಬಂಕಿ ಜಂಪಿಂಗ್ ಮಾಡಬೇಕು ಅಂತ ತುಂಬಾ ಆಸೆ ಇದೆ. ಈ ವರ್ಷ ಸಾಧಿಸುವೆ.

ಹೆಂಡ್ತಿ ಹಾಕೋ ಬಟ್ಟೆನ ನೀಟಾಗಿ ನೋಡಿ; ಚಂದನ್‌ ಜೊತೆ ಜಗಳ ಮಾಡ್ಕೊಂಡು ಗಿಫ್ಟ್‌ ತೆಗೆಸಿಕೊಂಡ ನಿವೇದಿತಾ ಗೌಡ

ಪ್ರಶ್ನೆ: ನಿಮ್ಮ ಬಗ್ಗೆ ನೀವೇ ಕೇಳಿರುವ ವಿಚಿತ್ರ ಸ್ಟೇಟ್ಮೆಂಟ್ ಯಾವುದು?
ನಿವಿ ಉತ್ತರ: ನಾನು ಪ್ರೆಗ್ನೆಂಟ್ ಅನ್ನೋ ವಿಚಾರ ಕೇಳಿದ್ದೆ. ಇದು ವಿಚಿತ್ರ ಏಕೆಂದರೆ ನನಗೇ ಗೊತ್ತಿಲ್ಲ ನಾನು ಪ್ರೆಗ್ನೆಂಟ್ ಆಗಿದ್ದೆ ಎಂದು. 

ಪ್ರಶ್ನೆ: 2022ರ ನೆಚ್ಚಿನ ಸಿನಿಮಾ?
ನಿವಿ ಉತ್ತರ: ಎಷ್ಟೊಂದು ಇದೆ...ಅದರಲ್ಲಿ ವಿಕ್ರಾಂತ್ ರೋಣ ಇಷ್ಟ.

ಪ್ರಶ್ನೆ: ಹಿಂದಿನ ವರ್ಷದಲ್ಲಿ ನಡೆದ ಘಟನೆಯನ್ನು ಬದಲಾಯಿಸುವ ಅವಕಾಶ ಸಿಕ್ಕರೆ ಏನನ್ನು ಬದಲಾಯಿಸಲು ಇಷ್ಟ ಪಡುತ್ತೀರಾ?
ನಿವಿ ಉತ್ತರ: ಸ್ಕೂಲ್ ಮತ್ತು ಕಾಲೇಜ್‌ ದಿನಗಳನ್ನು ಬದಲಾಯಿಸಬೇಕು. ಕ್ಲಾಸ್ ಬಂಕ್ ಮಾಡಿ ಸ್ನೇಹಿತರ ಜೊತೆ ಎಂಜಾಯ್ ಮಾಡಲು ಹೋಗುತ್ತಿದ್ದೆ ಏಕೆಂದರೆ ನಾನು ಒಳ್ಳೆಯ ಸ್ಟುಡೆಂಟ್ ಆಗಿದ್ದೆ. 

ಪ್ರಶ್ನೆ:  2022 ರಲ್ಲಿ ನೀವು ಒಂದು ವಿಷಯವನ್ನು ಮರೆಯಲು ಬಯಸುತ್ತೀರಿ? 
ನಿವಿ ಉತ್ತರ: ನಾನು ಏನೂ ಮರೆಯುವುದಕ್ಕೆ ಇಷ್ಟ ಪಡುವುದಿಲ್ಲ ಏಕೆಂದರೆ ನನ್ನ 2022 ತುಂಬಾ ಚೆನ್ನಾಗಿತ್ತು. ಒಂದು ಶೋ ರನ್ನರ್‌ ಅಪ್ ಆದೆ, ಒಂದು ಅವಾರ್ಡ್ ಬಂತು. ನಾನು ಯಾವುದು ಡಿಲೀಟ್ ಮಾಡುವುದಿಲ್ಲ.

ಪ್ರಶ್ನೆ: ಒಂದು ಪದದಲ್ಲಿ 2022 ವಿವರಿಸಿ?
ನಿವಿ ಉತ್ತರ: ಬ್ಯೂಟಿಫುಲ್ ಆಂಡ್ ಬೆಸ್ಟ್‌ ವರ್ಷ

 

ತಲೆ ತಿರುಗುತ್ತೆ, ವಾಂತಿಯಾಗ್ತಿದೆ; 2 ತಿಂಗಳ ಗರ್ಭಿಣಿ ಎಂದು ಬಹಿರಂಗ ಪಡಿಸಿದ ನಿವೇದಿತಾ ಗೌಡ

ಪ್ರಶ್ನೆ: ಯಾವುದರ ಬಗ್ಗೆ ಭಯ ಹೆಚ್ಚಿದೆ?
ನಿವಿ ಉತ್ತರ: ದೆವ್ವ ಅಂದ್ರೆ ತುಂಬಾ ಭಯ ಏಕೆಂದರೆ ತುಂಬಾ ಅನುಭವಗಳು ಆಗಿದೆ. 

ಪ್ರಶ್ನೆ: 2023ರ ರೆಸಲ್ಯೂಶನ್?
ನಿವಿ ಉತ್ತರ: ಈ ವರ್ಷ ಹೊಸ ಕಾರು ಖರೀದಿಸಬೇಕು

ಪ್ರಶ್ನೆ: ಜೀವನದಲ್ಲಿ ಈ ಕ್ಷಣ ಏನು ಮುಖ್ಯವಿದೆ?
ನಿವಿ ಉತ್ತರ: ನನ್ನ ತಂದೆ-ತಾಯಿ, ಅವರೇ ನನಗೆ ತುಂಬಾ ಮುಖ್ಯ

ಪ್ರಶ್ನೆ:ಈ ವರ್ಷ ಹೊಸ ಪ್ರಯತ್ನ ಮಾಡುವುದಾದರೆ
ನಿವಿ ಉತ್ತರ: ಒಂದು ಸ್ಕೇರಿ ಹೌಸ್ ಅಥವಾ ದೆವ್ವದ ಬಂಗಲೆಗೆ ಹೋಗಬೇಕು


 

click me!