ಸತ್ಯ ತಿಳಿಸಲು ಅಪ್ಪನನ್ನು ಹುಡುಕುತ್ತಿರುವ ಲಚ್ಚಿ; ಸತ್ಯ ಅರಿಯದೇ ಹೆಂಡತಿ-ಮಗಳನ್ನು ನೋಡಲು ಅಲೆಯುತ್ತಿರುವ ಸಂಗಮ್!

Published : Nov 18, 2023, 01:10 PM ISTUpdated : Nov 18, 2023, 03:44 PM IST
ಸತ್ಯ ತಿಳಿಸಲು ಅಪ್ಪನನ್ನು ಹುಡುಕುತ್ತಿರುವ ಲಚ್ಚಿ; ಸತ್ಯ ಅರಿಯದೇ ಹೆಂಡತಿ-ಮಗಳನ್ನು ನೋಡಲು ಅಲೆಯುತ್ತಿರುವ ಸಂಗಮ್!

ಸಾರಾಂಶ

ಅಪ್ಪ ಸಂಗಮ್‌ನನ್ನು ಹುಡುಕಿಕೊಂಡು ಹೊರಟ ಲಚ್ಚಿ ಸಂಪಿಗೆಹಳ್ಳಿಗೆ ಹೋಗಿದ್ದಾಳೆ. ಅದೇ ರೀತಿ ಸಂಗಮ್ ಕೂಡ ತನ್ನ ಮಾಜಿ ಲವರ್ ಹುಡುಕಿಕೊಂಡು ಅದೇ ಹಳ್ಳಿಗೆ ಹೋಗಿದ್ದಾನೆ. ಅಲ್ಲಿ ರಾಣಿ ಚೆನ್ನಮ್ಮ ನಾಟಕ ನಡೆಯುತ್ತಿದೆ. ಅದನ್ನು ನೋಡಲು ಲಚ್ಚಿ ಅಲ್ಲಿಗೆ ಧಾವಿಸಿದ್ದಾಳೆ. ಸಂಗಮ್ ಕೂಡ ಅಲ್ಲಿಗೆ ಬರುತ್ತಾನಾ? ಲಚ್ಚಿಯನ್ನು ಭೇಟಿ ಆಗುತ್ತಾನಾ?

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ ನಮ್ ಲಚ್ಚಿ ಸಖತ್ ಸುದ್ದಿ ಮಾಡುತ್ತಿದೆ. ಈ ಸೀರಿಯಲ್‌ ಚಿತ್ರಕಥೆ ಸದ್ಯ ಸಾಕಷ್ಟು ಕುತೂಹಲದ ಹಂತವನ್ನು ತಲುಪಿದೆ. ಸೀರಿಯಲ್‌ನಲ್ಲಿ ಗಿರಿಜಾ ಮಗಳು ಲಚ್ಚಿ ಕಣ್ಣೆದುರಲ್ಲೇ ಸತ್ತಿದ್ದಾಳೆ. ಆಕೆಯ ಸಾವಿನಿಂದ ಕಂಗಾಲಾಗಿದ್ದರೂ ಲಚ್ಚಿ, ಈ ವಿಷಯವನ್ನು ತನ್ನ ಅಪ್ಪ ಸಂಗಮ್‌ಗೆ ಹೇಗಾದರೂ ತಿಳಿಸಲೇಬೇಕೆಂದು ಆತನನ್ನು ಹುಡುಕಿಕೊಂಡು ಹೊರಟಿದ್ದಾಳೆ. ಆದರೆ, ಸಂಗಮ್‌ಗೆ ಲಚ್ಚಿ ತನ್ನ ಮಗಳೇ ಎಂದು ಗೊತ್ತಿಲ್ಲ. ಆತ ತನ್ನ ಹಳೆಯ ಲವರ್ ಹುಡುಕಿಕೊಂಡು ಹೊರಡುತ್ತಾನೆ. 'ನನ್ನ ಲವರ್‌ ಮಗು ಕೂಡ ಈಗ ದೊಡ್ಡವಳಾಗಿರಬಹುದು, ಆಕೆಯನ್ನು ನಾನು ನೋಡಬೇಕು' ಎಂದು ಯೋಚಿಸಿ ಆತನೂ ಸಂಪಿಗೆಹಳ್ಳಿಗೆ ಹೊರಟಿದ್ದಾನೆ. 

ಅಪ್ಪ ಸಂಗಮ್‌ನನ್ನು ಹುಡುಕಿಕೊಂಡು ಹೊರಟ ಲಚ್ಚಿ ಸಂಪಿಗೆಹಳ್ಳಿಗೆ ಹೋಗಿದ್ದಾಳೆ. ಅದೇ ರೀತಿ ಸಂಗಮ್ ಕೂಡ ತನ್ನ ಮಾಜಿ ಲವರ್ ಹುಡುಕಿಕೊಂಡು ಅದೇ ಹಳ್ಳಿಗೆ ಹೋಗಿದ್ದಾನೆ. ಅಲ್ಲಿ ರಾಣಿ ಚೆನ್ನಮ್ಮ ನಾಟಕ ನಡೆಯುತ್ತಿದೆ. ಅದನ್ನು ನೋಡಲು ಲಚ್ಚಿ ಅಲ್ಲಿಗೆ ಧಾವಿಸಿದ್ದಾಳೆ. ಸಂಗಮ್ ಕೂಡ ಅಲ್ಲಿಗೆ ಬರುತ್ತಾನಾ? ಲಚ್ಚಿಯನ್ನು ಭೇಟಿ ಆಗುತ್ತಾನಾ? ಗಿರಿಜಾ ಸತ್ತಿರುವ ಸಂಗತಿ ಸಂಗಮ್‌ಗೆ ಅಲ್ಲೇ ತಿಳಿಯುತ್ತಾ? ಲಚ್ಚಿ ಅಲ್ಲಿ ನಾನೇ ನಿನ್ನ ಮಗಳು ಎಂಬುದನ್ನು ಸಂಗಮ್‌ಗೆ ಹೇಳಿಬಿಡುತ್ತಾಳಾ? 

ಚೇತರಿಕೆ ಸಹ ತುಂಬಾ ಮುಖ್ಯ; ರಶ್ಮಿಕಾಗೆ ಹುಷಾರಿಲ್ವಾ, Defake ಎಫೆಕ್ಟ್ ಆ..? 

ಇವೆಲ್ಲ ಪ್ರಶ್ನೆಗಳು, ಸಸ್ಪೆನ್ಸ್‌ಗಳು ನಮ್ ಲಚ್ಚಿ ಸೀರಿಯಲ್ ನೋಡುತ್ತಿರುವ ವೀಕ್ಷಕವರ್ಗಕ್ಕೆ ಉತ್ತರವಿಲ್ಲದ, ಆದರೆ ಉತ್ತರ ಬೇಕಾಗಿರುವ ಪ್ರಶ್ನೆಗಳಾಗಿ ಕಾಡುತ್ತಿವೆ. ಸಂಚಿಕೆಗಳನ್ನು ನೋಡುತ್ತ ಹೋದಂತೆ ಎಲ್ಲಾ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರಗಳು ಸಿಗಲಿವೆ. ಸದ್ಯಕ್ಕೆ ನಾಟಕ ನೋಡುತ್ತಿರುವ ಲಚ್ಚಿಗೆ ಅಲ್ಲಿಯೂ ಅವಳ ಅಮ್ಮನ ನೆನಪಾಗುತ್ತದೆ. ಊರಿಗೆ ಹೋಗುತ್ತಿರುವ, ಅಲ್ಲಿ ನಾಟಕ ನೋಡುತ್ತಿರುವ ಲಚ್ಚಿ, ತನ್ನ ಮಾಜಿ ಲವರ್ ಹಾಗೂ ಅವಳ ಮಗುವನ್ನು ನೋಡಲು ಅದೇ ಹಳ್ಳಿಯಲ್ಲಿ ಸುತ್ತಾಡುತ್ತಿರುವ ಸಂಗಮ್, ಎಲ್ಲವನ್ನೂ ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನೋಡಬಹುದು. 

ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ' ಬಿಡುಗಡೆ; ಪ್ರೇಕ್ಷಕರ ವಿಶೇಷ ಪ್ರತಿಕ್ರಿಯೆ ಹಿಂದೆ ಏನಿದೆ ಗುಟ್ಟು?

ಇಂಥ ಎಲ್ಲ ಪ್ರಶ್ನೆಗಳಿಗೆ ಇಂದಿನ ಸಂಚಿಕೆ ನೋಡುವುದೊಂದೇ ದಾರಿ. ಅಂದಹಾಗೆ, ನಮ್ ಲಚ್ಚಿ ಸೀರಿಯಲ್ ಸ್ಟಾರ್ ಸುವರ್ಣದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 8.00ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್‌ನಲ್ಲಿ ಕಿರುತೆರೆಯ ಸ್ಟಾರ್ ನಟ ವಿಜಯ್ ಸೂರ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?