
ಇದೇ ನವೆಂಬರ್ 18 ರಿಂದ ಶನಿವಾರ - ಭಾನುವಾರ ರಾತ್ರಿ 9 ಗಂಟೆಗೆ ಶುರುವಾಗ್ತಿದೆ 'ಡ್ರಾಮಾ ಜ್ಯೂನಿಯರ್ಸ್ ಸೀಸನ್ 5' ರಿಯಾಲಿಟಿ ಶೋ. ಇದರಲ್ಲಿ ನಿರೀಕ್ಷೆಗೂ ಮೀರಿ ತನ್ನದೇ ಸಂಚಲನ ಮೂಡಿಸಿದ ವಾಹಿನಿ ಜೀ ಕನ್ನಡ. ಪ್ರೇಕ್ಷಕರ ಬೇಕು, ಬೇಡಗಳನ್ನು ಅರ್ಥೈಸಿಕೊಂಡು ಇಲ್ಲಿಯವರೆಗೂ ಹತ್ತು ಹಲವು ಸದಭಿರುಚಿಯ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಾ ಹೊಸ ದಾಖಲೆಗಳಿಗೆ ನಾಂದಿ ಹಾಡುತ್ತಿದೆ.
'ಡ್ರಾಮಾ ಜ್ಯೂನಿಯರ್ಸ್' ರಿಯಾಲಿಟಿ ಶೋ ಮುಗ್ಧ ಮನಸ್ಸಿನ ಮಕ್ಕಳ ನಟನಾ ಕೌಶಲ್ಯಕ್ಕೆ ಮತ್ತು ಅವರ ಅಭಿನಯ ಸಾಮರ್ಥ್ಯಕ್ಕೆ ವೇದಿಕೆಯನ್ನು ಒದಗಿಸುವ ಒಂದು ಉತ್ತಮ ಶೋ. ಈ ಶೋ ಕೇವಲ ಮನರಂಜನೆಯನ್ನಷ್ಟೇ ನೀಡದೆ ವಿನೂತನ, ವಿಭಿನ್ನ ಪ್ರಯೋಗಗಳನ್ನು ಮಾಡಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಅಭಿನಯದ ಜೊತೆಗೆ ರಂಗಭೂಮಿಯ ವಿವಿಧ ಮಜಲುಗಳನ್ನು ಪರಿಚಯಿಸುವುದರೊಂದಿಗೆ ಸಾಮಾಜಿಕ ಸಂದೇಶಗಳನ್ನು ನೀಡುತ್ತ ಪ್ರೇಕ್ಷಕ ಮಹಾಶಯರಿಂದ ಅದ್ಭುತ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕನ್ನಡ ಚಿತ್ರರಂಗಕ್ಕೆ ಹತ್ತು ಹಲವು ಬಾಲ ಕಲಾವಿದರನ್ನು ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಆರಂಭವಾದ 'ಡ್ರಾಮಾ ಜ್ಯೂನಿಯರ್ಸ್'ಎಂಬ ಕಾರ್ಯಕ್ರಮ ಯಶಸ್ವಿಯಾಗಿ ಹಲವು ಪ್ರತಿಭೆಗಳನ್ನು ಪರಿಚಯಿಸಿದೆ. ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶದ ಕನ್ನಡಿಗರೆಲ್ಲರೂ ಅದರ ಒಂದು ಭಾಗವಾಗುವಂತೆ ಮಾಡಿದ ಕೀರ್ತಿ ಜೀ ಕನ್ನಡ ವಾಹಿನಿಗೆ ಸಲ್ಲುತ್ತದೆ. ಈಗಾಗಲೇ 4 ಸೀಸನ‌್‌ಗಳನ್ನು ಯಶಸ್ವಿಯಾಗಿ ಪೂರೈಸಿದ್ದು 'ಡ್ರಾಮಾ ಜ್ಯೂನಿಯರ್ಸ್ ಸೀಸನ್ 5' ಅದ್ಧೂರಿ ಪ್ರಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
ಲವ್ ದೋಖಾಕ್ಕೆ ಚಾನ್ಸ್ ಕೊಡಲಿಲ್ಲ ಧಮೇಂದ್ರ, ಹೇಮಾ ಮಾಲಿನಿಗೆ ತಾಳಿ ಕಟ್ಟಲಿಲ್ಲ ಜಿತೇಂದ್ರ; ಶೋಭಾಳ ಕಥೆ ಏನಾಯ್ತು?
ಕರ್ನಾಟಕದಾದ್ಯಂತ 31 ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ಅಭಿನಯ ಕೌಶಲ್ಯದ ಹಿನ್ನೆಲೆಯುಳ್ಳ ಒಂದಷ್ಟು ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ಮೆರುಗು ಎಂಬಂತೆ ತ್ರಿವಳಿ ರತ್ನಗಳಾದ ಜೂಲಿ ಲಕ್ಷ್ಮಿ, ಕ್ರೇಜ಼ಿ ಸ್ಟಾರ್ ರವಿಚಂದ್ರನ್ ಹಾಗೂ ರಚಿತಾರಾಮ್ ಅವರು ಕಾರ್ಯಕ್ರಮದ ನಿರ್ಣಾಯಕರಾದರೆ, ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಪ್ರೀತಿ ಪಾತ್ರರಾದ 'ಮಾಸ್ಟರ್ ಆನಂದ್' ತಮ್ಮ ಮಾತಿನ ಚಟಾಕಿಯ ಮೂಲಕ ನಿರೂಪಿಸಲಿದ್ದಾರೆ.
ಹೆಂಡ್ತಿ ಅಪ್ಪ ಕತ್ತಿಗೆ ಮಚ್ಚು ಹಿಡಿದು, ತಿರುಪತಿಗೆ ಕರಕೊಂಡು ಹೋಗಿದ್ರು; ನಿರಂಜನ್ ದೇಶಪಾಂಡೆ
ವೀಕ್ಷಕರ ನಿರೀಕ್ಷೆಯಂತೆ ಎಲ್ಲವೂ ಅತ್ಯದ್ಭುತವಾಗಿ ಸಜ್ಜುಗೊಳ್ಳುತ್ತಿದ್ದು, ವಿವಿಧ ಆಯಾಮಗಳಲ್ಲಿ ಮನರಂಜನೆ ನೀಡಲು 'ಡ್ರಾಮಾ ಜೂನಿಯರ್ಸ್ ಸೀಸನ್ 5 ಪುಟಾಣಿಗಳು' ಇದೇ ನವೆಂಬರ್ 18 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ, ನಿಮ್ಮ ಜೀ ಕನ್ನಡ ವಾಹಿನಿಯ ಮೂಲಕ ನಿಮ್ಮ ಮನೆ - ಮನಕ್ಕೆ ಲಗ್ಗೆ ಇಡಲಿದ್ದಾರೆ. ಒಟ್ಟಿನಲ್ಲಿ, ಪುಟಾಣಿಗಳಿಂದ ಪುಟಾಣಿಗಳಿಗಾಗಿ ಪುಟಾಣಿಗಳಿಗೋಸ್ಕರ ಬರುತ್ತಿದೆ 'ಡ್ರಾಮಾ ಜೂನಿಯರ್ಸ್ ಸೀಸನ್ 5 ಪುಟಾಣಿಗಳು'.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.