BBK10: ಬಿಗ್ ಬಾಸ್ ಮನೆಯಲ್ಲೇ ಹೆಂಡ್ತಿ ಹುಟ್ಟಿದಬ್ಬ ಆಚರಿಸಿದ ವಿನಯ್ ಗೌಡ!

By Govindaraj S  |  First Published Nov 18, 2023, 12:07 PM IST

ಬಿಗ್​ಬಾಸ್ ಕನ್ನಡ ಸೀಸನ್ 10 ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ವಿನಯ್ ಗೌಡ ಈ ಬಾರಿ ಶೋನಲ್ಲಿ ಭಾರೀ ನೆಗೆಟಿವ್ ಆಗಿ ಕಾಣಿಸಿಕೊಂಡಿದ್ದು ಅವರನ್ನು ಹೇಟ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ವಿಶೇಷವಾಗಿ ವಿನಯ್ ತಮ್ಮ ಕುಟುಂಬವನ್ನು ತುಂಬಾ ಪ್ರೀತಿ ಮಾಡ್ತಾರೆ.


ಬಿಗ್​ಬಾಸ್ ಕನ್ನಡ ಸೀಸನ್ 10 ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ವಿನಯ್ ಗೌಡ ಈ ಬಾರಿ ಶೋನಲ್ಲಿ ಭಾರೀ ನೆಗೆಟಿವ್ ಆಗಿ ಕಾಣಿಸಿಕೊಂಡಿದ್ದು ಅವರನ್ನು ಹೇಟ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ವಿಶೇಷವಾಗಿ ವಿನಯ್ ತಮ್ಮ ಕುಟುಂಬವನ್ನು ತುಂಬಾ ಪ್ರೀತಿ ಮಾಡ್ತಾರೆ. ಆ ಪ್ರಕಾರ ಅವರು ಬಿಗ್​ ಬಾಸ್​ ಮನೆಯಲ್ಲಿ ಇರುವ ಈ ಸಂದರ್ಭದಲ್ಲೇ ಅವರ ಹೆಂಡತಿ ಅಕ್ಷತಾ ಗೌಡ ಹುಟ್ಟುಹಬ್ಬ ಬಂದಿದೆ. ಅದಕ್ಕಾಗಿ ಅವರು ಏನು ಮಾಡಿದ್ದಾರೆ ಗೊತ್ತಾ. 

ನಿಜಕ್ಕೂ ಅವರು ತುಂಬಾ ಖುಷಿಯಿಂದ ಬಿಗ್​ ಬಾಸ್​ ಮನೆಗೆ ತೆರಳುವ ಮುನ್ನವೇ ಪ್ಲ್ಯಾನ್​ ಮಾಡಿದ್ದಾರೆ. ತಮ್ಮ ಹೆಂಡತಿಯನ್ನು ಕುರಿತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಪೋಸ್ಟ್​ ಹಂಚಿಕೊಂಡಿದ್ದಾರೆ. ಮನೆಯೊಳಗಿದ್ದರೂ  ಸಹ ತುಂಬಾ ಸಲ ಅವರು ತಮ್ಮ ಹೆಂಡತಿಯನ್ನು ಹಾಗೂ ಮಗನನ್ನು ಮಿಸ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಅವರು ಅಷ್ಟೊಂದು ತಮ್ಮ ಹೆಂಡತಿಯನ್ನು ಪ್ರೀತಿಸುತ್ತಾರೆ. ತಾಯಿಯಾಗಿ ನೀನು ತುಂಬಾ ಸ್ವೀಟ್​​. ಮಹಿಳೆಯಾಗಿ ನೀನು ತುಂಬಾ ಬ್ಯೂಟಿಫುಲ್​, ಹೆಂಡತಿಯಾಗಿ ನೀನೇ ಬೆಸ್ಟ್​​. ಲವ್ ಯೂ ಚಿನ್ನ!  ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 
 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Vinay Gowda (@vinaygowdaactor)


ಇನ್ನು ಅಕ್ಷತಾ ಗೌಡ ಕೂಡ ತಮ್ಮ ಖಾತೆಯಲ್ಲಿ ಕೇಕ್​ ಮುಂದೆ ವಿನಯ್​ ಗೌಡ ಅವರ ಫೋಟೋ ಹಿಡಿದುಕೊಂಡು ಪೋಸ್ಟ್​ ಹಂಚಿಕೊಂಡಿದ್ದಾರೆ. ಅವರು ಕೂಡ ವಿನಯ್​ ಅವರನ್ನು ತುಂಬಾ ಪ್ರೀತಿಸುತ್ತಾರೆ. ಕೇರ್​ ಮಾಡುತ್ತಾರೆ.  ವಿನಯ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ಆಗಾಗ ಫೊಟೋಸ್ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅವರಿಗೆ 109 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ವಿನಯ್ ಅವರ ಪತ್ನಿ ಅಕ್ಷತಾ ಗೌಡ ಕೂಡಾ ನಟಿಯಾಗಿದ್ದಾರೆ.  

'ಹರಹರ ಮಹಾದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರವನ್ನು ಮಾಡಿ ಕರ್ನಾಟಕದಲ್ಲಿ ಫೇಮಸ್ ಆದವರು ವಿನಯ್ ಗೌಡ. ದೇಹದಂಡನೆಯನ್ನು ಪ್ರೀತಿಸುವ ವಿನಯ್‌, ಜಿಮ್‌ನಲ್ಲಿ ಮಾತ್ರವೇ ನನ್ನದು 'ಮೀ ಟೈಮ್' ಅನ್ನುತ್ತಾರೆ. ಕುಟುಂಬದೊಳಗಿನ ನೋವಿನಿಂದ ಬೇಸತ್ತು ಮನೆಬಿಟ್ಟು ಹೊರಟು ಬದುಕಿಗಾಗಿ ಹೋರಾಡಿ ಈ ಹಂತಕ್ಕೆ ಬಂದಿರುವ ವಿನಯ್‌ ಅವರಿಗೆ ಪತ್ನಿಯೇ ಸರ್ವಸ್ವವಂತೆ. ಹದಿನಾಲ್ಕು ವರ್ಷದ ಮಗ ರುಷಬ್ ಗೌಡ ಎಂದರೆ ಅವರಿಗೆ ಪಂಚಪ್ರಾಣವಂತೆ.  

ಬ್ಲ್ಯಾಕ್​ ಸೀರೆಯಲ್ಲಿ ಕಿಸ್ ಬ್ಯೂಟಿ ಶ್ರೀಲೀಲಾ: ನಿಮಗೆಲ್ಲ ಬೆಳೆಯೋವರೆಗೂ ಮಾತ್ರ ಕನ್ನಡ ಭಾಷೆ ಬೇಕಾ ಅನ್ನೋದಾ!

ವಿನಯ್ ಪತ್ನಿ ಮಗನ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ. ಬಿಗ್ ಬಾಸ್ ಮನೆಯೊಳಗೆ ವಿನಯ್ ಗೌಡ ತಮ್ಮ ಸ್ಪರ್ಧಾತ್ಮಕ ಮನೋಭಾವ ಮತ್ತು ಅವರ ಮಾತಿನಿಂದಾಗಿ ಕೆಲವೊಮ್ಮೆ ಅತಿಯಾಗಿ ವರ್ತನೆ ಮಾಡುತ್ತಾರೆ ಎಂದು ಸೋಶಿಯಲ್ ಮಿಡಿಯಾಗಳಲ್ಲಿ ಹೇಳಲಾಗುತ್ತಿತ್ತು. ಆ ಕುರಿತು ಅಕ್ಷತಾ ಗೌಡ ಅವರು ಈ ಹಿಂದೆ ಒಂದು ವಿಡಿಯೋ ಹಂಚಿಕೊಂಡಿದ್ದರು.

click me!