ಸೊಸೆಗಾಗಿ ಮಗನನ್ನೇ ಎಳೆದೊಯ್ದ ಅಮ್ಮ! ಜನ ಮೆಚ್ಚಿದ ಅತ್ತೆ ಇವಳೇ ಅಂತಿದ್ದಾರೆ ಫ್ಯಾನ್ಸ್: ನಿಮ್ಮ ಆಯ್ಕೆ ಯಾರು?

By Suchethana D  |  First Published Sep 19, 2024, 4:14 PM IST

ಮತ್ತೊಂದು ಮದುವೆಗೆ ಸಿದ್ಧನಾಗಿದ್ದ ಮಗನನ್ನು ಮದುವೆ ಮಂಟಪದಿಂದ ಎಳೆದೊಯ್ದಿದ್ದಾಳೆ ಕುಸುಮಾ. ಕಲರ್ಸ್​ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್​ನಲ್ಲಿ ಜನ ಮೆಚ್ಚಿದ ಅತ್ತೆ ಕುಸುಮಾಗೇ ಸಿಗಬೇಕು ಎನ್ನುವುದು ಅಭಿಮಾನಿಗಳ ಹಾರೈಕೆ. ನೀವೇನೆಂತೀರಾ? 
 


ಇದ್ದರೆ ಇಂಥ ಅತ್ತೆ ಇರಬೇಕು, ಸೊಸೆಗಾಗಿ ಮಗನನ್ನೇ ಎದುರು ಹಾಕಿಕೊಂಡಿರೋ ಅತ್ತೆ ಈಕೆ. ಬಾಯಿ ಬಿಟ್ಟರೆ ಗಯ್ಯಾಳಿ ಎನಿಸಿದರೂ ಸೊಸೆಯ ಮೇಲೆ ಪ್ರಾಣ ಇಟ್ಟುಕೊಂಡಾಕೆ. ಪ್ರತಿ ಹೆಜ್ಜೆಯಲ್ಲಿಯೂ ಸೊಸೆಯ ಪರವಾಗಿ ನಿಲ್ಲುವಾಕೆ ಈಕೆ. ಹೌದು. ಇವಳೇ ಕುಸುಮತ್ತೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಭಾಗ್ಯಲಕ್ಷ್ಮಿ ಸೀರಿಯಲ್​ನ ಕುಸುಮತ್ತೆ ಎಂದರೆ ತಾವ ಹೆಣ್ಣಿಗೆ ತಾನೆ ಇಷ್ಟವಾಗಲ್ಲ ಹೇಳಿ? ಇಂತಿಪ್ಪ ಕುಸುಮತ್ತೆ ಈಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು  ಟ್ರ್ಯಾಕ್ಟರ್​ ಮೇಲೆ  ಮದುವೆ ಮನೆಗೆ ಎಂಟ್ರಿ ಕೊಟ್ಟು ಮಗನ ಮದ್ವೆಯನ್ನು ನಿಲ್ಲಿಸಿದ್ದಾಳೆ.  ಕಾಳಿಯವತಾರ ತಾಳಿದ್ದಾಳೆ. ಇನ್ನೇನು ತಾಂಡವ್​ ಶ್ರೇಷ್ಠಾಳ ಕುತ್ತಿಗೆಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಎಂಟ್ರಿ ಕೊಟ್ಟಿರೋ ಕುಸುಮಾ ಮದುವೆ ಮನೆಯ ಎಲ್ಲಾ ಸಾಮಗ್ರಿಗಳನ್ನೂ ಚೆಲ್ಲಾಪಿಲ್ಲಿ ಮಾಡಿದ್ದಾಳೆ. ಯಾರ ಧಮ್ಕಿಗೂ ಜಗ್ಗದೇ, ಬಗ್ಗದೇ ಜಟ್ಟಿಯವತಾರ ತಾಳಿದ್ದಾಳೆ.

ಎಲ್ಲರ ಎದುರೇ ಮಗನಿಗೆ ಕಪಾಳಮೋಕ್ಷ  ಮಾಡಿದ್ದಾಳೆ. ನನ್ನ ಸೊಸೆಗೆ ಎಂದಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದಿದ್ದಾಳೆ. ಕುತ್ತಿಗೆಯಲ್ಲಿ ಹಾಕಿರೋ ಹೂವಿನ ಹಾರವನ್ನು ಕಿತ್ತೆಸೆದಿದ್ದಾಳೆ. ಶಲ್ಯವನ್ನೂ ಮಗನ ಕುತ್ತಿಗೆಗೆ ಕಟ್ಟಿ ದರದರ ಎಳೆದುಕೊಂಡು ಬಂದಿದ್ದಾಳೆ. ಆಕೆಯನ್ನು ತಡೆಯಲು ಬಂದವರನ್ನು ಝಾಡಿಸಿದ್ದಾಳೆ. ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಭರ್ಜರಿ ಕಮೆಂಟ್​ಗಳ ಸುರಿಮಳೆಯಾಗಿದೆ. ಮನ ಮೆಚ್ಚಿದ ಅತ್ತೆಯಿದ್ದರೆ ಅದು ಕುಸುಮಾ ಮಾತ್ರ, ಇನ್ಯಾರೂ ಅಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಅಷ್ಟಕ್ಕೂ ಇದೀಗ ಕಲರ್ಸ್​ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್​ಗೆ ಕ್ಷಣಗಣನೆ ಆರಂಭವಾಗಿದೆ. ಹಲವಾರು ವಿಭಾಗಗಳಲ್ಲಿ ಅವಾರ್ಡ್​ ನೀಡಲಾಗುತ್ತದೆ. ಅದರಲ್ಲಿ ಒಂದು ಜನ ಮೆಚ್ಚಿದ ಅತ್ತೆ. ಈ ಅವಾರ್ಡ್​ಗೂ ಹಲವು ಸೀರಿಯಲ್​ಗಳ ಅತ್ತೆಯಂದಿರು ಇದ್ದಾರೆ. ಆದರೆ ಕುಸುಮಳಿಗೇ ಈ ಪ್ರಶಸ್ತಿ ಸಿಗೋದು ಪಕ್ಕಾ ಅಂತಿದ್ದಾರೆ ಸೀರಿಯಲ್​ ಪ್ರೇಮಿಗಳು. 

Tap to resize

Latest Videos

undefined

ಬಿಗ್​ಬಾಸ್​ಗೆ ಕ್ಷಣಗಣನೆ: ಇವರೇ ನೋಡಿ ದೊಡ್ಮನೆ ಹೋಗ್ತಿರೋ ಸಂಭಾವ್ಯ ಸ್ಪರ್ಧಿಗಳು- ನಿಮ್ಮ ನೆಚ್ಚಿನ ಸ್ಟಾರ್ ಯಾರು?

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಮದುವೆ ಮನೆಗೆ ಎಂಟ್ರಿ ಕೊಡುತ್ತಿದ್ದಂತೆಯೇ,  ಸೆಕ್ಯುರಿಟಿ ಗಾರ್ಡ್​ಗಳು ಆಕೆಯನ್ನು ತಳ್ಳಿದ್ದರು. ಮದುವೆ ನಿಲ್ಲಿಸಲು ಬಂದಿರೋ ಪೂಜಾ ಕುಸುಮತ್ತೆಯ ಕೈ ಹಿಡಿದು ಭರ್ಜರಿ ಎಂಟ್ರಿ ಕೊಟ್ಟರು. ಇತ್ತ ಸುಂದ್ರಿ ಗಂಡ ಪೂಜಾಳನ್ನು ಕಿಡ್​ನ್ಯಾಪ್ ಮಾಡಿಸಿದ್ದ. ಶ್ರೇಷ್ಠಾ ದುಡ್ಡು ಕೊಟ್ಟು ಹೀಗೆ ಮಾಡಿಸಿದ್ದಾಳೆ. ಏಕೆಂದರೆ ಆಕೆಗೆ ಎಲ್ಲ ಸತ್ಯ ಗೊತ್ತಿದೆ ಎಂದು. ಈ ವಿಷಯ ಸುಂದ್ರಿಗೆ ತಿಳಿದು ಭಾಗ್ಯಳಿಗೆ ತಿಳಿಸಿದ್ದಾಳೆ. ಭಾಗ್ಯ ತನ್ನ ತಂಗಿಯನ್ನು ಬಿಡಿಸಿಕೊಂಡು ಹೋಗಲು ಬಂದಿದ್ದಾಳೆ. ಅಲ್ಲಿ ಅವಳಿಗೆ ಸುಂದ್ರಿ ಅರ್ಧಂಬರ್ಧ ಸತ್ಯ ಹೇಳಿದ್ದಾಳೆ. ತಾಂಡವ್​ ತರುಣ್​ ಹೆಸರಿನಲ್ಲಿ ಇರುವುದು, ಶ್ರೇಷ್ಠಾ ಮದ್ವೆಯಾಗ್ತಿರೋದು ಭಾಗ್ಯಳ ಗಂಡನನ್ನೇ ಎನ್ನುವ ಸತ್ಯ ಹೇಳಲಿಲ್ಲ. ಬದಲಾಗಿದೆ ತರುಣ್​ಗೆ ನಾವು ನಿಜವಾದ ಅಪ್ಪ-ಅಮ್ಮ ಅಲ್ಲ. ಶ್ರೇಷ್ಠಾ ದುಡ್ಡು ಕೊಟ್ಟ ಕಾರಣ ಹೀಗೆ ಮಾಡಿರುವುದಾಗಿ ಹೇಳಿದ್ದಾಳೆ. ಆದರೆ ಅಲ್ಲಿ ನಡೆಯುತ್ತಿರುವುದು ನಿನ್ನ ಗಂಡನ ಮದ್ವೆ ಎನ್ನುವುದು ಹೇಳಿಲ್ಲ. ಅವಳು ಮದುವೆ ಮಂಟಪಕ್ಕೆ ಬರುವುದು ಬಾಕಿ ಇದೆ. 
  
ಶ್ರೇಷ್ಠಾಳ ಅಸಲಿ ಗುಣ ಗೊತ್ತಾಗಿ ಮತ್ತೆ ಭಾಗ್ಯಳ ಕಾಲಿಗೆ ಬಂದು ಬೀಳಬೇಕು ಎನ್ನುವುದು ಭಾಗ್ಯಲಕ್ಷ್ಮಿ ಸೀರಿಯಲ್​ ಪ್ರೇಮಿಗಳ ಅಭಿಲಾಷೆಯಾಗಿದೆ. ಆದರೆ ಭಾಗ್ಯ ತನಗಾಗಿ ಅಲ್ಲದಿದ್ದರೂ, ಮಕ್ಕಳಿಗಾಗಿ ಅಪ್ಪ ಬೇಕು ಎನ್ನುತ್ತಿದ್ದಾಳೆ. ಅಪ್ಪ ಇಲ್ಲದ ಮಕ್ಕಳನ್ನು ಅವಳು ಊಹಿಸಿಕೊಳ್ಳುವುದೂ ಕಷ್ಟವಾಗಿದೆ. ಒಟ್ಟಿನಲ್ಲಿ ಸೀರಿಯಲ್​ ಸದ್ಯ ಕುತೂಹಲ ಕೆರಳಿಸಿದೆ. ಆದರೆ ಇದುವರೆಗೂ ಭಾಗ್ಯಳಿಗೆ ಅಸಲಿಯತ್ತು ತಿಳಿಯದೇ ಇರುವುದು ಕೂಡ ಹಾಸ್ಯಾಸ್ಪದ ಎನ್ನಿಸುತ್ತಿದೆ ಎನ್ನುವುದು ಬಹುತೇಕ ಕಮೆಂಟಿಗರ ಮಾತು. ಇನ್ನು ಹಲವರು ಪೂಜಾ ಟ್ರ್ಯಾಕ್ಟರ್​ ಚಲಾಯಿಸುತ್ತಿರುವ ಬಗ್ಗೆಯೂ ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಕುಸುಮಾ ತನ್ನ ಮಗನ ಸತ್ಯವನ್ನು ಸೊಸೆಗೆ ತಿಳಿಸ್ತಾಳೋ ಅಥ್ವಾ ಈಗಲೂ ಬಚ್ಚಿಡುತ್ತಾಳೋ ಗೊತ್ತಿಲ್ಲ. ಒಂದು ವೇಳೆ ಭಾಗ್ಯಳಿಗೆ ಸತ್ಯ ತಿಳಿದರೆ ಇಂಥ ಗಂಡನ ಜೊತೆ ಇರಲು ಒಪ್ಪುತ್ತಾಳೋ ಎನ್ನುವುದು ಕೂಡ ಈಗಿರುವ ಕುತೂಹಲ. 

ಭೂಮಿಕಾಗೆ ಮಗು ಆಗ್ಲಿಲ್ಲಾ ಅಂತಂದ್ರೆ ಗೌತಮ್​ ಸುಮ್ನೆ ಬಿಡ್ತಾನಾ? ತಲೆ ತಗ್ಗಿಸೇ ಬಿಟ್ರಲ್ಲಾ ಹೆಂಗಸ್ರು!


click me!