ಸೀರಿಯಲ್​ ವೀಕ್ಷಕರಿಂದ ಸಮಸ್ಯೆಯೊಂದಕ್ಕೆ ಉತ್ತರ ಬಯಸಿದ್ದಾಳೆ ಭಾಗ್ಯ: ನೀವು ಸಹಾಯ ಮಾಡ್ತೀರಾ?

By Suchethana D  |  First Published May 16, 2024, 3:10 PM IST

ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ ನೇರಪ್ರಸಾರದಲ್ಲಿ ವೀಕ್ಷಕರ ಜೊತೆ  ಮಾತನಾಡಿದ್ದು, ಸಮಸ್ಯೆಯೊಂದಕ್ಕೆ ಪರಿಹಾರ ಕೇಳಿದ್ದಾರೆ. ನೀವು ಈಕೆಗೆ ಸಹಾಯ ಮಾಡಬಲ್ಲಿರಾ?
 


 ಹಲವಾರು ಅಡೆತಡೆಗಳನ್ನು ಎದುರಿಸಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಬರೆದಿದ್ದಾಳೆ ಭಾಗ್ಯ. ಆದರೆ ನಂತರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಂಡ- ಹೆಂಡತಿ ನಡುವೆ ಬಿರುಕು ಮೂಡಿದೆ. ಮನೆ ಎರಡು ಭಾಗವಾಗಿದೆ. ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಮಗಳು ತನ್ವಿ ನಿನ್ನ ಅಡುಗೆ ಸಕತ್​ ರುಚಿಯಾಗಿರುತ್ತದೆ ಎಂದಿದ್ದಾಳೆ. ಹಾಗಿದ್ದರೆ ನಾನು ಯಾವುದಾದರೂ ಹೋಟೆಲ್​ನಲ್ಲಿ ಅಡುಗೆಗೆ ಸೇರಿಕೊಳ್ಳಬೇಕು ಎಂದು ಭಾಗ್ಯ ಮನಸ್ಸು ಮಾಡುತ್ತಾಳೆ. ಧೈರ್ಯ ಮಾಡಿ   ಹೋಟೆಲ್​ಗಳಿಗೆ ಎಡೆತಾಕುತ್ತಾಳೆ ಭಾಗ್ಯ. ಆದರೆ ಹೋದಲ್ಲೆಲ್ಲಾ ಆಕೆಗೆ  ಅಪಮಾನ ಆಗುತ್ತದೆ.  

ಕೊನೆಗೂ ಯಶಸ್ವಿಯಾಗಿ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ ಈಕೆ. ಬ್ರೋಕರ್​ ಯಾವುದೋ ಹೋಟೆಲ್​ಗೆ ಹೋಗಲು ಹೇಳಿದ್ದರೆ ಭಾಗ್ಯ ಸ್ಟಾರ್​ ಹೋಟೆಲ್​ಗೆ ವಿಳಾಸ ತಪ್ಪಿ ಹೋಗಿದ್ದಳು. ಅಲ್ಲಿ ಇಂಗ್ಲಿಷ್​ನಲ್ಲಿ ಸಂದರ್ಶನ ಮಾಡಿದರೂ ಹಾಗೋ ಹೀಗೋ ಅಲ್ಪ ಸ್ವಲ್ಪ ತಿಳಿವಳಿಕೆಯಲ್ಲಿ ಕನ್ನಡದಲ್ಲಿಯೇ ಉತ್ತರ ಕೊಟ್ಟು ಅಂತೂ ಸಂದರ್ಶನ ಗೆದ್ದಿದ್ದಾಳೆ. ಇತ್ತ ಅತ್ತೆ ಕುಸುಮಾಗೂ ಹೋಟೆಲ್​ನಲ್ಲಿ ಉದ್ಯೋಗ ಸಿಕ್ಕಿದೆ. ಆದರೆ ಅತ್ತೆ- ಸೊಸೆ ಇಬ್ಬರೂ ತಮಗೆ ಕೆಲಸ ಸಿಕ್ಕಿರುವ ವಿಷಯವನ್ನು ಪರಸ್ಪರ ಹೇಳಿಕೊಂಡಿಲ್ಲ. ಅತ್ತೆಗೆ ತಿಳಿಯದಂತೆ ದಿನವೂ ಒಂದಿಲ್ಲೊಂದು ನೆಪ ಮಾಡಿಕೊಂಡು ಕೆಲಸಕ್ಕೆ ಹೋಗುವುದು ಅಷ್ಟು ಸುಲಭದ ಮಾತಲ್ಲ. ಕೆಲಸಕ್ಕೆ ಹೋಗುತ್ತೇನೆ ಎಂದರೆ ಅತ್ತೆ ಒಪ್ಪುವುದಿಲ್ಲ. ಒಂದು ದಿನ ಲೇಟ್​ ಆಗಿ ಬಂದಿದ್ದಕ್ಕೇ ಅತ್ತೆ ಸಿಕ್ಕಾಪಟ್ಟೆ ಬೈದಿದ್ದಳು.

Tap to resize

Latest Videos

ಆ್ಯಕ್ಟಿಂಗ್​ ನೋಡಿ ಎಂದ್ರೆ ಮೊದ್ಲು ದೇಹ ನೋಡ್ತೇನಂತ ನಿಲ್ಲಿಸಿದ್ರು: ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ಒನಿಮಾ

ಇವುಗಳ ನಡುವೆಯೇ ವೀಕ್ಷಕರಿಂದ ಪ್ರಶ್ನೆಯೊಂದಕ್ಕೆ ಉತ್ತರ ಬಯಸಿದ್ದಾಳೆ ಭಾಗ್ಯ. ಇನ್​ಸ್ಟಾಗ್ರಾಮ್​ ನೇರಪ್ರಸಾರದಲ್ಲಿ ಬಂದಿರೋ ಭಾಗ್ಯ, ತಮಗೆ ಉತ್ತರ ನೀಡುವಂತೆ ವೀಕ್ಷಕರಲ್ಲಿ ಕೋರಿದ್ದಾರೆ. ಅಷ್ಟಕ್ಕೂ ಅವರ ಸಮಸ್ಯೆ ಇರುವುದು, ದಿನವೂ ಅತ್ತೆಗೆ ಹೇಳದೇ ಹೋಟೆಲ್​ಗೆ ಹೇಗೆ ಹೋಗಬೇಕು ಎನ್ನುವುದು. ನೇರ ಪ್ರಸಾರದಲ್ಲಿ ಹಲವಾರು ಫ್ಯಾನ್ಸ್​, ಹಲವು ರೀತಿಯ ಸಜೆಷನ್​ ಕೊಟ್ಟೂ ಆಗಿದೆ. ಆದರೆ ಇದ್ಯಾವುದೂ ಭಾಗ್ಯಳಿಗೆ ಅಷ್ಟು ಸರಿ ಹೊಂದಲಿಲ್ಲ.  

ಸಾವಿರ ಸುಳ್ಳು ಹೇಳುವ ಬದಲು ನಿಜ ಹೇಳಿಬಿಡಿ ಎಂದು ಒಬ್ಬರು ಸಲಹೆ ಕೊಟ್ಟರು. ಆದರೆ ಇದಕ್ಕೆ ಭಾಗ್ಯ ಒಪ್ಪಲಿಲ್ಲ. ನಿಜ ಹೇಳುವ ಹಾಗಿಲ್ಲ. ನಾನು ಕೆಲಸಕ್ಕೆ ಹೋಗುತ್ತೇನೆ ಎಂದರೆ ಅತ್ತೆ ಸುತರಾಂ ಒಪ್ಪುವುದಿಲ್ಲ. ಮನೆಯ ಸೊಸೆ ಹೀಗೆ ಕೆಲಸಕ್ಕೆ ಹೋಗುವುದು ಅವರಿಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ. ಇನ್ನೊಬ್ಬ ಅಭಿಮಾನಿ ಡ್ಯಾನ್ಸ್​ ಕ್ಲಾಸ್​ಗೆ ಅಂತ ಹೇಳಿ ಅಂದಿದ್ದಾರೆ. ಈ ವಯಸ್ಸಿನಲ್ಲಿ ಡ್ಯಾನ್ಸ್​ ಕಲೀತೇನಂದ್ರೆ ಅತ್ತೆ ಒಪ್ಪಲ್ಲ ಎಂದಿದ್ದಾರೆ ಭ್ಯಾಗ್ಯ. ಯಾವುದೋ ಕೋರ್ಸ್​ಗೆ ಸೇರಿಕೊಂಡಿದ್ದೇನೆ ಅನ್ನಿ, ಫ್ರೆಂಡ್ಸ್​ ಹತ್ರ ಹೋಗ್ತಿದ್ದೇನೆ ಅನ್ನಿ, ನೇರಾನೇರ ಸತ್ಯ ಒಪ್ಪಿಕೊಳ್ಳಿ... ಹೀಗೆ ಹತ್ತಾರು ಸಲಹೆಗಳು ನೇರಪ್ರಸಾರದಲ್ಲಿ ಅಭಿಮಾನಿಗಳು ನೀಡಿದ್ದಾರೆ. ಸದ್ಯ ಅದ್ಯಾವುದೂ ಭಾಗ್ಯಗೆ ಒಪ್ಪಿಗೆ ಆಗಲಿಲ್ಲ. ನೀವು ಭಾಗ್ಯಕ್ಕೆ ಹೆಲ್ಪ್​ ಮಾಡ್ತೀರಾ?  

ರಾಖಿ ಸಾವಂತ್​ ಸ್ಥಿತಿ ಗಂಭೀರ? ಶಾಕಿಂಗ್​ ಹೇಳಿಕೆ ಕೊಟ್ಟ ಮಾಜಿ ಪತಿ- ನಟಿಗೆ ಆಗಿದ್ದೇನು?

 

click me!