ಪತಿ ತುಕಾಲಿಗೆ ಗೌರವ ಕೊಡದ ಹೆಣ್ಣು ಬೇರೆ ಗಂಡಸರಿಗೆ ಗೌರವ ಕೊಡ್ತಾರಾ?; ಮಾನಸ ಬಗ್ಗೆ ವೀಕ್ಷಕರಿಗೆ ಅಸಮಾಧಾನ

By Vaishnavi Chandrashekar  |  First Published Oct 16, 2024, 11:15 PM IST

ಮಾನಸ ಹಳ್ಳಿ ಶೈಲಿಯಲ್ಲಿ ಮಾತನಾಡುತ್ತಿರುವುದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿರುವ ವೀಕ್ಷಕರು. ಈ ವರ್ಷ ಬಿಗ್ ಬಾಸ್ ಸೀಸನ್ ಯಾರಿಗೆಲ್ಲಾ ಇಷ್ಟ?


ಬಿಗ್ ಬಾಸ್ ಸೀಸನ್ 10ರಲ್ಲಿ ಹಾಸ್ಯ ನಟ ತುಕಾಲಿ ಸಂತೋಷ್ ಸ್ಪರ್ಧಿಸಿ ಫಿನಾಲೆ ಲಿಸ್ಟ್‌ ಹಂತ ತಲುಪಿದ್ದರು. ಈಗ ಬಿಗ್ ಬಾಸ್ ಸೀಸನ್ 11ರಲ್ಲಿ ತುಕಾಲಿ ಸಂತೋಷ್ ಪತ್ನಿ ಮಾನಸ ಸ್ಪರ್ಧಿಸುತ್ತಿದ್ದಾರೆ. ಗಂಡ-ಹೆಂಡತಿಗೆ ವರ್ಷ ವರ್ಷವೂ ಕೆಲಸ ಕೊಡುವುದಾಗಿ ಕಲರ್ಸ್ ಕನ್ನಡ ಕಾಂಟ್ರಾಕ್ಟ್‌ ಕೊಟ್ಟಿದ್ದಾರಾ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಓಪನಿಂಗ್ ವಾರದಿಂದಲೂ ಬರ್ಲಾ ಹೋಗ್ಲಾ ಎಂದು ಮಾತನಾಡುವುದನ್ನು ಖುಷಿಯಿಂದ ನೋಡುತ್ತಿದ್ದರು ಆದರೆ ಈಗ ಆ ಮಾತುಗಳಿಂದ ಕಿರಿಕಿರಿ ಉಂಟಾಗುತ್ತಿದೆ ಅಂತಿದ್ದಾರೆ ಜನರು.

ಸೀಸನ್ 10ರಲ್ಲಿ ಫ್ಯಾಮಿಲಿ ರೌಂಡ್ ಆರಂಭವಾದಾಗ ತುಕಾಲಿ ಸಂತೋಷ್ ಪತ್ನಿ ಮಾನಸ ಆಗಮಿಸಿದ್ದರು ಆಗ ಇಬ್ಬರು ಹಳ್ಳಿ ಶೈಲಿಯಲ್ಲಿ ಮಾತನಾಡುವುದು ಜನರನ್ನು ಖುಷಿಯಿಂದ ನೋಡುತ್ತಿದ್ದರು. ಇದೇ ಕಾಮಿಡಿ ಹಿಟ್ ಆಗಲಿದೆ ಎಂದು ಗಿಚ್ಚಿ ಗಿಲಿಗಿಲಿ ಶೋನಲ್ಲಿ ಮಾಸನ ಸ್ಪರ್ಧಿಸಿದ್ದರು, 3ನೇ ಸ್ಥಾನ ಗಿಟ್ಟಿಸಿಕೊಂಡರು. ಹೀಗಾಗಿ ಸೀಸನ್ 11ರಲ್ಲಿ ಆಫರ್ ಪಡೆದುಕೊಂಡಿದ್ದಾರೆ. ಈಗ ಅದೇ ಕಾಮಿಡಿ ಜನರಿಗೆ ಕೋಪ ಬರುತ್ತಿದೆ. ಇಂದು ಪ್ರಸಾರವಾದ ಎಪಿಸೋಡ್‌ನಲ್ಲಿ ಮಾಸನ ಮತ್ತು ಜಗದೀಶ್ ನಡುವೆ ಜಗಳ ಶುರುವಾಗುತ್ತದೆ, ಆಗ ಮಾನಸ ಚಪ್ಪಲಿ ಹಾಗೆ ಹೀಗೆ ಎಂದು ಬೀಪ್‌ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಮಾಸನ ಮಾತನಾಡಿರುವ ರೀತಿ ಸರಿಯಾಗಿಲ್ಲ ಗಂಡಸರ ಜೊತೆ ಹೀಗೆ ಮಾತನಾಡಬಾರದು ಎಂದು ಜಗದೀಶ್ ಕ್ಯಾಮೆರಾ ಮುಂದೆ ಮಾತನಾಡಿದ್ದರು.

Tap to resize

Latest Videos

undefined

ಉಗ್ರಂ ಮಂಜು ದುರಹಂಕಾರಕ್ಕೆ ಬ್ರೇಕ್ ಹಾಕಲೇ ಬೇಕು; ಬಿಗ್ ಬಾಸ್‌ಗೆ ಒತ್ತಾಯಿಸುತ್ತಿರುವ ವೀಕ್ಷಕರು

ಬಿಗ್ ಬಾಸ್ ಮನೆಯಿಂದ ಹೊರ ಇದ್ದಾಗ ಖಾಸಗಿ ಸಂದರ್ಶನದಲ್ಲಿ ಮಾಸನ ತಮ್ಮ ಮದುವೆ ಪ್ರಸಂಗ ವಿವರಿಸಿದ್ದರು. ಮದುವೆಯಾದ ಒಂದು ವಾರ ಮಾತ್ರ ರೀ ಸಂತು ಸಂತೋಷ್ ಬನ್ನಿ ಎಂದು ಗೌರವದಿಂದ ಮಾತನಾಡುತ್ತಿದ್ದರೆ ಆದರೆ ಅಡ್ಜಸ್ಟ್ ಆಗುತ್ತಿದ್ದಂತೆ ಹೋಗೋ ಬಾರೋ ಎಂದು ಮಾತನಾಡಲು ಶುರು ಮಾಡಿದೆ. ಗೌರವ ಕೊಟ್ಟ ಮಾತನಾಡಿದರೆ ಏನ್ ಆಯ್ತು ನಾನು ಏನು ತಪ್ಪಾಗಿದೆ ಎಂದು ಸಂತು ಗಾಬರಿ ಆಗುತ್ತಾನೆ. ಹೋಗೋ ಬಾರೋ ಅಂತಲೇ ನಾವು ಮಾತನಾಡುವುದು' ಎಂದು ಹೇಳಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಹೀಗಾಗಿ ಪತಿ ಸಂತೋಷ್‌ಗೆ ಗೌರವ ಕೊಡದ ಹೆಣ್ಣು ಇನ್ನಿತ್ತರ ಗಂಡಸರಿಗೆ ಗೌರವ ಕೊಡುತ್ತಾರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.  

'ಜಗ್ಗುVs ಗುಳ್ಳೆನರಿ ಗ್ಯಾಂಗ್‌..' ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆದಾ ಜಗ್ಗು ದಾದಾ!

click me!