'ಜಗ್ಗುVs ಗುಳ್ಳೆನರಿ ಗ್ಯಾಂಗ್‌..' ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆದಾ ಜಗ್ಗು ದಾದಾ!

By Santosh Naik  |  First Published Oct 16, 2024, 10:45 PM IST

ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್‌ ಜಗದೀಶ್‌ ಮತ್ತು ರಂಜಿತ್‌ ನಡುವೆ ವಾಕ್ಸಮರ ನಡೆದಿದ್ದು, ಜಗದೀಶ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ಉಗ್ರಂ ಮಂಜು ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಜಗದೀಶ್‌ ಅವರನ್ನು 'ಜಗ್ಗುದಾದಾ' ಎಂದು ಕರೆಯಲಾಗುತ್ತಿದೆ.


ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಫುಲ್‌ ಬಿಸಿಯಾಗಿದೆ. ಸ್ಪರ್ಧಿಗಳ ನಡುವೆಯೇ ಭಾರೀ ಪ್ರಮಾಣದಲ್ಲಿ ವಾಕ್ಸಮರ ನಡೆದಿದೆ. ಅದರಲ್ಲೂ ಲಾಯರ್‌ ಜಗದೀಶ್‌ ಹಾಗೂ ರಂಜಿತ್‌ ನಡುವಿನ ಸಮರ ಕೈಕೈ ಮಿಲಾಯಿಸುವ ಹಂತದವರೆಗೂ ಹೋಗಿದೆ ಅನ್ನೋದು ಸುದ್ದಿ. ಬುಧವಾರದ ಎಪಿಸೋಡ್‌ನಲ್ಲೂ ಲಾಯರ್‌ ಜಗದೀಶ್‌ ಅವರನ್ನು ಮನೆಯ ಇತರ ಸ್ಪರ್ಧಿಗಳು ಟಾರ್ಗೆಟ್‌ ಮಾಡುತ್ತಿರುವುದು ಗೊತ್ತಾಗಿದೆ. ಅದರಲ್ಲೂ ರಂಜಿತ್‌ ಜೊತೆ ಹೊಡೆದಾಟ ಮಾಡಿಕೊಂಡ ಬಳಿಕ ಲಾಯರ್‌ ಜಗದೀಶ್‌ ಮನೆಯೊಂದ ಹೊರಬಂದಿರುವ ಫೋಟೋಗಳು ಕೂಡ ವೈರಲ್‌ ಆಗುತ್ತಿದೆ. ಆದರೆ, ಎರಡು ದಿನಗಳ ಎಪಿಸೋಡ್‌ ಪ್ರಸಾರವಾದ ಬಳಿಕ ಲಾಯರ್‌ ಜಗದೀಶ್‌ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೇಟ್‌ ಆಗಿದೆ. ಬಿಗ್‌ ಬಾಸ್‌ ಕನ್ನಡದ ಮನೆಯಲ್ಲಿ ಜಗ್ಗು ವರ್ಸಸ್‌ ಗುಳ್ಳೆನರಿ ಗ್ಯಾಂಗ್‌ಗಳು ಕಂಡಿವೆ ಅನ್ನೋದಂತೂ ಸ್ಪಷ್ಟವಾಗಿದೆ ಎಂದಿದ್ದಾರೆ. ಅದರಲ್ಲೂ ಅವರನ್ನು ಜಗ್ಗುದಾದಾ ಎಂದೇ ಕರೆಯಲು ಶುರುಮಾಡಿಕೊಂಡಿದ್ದಾರೆ.

ಇನ್ನು ಜಗದೀಶ್‌ ಅವರನ್ನು ಹಂತಹಂತದಲ್ಲೂ ಕೆಣಕುತ್ತಿದ್ದ ಉಗ್ರಂ ಮಂಜು ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ. 'ಇಡೀ ಗಲಾಟೆಯನ್ನು ಮೊದಲ ಆರಂಭ ಮಾಡಿದ್ದೇ ಉಗ್ರಂ ಮಂಜು. ನಂತರ ರಂಜಿತ್‌. ಬಳಿಕ ಮುಂದುವರಿಸಿದ್ದು ತ್ರಿವಿಕ್ರಮ್‌. ಬೀದಿನಾಯಿಗಳು ಇಂದು ಲಯನ್‌ ಜಗ್ಗು ಮೇಲೆ ಇಂದಿನ ಎಪಿಸೋಡ್‌ನಲ್ಲಿ ದಾಳಿ ಮಾಡುತ್ತಿದೆ' ಎಂದು ಕಾಮೆಂಟ್‌ ಮಾಡಿದ್ದಾರೆ. ಇದರಲ್ಲಿ ಮಾನಸ ಕೂಡ ಸೇರಿಕೊಂಡಿದ್ದಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ.

Tap to resize

Latest Videos

undefined

ಇನ್ನೂ ಕೆಲವರು ಜಗದೀಶ್‌ಗೆ ಸಪೋರ್ಟ್‌ ಮಾಡುವ ಮುನ್ನ ಹಿಂದಿನ ಎಪಿಸೋಡ್‌ನಲ್ಲಿ ಅವರು ಎಷ್ಟು ಬೀಪ್‌ ಪದ ಬಳಸಿದ್ದಾರೆ ಅನ್ನೋದನ್ನ ನೋಡಿ ಎಂದಿದ್ದಾರೆ. ಇದು ಬಿಗ್‌ ಬಾಸ್‌ ಅಲ್ಲ 'ಜಗ್ಗು vs ಗುಳ್ಳೆನರಿ ಗ್ಯಾಂಗ್' ಎಂದಿದ್ದಾರೆ. ಜಗದೀಶ್‌ ಅವರನ್ನು ನೋಡಿದರೆ, ಪಾಪ ಅನುಸುತ್ತಿದೆ ಎಂದಿದ್ದರೆ, ಈಗ ಜಗದೀಶ್‌ ಅವರನ್ನು ಬೆಂಬಲಿಸುವ ಕಾಲ ಎಂದಿದ್ದಾರೆ.

ಉಗ್ರಂ ಮಂಜು ದುರಹಂಕಾರಕ್ಕೆ ಬ್ರೇಕ್ ಹಾಕಲೇ ಬೇಕು; ಬಿಗ್ ಬಾಸ್‌ಗೆ ಒತ್ತಾಯಿಸುತ್ತಿರುವ ವೀಕ್ಷಕರು

'ಈ ಮಂಜ ಎಲ್ಲಾದ್ರೂ ಹೋಗಿ ಸಿಗ್ನಲ್ ಅಲ್ಲಿ ತಟ್ಟೋಕೆ ಸರಿಯಾಗ್ ಅವ್ನೆ..' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಜಗದೀಶ್‌ ಅವರ ಮೈಂಡ್‌ ಕಂಟ್ರೋಲ್‌ಅನ್ನು ಇಲ್ಲಿ ನೋಡಲೇಬೇಕು. ಮೊದಲ ವಾರಕ್ಕೆ ಹೋಲಿಸಿದರೆ, ಈ ವಾರದಲ್ಲಿ ಅವರ ಬಾಯಿಂದ ಬರುವ ಮಾತುಗಳಲ್ಲಿ ಪೂರ್ತಿ ಕಂಟ್ರೋಲ್‌ ಕಾಣುತ್ತಿದೆ' ಎಂದಿದ್ದಾರೆ. ಇಲ್ಲಿ ಒಬ್ಬ ಮತ್ತು 12 ಆಗಿದ್ದಾರೆ. 3 ಜನ ಜಗದೀಶ್‌ ಅವರೆ ಕಡೆಯೇ ಇದ್ದಾರೆ ಎಂದಿದ್ದಾರೆ.

ಪತಿ ತುಕಾಲಿಗೆ ಗೌರವ ಕೊಡದ ಹೆಣ್ಣು ಬೇರೆ ಗಂಡಸರಿಗೆ ಗೌರವ ಕೊಡ್ತಾರಾ?; ಮಾನಸ ಬಗ್ಗೆ ವೀಕ್ಷಕರಿಗೆ ಅಸಮಾಧಾನ

 

'ಶಿಶಿರ ಕ್ಯಾಪ್ಟನ್ ಆಗಿ ಏನ್ ಮಾಡ್ತಾ ಇದಾರೆ . ಬರೀ ನಾಮಿನೇಷನ್ ಮಾಡ್ಕೊಂಡ್ ಇರೋದು ಅಷ್ಟೇ.. ಟ್ರಿಗರ್ ಮಾಡ್ತಾ ಇರೋದು ಅಷ್ಟು ಚೆನ್ನಾಗೇ ಕಾಣಿಸ್ತಾ ಇದೆ.. ಅವ್ರಿಗೆ ಏನು ಹೇಳ್ತಾನೆ ಇಲ್ಲ.. ಈತನೇ ಜೊತೆಗೆ ಕೂತ್ಕೊಂಡು ನಗ್ತಾ ಇರ್ತಾನೆ...'ಎಂದು ಬರೆದುಕೊಂಡಿದ್ದಾರೆ. 'The KGF scene was recreated, "ಗುಂಪು ಕಟ್ಕೊಂಡ್ ಬರೋನು gangster, ಅವನು ಒಬ್ಬನೇ ಬರ್ತಾನೆ monster." ಎಂದು ಬರೆದಿದ್ದಾರೆ.

click me!