ಕುಸುಮಾ, ಮಕ್ಕಳು ಮಾಡಿದ್ದ ಪ್ಲ್ಯಾನ್​ಗಳೆಲ್ಲಾ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂಗಾಗೋಯ್ತಾ?

Published : Mar 21, 2024, 05:02 PM IST
ಕುಸುಮಾ, ಮಕ್ಕಳು ಮಾಡಿದ್ದ ಪ್ಲ್ಯಾನ್​ಗಳೆಲ್ಲಾ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂಗಾಗೋಯ್ತಾ?

ಸಾರಾಂಶ

ಕುಸುಮಾ ಮತ್ತು ತಾಂಡವ್​ ಮಕ್ಕಳು ಸೇರಿ ಭಾಗ್ಯ ಮತ್ತು ತಾಂಡವ್​ನನ್ನು ಒಟ್ಟಿಗೆ ಮಾಡಲು ಏನೆಲ್ಲಾ ಪ್ಲ್ಯಾನ್​ ಮಾಡಿದ್ರು. ಆದರೆ ಈಗ ಎಲ್ಲವೂ ಟುಸ್ ಆಗೋ ಹಾಗೆ ಕಾಣಿಸ್ತಿದೆ. ಏನಪ್ಪಾ ಆಗೋಯ್ತು?  

ತಾಂಡವ್​ ಮತ್ತು ಭಾಗ್ಯಳನ್ನು ಒಂದು ಮಾಡಬೇಕೆಂದುಕೊಂಡು ಕುಸುಮಾ ಮತ್ತು ಮಕ್ಕಳು ಎಷ್ಟೆಲ್ಲಾ ಸರ್ಕಸ್​ ಮಾಡುತ್ತಿದ್ದಾರೆ. ಶ್ರೇಷ್ಠಾಳ ಜೊತೆಯಲ್ಲಿ ಅಪ್ಪನನ್ನು ನೋಡಿದ್ದ ಮಗ ಗುಂಡಾ, ಏನೋ ಎಡವಟ್ಟಾಗುತ್ತಿದೆ ಎಂದುಕೊಂಡು ತಲೆ ತಿರುಗಿ ಬಿದ್ದವನ ರೀತಿ ಆ್ಯಕ್ಟ್​ ಮಾಡಿದ್ದ. ಇದನ್ನು ತಾಂಡವ್​ ನಿಜವೆಂದು ನಂಬಿದ್ದ. ಇದೇ ಕಾರಣಕ್ಕೆ ಭಾಗ್ಯಳ ಜೊತೆ ಚೆನ್ನಾಗಿ ಇರುವಂತೆ ಅವನೂ ಆ್ಯಕ್ಟ್​ ಮಾಡುತ್ತಿದ್ದಾನೆ. ಏನೇ ಆದರೂ ತಾಂಡವ್​ ಮತ್ತು ಭಾಗ್ಯ ಒಂದಾಗಲಿ ಎನ್ನುವ ಕಾರಣಕ್ಕೆ ಕುಸುಮಾ ಕೂಡ ಇಬ್ಬರ ವಿವಾಹ ವಾರ್ಷಿಕೋತ್ಸವ ಅದ್ಧೂರಿಯಾಗಿ ಮಾಡಿದ್ದಾಳೆ. ಮಕ್ಕಳ ಖುಷಿಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ತಾಂಡವ್​ ಎಲ್ಲವನ್ನೂ ಒಪ್ಪಿಕೊಂಡಿದ್ದಾನೆ. ವಿವಾಹ ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆದಿದೆ.  ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಾನೆ ತಾಂಡವ್​. ಆದರೆ ಇದುವರೆಗೂ ಅವನಿಗೆ ಒಂದು ಚೂರು ಮಕ್ಕಳು ಮತ್ತು ಅಮ್ಮ ಸೇರಿ ಮಾಡುತ್ತಿರುವ ಪ್ಲ್ಯಾನ್​ ಎನ್ನುವುದು ಗೊತ್ತೇ ಆಗಲಿಲ್ಲ.

ಆದರೆ ಇದೀಗ ಇವರ ಪ್ಲ್ಯಾನ್​ ಎಲ್ಲಾ ನೀರಿನಲ್ಲಿ ಹುಣಸೇಹಣ್ಣು ತೋಯ್ದಹಾಗಾಗಿದೆ. ಏಕೆಂದರೆ ಇವೆಲ್ಲಾ ನಾಟಕ ಎನ್ನುವುದು ಶ್ರೇಷ್ಠಾಳಿಗೆ ಗೊತ್ತಾಗಿದೆ. ತಾಂಡವ್​ ಕೈತೊಳೆಯಲು ಬಂದಾಗ ಎಲ್ಲಾ ವಿಷಯವನ್ನೂ ಅವಳು ಹೇಳಿದ್ದಾಳೆ. ಅಮ್ಮ ಮತ್ತು ಮಕ್ಕಳು ಸೇರಿ ನಾಟಕ ಮಾಡುತ್ತಿರುವ ವಿಷಯ ಹೇಳಿದ್ದಾಳೆ. ಇದನ್ನು ಕೇಳಿ ತಾಂಡವ್​ಗೆ  ಶಾಕ್​  ಆಗಿದೆ. ಮಗ ತಲೆತಿರುಗಿ ಬಿದ್ದದ್ದು ಕೂಡ ನಾಟಕ ಎಂದು ಹೇಳಿದ್ದಾಳೆ. ಇದನ್ನು ಕೇಳಿ ತಾಂಡವ್​ಗೆ  ತಾನು ಮೋಸ ಹೋಗಿರುವುದು ತಿಳಿದಿದೆ ಮುಂದೇನು ಮಾಡುತ್ತಾನೆ ಎನ್ನುವುದನ್ನು ಕಾದು ನೋಡಬೇಕಿದೆ.

ಸದ್ಗುರು ನೋಡಿ ದೇವರೇ ಕುಸಿದು ಬಿದ್ದಂತೆ ಭಾಸವಾಯ್ತು: ಕಂಗನಾ ಭಾವುಕ- ಆರೋಗ್ಯದ ಮಾಹಿತಿ ನೀಡಿದ ಪುತ್ರಿ

ಅಷ್ಟಕ್ಕೂ ಈ ಹಿಂದಿನ ಸಂಚಿಕೆಯಲ್ಲಿ  ಭಾಗ್ಯ ಮತ್ತು ತಾಂಡವ್​ ಜೋಡಿ ನೋಡಿ ಯಾರ  ದೃಷ್ಟಿ ಬೀಳದಿರಲಪ್ಪ ಎಂದು ಫ್ಯಾನ್ಸ್ ಹೇಳುತ್ತಿದ್ದರು. ಆದರೆ ಶ್ರೇಷ್ಠಾಳ ಕಣ್ಣು ಬಿದ್ದೇ ಬಿಟ್ಟಿದೆ.  ಇದಾಗಲೇ ಎಲ್ಲರೂ ಖುಷಿಯಿಂದ ಇರುವಾಗಲೇ  ಶ್ರೇಷ್ಠಾಳ ಎಂಟ್ರಿಯಾಗಿತ್ತು.  ತೋರಣ ನೋಡಿ ಉರಿದುಕೊಂಡಿದ್ದ ಶ್ರೇಷ್ಠಾ, ಹೂವಿನ ತೋರಣವನ್ನು ಕಿತ್ತು ಹಾಕಿದ್ದಳು. ಇದನ್ನು ಆರಂಭದಲ್ಲಿ ನೋಡಿದ ಭಾಗ್ಯಳ ಅಮ್ಮ ಸುನಂದಾಗೆ ಶಾಕ್​ ಆಗಿತ್ತು. ಶ್ರೇಷ್ಠಾ ಮತ್ತು ತಾಂಡವ್​ ಮದುವೆಯಾಗಲಿದ್ದಾರೆ ಎನ್ನುವ ಸತ್ಯ ತಿಳಿಯದಿದ್ದರೂ ಇಬ್ಬರ ನಡುವೆ ಏನೋ ಆಗುತ್ತಿದೆ, ಶ್ರೇಷ್ಠಾಳಿಂದ ತನ್ನ ಮಗಳ ಬದುಕು ಹಾಳಾಗುತ್ತಿದೆ ಎನ್ನುವ ಸತ್ಯ ಅವಳಿಗೆ ಗೊತ್ತು. ಇದೇ ಕಾರಣಕ್ಕೆ,  ಕೋಪದಿಂದ ಅವಳು ಶ್ರೇಷ್ಠಾಳಿಗೆ ಬೈದಿದ್ದಳು. 

ಅಷ್ಟರಲ್ಲಿಯೇ ಕುಸುಮಾ ಎಂಟ್ರಿ ಕೊಟ್ಟಿದ್ದಳು.  ಅವಳಿಗೆ ಶ್ರೇಷ್ಠಾಳ ಕಂತ್ರಿ ಬುದ್ಧಿ ಗೊತ್ತು. ಅದೇ ಕಾರಣಕ್ಕೆ, ಒಂದು ಕೈಯಲ್ಲಿ ಹೂವಿನ ಬುಟ್ಟಿ ಇನ್ನೊಂದರಲ್ಲಿ ಮಾವಿನ ಎಲೆ ತಂದಿದ್ದಳು. ಅದನ್ನು ಶ್ರೇಷ್ಠಾಳಿಗೆ ತೋರಿಸುತ್ತಾ,  ಏನ್ ನೋಡ್ತಾ ಇದ್ದೀಯಾ? ನೀನು ಒಳಗಡೆ ಬರುವ ಹಾಗೆ ಇಲ್ಲ. ನನ್ನ ಕೈಯಲ್ಲಿ ಇದೆಯಲ್ಲ ಈ ಹೂವುಗಳಿಂದ ಹಾರ ಮಾಡಬೇಕು, ಇನ್ನೊಂದು ಕೈಯಲ್ಲಿ ಇರುವ  ಮಾವಿನ ಎಲೆಗಳಿಂದ ತೋರಣ ಮಾಡಬೇಕು.  ಇಷ್ಟೆಲ್ಲ ಕೆಲಸವನ್ನು ಚಪ್ಪಲಿ ತೆಗೆದೇ ಮಾಡಬೇಕು. ಇಷ್ಟು ಮಾಡಿ ಆದ ಮೇಲೆ ಒಳಗೆ ಬರಬೇಕು. ಇಲ್ಲದಿದ್ದರೆ ಇಲ್ಲ ಎಂದಿದ್ದಳು. ಇದನ್ನು ಸಹಿಸದೇ ಶ್ರೇಷ್ಠಾ ವಾಪಸ್​ ಹೋಗಿದ್ದಾಳೆ. ಇವೆಲ್ಲಾ ತಾಂಡವ್​ಗೆ ಗೊತ್ತಿಲ್ಲ. ಇಷ್ಟವಿಲ್ಲದ ಮದ್ವೆಯಲ್ಲಿ ತೊಡಗಿದ್ದ. ಆದರೆ, ಈಗ ಎಲ್ಲವೂ ಹುಣಸೇಹಣ್ಣಿನ್ನು ನೀರಿನಲ್ಲಿ ತೊಳೆದ ಹಾಗಾಗಿದೆ. 

28ನೇ ಮಹಡಿಯಲ್ಲಿದ್ದೆವು, ನೆಲ ಚಲಿಸಿತು, ಎದೆ ಝಲ್​ ಅಂತು... ಭೂಕಂಪದ ಭೀಕರತೆ ಬಿಚ್ಚಿಟ್ಟ ರಾಜಮೌಳಿ


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!