ಕುಶಾಲ್ ಟಂಡನ್ ಹಾಗೂ ಶಿವಾಂಗಿ ಜೋಶಿ ರಿಲೇಶನ್‌ಶಿಪ್ ಕುರಿತು ಹಲವು ಗಾಸಿಪ್ ಹರಿದಾಡಿದೆ. ಪ್ರತಿ ಬಾರಿ ಎಲ್ಲಾ ಊಹಾಪೋಹಗಳನ್ನು ಈ ಸೆಲೆಬ್ರೆಟಿಗಳು ಅಲ್ಲಗೆಳೆದಿದ್ದಾರೆ. ಆದರೆ ಈ ಬಾರಿ ಜೊತೆಯಾಗಿ ಥಾಯ್ಲೆಂಡ್ ಪ್ರವಾಸದಲ್ಲಿರುವ ಈ ಜೋಡಿ ಸಿಹಿ ಮುತ್ತು ನೀಡಿದ ವಿಡಿಯೋ ಒಂದು ವೈರಲ್ ಆಗಿದೆ.
ಥಾಯ್ಲೆಂಡ್(ಜೂ.06) ನಟ ಕುಶಾಲ್ ಟಂಡನ್ ಹಾಗೂ ನಟಿ ಶಿವಾಂಗಿ ಜೋಶಿ ನಡುವೆ ಕುಚ್ ಕುಚ್ ಇದೆ ಅನ್ನೋ ಮಾತು ಹಲವು ದಿನಗಳಿಂದ ಕೇಳಿಬರುತ್ತಿದೆ. ಆದರೆ ಈ ಗಾಸಿಪ್‌ಗಳನ್ನು ಇಬ್ಬರೂ ಅಲ್ಲಗೆಳೆದಿದ್ದಾರೆ. ಆದರೆ ಕುತೂಹಲ ಮಾತ್ರ ಹಾಗೇ ಉಳಿದಿತ್ತು. ಇದೀಗ ಈ ಜೋಡಿ ಜೊತೆಯಾಗಿ ಥಾಯ್ಲೆಂಡ್ ಪ್ರವಾಸದಲ್ಲಿದ್ದಾರೆ. ಇಷ್ಟೇ ಅಲ್ಲ ಥಾಯ್ಲೆಂಡ್‌ನಲ್ಲಿ ಹಾಯಾಗಿ ಸುತ್ತಾಡುತ್ತಿರುವ ಈ ಜೋಡಿ, ಬಹಿರಂಗವಾಗಿ ಕಿಸ್ ಮಾಡಿ ಮತ್ತೆ ರಿಲೇಶನ್‌ಶಿಪ್ ಗಾಸಿಪ್‌ಗೆ ಆಹಾರವಾಗಿದ್ದಾರೆ.
ಬಿಗ್‌ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಕುಶಾಲ್ ಟಂಡನ್ ಹಾಗೂ ಹಿಂದಿ ಸೀರಿಯಲ್‌ನಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಶಿವಾಂಗಿ ಶರ್ಮಾ ಸದ್ಯ ಥಾಯ್ಲೆಂಡ್‌ನಲ್ಲಿದ್ದಾರೆ. ಇವರಿಬ್ಬರು ಥಾಯ್ಲೆಂಡ್ ಪ್ರವಾಸದಲ್ಲಿರುವ ಕೆಲ ವಿಡಿಯೋಗಳು ಈಗಾಗಲೇ ಸಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಕಿಸ್ಸಿಂಗ್ ವಿಡಿಯೋ ಒಂದು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಕಿರುತೆರೆ ನಟಿ Shivangi Joshi ನೆಟ್‌ವರ್ತ್ ಎಷ್ಟು ಗೊತ್ತಾ?
ಬರ್ಸತೈನ್ ಮಸುಮಾ ಪ್ಯಾರ್ ಮೂಲಕ ಜೊತೆಯಾಗಿ ಸ್ಕ್ರೀನ್ ಮೇಲೆ ಮೋಡಿ ಮಾಡಿದ ಈ ಜೋಡಿ ಇದೀಗ ಥಾಯ್ಲೆಂಡ್‌ನಲ್ಲಿ ನಡೆದ ಬಾಕ್ಸಿಂಗ್ ಪಂದ್ಯ ವೀಕ್ಷಿಸಿದ್ದಾರೆ. ಇಬ್ಬರು ಜೊತೆಯಾಗಿ ಪಂದ್ಯ ವೀಕ್ಷಿಸಿದ್ದಾರೆ. ಈ ವೇಳೆ ಕುಶಾಲ್ ಟಂಡನ್, ಶಿವಾಂಗಿಗೆ ಕಿಸ್ ಮಾಡುತ್ತಿರುವ ದೃಶ್ಯವೊಂದು ಭಾರಿ ವೈರಲ್ ಆಗಿದೆ. ಈ ವಿಡಿಯೋದ ಸತ್ಯಾಸತ್ಯತೆ ಕುರಿತು ಸ್ಪಷ್ಟತೆ ಸಿಕ್ಕಿಲ್ಲ.
ಆದರೆ ಕುಶಾಲ್ ಟಂಡನ್ ಹಾಗೂ ಶಿವಾಂಗ್ ಡೇಟಿಂಗ್ ಖಚಿತ ಎಂದು ಭಾರಿ ಕಮೆಂಟ್‌ಗಳು ವ್ಯಕ್ತವಾಗುತ್ತಿದೆ. ಬಾಕ್ಸಿಂಗ್ ಪಂದ್ಯಕ್ಕೆ ಹಾಜರಾಗಿರುವ ಕುರಿತು ಕೆಲ ಫೋಟೋಗಳು ವೈರಲ್ ಆಗಿತ್ತು. ಶಿವಾಂಗಿ ಬಿಳಿ ಟಾಪ್ ಧರಿಸಿದ್ದರೆ, ಕುಶಾಲ್ ಟಂಡನ್ ಹಸಿರು ಬಣ್ಣದ ಟಿ ಶರ್ಟ ಧರಿಸಿದ ಫೋಟೋಗಳು ವೈರಲ್ ಆಗಿತ್ತು. ಇದೀಗ ಕಿಸ್ಸಿಂಗ್ ವಿಡಿಯೋ ಒಂದು ವೈರಲ್ ಆಗಿದೆ.
ಬರ್ಸತೈನ್ ಶೂಟಿಂಗ್ ವೇಳೆ ಇಬ್ಬರು ಹೆಚ್ಚು ಆತ್ಮೀಯರಾಗಿದ್ದಾರೆ. ಇಲ್ಲಿಂದ ಇವರಿಬ್ಬರು ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಕುರಿತು ಇಬ್ಬರೂ ಯಾವುದೇ ಚಕಾರ ಎತ್ತಿಲ್ಲ. ಇಷ್ಟೇ ಅಲ್ಲ ಇವರಿಬ್ಬರ ಭೇಟಿ ಮಾತುಗಳುಗಳು ಗೌಪ್ಯವಾಗಿತ್ತು. ಮೂಲಗಳ ಪ್ರಕಾರ ಇವರಿಬ್ಬರು ಶೀಘ್ರದಲ್ಲೇ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಗಾಸಿಪ್‌ಗೆ ಕುಶಾಲ್ ಟಂಡನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಸುಳ್ಳು ಸುದ್ದಿ ಹರಡಬೇಡಿ ಎಂದು ಮನವಿ ಮಾಡಿದ್ದರು.
ನಗುನಗುತ್ತಲೇ ಶಾಕ್ ಕೊಟ್ಟ ಸೊಸೆ ಭೂಮಿಕಾ! ಇದೆಲ್ಲಾ ಬೇಕಿತ್ತಾ ಅತ್ತೆ ಕೇಳ್ತಿದ್ದಾರೆ ಫ್ಯಾನ್ಸ್