ಆ ಕಣ್ಣೋಟಕ್ಕೆ ಕರಗಿಹೋದ ಫ್ಯಾನ್ಸ್​! ಸದ್ಯ ಫಸ್ಟ್​ನೈಟ್​ನಲ್ಲೂ ಕೋಟು ಧರಿಸಿಲ್ಲ ಅನ್ನೋದೇ ಸಮಾಧಾನ ಅಂತಿದ್ದಾರೆ!

By Suchethana D  |  First Published Jun 6, 2024, 12:41 PM IST

ಭೂಮಿಕಾ  ಮತ್ತು ಗೌತಮ್​ ಫಸ್ಟ್​ನೈಟ್​ ಜೋರಾಗಿ ನಡೆಯುತ್ತಿದೆ. ಹನಿಮೂನ್​ಗೆ ಹೋದಂತೆ  ಗೌತಮ್​ ಸೂಟು ಬೂಟು ಧರಿಸಿಕೊಂಡು ಹೋಗಿಲ್ವಲ್ಲಾ ಎಂದು ಕಾಲೆಳೀತಿದ್ದಾರೆ ಅಭಿಮಾನಿಗಳು. ಮುಂದೆ?
 


ಅಮೃತಧಾರೆ ಸೀರಿಯಲ್​ ಇದೀಗ ಕುತೂಹಲ ಘಟ್ಟ ತಲುಪಿದೆ. ಭೂಮಿಕಾ ಮತ್ತು ಗೌತಮ್​ ಅವರು ಯಾವಾಗ ಒಂದಾಗುತ್ತಾರೋ ಎಂದು ಕಾಯುತ್ತಿದ್ದ  ಅಭಿಮಾನಿಗಳಿಗಂತೂ ಈಗ ಹಿಗ್ಗೋ ಹಿಗ್ಗು. ಅಜ್ಜಿ ಹೇಳಿದ ಒಂದು ಸುಳ್ಳಿನಿಂದ ದಂಪತಿ ಫಸ್ಟ್​ ನೈಟ್​ ತನಕ ಬಂದಿದ್ದಾರೆ. ಆದರೆ ಇವರಿಬ್ಬರಿಗೂ ಅಜ್ಜಿ ಹೇಳಿದ ಸುಳ್ಳು ಗೊತ್ತಾಗಿ ಎಲ್ಲಿ ಮತ್ತೆ ದೂರವಾಗುವರೋ ಎನ್ನುವ ಆತಂಕ ಕಾಡುತ್ತಿತ್ತು. ಆದರೆ ಹಾಗೆ ಆಗಲಿಲ್ಲ. ಅಜ್ಜಿ ಹೇಳಿರುವ ಸುಳ್ಳೇನೋ ಗೊತ್ತಾಗಿದೆ. ಆದರೆ ಅದೇ ಸಮಯಕ್ಕೆ ಭೂಮಿಕಾ ಗೌತಮ್​ ಸಮೀಪ ಬಂದಿದ್ದಾಳೆ. ಹೆಣ್ಣು ಅದರಲ್ಲಿಯೂ ಹೆಂಡತಿ ಇಷ್ಟು ಸಮೀಪ ಬಂದು ಮೆಲ್ಲನೆ ಉಸುರಿದಾಗ ಗಂಡು ಬೆಣ್ಣೆಯಂತೆ ಕರಗದೇ ಇರುತ್ತಾನೆಯೆ? ಇಲ್ಲೂ ಹಾಗೇ ಆಗಿದೆ. ಭೂಮಿಕಾಳನ್ನು ಮನಸ್ಸಿನಲ್ಲಿಯೇ ಪ್ರೀತಿಸುತ್ತಿದ್ದರೂ ಈ ಫಸ್ಟ್​ ನೈಟ್ ಬಗ್ಗೆ ಕಲ್ಪನೆ ಮಾಡದಿದ್ದ ಗೌತಮ್​ಗೆ ಭಯ ಆಗುತ್ತಿದ್ದರೂ ಭೂಮಿಕಾ ಸಮೀಪ ಬರುತ್ತಿದ್ದಂತೆಯೇ ಕರಗಿ ಹೋಗಿದ್ದಾನೆ. ಇಬ್ಬರ ಕಣ್ಣುಗಳು ಕಲೆತಿವೆ.

ಹೇಳಿ ಕೇಳಿ ಗೌತಮ್​ ಪಾತ್ರಧಾರಿ ರಾಜೇಶ್​  ನಟರಂಗ ಅವರು. ಅಭಿನಯದಲ್ಲಿ ಇವರು ಪಂಟರು. ಕಣ್ಣಿನಲ್ಲಿಯೇ ನಟನೆ ಮಾಡಿ ಮೋಡಿ ಮಾಡುವ ಗುಣದವರು. ಇವರ ಎದುರಿಗೆ ಅಭಿನಯಿಸುತ್ತಿರುವ ಭೂಮಿಕಾ ಅರ್ಥಾತ್​ ಛಾಯಾ ಸಿಂಗ್​ ಕೂಡ ಏನೂ ಕಡಿಮೆ ಇಲ್ಲ. ಇದು ಸೀರಿಯಲ್​ ಅನ್ನೋದನ್ನೂ ಮರೆತು, ತಮ್ಮ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ ಇಬ್ಬರೂ. ಇವರ ಕಣ್ಣೋಟದ ಮಾತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿಮ್ಮಿಬ್ಬರ ನಟನೆಗೆ ಹ್ಯಾಟ್ಸ್​ಆಫ್​ ಎನ್ನುತ್ತಿದ್ದಾರೆ. ಅಷ್ಟು ಅದ್ಭುತವಾಗಿ ಅಭಿನಯಿಸಿದ್ದಾರೆ. ಇದರ ನಡುವೆಯೇ ಡುಮ್ಮಾ ಸರ್​ ಕಾಲೆಳೆಯುವುದನ್ನು ಮಾತ್ರ ನೆಟ್ಟಿಗರು ಬಿಟ್ಟಿಲ್ಲ. ಇವರಿಬ್ಬರನ್ನೂ ಅಜ್ಜಿ ಹನಿಮೂನ್​ಗೆ ಕಳಿಸಿದ್ದ ಸಂದರ್ಭದಲ್ಲಿ ಗೌತಮ್​ ಸೂಟು ಬೂಟು ಹಾಕಿಕೊಂಡು ಹೋಗಿದ್ದ. ಇದನ್ನು ನೋಡಿ ನೆಟ್ಟಿಗರು ಸಕತ್​ ಕಾಲೆಳೆದಿದ್ದರು. ಹೋಗ್ತಿರೋದು ಆಫೀಸ್​ ಟೂರ್​ಗಲ್ಲ, ಹನಿಮೂನ್​ಗೆ ಅಂದಿದ್ದರು.

Tap to resize

Latest Videos

ನನ್​ ಸನಿಹ ಬಂದ್ರೆ ನಿಮ್ಗೆ ಏನೂ ಅನಿಸಲ್ವಾ..? ಭೂಮಿಯ ಮೆಲ್ಲುಸುರಿಗೆ ಡುಮ್ಮ ಸರ್​ ಫ್ಲ್ಯಾಟ್​- ಮುಂದೆ?

ಇದೀಗ ಫಸ್ಟ್​ ನೈಟ್​ಗೆ ಅಪ್ಪಟ ಮದುಮಗನ ರೀತಿ ಬಂದಿರುವುದನ್ನು ನೋಡಿ ಅಭಿಮಾನಿಗಳು ಹಿರಿಹಿರಿ ಹಿಗ್ಗಿದ್ದಾರೆ. ಕೊನೆಗೂ ಸೂಟು ಬೂಟು ಹಾಕಿಕೊಂಡು ಬಂದಿಲ್ವಲ್ಲಾ ಎನ್ನುತ್ತಿದ್ದಾರೆ. ಇನ್ನು ಅಜ್ಜಿ ಹೇಳಿದ ಸುಳ್ಳು ವರ್ಕ್​ಔಟ್​ ಆಗುತ್ತಿದೆ.  ಸಾವಿರ ಸುಳ್ಳು ಹೇಳಿ ಮದ್ವೆ ಮಾಡಿಸು ಅಂತಾರೆ. ಆದರೆ ಅಜ್ಜಿ ಹೇಳಿದ ಒಂದೇ ಒಂದು ಸುಳ್ಳಿನಿಂದ ಭೂಮಿಕಾ ಮತ್ತು ಗೌತಮ್​ ಮಾನಸಿಕವಾಗಿ ಮಾತ್ರವಲ್ಲದೇ ದಂಪತಿಯ ಹಾಗೆ ಬಾಳುವ ಕಾಲ ಬಂದೇ ಬಿಟ್ಟಿದೆ. ಭೂಮಿಕಾ  ಮತ್ತು ಗೌತಮ್​ ಈ ಜನ್ಮದಲ್ಲಿ ಒಂದಾಗಲ್ಲ ಎನ್ನುವುದು ಕಿಲಾಡಿ ಅಜ್ಜಿಗೆ ಗೊತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರೂ ದಂಪತಿಯಂತೆ ಬಾಳಲ್ಲ, ಇಬ್ಬರೂ ನಾಚಿಕೆಯಲ್ಲಿ ಒಬ್ಬರನ್ನು ಒಬ್ಬರು ಮೀರಿಸುತ್ತಿದ್ದಾರೆ ಎಂದು ತಿಳಿದಿದೆ. ಇದೇ ಕಾರಣಕ್ಕೆ ಅಜ್ಜಿ ಇಬ್ಬರನ್ನೂ ಹನಿಮೂನ್​ಗೆ ಕಳಿಸಿದ್ದಳು. ಆದರೆ ಅಲ್ಲಿ ಆಗಿದ್ದೇ ಬೇರೆ. ಭೂಮಿಕಾಳ ಕೊಲೆ ಮಾಡಲು ಶಕುಂತಲಾ ದೇವಿ ಸಂಚು ಹೂಡಿದ್ದಳು. ನಂತರ ಭೂಮಿಕಾ ಅಪಹರಣವಾಗಿತ್ತು. ಅವಳನ್ನು ಹುಡುಕಿ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿಯನ್ನು ಹರಸಾಹಸ ಪಟ್ಟು ಗೌತಮ್​ ಉಳಿಸಿಕೊಂಡದ್ದು ಆಯಿತು. ಇನ್ನೆಲ್ಲಿಯ ಹನಿಮೂನ್​? ಇದ್ಯಾವುದೂ ಅಜ್ಜಿಗೆ ಗೊತ್ತಿಲ್ಲದಿದ್ದರೂ ಇವರಿಬ್ಬರೂ ದೈಹಿಕವಾಗಿ ಒಂದಾಗಲಿಲ್ಲ ಎನ್ನುವ ಸತ್ಯದ ಅರಿವಾಗಿ ಹೇಗಾದರೂ ಮಾಡಿ ಇಬ್ಬರನ್ನೂ ಒಂದು ಮಾಡಲು ಪ್ಲ್ಯಾನ್​ ಮಾಡಿದಳು.


ಫಸ್ಟ್​ ನೈಟ್​ ಏರ್ಪಾಟೇನೋ ಆಗಿತ್ತು. ಅದನ್ನು ಗೌತಮ್​ ಗೆಳೆಯ ಆನಂದ್​ ಸಕತ್ತಾಗೇ ಮಾಡಿದ್ದಾನೆ. ಆದರೆ ಫಸ್ಟ್​ನೈಟ್​ ಎಂದಾಕ್ಷಣ ಹರಳೆಣ್ಣೆ ಕುಡಿದವರ ಥರ ಆಡ್ತಿದ್ದ ಗೌತಮ್​ ಮತ್ತು ಭೂಮಿಕಾ ಒಂದಾಗುವರೋ ಇಲ್ಲವೋ ಎಂಬ ಚಿಂತೆ ಅಭಿಮಾನಿಗಳಿಗೆ ಇತ್ತು. ಆದರೆ ಅವರ ಆಸೆ ಕೊನೆಗೂ ಈಡೇರಿದಂತಿದೆ.  ಭೂಮಿಕಾ ಕೈಯಲ್ಲಿ ಹಾಲು ಹಿಡಿದು ಪ್ರವೇಶಿಸುತ್ತಾಳೆ.  ಆದರೆ ಗೌತಮ್​ಗೆ ತುಂಬಾ ಭಯ.    ಇಷ್ಟು ಬೇಗ ಒಂದಾಗಲು ಅವನಿಗೆ ಅದೇನೋ ಅವ್ಯಕ್ತ ಸಂಕಟ. ಭೂಮಿಕಾ ನಿಮಗೆ ಇದೆಲ್ಲ ಇಷ್ಟವಾಗದು. ಇಬ್ಬರ ನಡುವೆ ಬಾಂಡ್‌ ಬೆಳೆಯಬೇಕು. ಮೊಗ್ಗು ಹೂವಾಗಬೇಕು ಎನ್ನುತ್ತಾನೆ. ಒಬ್ಬರನೊಬ್ಬರನ್ನು ಅರ್ಥ ಮಾಡಿಕೊಂಡು ಮೊಗ್ಗು ಹೂವಾಗಲು ಸಾಕಷ್ಟು ಸಮಯ ಬೇಕಾಗಬಹುದು. ನೀವು ಹಾಸಿಗೆ ಮೇಲೆ ಮಲಗಿ. ನಾನು ಕೆಳಗೆ ಚಾಪೆ ಮೇಲೆ ಮಲಗ್ತಿನಿ ಎನ್ನುತ್ತಾನೆ ಗೌತಮ್‌. ಆಗ ಭೂಮಿಕಾ ಗೌತಮ್‌ರ ಕೈ ಹಿಡಿದು, ನಿಮಗೆ ನಾನು ಇಷ್ಟ ಇಲ್ವ, ನನ್ನನ್ನು ಪತ್ನಿಯಾಗಿ ಸ್ವೀಕರಿಸಿಲ್ವ ಎಂದು ಕೇಳುತ್ತಾಳೆ. ನನ್ನನ್ನು ನೋಡಿದ್ರೆ ನಿಮಗೆ ಏನೂ ಅನಿಸಲ್ವಾ? ನಾನು ಹತ್ತಿರ ಬಂದರೆ ನಿಮಗೆ ಏನೂ ಆಗೋದಿಲ್ವಾ ಎಂದೆಲ್ಲಾ ಪ್ರಶ್ನಿಸಿದಾಗ, ಅವಳ ಸ್ಪರ್ಷ ಆಗುತ್ತಿದ್ದಂತೆಯೇ ಗೌತಮ್​ಗೆ ರೋಮಾಂಚನವಾಗುತ್ತದೆ. ಇಬ್ಬರೂ ತಬ್ಬಿಕೊಳ್ಳುತ್ತಾರೆ. ಅಲ್ಲಿಗೆ ಫಸ್ಟ್​ನೈಟ್​ ಆಗುತ್ತದೆ. 

ಅಮೃತಧಾರೆ ಫಸ್ಟ್ ನೈಟ್ ಸೀನ್‌ ಪ್ರೋಮೋಗೆ 35 ಲಕ್ಷಕ್ಕೂ ಅಧಿಕ ವೀಕ್ಷಣೆ!


click me!