ನಗುನಗುತ್ತಲೇ ಶಾಕ್​ ಕೊಟ್ಟ ಸೊಸೆ ಭೂಮಿಕಾ! ಇದೆಲ್ಲಾ ಬೇಕಿತ್ತಾ ಅತ್ತೆ ಕೇಳ್ತಿದ್ದಾರೆ ಫ್ಯಾನ್ಸ್​

By Suchethana D  |  First Published Jun 6, 2024, 3:51 PM IST

ತಾನೇ ತೋಡಿದ ಹಳ್ಳಕ್ಕೆ ಬಿದ್ದ ಶಕುಂತಲಾ ಆಸ್ಪತ್ರೆ ಸೇರುವಂತಾಯಿತು. ಇತ್ತ ಭೂಮಿಕಾ-ಗೌತಮ್​ ಫಸ್ಟ್​ ನೈಟೂ ನೆರವೇರಿತು. ಮುಂದೇನಾಯ್ತು ನೋಡಿ... 
 


ಯಾರಿಗೆ ಯಾವ ಭಾಷೆಯಲ್ಲಿ ಹೇಳಬೇಕೋ ಅದನ್ನು ಅವರಿಗೆ ಅವರದ್ದೇ ಭಾಷೆಯಲ್ಲಿ ಹೇಳಬೇಕು ಎನ್ನುವ ಮಾತಿದೆ. ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆ ಪೆಟ್ಟು ಎನ್ನುವ ಮಾತೂ ಇದೆ. ಆದರೆ ಒಮ್ಮೊಮ್ಮೆ ಜಾಣರ ರೀತಿ ವರ್ತಿಸಿ ಕುತಂತ್ರ ಮಾಡುವವರಿಗೆ ಮಾತಿನ ಪೆಟ್ಟಿನ ಮೂಲಕವೇ ಹೇಗೆ ಮಟ್ಟ ಹಾಕಬೇಕು ಎನ್ನುವುದನ್ನು ತೋರಿಸಿಕೊಡ್ತಿದೆ ಅಮೃತಧಾರೆಯ ಅತ್ತೆ-ಸೊಸೆ ಶಕುಂತಲಾ ದೇವಿ ಹಾಗೂ ಭೂಮಿಕಾ. ಟವಲಿನಲ್ಲಿ ಸುತ್ತಿ ಸುತ್ತಿ ಹೊಡೆಯೋದು ಅಂತಾರಲ್ಲ, ಹಾಗೆ ಹೊಡೆಯಲೂ ಬೇಕು ಆದರೆ ಶಾರೀರಿಕವಾಗಿ ನೋವಾಗಬಾರದು. ಇಲ್ಲೂ ಹಾಗೆ. ಕಂತ್ರಿಬುದ್ಧಿ ತೋರಿಸೋ ಶಕುಂತಲಾಗೆ ಅದೆಷ್ಟು ಬಾರಿ ಭೂಮಿಕಾ ಪೆಟ್ಟು ಕೊಟ್ಟಿದ್ದಾಳೋ ಗೊತ್ತಿಲ್ಲ. ಹಾಗೆಂದು ಅತ್ತೆಯ ಜೊತೆ ಅವಳು ಜಗಳವಾಡಲಿಲ್ಲ, ಕಚ್ಚಾಡಲಿಲ್ಲ. ಆದರೂ ಏನು ಮಾಡಬೇಕೋ ಅದನ್ನು ಮಾಡುತ್ತಲೇ ಇದ್ದಾಳೆ. ಇದೇ ಕಾರಣಕ್ಕೆ ಬೇರೆ ಸೀರಿಯಲ್​ಗಳಿಗಿಂತಲೂ ಸ್ವಲ್ಪ ಡಿಫರೆಂಟ್​ ಆಗಿ ಜನರಿಗೆ ಇಷ್ಟವಾಗುತ್ತಿದೆ. 

ಅತ್ತೆಯೋ ಇಲ್ಲವೇ ಸೊಸೆಯೋ ಕುತಂತ್ರಿಯಾದ ಸಂದರ್ಭದಲ್ಲಿ, ಸದಾ ಕೆಟ್ಟದ್ದನ್ನೇ ಮಾಡುತ್ತಿರುವ ಸಮಯದಲ್ಲಿ ಜಗಳವಾಡದೇ, ಗಂಡನ ಮನಸ್ಸನ್ನೂ ನೋಯಿಸದೇ, ಕುಟುಂಬದ ಯಾರ ಜೊತೆಯೂ  ಕಿರಿಕ್ಕೂ ಮಾಡಿಕೊಳ್ಳದೇ ಕುತಂತ್ರಿಗಳನ್ನು ಮಟ್ಟ ಹಾಕುವುದು ಎಂದರೆ ಸುಲಭದ ಮಾತೇ ಅಲ್ಲ. ಇದು ಸಂಸಾರ ಮಾತ್ರವಲ್ಲದೇ ನಿಜ ಜೀನದಲ್ಲಿ ಬಹುಶಃ ವೈರಿಗಳನ್ನು ಜಗಳವಾಡದೇ ಮಟ್ಟ ಹಾಕುವುದು ಕಷ್ಟ ಸಾಧ್ಯವೇ. ಆದರೆ ಅಮೃತಧಾರೆ ಸೀರಿಯಲ್​ನಲ್ಲೊಂದು ಕುತೂಹಲ ನಡೆದಿದೆ. ನಿಜ ಜೀವನದಲ್ಲಿಯೂ ಹೀಗೆ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿರೋ ಸೀರಿಯಲ್​ಗೆ ಅಭಿಮಾನಿಗಳು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ತನ್ನ ಅಮ್ಮನ ಮೇಲೆ ಪ್ರಾಣ ಇಟ್ಟುಕೊಂಡಿರೋ ಗಂಡನಿಗೂ ನೋವಾಗದಂತೆ, ಅಮ್ಮನ ಕಂತ್ರಿ ಬುದ್ಧಿಯನ್ನೂ ಶಾಂತ ರೀತಿಯಿಂದಲೇ ಹಿಮ್ಮೆಟ್ಟಿಸಿರುವ ಭೂಮಿಕಾ ಫ್ಯಾನ್ಸ್​ ದೃಷ್ಟಿಯಲ್ಲಿ ನಿಜವಾದ ನಾಯಕಿ ಆಗಿದ್ದಾಳೆ. 

Tap to resize

Latest Videos

ಸುಲಭದ ಪ್ರಶ್ನೆಗೂ ಉತ್ತರಿಸಲಾಗದೇ ಪೇಚಿಗೆ ಸಿಲುಕಿದ ರಾಮ್​ - 'ಅಯ್ಯೋ ರಾಮ' ಅಂದ ನೆಟ್ಟಿಗರು

ಹೌದು. ಗೌತಮ್​ ಮತ್ತು ಭೂಮಿಕಾ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ  ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಳು. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್​ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದ. ಇದನ್ನು ಕೇಳಿ ಗೌತಮ್​ಗೆ ಶಾಕ್​ ಆಗಿತ್ತು. ನಂತರ ಈ ವಿಷಯ ಭೂಮಿಕಾಗೆ ತಿಳಿದಿತ್ತು. ಅಷ್ಟರಲ್ಲಿಯೇ ಪತ್ನಿ ಭೂಮಿಕಾಳಿಗಾಗಿ  ಗೌತಮ್​, ಉರುಳು ಸೇವೆ ಮಾಡಿದ್ದ. ನೆಲದ ಮೇಲೆ ಊಟ ಮಾಡಿದ್ದ. ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಳು. ಅಸಲಿ ವಿಷಯ ತಿಳಿದ ಮೇಲೆ ಅತ್ತೆಯ ವಿರುದ್ಧ ಇನ್ನೂ ರೇಗಿದ್ದಳು. ಕೊನೆಗೆ ಹನಿಮೂನ್​ನಲ್ಲಿಯೂ ಕೊಲೆ ಪ್ರಯತ್ನ ಮಾಡಿಸಿದ್ದಳು. ಇದೀಗ ಇವರಿಬ್ಬರೂ ಒಂದಾಗುತ್ತಾರೆ ಎನ್ನುವ ಕಾರಣಕ್ಕೆ ಹುಷಾರಿಲ್ಲದ ನೆಪ ಒಡ್ಡಿ ಗೌತಮ್​ನನ್ನು ತನ್ನ ಬಳಿ ಕರೆಸಿಕೊಂಡಿದ್ದಳು. ಆದರೆ ಎಲ್ಲಾ ತಂತ್ರಗಳಿಗೂ ಪ್ರತಿತಂತ್ರ ಹೂಡಿದ್ದ ಭೂಮಿಕಾ, ಗೌತಮ್​ಗೂ ತಿಳಿಯದಂತೆ ಠುಸ್​ ಮಾಡಿದ್ದಳು.

ಇದೀಗ ಇಲ್ಲಿ ಭೂಮಿಕಾ ಮತ್ತು ಗೌತಮ್​  ಫಸ್ಟ್​ನೈಟ್​ ನಡೆಯುತ್ತಿದ್ರೆ ಅಲ್ಲಿ ಶಕುಂತಲಾ ಆಸ್ಪತ್ರೆಗೆ ಸೇರುವಂತಾಗಿತ್ತು. ತನಗೆ ಹುಷಾರಿಲ್ಲ ಎಂದು ಗೌತಮ್​ನನ್ನು ಮನೆಗೆ ಕರೆಸಿಕೊಂಡಾಗಲೇ ಭೂಮಿಕಾಗೆ ಅಸಲಿಯತ್ತು ತಿಳಿದಿತ್ತು. ಇದೇ ಕಾರಣಕ್ಕೆ ವೈದ್ಯರನ್ನು ಮನೆಗೆ ಕಳುಹಿಸಿ ಶಕುಂತಲಾ ಅವರನ್ನು ಕೂಡಲೇ ಆಸ್ಪತ್ರೆಗೆ ಅಡ್ಮಿಟ್​ ಮಾಡುವಂತೆ ಹೇಳಿಸಿದ್ದಳು. ಅವಳದ್ದೇ ಬಾಣವನ್ನು ಅವಳಿಗೇ ಬಿಟ್ಟಿದ್ದಳು. ಇಲ್ಲಿ ಫಸ್ಟ್​ನೈಟ್​ ಕೂಡ ಮುಗಿದಿದೆ.  ಆಸ್ಪತ್ರೆಯಿಂದ ಎದ್ದೆನೋ ಬಿದ್ದೆನೋ ಎಂದು ಬಂದ ಶಕುಂತಲಾಗೆ ಭೂಮಿಕಾ ಎಲ್ಲಾ ವಿಷಯವನ್ನೂ ಹೇಳಿದ್ದಾಳೆ. ಜ್ಯೋತಿಷಿಗಳನ್ನು ಕರೆಸಿದ್ದು, ಸುಳ್ಳು ಹೇಳಿ ಹುಷಾರಿಲ್ಲ ಎಂಬ ನಾಟಕವಾಡಿದ್ದು ಎಲ್ಲವೂ ತನಗೆ ಗೊತ್ತು ಎಂದಿರುವ ಅವಳು, ಮುಂದೆ ಹೀಗೆ ಆದರೆ, ಚೆನ್ನಾಗಿರಲ್ಲ ಎಂದೂ ಎಚ್ಚರಿಸಿದ್ದಾಳೆ. ಭೇಷ್​ ಭೇಷ್​ ಅಂತ ಭೂಮಿಕಾಳನ್ನು ಹೊಗಳ್ತಿದ್ದಾರೆ ಅಭಿಮಾನಿಗಳು. 

ಆ ಕಣ್ಣೋಟಕ್ಕೆ ಕರಗಿಹೋದ ಫ್ಯಾನ್ಸ್​! ಸದ್ಯ ಫಸ್ಟ್​ನೈಟ್​ನಲ್ಲೂ ಕೋಟು ಧರಿಸಿಲ್ಲ ಅನ್ನೋದೇ ಸಮಾಧಾನ ಅಂತಿದ್ದಾರೆ!


click me!