'ಅವ್ನು ಇರ್ಲಿ, ನೀನು ಕೂಡ ಹಾಗೇ ಅಲ್ವಾ? ಇಲ್ಲಿ ಇರುವಷ್ಟು ಹೊತ್ತು ಹೀಗೆ ಇರ್ತೀಯಾ. ಆಮೇಲೆ ಅವ್ನ ಥರನೇ ಜಾಲಿಯಾಗಿ ಡ್ರೆಸ್ ಮಾಡ್ಕೊಂಡು ಓಡಾಡ್ತಿರ್ತೀಯ' ಎನ್ನುತ್ತಾನೆ. ಅಣ್ಣನ ಮಾತನ್ನು ಕೇಳಿದ ರಾಮಾಚಾರಿ ಶಾಕ್ ಆಗುತ್ತಾನೆ.
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ರಾಮಾಚಾರಿ' ಸೀರಿಯಲ್‌ನಲ್ಲಿ ಈಗ ಸಾಕಷ್ಟು ಬದಲಾವಣೆ ಆಗಿದೆ. ಈ ಮೊದಲು ರಾಮಾಚಾರಿ-ಚಾರು ಜುಗಲ್ಬಂದಿಯಲ್ಲಿ ಹೋಗುತ್ತಿದ್ದ ಕಥೆ, ಈಗ ರಾಮಾಚಾರಿ-ಕಿಟ್ಟಿ ಅವರಿಬ್ಬರ ಜೋಡಿ ಪಾತ್ರಗಳ ಮೂಲಕ ಸಾಗುತ್ತಿದೆ. ಕಿಟ್ಟಿಗೆ ತನ್ನ ಥರಹವೇ ಇನ್ನೊಬ್ಬ ರಾಮಾಚಾರಿ ಎಂಬ ಪುರೋಹಿತ ಇದ್ದಾನೆ ಎಂಬುದು ಗೊತ್ತಾಗಿದೆ. ಆದರೆ ರಾಮಾಚಾರಿಗೆ ಥೇಟ್ ತನ್ನಂತೆ ಇರುವ ಇನ್ನೊಬ್ಬ ವ್ಯಕ್ತಿ ಕಿಟ್ಟಿ ಅಂತ ಇದ್ದಾನೆ ಎಂಬುದು ಇನ್ನೂ ಗೊತ್ತಾಗಿಲ್ಲ. ಅಚ್ಚರಿ ಎಂಬಂತೆ ರಾಮಾಚಾರಿ ಪೂಜೆ ಮಾಡುತ್ತಿರುವ ದೇವಸ್ಥಾನಕ್ಕೇ ಕಿಟ್ಟಿ ಭೇಟಿ ಕೊಟ್ಟಿದ್ದಾನೆ.
ಭಾಗ್ಯಾ ಹೆದ್ರಿಕೋತಾಳೆ, ಆದ್ರೆ ಓಡೋಗಲ್ಲ ತಾಂಡವ್; ಶ್ರೇಷ್ಠಾ ಮಾತಿನ ಮರ್ಮ ತಿಳಿಯದೇ ತಾಂಡವ್ ಶಾಕ್!
ದೇವಸ್ಥಾನದಲ್ಲಿ ರಾಮಾಚಾರಿ ತೀರ್ಥ ಕೊಡುತ್ತಿರಲು ಅಲ್ಲಿಗೆ ಮಾಸ್ಕ್ ಹಾಗೂ ಕ್ಯಾಪ್ ಟೀ-ಶರ್ಟ್ ಹಾಕಿ ಬಂದಿರುವ ಕಿಟ್ಟಿ, ಹರಿದ ಫ್ಯಾಷನ್ ಪ್ಯಾಂಟ್ ಹಾಕಿಕೊಂಡು ದೇವರ ಸನ್ನಿಧಿಗೆ ಬರಬಾರದ ರೀತಿಯಲ್ಲಿ ಬಂದಿದ್ದಾನೆ. ಅದನ್ನು ನೋಡಿ ಬೇಸರಗೊಂಡ ರಾಮಾಚಾರಿ ಕಿಟ್ಟಿಗೆ 'ಸರ್, ಮಾಸ್ಕ್, ಕ್ಯಾಪ್ ಎಲ್ಲಾ ತೆಗಿರೀ ಸರ್, ಇದು ದೇವಸ್ಥಾನ' ಎನ್ನಲು ಕಿಟ್ಟಿ ತಲೆಗೆ ಏಟಾಗಿದೆ ಎಂದು ಹೇಳಿ ತೀರ್ಥ ಕೊಡಮಾಡಲು ಅದನ್ನೂ ತೆಗೆದುಕೊಳ್ಳದೇ ಹಾಗೇ ಹೊರಟುಬಿಡುತ್ತಾನೆ. ಅದನ್ನು ನೋಡಿ ಕೋಪಗೊಂಡ ರಾಮಾಚಾರಿ 'ಏನು ಜನನಪ್ಪ, ದೇವಸ್ಥಾನಕ್ಕೆ ಬಂದು ತೀರ್ಥ ತೆಗೆದುಕೊಳ್ಳದೇ ಹೋಗುತ್ತಿದ್ದಾರೆ. ಇದೆಂಥ ಅವತಾರದಲ್ಲಿ ದೇವಸ್ಥಾನಕ್ಕೆ ಬರುತ್ತಾರಪ್ಪ' ಎಂದೆಲ್ಲ ಹೇಳುತ್ತಾನೆ.
ಅವನ ಮಾತನ್ನು ಕೇಳಿದ ರಾಮಾಚಾರಿ ಅಣ್ಣ 'ಅವ್ನು ಇರ್ಲಿ, ನೀನು ಕೂಡ ಹಾಗೇ ಅಲ್ವಾ? ಇಲ್ಲಿ ಇರುವಷ್ಟು ಹೊತ್ತು ಹೀಗೆ ಇರ್ತೀಯಾ. ಆಮೇಲೆ ಅವ್ನ ಥರನೇ ಜಾಲಿಯಾಗಿ ಡ್ರೆಸ್ ಮಾಡ್ಕೊಂಡು ಓಡಾಡ್ತಿರ್ತೀಯ' ಎನ್ನುತ್ತಾನೆ. ಅಣ್ಣನ ಮಾತನ್ನು ಕೇಳಿದ ರಾಮಾಚಾರಿ ಶಾಕ್ ಆಗುತ್ತಾನೆ. ಅತ್ತ ಚಾರು ಜತೆ ಮಾತನಾಡುತ್ತಿರುವ ಅತ್ತೆ 'ಜನ ನಿನ್ನ ಬಗ್ಗೆ ಏನೇನೋ ಮಾತಾಡ್ತಾ ಇದಾರೆ. ಆದ್ರೆ ನೀನು ಅಂಥವ್ಳು ಅಲ್ಲ, ನೀನು ಮೊದ್ಲಿನ ಥರ ಇಲ್ಲ, ಬದಲಾಗಿದೀಯ. ನೀನು ಈ ಮನೆಯ ಒಳ್ಳೆಯ ಸೊಸೆ' ಎಂದು ತನ್ನ ಸೊಸೆಯನ್ನು ಬಾಯ್ತುಂಬ ಹೊಗಳುತ್ತಾಳೆ. ಮುಂದಿನ ಕಥೆ ಏನು ಎಂಬುದನ್ನು ಸಂಚಿಕೆ ನೋಡಿ ತಿಳಿಯಬೇಕು.
ನಮ್ರತಾ-ವಿನಯ್ ಕನಸಿಗೆ ಕೊಳ್ಳಿಯಿಟ್ಟ ಸ್ನೇಹಿತ್; ಕ್ಯಾಪ್ಟನ್ ಹೀಗೂ ಮಾಡಬಹುದಾ!?