ಭಾಗ್ಯಾ ಹೆದ್ರಿಕೋತಾಳೆ, ಆದ್ರೆ ಓಡೋಗಲ್ಲ ತಾಂಡವ್; ಶ್ರೇಷ್ಠಾ ಮಾತಿನ ಮರ್ಮ ತಿಳಿಯದೇ ತಾಂಡವ್ ಶಾಕ್!

By Shriram Bhat  |  First Published Dec 8, 2023, 1:21 PM IST

ಅಮ್ಮನನ್ನು ಸ್ಕೂಲಿಂದ (school) ಹೊರಗೆ ಹಾಕ್ಬೇಕು ಅನ್ನೋದು ಮಗಳು ತನ್ವಿಯ ನಿರ್ಧಾರ. ಇನ್ನೊಂದು ಕಡೆ ಸ್ಕೂಲ್ ಮುಖ್ಯಸ್ಥೆಗೂ ಭಾಗ್ಯಳನ್ನು ಕಂಡರೆ ಆಗಲ್ಲ. ಈ ಕಾಂಪಿಟೀಷನ್‌ನಲ್ಲಿ ಬಹುಮಾನ ತಗೊಳ್ಳದಿದ್ದರೆ ಭಾಗ್ಯ ಮುಂದೆ ಸ್ಕೂಲಿಗೇ ಬರುವಂತಿಲ್ಲ ಅಂತ ಅವಳು ಹೇಳಿದ್ದಾಳೆ.


ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಭಾಗ್ಯಲಕ್ಷ್ಮೀ' ಸೀರಿಯಲ್‌ನಲ್ಲಿ ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತ್ತಿವೆ. ಈ ಸೀರಿಯಲ್ ವೀಕ್ಷಕ ಅಭಿಮಾನಿಗಳು ಭಾಗ್ಯಾ ಡಾನ್ಸ್ ಮಾಡುತ್ತಾಳಾ ಎಂದು ಕಾಯುವಂತಾಗಿದೆ. ಹಾಗಿದ್ದರೆ ಏನಾಗುತ್ತಿದೆ ಈ ಧಾರಾವಾಹಿಯಲ್ಲಿ? ಭಾಗ್ಯಾ ಯಾಕೆ ಸ್ಟೇಜ್ ಮೇಲೆ ಡಾನ್ಸ್ ಮಾಡುತ್ತಾಳೆ, ಯಾಕೆ ಕುಸುಮಾ ಆತಂಕದಲ್ಲಿದ್ದಾಳೆ, ಸ್ಟೇಜ್ ಕೆಳಗೆ ಜಡ್ಜ್‌ಗಳಾಗಿ ಭಾಗ್ಯಾ ಗಂಡ ತಾಂಡವ್ ಹಾಗೂ ಹೊಸ ಹೆಂಡತಿ ಶ್ರೇಷ್ಠಾ ಯಾಕೆ ಕುಳಿತಿದ್ದಾರೆ, ಈ ಎಲ್ಲ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. 

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಡ್ಯಾನ್ಸ್ ಬಗ್ಗೆಯೇ ಚರ್ಚೆ ನಡೀತಿದೆ. ಈ ಸೀರಿಯಲ್‌ನಲ್ಲಿ ಭಾಗ್ಯಾಗೆ ಅವಳ ಸ್ವಂತ ಮಗಳೇ ವಿಲನ್ ಆಗಿದ್ದಾಳೆ. ಅಮ್ಮ-ಮಗಳು ಇಬ್ಬರೂ ಒಂದೇ ಸ್ಕೂಲಿನಲ್ಲಿ ಓದುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಭಾಗ್ಯ ಗಂಡ ತಾಂಡವ್‌ಗೆ ಚಾಲೆಂಜ್ ಹಾಕಿ ಅಮ್ಮ, ಭಾಗ್ಯಾ ಅತ್ತೆ ಕುಸುಮಾ ಅವಳನ್ನು ಸ್ಕೂಲಿಗೆ ಸೇರಿಸಿದ್ದಾಳೆ. ಮಗಳ ಕ್ಲಾಸಲ್ಲಿ ಅಮ್ಮನೂ ಓದ್ತಿದ್ದಾಳೆ. ಸದ್ಯ ಡ್ಯಾನ್ಸ್ ಕಾಂಪಿಟೀಷನ್‌ಗೆ ಭಾಗ್ಯಳ ಪರವಾಗಿ ಅವಳ ಮಗಳು ತನ್ವಿ ಹೆಸರು ಕೊಟ್ಟು ಬಂದಿದ್ದಾಳೆ. 

Tap to resize

Latest Videos

ನಮ್ರತಾ-ವಿನಯ್‌ ಕನಸಿಗೆ ಕೊಳ್ಳಿಯಿಟ್ಟ ಸ್ನೇಹಿತ್‌; ಕ್ಯಾಪ್ಟನ್ ಹೀಗೂ ಮಾಡಬಹುದಾ!?

ಈ ನೆಪದಲ್ಲಿ ಅಮ್ಮನನ್ನು ಸ್ಕೂಲಿಂದ (school) ಹೊರಗೆ ಹಾಕ್ಬೇಕು ಅನ್ನೋದು ಮಗಳು ತನ್ವಿಯ ನಿರ್ಧಾರ. ಇನ್ನೊಂದು ಕಡೆ ಸ್ಕೂಲ್ ಮುಖ್ಯಸ್ಥೆಗೂ ಭಾಗ್ಯಳನ್ನು ಕಂಡರೆ ಆಗಲ್ಲ. ಈ ಕಾಂಪಿಟೀಷನ್‌ನಲ್ಲಿ ಬಹುಮಾನ ತಗೊಳ್ಳದಿದ್ದರೆ ಭಾಗ್ಯ ಮುಂದೆ ಸ್ಕೂಲಿಗೇ ಬರುವಂತಿಲ್ಲ ಅಂತ ಅವಳು ಹೇಳಿದ್ದಾಳೆ. ಇನ್ನೊಂದೆಡೆ ಈ ಕಾಂಪಿಟೀಷನ್‌ಗೆ ಗೆಸ್ಟ್ ಆಗಿ ಭಾಗ್ಯ ಗಂಡ ತಾಂಡವ್ ಮತ್ತು ಅವನ ಹೊಸ ಹೆಂಡತಿ ಶ್ರೇಷ್ಠಾ ಬರೋ ಸಾಧ್ಯತೆ ಇದೆ. ಅಲ್ಲಿಗೆ, ಭಾಗ್ಯಾ ಗಂಡ ತಾಂಡವ್ ಮತ್ತು ಸವತಿ ಶ್ರೇಷ್ಠಾ ಎದುರೇ ಭಾಗ್ಯ ಕುಣೀಬೇಕಿದೆ. 

ಏನೋ ಇದು ರಾಮಾಚಾರಿ ಪೊರ್ಕಿ ತರ ಬಂದಿದೀಯಲ್ಲೋ, ದೇವಸ್ಥಾನಕ್ಕೆ ಹೀಗೆಲ್ಲ ಬರ್ತಾರೇನೋ; ಕಿಟ್ಟಿ ಶಾಕ್!

ವಿರೋಧಿಗಳೇ ನಿರ್ಣಾಯಕರಾದರೆ ಭಾಗ್ಯಾಗೆ ಫ್ರೈಜ್ ಬರೋದಾದ್ರೂ ಹೇಗೆ ಎಂಬುದು ಎಲ್ಲರ ಪ್ರಶ್ನೆ. ಮೂವತ್ತಾರರ ಹರೆಯದ ಗೃಹಿಣಿ ತಕ್ಷಣಕ್ಕೆ ಡ್ಯಾನ್ಸ್ ಕಲಿತು, ಪ್ರದರ್ಶಿಸಿ ಬಹುಮಾನ ತೆಗೆದುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ತಿಳಿಯಲು ಸಂಚಿಕೆ ನೋಡಬೇಕು. ಕುಸುಮಾ ತೀವ್ರ ಆತಂಕದಲ್ಲಿ ಇದ್ದರೆ, ಇತ್ತ ತಾಂಡವ್ ಮತ್ತು ಶ್ರೇಷ್ಠಾ ಸಖತ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ! ಅಂದಹಾಗೆ, ಭಾಗ್ಯಲಕ್ಷ್ಮೀ ಸೀರಿಯಲ್ ಕಲರ್ಸ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ಸಂಜೆ 7.00 ಗಂಟೆಗೆ ಪ್ರಸಾರವಾಗಲಿದೆ. 

 

 

click me!