ಹೇಗಿದ್ದೋರು ಹೇಗಾಗೋದ್ರು! ದೇವ್ರೆ ಕರುಣೆ ಇಲ್ವಾ, ಯಾರ್​ ಕಣ್ಣು ಬಿತ್ತಪ್ಪಾ ಅಂತಿದ್ದಾರೆ ಬಿಗ್​ಬಾಸ್​ ಫ್ಯಾನ್ಸ್​!

By Suvarna News  |  First Published Dec 8, 2023, 3:48 PM IST

 ಬಹಳ ಸ್ನೇಹಿತರಾಗಿದ್ದ ವರ್ತೂರು ಸಂತೋಷ್​ ಮತ್ತು ತನಿಷಾ ನಡುವೆ ಜಗಳ ಶುರುವಾಗಿದೆ. ಇವರಿಬ್ಬರ ಕಿತ್ತಾಡುತ್ತಿದ್ದು, ಇವರ ಫ್ಯಾನ್ಸ್​ಗೆ ಬೇಸರವಾಗುತ್ತಿದೆ. 
 


ಬಿಗ್​ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ ಮತ್ತು ತನಿಷಾ ನಡುವಿನ ಸ್ನೇಹ ಸಂಬಂಧ ಗುಟ್ಟಗಿ ಉಳಿದಿಲ್ಲ.  ಬಿಗ್​ಬಾಸ್​​ ಮನೆಯಲ್ಲಿ ಇದೀಗ ಆಟದ ಭರಾಟೆ ಜೋರಾಗಿಯೇ ನಡೆದಿದೆ. ಆಟ ಎಂದ ಮೇಲೆ ತಾವು ಗೆಲ್ಲಬೇಕು ಎನ್ನುವುದು ಎಲ್ಲ ಸ್ಪರ್ಧಿಗಳ ಬಯಕೆ ಸಹಜವೇ. ಆದರೆ ಆಟದ ಹೆಸರಿನಲ್ಲಿ ಇದಾಗಲೇ ಬಿಗ್​ಬಾಸ್​ ಮನೆಯೊಳಕ್ಕೆ ಈ ಹಿಂದೆಯೂ ದೊಡ್ಡ ದೊಡ್ಡ ಜಗಳಗಳೇ ನಡೆದು ಹೋಗುವೆ. ಬಿಗ್​ಬಾಸ್​ ಮನೆ ಎಂದರೆ ಅದರಲ್ಲಿ ಕಾದಾಟ, ಹೊಡೆದಾಟ, ಬಡಿದಾಟದ ತಾಣವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ಇದೇ ಕಾರಣಕ್ಕೆ ಟಿಆರ್​ಪಿ ಕೂಡ ಹೆಚ್ಚಾಗುತ್ತದೆ. ಅದೇ ರೀತಿ ಕನ್ನಡದ ಬಿಗ್​ಬಾಸ್​ನಲ್ಲಿ ಕೂಡ ಹೊಡಿಬಡಿ ಮಿತಿ ಮೀರುತ್ತಲೇ ಸಾಗಿದೆ.  ಬಿಗ್​ಬಾಸ್​ ಸ್ಪರ್ಧಿಗಳಿಗೆ ಆಟದ ಟಾಸ್ಕ್​ ಒಂದರ ಮೇಲೊಂದರಂತೆ ನೀಡಲಾಗುತ್ತಿದ್ದು,  ಇದು ಹೊಡೆದಾಟ, ಬಡಿದಾಟಕ್ಕೂ  ಕಾರಣವಾಗ್ತಿದೆ. ಇದೀಗ ಕಾಲ್ತುಳಿತವೂ ಆಗಿದ್ದು, ಒಬ್ಬರ ಮೇಲೊಬ್ಬರು ಸ್ಪರ್ಧಿಗಳು ಬಿದ್ದು ಒದ್ದಾಡಿದ್ದಾರೆ. 

ಬಿಗ್​ಬಾಸ್​ ಮನೆಯಲ್ಲಿ ಹನಿ ಹನಿ ಕಹಾನಿ ಟಾಸ್ಕ್‌ ಮಾಡುವ ಸಮಯದಲ್ಲಿ  ತನಿಷಾ ಅವರಿಗೆ ಕಾಲಿಗೆ ಏಟು ಬಿದ್ದು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿತ್ತು. ಎರಡು ದಿನಗಳ ಬಳಿಕ  ತನಿಷಾ ವಾಪಸಾಗಿದ್ದರು. ಆದರೆ  ಇದಾಗಲೇ ತನಿಷಾ - ವರ್ತೂರು ಸಂತೋಷ್‌ ಮಧ್ಯೆ ಅನುಬಂಧ ಬೆಳೆಯುತ್ತಿದ್ದು, ತನಿಷಾ ಇಲ್ಲದೆಯೇ ವರ್ತೂರು ಚಡಪಡಿಸಿದ್ದನ್ನು ನೋಡಬಹುದಾಗಿತ್ತು. ತನಿಷಾ ವಾಪಸದಾಗ ಮೇಲೆ ಫುಲ್​ ಸಂತೋಷಗೊಂಡಿರುವ ವರ್ತೂರು ಸಂತೋಷ್​, ನೀನಿಲ್ಲದೆ ಮನೆ ಖಾಲಿ ಖಾಲಿ ಅನಿಸುತ್ತಿತ್ತು. ದೇವರ ಹತ್ತಿರ ದಿನವೂ ಕುಳಿತು ನೀನು ಬೇಗ ಹುಷಾರಾಗಲಿ ಎಂದು ಕೇಳಿಕೊಳ್ಳುತ್ತಿದ್ದೆ ಎಂದಿದ್ದರು. ಬಳಿಕ, ವರ್ತೂರು ಸಂತೋಷ್ ತೊಡೆ ಮೇಲೆ ತನಿಷಾ ಮಲಗಿದ್ದರು. ಅದನ್ನ ಕಂಡು ಮಿಕ್ಕ ಸ್ಪರ್ಧಿಗಳು ಬೆಂಕಿಯ ಬಲೆ ಅಂತ ರೇಗಿಸಿದ್ದರು. 

Tap to resize

Latest Videos

undefined

ಬಿಗ್​ಬಾಸ್​ ಮನೆಯಿಂದ ಸಂಗೀತಾ- ಡ್ರೋನ್​ ಪ್ರತಾಪ್​ ಹೊರಕ್ಕೆ, ಆಸ್ಪತ್ರೆಗೆ ದಾಖಲು? ಏನಿದು ಸುದ್ದಿ?

ಇಷ್ಟೆಲ್ಲಾ ಮಾಡಿದ್ದ ಈ ಜೋಡಿಗೆ ಅದೇನಾಯಿತೋ ಗೊತ್ತಿಲ್ಲ.  ಇವರಿಬ್ಬರ ನಡುವಿನ  ಫ್ರೆಂಡ್​ಷಿಪ್ ಮುರಿದು ಬಿದ್ದಿದೆ. ‘ತನಿಷಾ ತುಂಬಾನೇ ಕೆಟ್ಟ ಆಟ ಆಡುತ್ತಾರೆ’ ಎಂದು ವರ್ತೂರು ಸಂತೋಷ್  ಅವರು ಓಪನ್ ಆಗಿ ಹೇಳಿದ್ದಾರೆ. ಅವರಿಬ್ಬರೂ ಮೊದಲಿನಷ್ಟು ಆಪ್ತವಾಗಿಲ್ಲ.  ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಇದನ್ನು ನೋಡಿ ಇವರಿಬ್ಬರ ಫ್ಯಾನ್ಸ್​ಗೆ ಸಕತ್​ ನೋವಾಗಿದೆ. ಅಯ್ಯೋ ಇವರಿಬ್ಬರಿಗೆ ಅದ್ಯಾರ ಕಣ್ಣು ಬಿತ್ತೋ ಎನ್ನುತ್ತಿದ್ದಾರೆ. ಹೀಗೆಲ್ಲಾ ಜಗಳವಾಡಿಕೊಳ್ಳಬೇಡಿ ಪ್ಲೀಸ್​, ನೋಡಲಾಗ್ತಿಲ್ಲ ಎನ್ನುತ್ತಿದ್ದಾರೆ. 

ಈಚೆಗಷ್ಟೇ ಇವರಿಬ್ಬರ ಕುರಿತು ಮೀಮ್ಸ್​ ಹರಿದಾಡಿತ್ತು. ಅದೇನೆಂದರೆ, ಇಬ್ಬರ ನಡುವೆ ಇಷ್ಟು ಸಲುಗೆ ಬೆಳೆಯುತ್ತಿರುವ ಮಧ್ಯೆಯೇ ವರ್ತೂರು ಸಂತೋಷ್​ ಅವರು ಮದುವೆಯಾಗಿರುವ ವಿಷಯ ಬಹಿರಂಗಗೊಂಡಿತ್ತು. ತಮ್ಮ ಮದುವೆ ಮುರಿದುಬಿದ್ದುದಕ್ಕೆ ಸಂತೋಷ್​ ಒಂದಿಷ್ಟು ಕಾರಣ ಕೊಟ್ಟಿದ್ದರು. ತಾಯಿಯ ಸಲುವಾಗಿ ಪತ್ನಿಯನ್ನು ದೂರ ಮಾಡಿದೆ ಎಂದು ಪ್ರೇಕ್ಷಕರ ಸಹನೆ ಗಳಿಸಿದ್ದರು. ಎಲ್ಲರೂ ಪತ್ನಿಗಾಗಿ ಅಮ್ಮನನ್ನು ದೂರ ಮಾಡಿದರೆ, ಇವರು ಪತ್ನಿಯನ್ನೇ ದೂರ ಮಾಡಿದ್ದಾರೆ, ಇವರು ಆದರ್ಶ ಪುತ್ರ ಎಂದೆಲ್ಲಾ ಫ್ಯಾನ್ಸ್​ ಕೊಂಡಾಡಿದ್ದರು.  ಇದರ ನಡುವೆಯೇ ಈಗ ವರ್ತೂರು ಸಂತೋಷ್​ ಫ್ಯಾನ್ಸ್​ ಮೀಮ್ಸ್ ಮಾಡಿದ್ದು, ಅದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು. ನಮ್ಮ ಹುಬ್ಬಳ್ಳಿ ಮೀಮ್ಸ್​ನಿಂದ ಈ ಮೀಮ್ಸ್​ ಮಾಡಲಾಗಿದೆ. ಇದರಲ್ಲಿ ಅವರು ಕಿಚ್ಚ ಸರ್​ ದಯವಿಟ್ಟು ಪಂಚಾಯ್ತೀಲಿ ವರ್ತೂರು ಅವ್ರು ಮದ್ವೆಯಾಗಿರೋ ಸುದ್ದಿನಾ ತೆಗೀಬೇಡಿ. ಅವರು ಇಬ್ಬರು ಹೇಗಿದ್ದಾರೆ, ಹಾಗೆಯೇ ಇರಲಿ. ಈ ಜೋಡಿನ ಹೀಗೆ ನೋಡಲು ಇಷ್ಟ ಆಗುತ್ತೆ ಎಂದು ಮೀಮ್ಸ್​ ಮಾಡಲಾಗಿದ್ದು, ಅದರಲ್ಲಿ ವರ್ತೂರು ಸಂತೋಷ್​ ಅವರ ಕಾಲ ಮೇಲೆ ತನಿಷಾ ಮಲಗಿರುವ ಫೋಟೋ ಹಾಕಿದ್ದರು. ಇದೀಗ ಜೋಡಿ ಪ್ರತ್ಯೇಕ ಆಗ್ತಿರೋದು ನೋಡೋಕಾಗ್ತಿಲ್ಲ ಅಂತಿದ್ದಾರೆ ಫ್ಯಾನ್ಸ್​.

ಅನುಕಂಪ ಗಿಟ್ಟಿಸಿಕೊಳ್ಳಲು ಸುಳ್ಳು ಹೇಳಿ ತಗ್ಲಾಕೊಂಡ್ರಾ ಪ್ರತಾಪ್​? 2 ದಿನಗಳಲ್ಲಿ ತಪ್ಪು ಒಪ್ಪಿಕೊಳ್ಳದಿದ್ರೆ ಕೇಸ್​ ದಾಖಲು!

click me!