ತೆಲುಗು ಬಿಗ್‌ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್..!

Published : Nov 29, 2020, 12:59 PM ISTUpdated : Nov 29, 2020, 01:09 PM IST
ತೆಲುಗು ಬಿಗ್‌ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್..!

ಸಾರಾಂಶ

ಬಿಗ್‌ಬಾಸ್ ಮನೆಯೊಳಗೆ 7 ಜನ ಸ್ಪರ್ಧಿಗಳಿದ್ದಾರೆ. ಈ ವಾರ ಮನೆಯಿಂದ ಯಾರು ಹೊರಗೆ ಹೋಗ್ತಾರೆ ಎಂದು ನೀವು ಕಾಯ್ತಿದ್ರೆ ನಿಮಗೆ ನಿರಾಸೆಯಾಗೋದು ಖಂಡಿತ. ಆದರೆ ಇನ್ನೊಂದು ಸರ್ಪೈಸ್ ಕಾದು ಕುಳಿತಿದೆ

ತೆಲುಗು ಬಿಗ್‌ಬಾಸ್ 4 ಟಿವಿ ರಿಯಾಲಿಟಿ ಶೋ ಆರಂಭವಾಗುವ ಮುನ್ನವೇ ದೇಶಾದ್ಯಂತ ಗಮನ ಸೆಳೆಯುತ್ತಿದೆ. ಅವಿನಾಶ್, ಮೋನಲ್, ಅಖಿಲ್ ಮತ್ತು ಅರಿಯನ ಈ ವಾರಕ್ಕೆ ನಾಮಿನೇಟ್ ಆಗಿದ್ದಾರೆ. ಈ ಎಲ್ಲರ ನಡುವೆ ಮೋನಲ್ ಗಜ್ಜರ್ 58.7 ಮತಗಳ ಮೂಲಕ ಲೀಡ್‌ನಲ್ಲಿದ್ದಾರೆ.

ಹೌದು. ಬಿಗ್‌ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯೋರ್ಯಾರು, ಹೊರಗೆ ಹೋಗೋರ್ಯಾರು ಎಂಬ ಬಗ್ಗೆ ಸಾಕಷ್ಟು ಕುತೂಲವಿದೆ. ಈಗಾಗಲೇ 85 ದಿನಗಳಾಗಿರೋದ್ರಿಂದ ಬಿಗ್ ಬಾಸ್ ತೆಲುಗು 4ರಲ್ಲಿ ಹೊರಹೋಗುವರ ಬಗ್ಗೆ ಸಾಕಷ್ಟು ಕುತೂಹಲವಿದೆ.

ಬಿಗ್‌ಬಾಸ್ ಮನೆಗೂ ತಟ್ಟಿದ 'ನಿವಾರ್' ಚಂಡಮಾರುತ ಎಫೆಕ್ಟ್; ಸ್ಪರ್ಧಿಗಳು ಬೇರೆಡೆ ಶಿಫ್ಟ್?

ಈಗ ಬಿಗ್‌ಬಾಸ್ ಮನೆಯೊಳಗೆ 7 ಜನ ಸ್ಪರ್ಧಿಗಳಿದ್ದಾರೆ. ಈ ವಾರ ಮನೆಯಿಂದ ಯಾರು ಹೊರಗೆ ಹೋಗ್ತಾರೆ ಎಂದು ನೀವು ಕಾಯ್ತಿದ್ರೆ ನಿಮಗೆ ನಿರಾಸೆಯಾಗೋದು ಖಂಡಿತ. ಈ ವಾರ ಎಲಿಮಿನೀಷನ್ ನಡೆಯೋದಿಲ್ಲ ಎನ್ನಲಾಗಿದೆ.

ಈ ವಾರ ಎಲಿಮಿನೇಷನ್ ಇಲ್ಲ, ಯಾವ ಸ್ಪರ್ಧಿಯೂ ಮನೆಯಿಂದ ಹೊರ ಹೋಗುವುದಿಲ್ಲ ಎನ್ನಲಾಗಿದೆ. ಈಗ ಸಿನಿಮಾ ಮೂಲಕ ಟಾಲಿವುಡ್ ಸಿನಿ ರಸಿಕರ ಮನ ಗೆದ್ದ ಕಿಚ್ಚ ಸುದೀಪ್ ತೆಲುಗು ಬಿಸ್‌ಬಾಸ್‌ಗೆ ಗೆಸ್ಟ್‌ ಆಗಿ ಬರಲಿದ್ದಾರೆ.

ಸೀರೆಯಲ್ಲೇ ಮಿಂಚೋ ಕನ್ನಡತಿ ಸೀರಿಯಲ್‌ನ ಭುವಿ ಮಾಡರ್ನ್ ಲುಕ್ ಹೀಗಿದೆ

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ತೆಲುಗು ಬಿಸ್‌ಬಾಸ್‌ಗೆ ವಿಶೇಷ ಅತಿಥಿಯಾಗಿ ಬರಲಿದ್ದಾರೆ. ಪ್ರೋಮೋದಲ್ಲಿ ನಾಗಾರ್ಜುನ ಅಭಿಜಿತ್‌ಗೆ ಬಾಗಿಲತ್ತ ಕೈ ಮಾಡಿ ಹೋಗುವಂತೆ ತೋರಿಸಲಾಗಿದ್ದರೂ,  ಎಲಿಮಿನೇಷನ್ ಇಲ್ಲ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಅಲ್ಲಿ ಸಾಯಿಸೋಕೇ ರೆಡಿಯಾಗಿದ್ರೆ ಇಲ್ಲಿ ಕುಣೀತಿದ್ದಾಳಲ್ಲಪ್ಪಾ Na Ninna Bidalaare ದುರ್ಗಾ?