
ನಿವಾರ್ ಚಂಡಮಾರುತದಿಂದ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಮಯದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆಂದು ಹಾಕಲಾಗಿದ್ದ ಮನೆ ಸೆಟ್‌ನೊಳಗೆ ನೀರು ನುಗ್ಗಿದೆ ಎನ್ನಲಾಗಿದೆ.
ತಂದೆ ಜೊತೆಗಿನ ಭಿನ್ನಾಭಿಪ್ರಾಯ: ಬಿಗ್‌ಬಾಸ್ ಮನೆಯಿಂದ ಬಂದ ಜಾನ್ ಹೇಳಿದ್ದಿಷ್ಟು..!
ಕೆಲ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಚೇಂಬರಂಬಕ್ಕೆಂ ಡ್ಯಾಮ್ ನಿಂದ ನೀರು ಬಿಟ್ಟಿದ್ದು ಹತ್ತಿರದ ಪ್ರದೇಶಗಳು ಜಲಾವೃತವಾಗಿದೆ. ಡ್ಯಾಮ್‌ಗೆ ತುಂಬಾನೇ ಹತ್ತಿರವಿದ್ದ ಬಿಗ್ ಬಾಸ್ ಮನೆಯೊಳಗೂ ನೀರು ನುಗ್ಗಿದೆ ಎನ್ನಲಾಗಿದೆ. ಸಧ್ಯಕ್ಕೆ ಎಲ್ಲಾ ಸ್ಪರ್ಧಿಗಳನ್ನು ಸ್ಥಳೀಯ 5 ಸ್ಟಾರ್ ಹೋಟೆಲ್‌ಗೆ ಶಿಫ್ಟ್ ಮಾಡಿದ್ದಾರೆ.
ಬಿಗ್ ಬಾಸ್ ಮಾತುಕತೆ, ಅತಿದೊಡ್ಡ ರಿಯಾಲಿಟಿ ಶೋ ಯಾವಾಗಿನಿಂದ?
ನಾಳಿನ ಸಂಚಿಕೆ ಪ್ರಸಾರವಾಗುತ್ತಾ? ತನ್ನ ನೆಚ್ಚಿನ ಸ್ಪರ್ಧಿಗಳು ಸೇಫ್ ಅಗಿದ್ದಾರಾ ಎಂದು ಪ್ರಶ್ನಿಸುತ್ತ ಕರೆ ಮಾಡಿದ ವೀಕ್ಷಕರಿಗೆ ತಂಡದಿಂದ ಮಾಹಿತಿ ನೀಡಿದ್ದಾರೆ. 'ಎಲ್ಲಾ ಸ್ಪರ್ಧಿಗಳು ಅರಾಮಾಗಿದ್ದಾರೆ, ಎಲ್ಲಾ ಅವರವರ ಟಾಸ್ಕ್‌ನಲ್ಲಿ ಬ್ಯುಸಿಯಾಗಿದ್ದಾರೆ' ಎಂದು ಹೇಳಿದ್ದಾರೆ. ಒಂದು ಕಡೆ ಮನೆಯೊಳಗೆ ನೀರು ನುಗ್ಗಿದೆ ಎಂದರೆ ಮತ್ತೊಂದು ಕಡೆ ಇಲ್ಲ ಏನೂ ಆಗಿಲ್ಲ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ಈ ವಿಚಾರದ ಬಗ್ಗೆ ದೊಡ್ಡ ಗೊಂದಲವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.