ಅಕ್ಕ ನಟಿ‌ ಅನುಪಮಾ ಸೀರಿಯಲ್ ಬಿಟ್ರು, ಸಿನಿಮಾ ಸಿಕ್ತಿಲ್ಲ!

By Suvarna News  |  First Published Nov 27, 2020, 2:12 PM IST

ಅಕ್ಕ ಸೀರಿಯಲ್ ನಟಿ, ಬಿಗ್ ಬಾಸ್‌ನಲ್ಲೂ ಮಿಂಚಿದ ಅನುಪಮಾ ಗೌಡ ಇದೀಗ ಖಾಲಿ ಕೂತಿದ್ದಾರಾ.. ಈ ಕಡೆ ಸೀರಿಯಲ್ ಬಿಟ್ರು, ಆ ಕಡೆ ಸಿನಿಮಾ ಕೈ ಹಿಡೀತಿಲ್ಲ ಅನ್ನೋದು ಅವರ ಸದ್ಯದ ಸ್ಥಿತಿಯಾ?


ಅನುಪಮಾ ಗೌಡ ಬಗ್ಗೆ ಒಂದು ವಿಷ್ಯ ಹಲವ್ರಿಗೆ ಗೊತ್ತಿಲ್ಲ. ಈಕೆ ಮೊದಲು ಎಂಟ್ರಿ ಕೊಟ್ಟಿದ್ದು ಸಿನಿಮಾ ಫೀಲ್ಡ್‌ ಗೆ. ಆ ಸಿನಿಮಾ ಯಾವ್ದು ಅಂತ ಗೊತ್ತಾದ್ರೆ ನಿಮ್ಗೂ ಅಚ್ಚರಿಯಾಗುತ್ತೆ. ಇವತ್ತಿನ ಕನ್ನಡ ಚಿತ್ರರಂಗದ ಸ್ಟಾರ್ ನಟನೊಬ್ಬನ ಆರಂಭ ಕಾಲದ ಸಿನಿಮಾ ಅದು. ಅದರಲ್ಲಿ ಅನುಪಮಾ ನಾಯಕಿಯಾಗಿದ್ರಾ ಅಂತ ಕೇಳ್ಬೇಡಿ. ಏಕೆಂದರೆ ಆಗಿನ್ನೂ ಅನುಪಮಾ ಚಿಕ್ಕ ಹುಡುಗಿ. ಈಗಿನ ಒಬ್ಬ ಸ್ಟಾರ್ ನಟ ನಾಯಕನಾಗಿರೋ ಆ ಸಿನಿಮಾದಲ್ಲಿ ಈ ಅನುಪಮಾಗೌಡ ಬಾಲ ಕಲಾವಿದೆಯಾಗಿ ಅರ್ಥಾತ್ ಚೈಲ್ಡ್ ಆರ್ಟಿಸ್ಟ್ ಆಗಿ ನಟಿಸಿದ್ರು. ಆ ಸಿನಿಮಾದ ಹೆಸರು ಲಂಕೇಶ್ ಪತ್ರಿಕೆ. 2003ರಲ್ಲಿ ತೆರೆ ಕಂಡ ಸಿನಿಮಾವಿದು. ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನ ಡ್ರಗ್ಸ್ ದಂಧೆಯ ಕುರಿತಾಗಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಇಂದ್ರಜಿತ್ ಲಂಕೇಶ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಇದರಲ್ಲಿ ದರ್ಶನ್ ತೂಗುದೀಪ್ ಜೊತೆಗೆ ವಸುಂಧರಾ ದಾಸ್ ಎಂಬ ಗಾಯಕಿ ನಾಯಕಿಯಾಗಿದ್ರು. ಮಹತ್ವದ ಸಿನಿಮಾದಲ್ಲೊಂದು ಪುಟ್ಟ ಪಾತ್ರದಲ್ಲಿ ಪುಟಾಣಿ ಹುಡುಗಿಯಾಗಿ ಕಾಣಿಸಿಕೊಂಡರು ಅನುಪಮಾ. 
 

Tap to resize

Latest Videos

undefined


ಆದರೆ ಹದಿನೇಳು ವರ್ಷಗಳ ಹಿಂದಿನ ಈ ಸಿನಿಮಾವನ್ನೂ ಜನ ಮರೆತು ಬಿಟ್ಟಿದ್ದಾರೆ. ಅನುಪಮಾ ಪಾತ್ರವೂ ಯಾರಿಗೂ ನೆನಪಿದ್ದ ಹಾಗಿಲ್ಲ. ಆಮೇಲೆ ಈಕೆ ಬಾಲ ನಟಿಯಾಗಿ ಯಾವ ಸಿನಿಮಾದಲ್ಲೂ ನಟಿಸಿದ ಹಾಗಿಲ್ಲ. ಆದರೆ ಆಗ ಹತ್ತಿದ ನಟನೆಯ ರುಚಿ ದೊಡ್ಡವಳಾದ ಮೇಲೂ ನಟಿಸುವಂತೆ ಪ್ರೇರೇಪಿಸಿತು. ಹಳ್ಳಿ ದುನಿಯಾ ಅನ್ನೋ ರಿಯಾಲಿಟಿ ಶೋ ಮೂಲಕ ಮತ್ತೆ ಕಿರುತೆರೆಗೆ ಬಂದರು. ಆದರೂ ಹೆಸರು ತಂದುಕೊಟ್ಟಿದ್ದು ಅಕ್ಕ ಸೀರಿಯಲ್. ಜನ ಇಂದಿಗೂ ಈಕೆಯನ್ನು ಗುರುತಿಸೋದು ಅಕ್ಕ ಅಂತಲೇ. ದ್ವಿಪಾತ್ರದಲ್ಲಿ ಅದ್ಭುತವಾದ ಅಭಿಮಯ ಮೆರೆದ ಅನುಪಮಾ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಎಲ್ಲೆಡೆ ಮನೆ ಮಾತಾದ್ರು. ಅನುಪಮಾಗೆ ಅಪಾರ ಜನಪ್ರಿಯತೆ, ಅವರ ಟ್ಯಾಲೆಂಟ್ ಗೊಂದು ವೇದಿಕೆ ಸಿಕ್ಕ ಸೀರಿಯಲ್ ಅದು. ಆ ಸೀರಿಯಲ್ ವೈಂಡ್ ಅಪ್ ಆಗೋ ಮೊದಲೇ ಬಿಗ್ ಬಾಸ್ ಮನೆ ಹೊಕ್ಕರು. ಅಲ್ಲೂ ಒಂದಿಷ್ಟು ಜನಪ್ರಿಯತೆ ಸಿಕ್ಕಿತು. 

'ಹಾಡಿತು ಕನ್ನಡ ಕೋಗಿಲೆ' ಯಿಂದ ಬಾಲಿವುಡ್‌ಗೆ ಹಾರಿದ ಅನುಪಮಾ ಗೌಡ ...

ಮುಂದೆ ಸಿನಿಮಾ ಫೀಲ್ಡ್ ಗೆ ಬಂದು ಕರಾಳ ರಾತ್ರಿ, ಇದೀಗ ಚಾರ್ಲಿ ಅಲ್ಫಾ ಟ್ಯಾಂಗೋ ಸಿನಿಮಾ ಕೈಯಲ್ಲಿದೆ. ಕರಾಳ ರಾತ್ರಿ ಸಿನಿಮಾದಲ್ಲಿ ಅನುಪಮಾ ನಟನೆಗೆ ಅವಾರ್ಡ್ ಬಂದರೂ ಅದನ್ನು ಥಿಯೇಟರ್ ಗೆ ಬಂದು ನೋಡಿದವರು ಕಡಿಮೆಯೇ. ಈ ನಡುವೆ ಅನುಪಮಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿಯೇ ಇದ್ದಾರೆ. ಫೋಟೋ ಶೂಟ್ ಗಳನ್ನು, ಸ್ಟೖಲ್ ಲುಕ್ ಗಳನ್ನು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ರಿಯಾಲಿಟಿ ಶೋ, ಸಿನಿಮಾ ಅದು ಇದು ಅಂತ ಕೈ ತುಂಬ ಕೆಲಸ ಇದೆ, ತಾನು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದೀನಿ ಅನ್ನೋದನ್ನು ತೋರಿಸಿಕೊಳ್ಳೋ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಮಾರ್ಷಲ್ ಆರ್ಟ್ ಕಲೀತಿರೋದು, ಸಖತ್ ಜೋಶ್‌ನಲ್ಲಿ ಕಿಕ್ ಮಾಡೋದು, ಬೀಳೋದು, ಏಳೋದು ಇತ್ಯಾದಿ ವೀಡಿಯೋಗಳನ್ನೆಲ್ಲ ಹರಿಯಬಿಡುತ್ತಿದ್ದಾರೆ. 

ಅನುಪಮಾ ಗೌಡ ತಂಗಿಯೂ ಈಗ ನಟಿ; ನೋಡಿ 'ನಾಗಿಣಿ' ಫೋಟೋಗಳು! ...

ಇದೆಲ್ಲ ಸಿನಿಮಾಗೋಸ್ಕರ ಅವರ ಕಸರತ್ತು ಅನ್ನಬಹುದು. ಆದರೆ ಏನೇ ಸರ್ಕಸ್ ಮಾಡಿದರೂ ಇವೆಲ್ಲ ಅಕ್ಕ ಸೀರಿಯಲ್ ಲೆವೆಲ್ ನ ಪಬ್ಲಿಸಿಟಿ ಕೊಡೋದಂತೂ ದೂರದ ಮಾತು. ಈ ನಡುವೆ ಸೀರಿಯಲ್‌ನಲ್ಲಿ ಗೆಸ್ಟ್ ಅಪೀಯರೆನ್ಸ್ ಕೊಡ್ತಿದ್ದಾರೆ. ಫುಲ್‌ಟೈಮ್ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿ. ಅವರ ಪ್ರತಿಭೆಗೆ ಕಿರುತೆರೆಯೇ ಬೆಸ್ಟ್ ಅನ್ನೋದು ಅವರ ನಟನೆಯ ಅಭಿಮಾನಿಗಳ ಮಾತು. ಆದ್ರೆ ಅಕ್ಕಾವ್ರು ಇದಕ್ಕೆಲ್ಲ ಸೊಪ್ಪು ಹಾಕ್ತಾರಾ, ಸಿನಿಮಾದ ಥಳಕು ಬಳಕು ಅವರ ಪ್ರತಿಭೆಯನ್ನು ಮರೆ ಮಾಡ್ತಿರೋ ಅಪಾಯವನ್ನು ಅರಿತಿದ್ದಾರಾ.. ಗೊತ್ತಿಲ್ಲ, ಅನುಪಮಾ ಅವರೇ ಹೇಳ್ಬೇಕು!

ಒಬ್ಬಳೇ ಓಡಾಡೋದನ್ನು ಕಲಿಯೋಕೆ ಸೋಲೋ ಟ್ರಿಪ್ ಹೋದ್ರಂತೆ ಅನುಪಮಾ ಗೌಡ! ...

 

click me!