ಓಲ್ಡ್ ಪ್ರೊಮೋ ವೈರಲ್, ಸುದೀಪ್‌ಗೆ ಹತ್ತು ವರ್ಷಕ್ಕೆ ಒಂದು ವರ್ಷನಾ ಅಂತಿರೋದ್ಯಾಕೆ?

Published : Jan 19, 2025, 01:43 PM ISTUpdated : Jan 19, 2025, 01:52 PM IST
ಓಲ್ಡ್ ಪ್ರೊಮೋ ವೈರಲ್, ಸುದೀಪ್‌ಗೆ ಹತ್ತು ವರ್ಷಕ್ಕೆ ಒಂದು ವರ್ಷನಾ ಅಂತಿರೋದ್ಯಾಕೆ?

ಸಾರಾಂಶ

ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನ ಪ್ರೋಮೋ, ಸುದೀಪ್ ಡಬಲ್ ರೋಲ್‌ನಲ್ಲಿ ನಟಿಸಿರುವ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ೧೩ ಸೆಲೆಬ್ರಿಟಿಗಳು ೧೦೦ ದಿನಗಳ ಕಾಲ ೪೭ ಕ್ಯಾಮೆರಾಗಳ ಮೇಲ್ವಿಚಾರಣೆಯಲ್ಲಿರುವ ಬಿಗ್ ಬಾಸ್ ಮನೆಯ ಪರಿಕಲ್ಪನೆಯನ್ನು ಸರಳವಾಗಿ ವಿವರಿಸುವ ಈ ಹಳೆಯ ಪ್ರೋಮೋಗೆ ಈಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುದೀಪ್ ಅವರ ಯಂಗ್ ಲುಕ್ ಕೂಡ ಚರ್ಚೆಯಲ್ಲಿದೆ.

10 ವರ್ಷಗಳ ಹಿಂದೆ ಶುರುವಾದ ಬಿಗ್ ಬಾಸ್ ಕನ್ನಡ ಪ್ರೊಮೋ (Bigg Boss Kannada) ಇದೀಗ ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಮತ್ತೆ ವೈರಲ್ ಆಗ್ತಿದೆ. ಅದು ಮೊದಲ ಸೀಸನ್ ಪ್ರೋಮೋ ವಿಡಿಯೋ. ಅಲ್ಲಿ ನಟ ಕಿಚ್ಚ ಸುದೀಪ್ (Kichcha Sudeep) ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬ, ಮತ್ತೊಬ್ಬ ಎಂದು ಅವರಿಬ್ಬರನ್ನು ಹೇಳುತ್ತಾ ಹೋದರೆ ಅಲ್ಲಿ ಒಬ್ಬ ಬಾಸು, ಇನ್ನೊಬ್ಬ ಅವನ ತಮ್ಮನೋ, ಫ್ರೆಂಡೋ ಯಾರಿಗೆ ಗೊತ್ತು? ಒಟ್ಟಿನಲ್ಲಿ, ಒಬ್ಬ ಕೇಳುತ್ತಾನೆ, ಇನ್ನೊಬ್ಬ ಹೇಳುತ್ತಾನೆ. ಒಬ್ಬ, ಅಂದರೆ ಕೇಳುವವನು ತಮ್ಮ, ಹೇಳೂವವನು ಬಾಸ್, ಅಂದ್ರೆ ಅಣ್ಣ ಅಂತ ಅಂದ್ಕೊಳಿ ಸದ್ಯಕ್ಕೆ!

ತಮ್ಮ ಬಂದು ಕೇಳ್ತಾನೆ, 'ಈ ಬಿಗ್ ಬಾಸ್ ಅಂದ್ರೆ ಏನು ಬಾಸ್?' ಅದಕ್ಕೆ ಬಾಸ್ 'ಹದಿಮೂರು ಜನರು, ಒಬ್ಬರೊಗೊಬ್ಬರ ಪರಿಚಯ ಇರಲ್ಲ.. ಆದ್ರೂ ಒಂದೇ ಮನೆಲ್ಲಿ ಇರ್ತಾರೆ.. ಅದಕ್ಕೆ ತಮ್ಮ 'ಆ ಮನೆ ನಮ್ದೂ ಇದೆ, ಹೊಸತೇನು? ಅದಕ್ಕೆ ಬಾಸ್ 'ಆ ಮನೆಯಿಂದ ಆಚೆ ಹೋಗಂಗಿಲ್ಲ' ಎನ್ನಲು ತಮ್ಮ 'ನೂರು ದಿನ..' ಎಂದು ಹೇಳಿ 'ಜೈಲಾ ಬಾಸ್?' ಎನ್ನುವನು. ಅದಕ್ಕೆ ಬಾಸ್ 'ಒಂಥರಾ ಜೈಲೇ, ಆದ್ರೂ ಜೈಲಲ್ಲಾ..' ಎನ್ನುತ್ತಾರೆ. ತಮ್ಮ 'ಸ್ವಲ್ಪ ಡಿಟೇಲಾಗಿ ಹೇಳು..' ಎನ್ನುವನು. 

'ಮ್ಯಾಕ್ಸ್' ಸೂಪರ್​ ಹಿಟ್ ಆಯ್ತು, ಕಿಚ್ಚ ಸುದೀಪ್ ಈಗೇನ್‌ ಮಾಡ್ತಿದಾರೆ?

ಅದಕ್ಕೆ ಬಾಸ್ ' ಆ 13 ಜನಸೆಲೆಬ್ರೆಟಿಗಳು ಅವ್ರೇ ಇಷ್ಟ ಪಟ್ಟು ಆ ಒಂದು ಮನೆಗೆ ಬರ್ತಾರೆ. ಆದ್ರೆ ಅಲ್ಲಿ ಬಂದ್ಮೇಲೆ, ಅವ್ರು ಬಿಗ್ ಬಾಸ್ ಇಷ್ಟದ ಪ್ರಕಾರ ಇರ್ಬೇಕು.. ನೂರು ದಿನ , ನಲವತ್ತೇಳು ಕ್ಯಾಮೆರಾ ಇಟ್ಟು ಆ ಮನೆಲ್ಲಿ ಹಗಲು-ರಾತ್ರಿ ನಡೆಯೋದನ್ನೆಲ್ಲಾ ಹಂಗಂಗೇ ತೋರಿಸ್ತಾರೆ.. ' ಅಂತಾನೆ. ಅಲ್ಲಿಗೆ 'ಬಿಗ್ ಬಾಸ್' ಎನ್ನುವ ಹಿನ್ನೆಲೆ ಸಂಗೀತ-ಹಾಡಿನ ಮೂಲಕ ಈ ಪ್ರೋಮೋ ಮುಗಿಯುತ್ತದೆ. ಇದು ಹತ್ತು ವರ್ಷದ ಹಿಂದಿನ ಪ್ರೊಮೋ. ಆ ಕಾಲಕ್ಕೆ ಸಕತ್ ಕಿಕ್ ಕೊಟ್ಟ ಪ್ರೊಮೋ ಕೂಡ ಹೌದು. 

ಇಂದು ಈ ಪ್ರೊಮೋ ನೋಡಿದರೆ, ಸಕತ್ ಸಿಂಪಲ್ ಅಂತ ಹಲವರಿಗೆ ಅನ್ನಿಸಬಹುದು. ಆದರೆ ಆ ಕಾಲಕ್ಕೆ ಇದು ಹೊಸದು ಹಾಗೂ ಹೈಲೀ ಟೆಕ್ನಿಕಲ್ ಆಗಿದ್ದು ಎನ್ನಬಹುದು. ಕಾಲ ಕಳೆದಂತೆ ಎಲ್ಲವೂ ಹಳೆಯದಾಗುತ್ತೆ, ಹೊಸದು ಬಂದರೆ ಇರೋದು ಹಳೆಯದು ಅಂತನೂ ಹೇಳಬಹುದು. ಒಟ್ಟಿನಲ್ಲಿ ಇದೀಗ ಆ ಹಳೆಯ ಪ್ರೋಮೋ ಸದ್ಯ ವೈರಲ್ ಆಗ್ತಿದೆ. ಈ ವೀಡಿಯೋ ನೋಡಿ ಅದೆಷ್ಟೋ ಜನರು ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. 

ಟಾಕ್ಸಿಕ್‌ ಚಿತ್ರಕ್ಕೆ ಎಲ್ರೂ ಕಾಯ್ತಿರೋ ಹೊತ್ತಲ್ಲೇ ಯಶ್ 'ಈ ಮಾತು' ವೈರಲ್ ಆಗೋಯ್ತು!

ಕೆಲವರು ಸೂಪರ್ ಆಗಿತ್ತು ಎಂದರೆ, ಕೆಲವರು ವೆರಿ ಸಿಂಪಲ್ ಎಂದಿದ್ದಾರೆ. ಹಲವರು 'ಸುದೀಪ್ ಈಗ್ಲೂ ಹೆಚ್ಚುಕಡಿಮೆ ಅಷ್ಟೇ ಯಂಗ್ ಆಗಿದ್ದಾರೆ, ಸುದೀಪ್ ಅವರಿಗೆ ಹತ್ತು ವರ್ಷಕ್ಕೆ ಒಂದು ವರ್ಷ ಆಗುತ್ತಾ?' ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, 'ಸುದೀಪ್ ಈಗ ಹನ್ನೊಂದನೇ ಸೀಸನ್ ಹೋಸ್ಟ್ ಮಾಡ್ತಿದಾರೆ. ಇದೇ ಅವ್ರ ಲಾಸ್ಟ್ ಸೀಸನ್ ಹೋಸ್ಟಿಂಗ್ ಅಂತ ಕೂಡ ಹೇಳಿದಾರೆ. ಈ ಹೊತ್ತಲ್ಲಿ ಮೊದಲ ಸೀಸನ್ ಪ್ರೋಮೋ ವೈರಲ್ ಆಗಿದೆ, ನೋಡೋದಕ್ಕೆ ಸಕತ್ ಮಜವಾಗಿದೆ' ಎಂದಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!