ಲವರ್​ ಮೇಲೆ ಕಣ್ಣು, ಮಲ್ಲಿಯನ್ನು ಹೀಗೆ ಎತ್ತಾಕೋದಾ ಜೈದೇವ್​? ಸೊಂಟ ಹುಷಾರ್​ ಕಣಮ್ಮೀ ಎಂದ ಫ್ಯಾನ್ಸ್​

Published : Jan 19, 2025, 12:06 PM ISTUpdated : Jan 19, 2025, 05:06 PM IST
ಲವರ್​ ಮೇಲೆ ಕಣ್ಣು, ಮಲ್ಲಿಯನ್ನು ಹೀಗೆ ಎತ್ತಾಕೋದಾ ಜೈದೇವ್​? ಸೊಂಟ ಹುಷಾರ್​ ಕಣಮ್ಮೀ ಎಂದ ಫ್ಯಾನ್ಸ್​

ಸಾರಾಂಶ

"ಅಮೃತಧಾರೆ" ಧಾರಾವಾಹಿಯ ಜೈದೇವ್ (ರಾವಣ್ ಗೌಡ) ಮತ್ತು ಮಲ್ಲಿ (ರಾಧಾ ಭಗವತಿ) ಜೋಡಿ ತಮ್ಮ ರೀಲ್ಸ್‌ಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚಿನ ನೃತ್ಯ ವೀಡಿಯೊದಲ್ಲಿ ಜೈದೇವ್, ಮಲ್ಲಿಯನ್ನು ಎತ್ತಿ ಡಾನ್ಸ್ ಮಾಡಿದ್ದು, ಅಭಿಮಾನಿಗಳು ಮಲ್ಲಿಯ ಆರೋಗ್ಯದ ಬಗ್ಗೆ ಕಾಳಿ ವ್ಯಕ್ತಪಡಿಸಿದ್ದಾರೆ. ರಾಧಾ ಭಗವತಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ರಾವಣ್ ಗೌಡ ಬಾಲನಟನಾಗಿ ಕಿರುತೆರೆಗೆ ಪ್ರವೇಶಿಸಿ, ಹಲವು ಧಾರಾವಾಹಿ ಮತ್ತು ಚಿತ್ರಗಳಲ್ಲಿ ನಟಿಸಿದ್ದಾರೆ.

  ಜೈದೇವ್​ ಪೆದ್ದು ಪತ್ನಿ ಮಲ್ಲಿಯ ಕಣ್ಣು ತಪ್ಪಿಸಿ ತನ್ನ ಗರ್ಲ್​ಫ್ರೆಂಡ್​ ಜೊತೆ ಜಾಲಿಯಾಗಿದ್ದಾನೆ. ಪತಿಯ ಮೇಲೆ ಕಣ್ಣಿಟ್ಟಿರುವ ಮಲ್ಲಿ ಆತನ ಆಟಕ್ಕೆ ಕಡಿವಾಣ ಹಾಕಲು ನೋಡುತ್ತಿದ್ದರೂ, ಆಕೆಯನ್ನು ಮರುಳು ಮಾಡಿ ಹೊರಕ್ಕೆ ಹೋಗುವಲ್ಲಿ ಜೈದೇವ್​ ಯಶಸ್ವಿಯಾಗ್ತಿದ್ದಾನೆ. ಅದೇ ಇನ್ನೊಂದೆಡೆ, ಮನೆಗೆ ಬಂದಿರುವ ಗೌತಮ್​ನ ಅಮ್ಮ ಮತ್ತು ತಂಗಿಯನ್ನು ಕೊಲೆ ಮಾಡಿ ಮುಗಿಸುವ ಸ್ಕೆಚ್​ ಕೂಡ ಹಾಕ್ತಿದ್ದಾನೆ. ಇದು ಅಮೃತಧಾರೆ ಸೀರಿಯಲ್​ ವಿಷ್ಯ ಆದ್ರೆ ಅಸಲಿಗೆ ಜೈದೇವ್​ ಮತ್ತು ಮಲ್ಲಿಯ ಜೋಡಿಯಂತೂ ಸೂಪರೋ ಸೂಪರು. ಇವರಿಬ್ಬರೂ ಇದಾಗಲೇ ಹಲವಾರು ರೀಲ್ಸ್​ಗಳನ್ನು ಮಾಡಿದ್ದು ಅಭಿಮಾನಿಗಳನ್ನು ರಂಜಿಸಿದ್ದಾರೆ.

ಇದೀಗ ಮಲ್ಲಿಯನ್ನು, ಜೈದೇವ್​ ಎತ್ತಿ, ಸೊಂಟ ಬಳಕಿಸುತ್ತಾ ಡಾನ್ಸ್​ ಮಾಡಿದ್ದಾನೆ. ನನ್ನಾಣೆ ನನ್ನಾಣೆ ಹಾಡಿಗೆ ಇವರಿಬ್ಬರೂ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಇವರಿಬ್ಬರ ಕೆಮೆಸ್ಟ್ರಿಗೆ ಭೇಷ್​ ಅಂತಿರೋ ಫ್ಯಾನ್ಸ್, ಮಲ್ಲಿಗೆ ಮಾತ್ರ ಸೊಂಟ ಹುಷಾರ್ ಕಣಮ್ಮಾ ಎನ್ನುತ್ತಿದ್ದಾರೆ. ಮೊದ್ಲೇ ಗರ್ಲ್​ಫ್ರೆಂಡ್​ ಮೇಲೆ ಕಣ್ಣು ಹಾಕಿದ್ದಾನೆ. ನಿನ್ನನ್ನು ಏನಾದರೂ ಮಾಡಿಬಿಟ್ಟಾನು ಎಂದು ನಟಿಯ ಕಾಲೆಳೆಯುತ್ತಿದ್ದಾರೆ. ಇನ್ನು ಮಲ್ಲಿಯ ರಿಯಲ್​ ಹೆಸರು ರಾಧಾ ಭಗವತಿ ಮತ್ತು ಜೈದೇವ್​ ರಿಯಲ್​ ಹೆಸರು ರಾವಣ್​ ಗೌಡ.

ಅಮೃತಧಾರೆ ಮಲ್ಲಿ 'ಸಾರಿ' ಕೇಳಿದ್ರೆ ಪತಿ ಜೈದೇವ್​ ಹೀಗ್​ ಹೇಳೋದಾ? ನಕ್ಕೂ ನಕ್ಕು ಸುಸ್ತಾದ ಫ್ಯಾನ್ಸ್​!

ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ.  ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ರಾಣವ್​ ಗೌಡ ಕುರಿತು ಹೇಳುವುದಾದರೆ ಇವರು, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತುಳಸಿ' ಧಾರಾವಾಹಿಯಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು.  ನಂತರ ಸ್ವಲ್ಪ ವರ್ಷ ನಟನೆಯಿಂದ ದೂರ ಉಳಿದು  ಎಂಜಿನಿಯರಿಂಗ್ ಸೇರಿದರು. ಆದರೆ, ಅದನ್ನು ಅರ್ಧಕ್ಕೇ ನಿಲ್ಲಿಸಿ   'ಅರಮನೆ'  'ಜೀವನದಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಬಳಿಕ  'ರಾಜಕುಮಾರಿ' ಧಾರಾವಾಹಿಯಲ್ಲಿ ನಟಿಸಿದರು. ಇಲ್ಲಿ ಮೊದಲ ಬಾರಿಗೆ ಖಳನಾಯಕನಾಗಿ ಗುರುತಿಸಿಕೊಂಡರು. ಬಳಿಕ 'ವರಲಕ್ಷ್ಮಿ ಸ್ಟೋರ್ಸ್' , 'ಮತ್ತೆ ವಸಂತ', 'ಕಮಲಿ' 'ಕನ್ಯಾದಾನ' ಮುಂತಾದವುಗಳಲ್ಲಿ ನಟಿಸಿದರು.  ಸಿನಿಮಾದಲ್ಲಿಯೂ  ಪೋಷಕ ಪಾತ್ರ ಮಾಡಿದ್ದಾರೆ ರಾಣವ್​.  'ಶ್ರೀಕಂಠ', 'ಮತ್ತೆ ಬಾ ಉಪೇಂದ್ರ', 'ವಿರಾಟ್' ಸಿನಿಮಾಗಳಲ್ಲಿ ನಟಿಸಿದ್ದಾರೆ.  ಇದೀಗ ಅಮೃತಧಾರೆಯಲ್ಲಿ ಜೈದೇವನ ಪಾತ್ರ ಮಾಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್: ಮೇಕಪ್ ಮಾಡ್ಕೊಳ್ಳೋ ಗ್ಯಾಪ್‌ನಲ್ಲಿ ಕಾವ್ಯಾಗೆ 'ಲವ್ ಪ್ರಪೋಸ್' ಮಾಡೇಬಿಟ್ಟ ಗಿಲ್ಲಿ ನಟ!
Bigg Boss: ಅಬ್ಬಬ್ಬಾ! ಗಿಲ್ಲಿ ಮೇಲೆ ಅಶ್ವಿನಿಗೆ ಇದೆಂಥ ಲವ್​? ನನ್ನ ಮನಸ್ಸು ಪರಿವರ್ತಿಸಿದ್ದೂ ಇವನೇ ಅಂದ ಧ್ರುವಂತ್​