ಸರಿಗಮಪ ವೇದಿಕೆಯಲ್ಲಿ ಫ್ಯಾಮಿಲಿ ಜೊತೆ ಕಿಚ್ಚ ….ಅಮ್ಮನ ಪ್ರತಿಮೆ ಕಂಡು ಕಣ್ಣೀರಿಟ್ಟ ಸುದೀಪ್!

By Pavna Das  |  First Published Jan 1, 2025, 1:13 PM IST

ಝೀ ಕನ್ನಡದ ಸರಿಗಮಪ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆಗೆ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಕೂಡ ಆಗಮಿಸಿದ್ದು, ಉಡುಗೊರೆಯಾಗಿ ಸಿಕ್ಕ ಅಮ್ಮನ ಪ್ರತಿಮೆ ನೋಡಿ ಕಿಚ್ಚ ಕಣ್ಣಿರಿಟ್ಟಿದ್ದಾರೆ. 
 


ಝೀ ಕನ್ನಡದಲ್ಲಿ (Zee Kannada)  ಇತ್ತೀಚೆಗಷ್ಟೇ ಆರಂಭವಾದ ಸರಿಗಮಪ ಕಾರ್ಯಕ್ರಮ ಅದ್ಧೂರಿಯಾಗಿಯೇ ಮೂಡಿ ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ಗಾಯಕರಾದ ರಾಜೇಶ್ ಕೃಷ್ಣನ್ (Rajesh Krishnan), ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದು, ಕನಂಡ ಚಿತ್ರರಂಗದ ಹಲವು ಜನಪ್ರಿಯ ಗಾಯಕರು ಇಲ್ಲಿ, ಮೆಂಟರ್ ಆಗಿದ್ದಾರೆ. ಅಷ್ಟೇ ಅಲ್ಲ ಅನುಶ್ರೀ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಇದೀಗ ಸರಿಗಮಪ ವೇದಿಕೆಗೆ ಸ್ಯಾಂಡಲ್‌ವುಡ್‌ನ ಬಾದ್‌ಷಾ, ಕಿಚ್ಚ ಸುದೀಪ (Kiccha Sudeep)ಅವರ ಆಗಮಿಸಿದ್ದು, ಸರಿಗಮಪ ವೇದಿಕೆಯಲ್ಲಿ  'Max'imum ಮನರಂಜನೆಯ ಹಬ್ಬ! ಸಂಭ್ರಮದಿಂದ ನಡೆದಿದೆ. 

ಕಿಚ್ಚನಿಗೆ ಲಕ್ ತಂದ ವರ್ಷಾಂತ್ಯ, ಮ್ಯಾಕ್ಸ್ ಬಂಗಾರದ ಬೆಳೆ! ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಹಿಟ್ ಕೊಟ್ಟ ಸುದೀಪ್!

Tap to resize

Latest Videos

ಕಿಚ್ಚ ಸುದೀಪ್ ಎಂಟ್ರಿ ಪ್ರೊಮೋ ಸಖತ್ ಸದ್ದು ಮಾಡುತ್ತಿದೆ.  ಸರಿಗಮಪ ವೇದಿಕೆಯಲ್ಲಿ  (Saregamapa)ಕಿಚ್ಚನಿಗೆ ಅದ್ಧೂರಿಯಾಗಿ ಸ್ವಾಗತ ದೊರೆತಿದೆ. ವೇದಿಕೆಯ ಮೇಲೆ ಬಂದ ಸುದೀಪ್, ಎಲ್ಲರಿಗೂ ನಮಿಸುತ್ತಾ, ತಾವು ಮೊದಲ ಬಾರಿಗೆ ಬಣ್ಣ ಹಚ್ಚಿ ಪಾದಾರ್ಪಣೆ ಮಾಡಿದ ಜಾಗ ಇದು ಎಂದು ತಮ್ಮ ನಟನೆಯ ಆರಂಭದ ದಿನಗಳನ್ನು ನೆನೆದರು. ಸ್ಪರ್ಧಿಗಳು ಕಿಚ್ಚ ಸುದೀಪ್ ಅಭಿನಯದ ಸಿನಿಮಾಗಳ ಹಿಟ್ ಹಾಡುಗಳನ್ನು ಹಾಡುವ ಮೂಲಕ ಕಿಚ್ಚನಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. 

ಮ್ಯಾಕ್ಸ್ ಸಿನಿಮಾ ಯಶಸ್ಸು; ಚಾಮುಂಡೇಶ್ವರಿ ದೇವಿಗೆ ಹರಕೆ ತೀರಿಸಿದ ಕಿಚ್ಚ ಸುದೀಪ್!

ಇನ್ನು ಸರಿಗಮಪ ವೇದಿಕೆಗೆ ಸುದೀಪ್ ಒಬ್ಬರೇ ಬಂದಿಲ್ಲ,  ಮಗಳು ಮತ್ತು ಹೆಂಡತಿ ಕೂಡ ಬಂದಿದ್ದರು.  ಸ್ಪರ್ಧಿಗಳು ಹಾಡುಗಳಿಗೆ ಮನಸೋತ ಸುದೀಪ್, ತನ್ನ ಪ್ರೀತಿಯ ಪತ್ನಿ ಪ್ರಿಯಾರಿಗಾಗಿ (Priya Sudeep) ಹಾಡು ಹೇಳಿದ್ದರು. ಓ ಪ್ರಿಯಾ ಐ ಲವ್ ಯು ಲವ್ ಯೂ ಡಿಯರ್ ಎನ್ನುತ್ತಾ, ಮನಬಿಚ್ಚಿ ಹಾಡಿದರೆ, ಪ್ರಿಯಾ ಖುಷಿಯಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಜೊತೆಗೆ ಐ ಲವ್ ಯೂ ಲಾಟ್ ಎಂದು ತಮ್ಮ ಪ್ರೀತಿಯನ್ನೂ ಹೇಳಿದ್ದಾರೆ. ಅದಾದ ಬಳಿಕ ಸುದೀಪ್ ಪುಟಾಣಿ ಮಕ್ಕಳೊಂದಿಗೆ, ರಾ ರಾ ರಕ್ಕಮ್ಮ ಹಾಡಿಗೆ ತುಂಬಾನೆ ಮುದ್ದಾಗಿ ಹೆಜ್ಜೆ ಹಾಕಿ ತಾವು ಮಗುವಾಗಿದ್ದಾರೆ. ಇನ್ನು ಸುದೀಪ್ ಗೆ ಸರ್ಪ್ರೈಸ್ ನೀಡಲು ಇದೇ ಮೊದಲ ಬಾರಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್, (Sanvi Sudeep)  ವೇದಿಕೆ ಮೇಲೆ ಬಂದು ಜಸ್ಟ್ ಮಾತ್ ಮಾತಲ್ಲಿ ಹಾಡನ್ನು ಹಾಡಿದ್ದಾರೆ. ಮಗಳನ್ನು ವೇದಿಕೆಯ ಮೇಲೆ ನೋಡಿ ಹಾಗೂ ಆಕೆಯ ಹಾಡನ್ನು ಕೇಳಿ ಸುದೀಪ್ ಆನಂದ್ ಭಾಷ್ಮ ಸುರಿಸಿದ್ದಾರೆ. ಅರ್ಜುನ್ ಜನ್ಯ ಇದನ್ನ ನೋಡಿ, ಹುಲಿ ಹೊಟ್ಟೆಲಿ ಹುಲೀನೆ ಹುಟ್ಟೋದು ಎಂದಿದ್ದಾರೆ. 

ಮ್ಯಾಕ್ಸ್ ಅಮೋಘ ಯಶಸ್ಸು; ಏಳು ಬೀಳಿನ ನಡುವೆಯೂ ಗೆದ್ದ ಕಿಚ್ಚನಿಗೆ ಅಮ್ಮನೇ ಶಕ್ತಿ!

 ಇನ್ನು ಸರಿಗಮಪ ವೇದಿಕೆ ಸುದೀಪ್‌ ಅಮ್ಮನ ಪ್ರತಿಮೆ (statue of Sudeep;s mother) ನೀಡಿದ್ದು, ಕಿಚ್ಚ ಇದನ್ನು ಕಂಡು ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ. ಜೊತೆಗೆ ಅಮ್ಮನಿಗಾಗಿ ಮುದ್ದಾದ ಲಾಲಿ ಹಾಡನ್ನು ಹಾಡುವ ಮೂಲಕ ವೇದಿಕೆಯಲ್ಲಿ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಇದನ್ನ ನೋಡಿ ಮಗಳು ಸಾನ್ವಿ ಕೂಡ ಅತ್ತಿದ್ದಾರೆ. ಒಟ್ಟಾರೆ ಇಡೀ ಕಾರ್ಯಕ್ರಮ ಭಾವುಕತೆಗೆ ಸಾಕ್ಷಿಯಾಗಿದೆ. ಈ ಶನಿವಾರ, ಭಾನುವಾರದ ಎಪಿಸೋಡ್‌‌ನಲ್ಲಿ ಪ್ರಸಾರ ಕಾಣಲಿದೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!