BBK9 ನಾನು Contestant ಅಲ್ಲ ಅಮೂಲ್ಯ..ಅಮೂಲ್ಯ; ಅವಾಜ್‌ಗೆ ತಕ್ಕ ಬುದ್ಧಿ ಹೇಳಿದ ಕಿಚ್ಚ ಸುದೀಪ್

By Vaishnavi ChandrashekarFirst Published Dec 11, 2022, 6:30 PM IST
Highlights

ದೀಪಿಕಾ ದಾಸ್  ಮತ್ತು ಅಮೂಲ್ಯ ಗೌಡ ಫೈಟ್‌ ಬಗ್ಗೆ ಕ್ಲಾರಿಟಿ ಕೊಟ್ಟ ಕಿಚ್ಚ ಸುದೀಪ್....

ಬಿಗ್ ಬಾಸ್ ಸೀಸನ್ 9, 77ನೇ ದಿನಕ್ಕೆ ಕಾಲಿಟ್ಟಿದೆ. 10 ಸ್ಪರ್ಧಿಗಳು ಇರುವ ಮನೆಯಲ್ಲಿ ಜಗಳ ಜೋರಾಗಿದೆ. ಬಣ್ಣದ ಟಾಸ್ಕ್‌ನಲ್ಲಿ ನಡೆದ ಜಗಳದ ಬಗ್ಗೆ ಸುದೀಪ್ ವೀಕೆಂಡ್ ಮಾತುಕತೆಯಲ್ಲಿ ಚರ್ಚೆ ಮಾಡಿದ್ದಾರೆ.

ದೀಪಿಕಾ ದಾಸ್: ಟಾಸ್ಕ್‌ ಆರಂಭಿಸುವ ಮುನ್ನ ನಾವು ಕೆಲವೊಂದು ರೂಲ್ಸ್‌ಗಳ ಬಗ್ಗೆ ಚರ್ಚೆ ಮಾಡಿದೆವು .ರೂಲ್‌ ಬುಕ್‌ನಲ್ಲಿದ್ದದು ಆ ಬಾಕ್ಸ್‌ನಿಂದ ಹೊರಗಡೆ ಹೋಗಬಾರದು ಎಂದು. ಆಟದ intensityನಲ್ಲಿ ಯಾರಾದರೂ ತಳ್ಳುತ್ತಾರೆ ನಾವು ಹೋಗ್ತೀವಿ ಅನ್ನೋದು ಪ್ರಶ್ನೆ ಬಂದು. ಇದಕ್ಕೆ ಉತ್ತರ ಸಿಗಲಿಲ್ಲ ಆದರೂ ಆಟ ಶುರು ಮಾಡಿ ಹೊರಗಡೆ ಹೋಗಬಾರದು ಬಣ್ಣ ಎಸೆಯಬಾರದು ಎಂದು ರೂಲ್ಸ್ ಮಾಡ್ಕೊಂಡ್ವಿ. ಅಲ್ಲಿ ಹೋದ್ಮೇಲೆ ಅಂಗೈಗೆ ಹಾಕೋಬೇಕು ಅಂತ ಇಲ್ಲ..ಹೋಗ್ತಾ ಹೋಗ್ತಾ ನಾವಿಬ್ಬರೂ ಎರಚುವುದಕ್ಕೆ ಶುರು ಮಾಡುದ್ವಿ. ಟೈಮ್ ಇಲ್ಲ ಅಂತ ಅಮೂಲ್ಯ ಎರಚಿ ಮಾಡಿದ್ದರು ಈ ರೀತಿ ಟಾಸ್ಕ್‌ ಆಡಿದಕ್ಕೆ ಬೇಸರ ಆಯ್ತು. ಇಬ್ಬರಿಗೂ ನಿರ್ಧಾರ ತುಂಬಾ ಕಷ್ಟ ಆಯ್ತು ರಾಜಣ್ಣ ಅವರ ನಿರ್ಧಾರ ತೆಗೆದುಕೊಂಡು ಆಟ ಮುಂದುವರೆಸಿದ್ದು. ಎರಡನೇ ರೌಂಡ್‌ ಕೂಡ ಗೇಮ್ ಹಾಳಾಯ್ತು..ಮೂರನೇ ರೈಂಡ್‌ ಅದೇ ರೀತಿ..ಒಟ್ಟಿನಲ್ಲಿ ಇಡೀ ಗೇಮ್ ಹಾಳಾಯ್ತು.

ಅಮೂಲ್ಯ ಗೌಡ: ಮೊದಲು ನಾನು ಕ್ಷಮೆ ಕೇಳುತ್ತೀನಿ. ತಪ್ಪು ಇಬ್ಬರ ಕಡೆಯಿಂದ ಆಗಿದೆ ನಾನು ಆ ತಪ್ಪು ಮಾಡಬಾರದಿತ್ತು ಅನಿಸಿತ್ತು. ರೂಲ್ಸ್‌ನಲ್ಲಿ ಕೈಗೆ ಮಾತ್ರ ಬಣ್ಣ ಹಚ್ಚಿಕೊಳ್ಳಬೇಕು ಅಂತಿತ್ತು ಅದನ್ನು ನಾನು ಮರೆತೆ. ಗೇಮ್ ಸ್ಟ್ಯಾಟರ್ಚಿ ರೀತಿಯಲ್ಲಿ ನಾನು ಅಂಗೈಗೆ ಮಾತ್ರವಲ್ಲ ಇಡೀ ಕೈಗೆ ಬಣ್ಣ ಹಾಕಿಕೊಂಡೆ. ಆಟ ಶುರುವಾದಾಗ ಯಾರೂ ಏನೂ ಹೇಳುವುದಿಲ್ಲ, ಈ ಪಾಯಿಂಟ್ ಬರುವುದು ಕೊನೆಯಲ್ಲಿ ಈ ವಿಚಾರ ಎಲ್ಲರೂ ಮರೆತಿದ್ದರು. ಗೆಲ್ಲಬೇಕು ಅನ್ನೋ ರಬಸದಲ್ಲಿ ...ದೀಪು ಅವರು ಎರಚಿದ್ದರು ಯಾವುದೂ ನೆನಪಿಲ್ಲ. ನನಗೂ ಒಂದು ಕಡೆ ಎರಚಿದ ಹಾಗೆ ಫೀಲ್ ಆಯ್ತು ನಾನು ಸ್ವಲ್ಪ ಅಗ್ರೆಸಿವ್ ಆಗಿ ಆಟ ಶುರು ಮಾಡಿದೆ. ಕೊನೆಯಲ್ಲಿ ನಾನು ಈ ರೀತಿ ಮಾಡಬಾರದಿತ್ತು ಅಂತ ಅನಿಸಿತ್ತು. ಗೇಮ್ ಹಾಳು ಮಾಡಬೇಕು ಅನ್ನೋ ಯೋಚನೆ ಕೂಡ ನನಗೆ ಇರಲಿಲ್ಲ. ಕೈಯಲ್ಲಿ ನೀವು ಹಾಕಿದ್ದರೆ ನಾನು ಬೌಲ್‌ನಲ್ಲಿ ಹಾಕ್ತೀನಿ ಅಂತ ಮಾಡಿದೆ. ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಯ್ತು. 

BBK9 ಬೆಂಗಳೂರು ಬಿಟ್ಟು ಮೈಸೂರಿಗೆ ಹೋಗೋ ಪ್ಲ್ಯಾನ್ ಮಾಡಿದ ಅಮೂಲ್ಯ ಗೌಡ

ಸುದೀಪ್: ಕೇವಲ ಮೂರು ವಾರದಲ್ಲಿ ಈ ಶೋ ಮುಗಿಯುತ್ತದೆ, ಇಷ್ಟು ಜನ ನವೀನರು ಮತ್ತು ಪ್ರವೀನರು ಇದ್ದರೂ ಕೂಡ ಟಾಸ್ಕ್‌ ಈ ರೀತಿ ನಡೆಯುತ್ತಿದೆ. ಹೊರಗಡೆ ಕುಳಿತುಕೊಂಡು ಈ ಟಾಸ್ಕ್‌ ನೋಡಿದಾಗ ಏನು ಅನಿಸುತ್ತದೆ ಎಂದು ನಾನು ಹೇಳುತ್ತೀನಿ. ಆಟ ಶುರುವಾಗುತ್ತದೆ ಕೆಲವೇ ನಿಮಿಷಗಳಲ್ಲಿ ಹಳ್ಳ ಹಿಡಿಯುತ್ತದೆ..ಇದರ ಬಗ್ಗೆ ಚರ್ಚೆ ಮಾಡಬೇಕಿದ್ದವರು ಯಾರು ಅಂಪೈರ್‌ಗಳು, ಅವರು ತೀರ್ಮಾನ ಕೊಡುವುದಕ್ಕೂ ಮುನ್ನವೇ ಕ್ಯಾಪ್ಟನ್ ಮಾತನಾಡುತ್ತಾರೆ ಅನಂತರ ಟೀಂ ಕ್ಯಾಪ್ಟನ್‌ ಮಾತನಾಡುತ್ತಾರೆ ಅಲ್ಲಿಂದ ನೇರವಾಗಿ ಜಗಳ ಶುರುವಾಗುತ್ತದೆ. ಇದನ್ನು ನೋಡಿದಾಗ ಏನು ಅನಿಸಿತ್ತು ಅಂದ್ರೆ ಟೀಂ ಕ್ಯಾಪ್ಟನ್ ಮಾಡಿದ್ದು ಯಾಕೆ? ಅವರ ಮಾತುಗಳನ್ನು ಕೇಳದೆ ಇದ್ದದಕ್ಕೆ ಯಾಕೆ? ಅವರ ನಿರ್ಧಾರ ಕೇಳದೆ ತೀರ್ಮಾನ ಮಾಡಿದ್ದು ಯಾಕೆ? ಇದರ ನಡುವೆ ಸಿಕ್ಕಾಪಟ್ಟೆ ವಾದ ನಡೆಯುತ್ತದೆ. ತಪ್ಪು ಮೊದಲು ಮಾಡಿದ್ದು ಯಾರು ಅದಕ್ಕೆ ಇನ್ನಷ್ಟು ತಪ್ಪು ಮಾಡಿದ್ದರೆ ಉತ್ತರ ಸಿಗುವುದಿಲ್ಲ.

ಅಮೂಲ್ಯ: ಈಗ justification ಕೊಡ್ತಿಲ್ಲ ಸರ್. ಆಟ ಆಡಬೇಕು ಅನ್ನೋದು ಅಷ್ಟೆ ನನಗೆ ತಲೆಯಲ್ಲಿ ಇತ್ತು. ಅವರು ಬಿದ್ದಾಗಲೂ ನಾನು ಕ್ಷಮೆ ಕೇಳಿದೆ. ಕೋಪ ಬಂದಿದ್ದು ನಿಜ ಆದರೆ ಅವರಿಗೆ ನೋವು ಮಾಡಬೇಕು ಅನ್ನೋ ಯೋಚನೆ ನನಗೆ ಇಲ್ಲ. ನಾನು ಮಾಡಿದ್ದು ತಪ್ಪು ಸರ್. 

ಸುದೀಪ್: ನಿಮ್ಮ ಉದ್ದೇಶ ನಾನು ಹೇಳುತ್ತಿಲ್ಲ ಆದರೆ ಏನು ಆಯ್ತು ಅನ್ನೋದು ಮಾತ್ರ ನಾನು ಹೇಳುತ್ತಿರುವುದು..

ದೀಪಿಕಾ: ಅಮೂಲ್ಯ ಕ್ಷಮೆ ಕೇಳಿಲ್ಲ...ದೂಕುತ್ತಿರುವೆ ಎಂದು ಅವರಿಗೆ ಗೊತ್ತು ಆದರೂ ಅವರು ಮಾತು ಕೇಳಲಿಲ್ಲ...ಎಷ್ಟು ಸಲ ಹೇಳಿದ್ದು ಅಮೂಲ್ಯನ ಕಂಟ್ರೋಲ್ ಮಾಡಲು ಆಗಲಿಲ್ಲ.  ಹುಡುಗ ಕೋಪ ಮಾಡಿಕೊಳ್ಳುತ್ತಾರೆ ಎಂದು ಹುಡುಗಿಯರು ಮೊದಲು ಹೋಗಿದ್ದು ಆದರೆ ನಾವೇ ತಪ್ಪು ಮಾಡಿದ್ದು.

BBK9 ಅಮ್ಮಾ ಅಂದಾಗ ರೆಸ್ಪಾಂಡ್ ಮಾಡಲು ಯಾರೂ ಇಲ್ಲ, ಈ ನೋವು ಯಾರಿಗೂ ಬೇಡ: ಅಮೂಲ್ಯ ಗೌಡ

ಸುದೀಪ್: ನಡೆದ ಘಟನೆ ಬಗ್ಗೆ ಬಿಡಿ. ನೇರವಾಗಿ ಒಂದು ಮಾತು ಕೇಳುತ್ತೀನಿ ಇದರಿಂದ ನೀವು ಎನು ಕಲಿತಿದ್ದು? ಕೋಪ ಕಂಟ್ರೋಲ್ ಮಾಡಿಕೊಳ್ಳುವ ಪ್ರಯತ್ನ ಪಡ್ತೀನಿ ಓಕೆ ಮಾಡಿಕೊಳ್ಳಿ. ನಿಮ್ಮ ಕೋಪ ನಿಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದೆ? ಕೋಪ ತಪ್ಪಲ್ಲ ಆದರೆ ಅದು ನಿಮ್ಮ ವೀಕ್ನೆಸ್ ಆದರೆ? ನೀವು ಒಂದು ಮಾತು ಹೇಳಿದ್ರಿ ಕೋಪದಿಂದ ಇನ್ನಷ್ಟು ಮಾಡಲು ಹೋದೆ ಎಂದು. ಕೋಪದಿಂದ ego ಹುಟ್ಟುತ್ತದೆ. ಒಂದು ಮಾತು ಕೇಳುತ್ತೀರಿ ಇಲ್ಲಿ ನಾನು contestant ಅಲ್ಲ ನಾನು ಅಮೂಲ್ಯ..ಅಮೂಲ್ಯ. ಓಓ ಪ್ರಪಂಚದಲ್ಲಿ ನಾವು ಸಣ್ಣ ಬಬಲ್. ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ಒಳ್ಳೆ ಉತ್ತರ ಸಿಗುತ್ತದೆ. ಪ್ರತಿಯೊಬ್ಬರಿಗೂ ಕೋಪ ಇದೆ ಆದರೆ ಸಮಸ್ಯೆ ಆಗುತ್ತಿರುವುದು ಅಮೂಲ್ಯಗೆ ಮಾತ್ರವಲ್ಲ...

click me!