ನಟಿ, ನಿರೂಪಕಿ ಸುಷ್ಮಾ ರಾವ್ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ವಿಶೇಷ ಅತಿಥಿಯಾಗಿ ಬಂದಿದ್ದ ಸುಷ್ಮಾ ತಂದೆಯನ್ನು ನೆನೆದು ಕಣ್ಣೀರಾಕಿದರು.
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾಗಿದ್ದ ಗುಪ್ತಗಾಮಿನಿ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದ ನಟಿ ಸುಷ್ಮ ರಾವ್. ನಟಿಯಾಗಿ ನಿರೂಪಕಿಯಾಗಿ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಸ್ಥಾನ ಪಡೆದಿರುವ ಸುಷ್ಮಾ ರಾವ್ ಸದ್ಯ ಭಾಗ್ಯಲಕ್ಷ್ಮಿ ಧಾರಾವಾಹಿ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಭಾಗ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ಧಾರಾವಾಹಿ ಮತ್ತು ರಿಯಾಲಿಟಿ ಶೋ ನಿರೂಪಣೆ ಮಾಡಿದ್ದ ಸುಷ್ಮಾ ಅನೇಕ ವರ್ಷಗಳು ಕಿರುತೆರೆಯಿಂದ ದೂರ ಆಗಿದ್ದರು. ಬಳಿಕ ಮತ್ತೆ 2020ರಲ್ಲಿ ಕಿರುತೆರೆಗೆ ಮರಳಿದ ಸುಷ್ಮಾ ಅವರನ್ನು ಅಭಿಮಾನಿಗಳು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದರು. ಸದ್ಯ ಭಾಗ್ಯ ಆಗಿ ಪ್ರೇಕ್ಷಕರ ಹೃದಯ ಗೆದ್ದಿರುವ ಸುಷ್ಮಾ ಇತ್ತೀಚಿಗಷ್ಟೆ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ವಿಶೇಷ ಅತಿಥಿಯಾಗಿ ಸುಷ್ಮಾ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಸುಷ್ಮಾ ಅವರ ಮಾತುಗಳು ಅಭಿಮಾನಿಗಳನ್ನು ಹಾಗೂ ಶೋನಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಭಾವುಕತೆಗೆ ನೂಕಿತ್ತು. ತಂದೆಯ ಫೋಟೋ ನೋಡುತ್ತಿದ್ದಂತೆ ಸುಷ್ಮಾ ಕಣ್ಣೀರು ಹಾಕಿದರು. 'ದೇವರು ನನಗೆ ಕೊಟ್ಟ ದೊಡ್ಡ ವರ ಎಂದರೆ ನನ್ನಪ್ಪ' ಎಂದು ಮಾತು ಪ್ರಾರಂಭಿಸುತ್ತಿದ್ದಂತೆ ಭಾವುಕರಾದರು. ತಂದೆಯನ್ನು ಕಳೆದುಕೊಂಡಿರುವ ಸುಷ್ಮಾ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಅಪ್ಪನ ಕೊನೆಯ ಕ್ಷಣವನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. 'ಅಪ್ಪನಿಗೆ ಏನು ಕಾಯಿಲೆ ಇರಲಿಲ್ಲ. ಹೆಲ್ತ್ ಚೆಕಪ್‌ಗೆ ಅಂತ ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ವಿ. ಅವರು ಅಲ್ಲೇ ಕುಸಿದು ಬಿದ್ದರು. ನೆಕ್ಸ್ಟ್ ಮುಮೆಂಟ್ ಅವರು ಇಲ್ಲ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅಪ್ಪ ಲವ್ ಯು' ಎಂದು ಹೇಳಿದರು. ಸುಷ್ಮಾ ಅವರ ಮಾತುಗಳು ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.
ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆ ; ಮನಸೋಲದವರಿಲ್ಲ ಇವರ ನಿರೂಪಣಾ ಶೈಲಿಗೆ
ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಶೇರ್ ಮಾಡಿದೆ. ಸುಷ್ಮಾ ಅವರ ಈ ವಿಡಿಯೋಗೆ ಅಭಿಮಾನಿಗಳಿಂದ ದೈರ್ಯ ಕಾಮೆಂಟ್‌ಗಳು ಬಂದಿವೆ. ಅನೇಕರು ಕಾಮೆಂಟ್ ಮಾಡಿ ದಯವಿಟ್ಟು ಅವರಿಗೆ ಒಳ್ಳೆಯ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಸಾಕಷ್ಟು ಮಂದಿ ಸುಷ್ಮಾ ಧೈರ್ಯ ತುಂಬಿ ತುಂಬಾ ಸ್ಟ್ರಾಂಗ್ ಲೇಡಿ ಎಂದು ಹೇಳುತ್ತಿದ್ದಾರೆ.
ಆ್ಯಂಕರ್ ಸುಷ್ಮಾ ರಾವ್ ಸೀರಿಯಲ್‌ಗೆ ರೀ ಎಂಟ್ರಿ! ಶೀಘ್ರದಲ್ಲಿ ಭಾಗ್ಯಲಕ್ಷ್ಮಿ ಆರಂಭ
ನಟಿ ಸುಷ್ಮಾ ರಾವ್ ಭಗೀರಥಿ ಧಾರಾವಾಹಿ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭ ಮಾಡಿದರು. ಬಳಿಕ ಸ್ವಾತಿ ಮುತ್ತು ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ನಟಿಸಿದರು. ನಂತರ ಗುಪ್ತಗಾಮಿ ಧಾರಾವಾಹಿ ಮೂಲಕ ದೊಡ್ಡ ಮಟ್ಟದ ಖ್ಯಾತಿ ಪಡೆದರು. ಇಂದಿಗೂ ಸುಷ್ಮಾ ರಾವ್ ಅವರನ್ನು ಗುಪ್ತಗಾಮಿನಿ ಧಾರಾವಾಹಿ ಮೂಲಕವೇ ಗುರುತಿಸುತ್ತಾರೆ. ಈ ಧಾರಾವಾಹಿ ಬಳಿಕ ನಿರೂಪಣೆಗೆ ಮರಳಿದ ಸುಷ್ಮಾ ನಿರೂಪಣೆ ಕ್ಷೇತ್ರದಲ್ಲೂ ಖ್ಯಾತಿ ಗಳಿಸಿದರು. ಬಳಿಕ ಸೊಸೆ ತಂದ ಸೌಭಾಗ್ಯ ಧಾರಾವಾಹಿ ಮೂಲಕ ಮತ್ತೆ ನಟನೆಗೆ ಮರಳಿದರು. ಬಳಿಕ ಒಂದಿಷ್ಟು ಸಮಯ ಬಣ್ಣದ ಲೋಕದಿಂದ ದೂರ ಉಳಿದಿದ್ದ ಸುಷ್ಮಾ ಜೀನ್ಸ್ ರಿಯಾಲಿಟಿ ಶೋ ಮೂಲಕ ಮತ್ತೆ ಕಾಣಿಸಿಕೊಂಡರು. ನಂತರ ಕೆಲವು ಶೋಗಳ ನಿರೂಪಣೆ ಮಾಡಿದ್ದ ಸುಷ್ಮಾ ಸದ್ಯ ಭಾಗ್ಯಲಕ್ಷ್ಮಿ ಧಾರಾವಾಹಿ ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದಾರೆ.