ನಟಿ ಕವಿತಾ ಗೌಡ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮಗು ಮತ್ತು ಸಸಿಯ ಜೊತೆ ಮನೆಗೆ ಆಗಮಿಸಿದ್ದಾರೆ. ಮಗುವನ್ನು ಮನೆ ತುಂಬಿಸಿಕೊಂಡಿರುವ ಫೋಟೋ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ ಹಾಗೂ ನಟ ಚಂದನ್ ಗೌಡ ಇದೇ 19ರಂದು ಗಂಡು ಮಗುವಿನ ಅಪ್ಪ-ಅಮ್ಮ ಆಗಿದ್ದಾರೆ. ಕವಿತಾ ಗೌಡ ಮುದ್ದಾದ ಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಇತ್ತೀಚಿಗಷ್ಟೇ ನಟಿ, ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು. ಗುಲಾಬಿ ಬಣ್ಣದ ಸೀರೆಯಲ್ಲಿ ಮೈತುಂಬಾ ಆಭರಣ ಧರಿಸಿ ಗೊಂಬೆಯಂತೆ ಕಾಣುತ್ತಿರುವ ಕವಿತಾ ಅವರಿಗೆ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಶುಭ ಹಾರೈಸಿದ್ದರು. ಕವಿತಾ ಅವರಿಗೆ ಹೆಣ್ಣು ಮಗು ಇಲ್ಲವೇ ಅವಳಿ ಮಕ್ಕಳಾಗಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆದರೆ ಅವೆಲ್ಲವೂ ಸುಳ್ಳಾಗಿ ಕವಿತಾಗೆ ಗಂಡು ಮಗುವಾಗಿದೆ. ಇದೀಗ ಕವಿತಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ಬಗ್ಗೆ ಚಂದನ್ ಕುಮಾರ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಕವಿತಾ ಆಸ್ಪತ್ರೆಯಲ್ಲಿ ಇರುವುದನ್ನು ಹಾಗೂ ಪುಟ್ಟ ಕಂದಮ್ಮ ಚಂದನ್ ಅವರ ಕೈ ಹಿಡಿದಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಮಗುವಿನ ಜೊತೆಗೆ ಸಸಿಯೊಂದನ್ನು ಮನೆಗೆ ತರಲಾಗಿದೆ. ಚಂದನ್ ಅವರು ಮಗುವನ್ನು ಹಿಡಿದುಕೊಂಡಿದ್ದರೆ, ಕವಿತಾ ಸಸಿಯನ್ನು ಹಿಡಿದು ಮನೆಗೆ ಬಂದಿದ್ದಾರೆ. ಮಗುವನ್ನು ಮನೆ ತುಂಬಿಸಿಕೊಳ್ಳಲಾಗಿದೆ. ಇದರ ಸಂಪೂರ್ಣ ವಿಡಿಯೋ ಅನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಮಗುವಿನ ಜೊತೆ ಸಸಿ ಕೂಡ ತಂದಿರುವುದಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಮಗು ಹುಟ್ಟಿದಾಗಲೂ ಹೀಗೆ ಒಂದೊಂದು ಗಿಡ ನೆಡವು ಅಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕಿದೆ ಎಂದು ನೆಟ್ಟಿಗರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
undefined
ಎಂಟ್ರಿ ಆಗ್ತಿದ್ದಂಗೆನೇ ಶಿವಣ್ಣನನ್ನು ತಬ್ಬಿಕೊಂಡು ಕಿಸ್ ಮಾಡು ಅಂದ್ಬಿಟ್ರು... ಗಾಬರಿ ಬಿದ್ದೋದೆ: ನಟಿ ಅನು ಪ್ರಭಾಕರ್
ಸದ್ಯ, ಇನ್ನೋರ್ವ ನಟಿ ನೇಹಾ ಗೌಡ ಕೂಡ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಕವಿತಾ (Kavitha Gowda) ಜೊತೆಗಿನ ಫೋಟೊ ಹಂಚಿಕೊಂಡಿರುವ ನೇಹಾ ಗೌಡ, ನನ್ನ ಪ್ರೆಗ್ನೆನ್ಸಿ ಜರ್ನಿಯನ್ನು ನನ್ನ ತಂಗಿ ಜೊತೆ ಸೆಲೆಬ್ರೇಟ್ ಮಾಡಿರೋದಕ್ಕೆ ಖುಷಿಯಾಗಿದ್ದೇನೆ. ಈಗ ಅವಳು ಕೂಡ ಶೀಘ್ರದಲ್ಲೇ ಮಗುವಿನ ತಾಯಿಯಾಗಲಿದ್ದಾಳೆ, ಅವಳಿಗೆ ಸಂತೋಷದ, ಆರೋಗ್ಯಕರ ಮತ್ತು ಸುರಕ್ಷಿತ ಹೆರಿಗೆ ಆಗಲೆಂದು ಹಾರೈಸುತ್ತೇನೆ. ಈ ಹೊಸ ಅಧ್ಯಾಯವು ಅವಳ ಜೀವನದಲ್ಲಿ ಅಪಾರ ಸಂತೋಷ ಮತ್ತು ಖುಷಿಯನ್ನು ತರಲಿ ಎಂದು ಹಾರೈಸಿದ್ದರು.
ಇನ್ನು ನೇಹಾ ಮತ್ತು ಕವಿತಾ ಬಗ್ಗೆ ಕುತೂಹಲಕರ ಮಾಹಿತಿ ಹೇಳಬೇಕು ಅಂದ್ರೆ ಸೀರಿಯಲ್ ನಲ್ಲಿ ಒಟ್ಟಿಗೆ ಇದ್ದರು. ರಿಯಲ್ ಲೈಫಲ್ಲೂ ಇಬ್ಬರ ಜೀವನದಲ್ಲಿ ಎಲ್ಲವೂ ಜೊತೆಯಾಗಿಯೇ ನಡೆಯುತ್ತಿದೆ. ಸೀರಿಯಲ್ ನಲ್ಲಿ ಚಿನ್ನು ಗೊಂಬೆ ಇಬ್ಬರ ಗಂಡನ ಹೆಸರು ಚಂದು ಎಂದಿತ್ತು, ರಿಯಲ್ ಲೈಫಲ್ಲೂ ಇಬ್ಬರ ಗಂಡಂದಿರ ಹೆಸರು ಕೂಡ ಚಂದನ್ ಆಗಿದೆ. ಸಹ ನಟ ಚಂದನ್ ಕುಮಾರ್‌ನನ್ನು ಪ್ರೀತಿಸಿ ಕವಿತಾ ಮದುವೆಯಾಗಿದ್ದರೆ. ಬಾಲ್ಯದ ಗೆಳೆಯ ಚಂದನ್ ಗೌಡ ಅವರನ್ನು ನೇಹಾ ಮದುವೆಯಾಗಿದ್ದಾರೆ. ಈಗ ಒಂದೇ ಸಮಯದಲ್ಲಿ ಇಬ್ಬರೂ ಗರ್ಭಿಣಿಯಾಗಿದ್ದು, ಎಲ್ಲವೂ ಕಾಕತಾಳಿಯ ಆದರೆ ಅದೇನೋ ನಂಟು ಎಂಬಂತಿದೆ. ಲಕ್ಷ್ಮೀ ಬಾರಮ್ಮಾ ಧಾರಾವಾಹಿಯಲ್ಲಿ ನೇಹಾ, ಕವಿತಾ ಹಾಗೂ ಚಂದನ್ ಕುಮಾರ್ ಮೂವರು ಜೊತೆಯಾಗಿ ನಟಿಸಿದ್ದರು. ಗೊಂಬೆ ಪಾತ್ರದಲ್ಲಿ ನೇಹಾ ರಾಮಕೃಷ್ಣ, ಚಿನ್ನು ಪಾತ್ರದಲ್ಲಿ ಕವಿತಾ ಚಂದು ರೋಲ್‌ನಲ್ಲಿ ಚಂದನ್ ನಟಿಸಿದ್ದರು. ಈಗ ನವ ಮಾಸದಲ್ಲಿ ಇರುವ ಇಬ್ಬರಲ್ಲಿ ಕವಿತಾ ಮೊದಲು ತಾಯಿಯಾಗಿದ್ದಾರೆ.
ಯಶ್ ಜೊತೆ ಏನೇನು ಮಾಡ್ಬೇಕೆಂಬ ಮನದಾಸೆ ತೆರೆದಿಟ್ಟ ಬೋಲ್ಡ್ ನಟಿ ಚೈತ್ರಾ ಆಚಾರ್