ನನ್ನ ಮನಸ್ಸಿನಲ್ಲಿದ್ದೀರಿ ನೀವು, ನಟಿ ಅಮೂಲ್ಯ ಮಾತಿಗೆ ಅನುಪಮಾ ಶಾಕ್!

By Roopa Hegde  |  First Published Sep 23, 2024, 12:13 PM IST

ಕನ್ನಡ ಕಿರುತೆರೆಯ ಪ್ರಸಿದ್ಧ ನಟಿಯರಲ್ಲಿ ಅನುಪಮಾ ಗೌಡ, ದಿವ್ಯಾ ಉರುಡುಗ, ಅಮೂಲ್ಯ ಗೌಡ ಸೇರಿದ್ದಾರೆ. ಬೆಸ್ಟ್ ಫ್ರೆಂಡ್ಸ್ ಆಗಿರೋ ಇವರ ತರಲೆ ನೋಡೋಕೆ ಚಂದ. ಇನ್ಸ್ಟಾಗ್ರಾಮ್ ನಲ್ಲಿ ಇವರ ಒಂದು ಫೋಸ್ಟ್ ಫ್ಯಾನ್ಸ್ ಗಮನ ಸೆಳೆದಿದೆ. 


ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada season 9)ರಲ್ಲಿ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಗಳಾಗಿದ್ದ ದಿವ್ಯಾ ಉರುಡುಗ (Divya Uruduga), ಅಮೂಲ್ಯ ಗೌಡ (Amulya Gowda) ಹಾಗೂ ಅನುಪಮಾ ಗೌಡ (Anupama Gowda) ಬೆಸ್ಟ್ ಫ್ರೆಂಡ್ಸ್ ಕೂಡ ಹೌದು. ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಅವರು, ಅಭಿಮಾನಿಗಳ ಮನಸ್ಸು ಕದಿಯೋದ್ರಲ್ಲಿ ಹಿಂದೆ ಬಿದ್ದಿಲ್ಲ. ಈಗಷ್ಟೆ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಫಂಕ್ಷನ್ ಮುಗಿದಿದೆ. ಈ ಕಾರ್ಯಕ್ರಮದಲ್ಲಿ ಈ ಮೂರು ಬೆಡಗಿಯರು ಮಿಂಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಜೋಡಿಯ ವಿಡಿಯೋ ಒಂದು ವೈರಲ್ ಆಗಿದೆ. ಒಂದೇ ಕಡೆ ಸೇರಿ ಈ ಬ್ಯೂಟಿಫುಲ್ ಗರ್ಲ್ಸ್ ವಿಡಿಯೋ ಮಾಡುವ  ಪ್ರಯತ್ನ ಮಾಡ್ತಿದ್ದರು. ಈ ವೇಳೆ ಅಮೂಲ್ಯ ಗೌಡ ಹೇಳಿದ ಮಾತು ಕೇಳಿ ಅನುಪಮ ಗೌಡ ಶಾಕ್ ಆಗ್ತಾರೆ. ಅಮೂಲ್ಯ ಮಾತನ್ನು ಅನುಪಮಾಗೆ ಅರಗಿಸಿಕೊಳ್ಳೋಕೆ ಆಗೋದಿಲ್ಲ. ಅಮೂಲ್ಯ ಮಾತು ಕೇಳಿ ಫ್ಯಾನ್ಸ್ ಕೂಡ ಫುಲ್ ರಿಯಾಕ್ಷನ್ ನೀಡಿದ್ದಾರೆ.

ಅನುಬಂಧ ಅವಾರ್ಡ್ ಗಾಗಿ ಸುಂದರವಾಗಿ ಸಿದ್ಧವಾಗಿದ್ದ ಅಮೂಲ್ಯ, ಅನುಪಮ ಹಾಗೂ ದಿವ್ಯಾ ವಿಡಿಯೋ ಮಾಡ್ತಿರುತ್ತಾರೆ. ಅಮೂಲ್ಯ, ಎಲ್ಲಿ ನೋಡ್ಬೇಕು ಅಂತ ದಿವ್ಯಾ ಅವರನ್ನು ಕೇಳ್ತಾರೆ. ಅದಕ್ಕೆ ದಿವ್ಯಾ, ವಿಡಿಯೋ ಮಾಡ್ತಿದೆನೆ. ಎಲ್ಲಿಯಾದ್ರೂ ನೋಡು ಅಂತಾರೆ. ಇದೇ ವೇಳೆ, ನೀನ್ಯಾಕೆ ನಮ್ಮ ಫೋನ್ ರಿಸೀವ್ ಮಾಡಲ್ಲ ಅಂತ ಅನುಪಮ ಹಾಗೂ ದಿವ್ಯಾ, ಅಮೂಲ್ಯ ಅವರನ್ನು ಕೇಳ್ತಾರೆ. ಆಗ ಅಮೂಲ್ಯ, ನೀವಿಬ್ಬರು ಫೋನ್ ನಲ್ಲಿಲ್ಲ, ನನ್ನ ಮನಸ್ಸಿನಲ್ಲಿದ್ದೀರಿ ಅಂತ ಮುದ್ದಾಗಿ ಹೇಳ್ತಾರೆ. ಅವರ ಮಾತು ಕೇಳಿದ ಅನುಪಮ ಗೌಡ ಶಾಕ್ ರಿಯಾಕ್ಷನ್ ನೀಡ್ತಾರೆ. 

Tap to resize

Latest Videos

undefined

ರಾಧಿಕಾ ಕುಮಾರಸ್ವಾಮಿಗೆ ಹೂವಿನ ಮಳೆ, ತರಾಟೆ ತೆಗೆದ್ಕೊಂಡ ನೆಟ್ಟಿಗರು

ಅನುಪಮಾ ಗೌಡ ಹಾಗೂ ದಿವ್ಯಾ ತಮ್ಮ ಇನ್ಸ್ಟಾಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ದಿವ್ಯಾ ಉರುಡುಗ ತಮ್ಮ ಇನ್ಸ್ಟಾ ಖಾತೆಯಲ್ಲಿ ಇತಿ ನಿಮ್ಮ ಪ್ರೀತಿಯ TUTTU,PUPPY♥,SUU ಎಂದು ಶೀರ್ಷಿಕೆ ಹಾಕಿದ್ದಾರೆ. ಇದಕ್ಕೆ ಅನುಪಮಾ ಗೌಡ ರಿಯಾಕ್ಟ್ ಮಾಡಿದ್ದಾರೆ. ಹಿಂಗೆ ಹಿಂಸೆ ಕೊಟ್ರೆ ಯಾರ್ ಬದುಕ್ತಾರೆ ಹೇಳಿ ಜನರೆ ಅಂತ ಅನುಪಮಾ ಕಮೆಂಟ್ ಮಾಡಿದ್ದಾರೆ. ಅಮೂಲ್ಯ ಗೌಡ, ನಿಜವಾಗ್ಲೂ ಪೂಪಿ, ಸು, ನೀವಿಬ್ಬರೂ ನನ್ನ ಮನಸ್ಸಿನಲ್ಲಿ ಇದ್ದೀರ. ನನ್ನ ನಂಬಿ ಜನರೇ ಅಂತ ಬರೆದಿದ್ದಾರೆ. 

ಅಮೂಲ್ಯ ಗೌಡ ಹೇಳ್ತಿರೋದು ಸತ್ಯ. ನೈಸ್ ಡೈಲಾಗ್, ನೀವು ನಮ್ಮ ಮನಸ್ಸಿನಲ್ಲಿ, ನಾವು ನಿಮ್ಮ ಮನಸ್ಸಿನಲ್ಲಿ ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ನಿಮ್ಮ ಸ್ನೇಹ ಸದಾ ಹೀಗೆ ಇರಲಿ ಅಂತ ಅಭಿಮಾನಿಗಳು ಹರಸಿದ್ದಾರೆ. ಗೊಂಬೆಯನ್ನು ಮಿಸ್ ಮಾಡಿಕೊಂಡು ಅಭಿಮಾನಿಗಳು ಸೂಪರ್ ಗರ್ಲ್ ಗ್ಯಾಂಗ್ ಎಂದಿದ್ದಾರೆ. 

ಅಮೃತಧಾರೆ: ಮಲ್ಲಿ ಸೀಮಂತದಲ್ಲಿ ಮಹಿಮಾ-ಜೀವ ಎಲ್ಲಿ? ವೀಕ್ಷಕರ ಪ್ರಶ್ನೆ!

 ಸ್ಟಾರ ಸುವರ್ಣ ವಾಹಿನಿ ಮೂಲಕ ಕಿರುತೆರೆಗೆ ಕಾಲಿಟ್ಟಿರುವ ಅಮೂಲ್ಯ ಗೌಡ, ಸ್ವಾತಿ, ಪುನರ್ ವಿವಾಹ ಅರಮನೆ ಧಾರಾವಾಹಿಯಲ್ಲಿ ನಟಿಸಿದ್ದರು. ಕಮಲಿ ಸೀರಿಯಲ್ ಮೂಲಕ ಮನೆಮಾತಾದ ಅಮೂಲ್ಯ ಸದ್ಯ ಶ್ರೀಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ಅಮೂಲ್ಯ, ತೆಲುಗು ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ. ಕನ್ನಡ ಹಿರಿ ತೆರೆ ಮತ್ತು ಕಿರಿತೆರೆಯಲ್ಲಿ ಬ್ಯೂಸಿಯಾಗಿರುವ ನಟಿ ದಿವ್ಯಾ ಉರುಡುಗ, ಸಾಕಷ್ಟು ಧಾರಾವಾಹಿ ಮತ್ತು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಅವರ  ನಿನಗಾಗಿ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಇನ್ನು ಅಕ್ಕ ಎಂದೇ ಪ್ರಸಿದ್ಧಿ ಪಡೆದಿರುವ ಅನುಪಮಾ ಗೌಡ, ನಿರೂಪಣೆಯಲ್ಲಿ ಬ್ಯೂಸಿ. ಅಪ್ಸರೆಯಂತೆ ರೆಡಿಯಾಗುವ ಅನುಪಮಾ ಗೌಡ ಅವರಿಗೆ ಅನುಬಂಧ ಅವಾರ್ಡ್ ನಲ್ಲಿ ಉಪೇಂದ್ರ ಅವರಿಂದ ಮೆಚ್ಚುಗೆ ಸಿಕ್ಕಿದೆ. ಒಂದಾದ್ಮೇಲೆ ಒಂದು ರಿಯಾಲಿಟಿ ಶೋ ಆಂಕರಿಂಗ್ ನಲ್ಲಿ ಬ್ಯುಸಿಯಾಗಿರುವ ಅನುಪಮಾ ಗೌಡ, ತಮ್ಮ ಬ್ಲಾಗ್ ಮೂಲಕ ಲಕ್ಷಾಂತರ ಮಂದಿಯನ್ನು ಸೆಳೆಯುತ್ತಿದ್ದಾರೆ. 

 
 
 
 
 
 
 
 
 
 
 
 
 
 
 

A post shared by DU✨ (@divya_uruduga)

click me!