ಸಮವಸ್ತ್ರ ತೊಟ್ಟು ಶಾಲಾ ಮಕ್ಕಳಾದ ಸೀತಾ-ರಾಮ: ಸಿಹಿ ಪಾತ್ರ ಚೇಂಜ್​ ಮಾಡಲು ನೆಟ್ಟಿಗರ ಒತ್ತಾಯ!

By Suchethana D  |  First Published Sep 23, 2024, 12:45 PM IST

ಮಗಳನ್ನು ಖುಷಿಯಾಗಿಡಲು ಸೀತಾ ಶಾಲಾ ಮಕ್ಕಳಂತೆ ಸಮವಸ್ತ್ರ ತೊಟ್ಟಿದ್ದಾಳೆ. ಅವಳಿಗೆ ಸಿಹಿ ಎಲ್ಲಿ ತನ್ನ ಕೈತಪ್ಪಿ ಹೋಗುತ್ತಾಳೋ ಎನ್ನುವ ಭಯ. ಹೀಗಿರುವಾಗ ಸಿಹಿ ಕೊಟ್ಟ ಶಾಕ್​ಗೆ ಸೀತಾ ತತ್ತರಿಸಿ ಹೋಗಿದ್ದಾಳೆ. ಏನಿದು ವಿಷಯ?
 


ಸಿಹಿ ಎಲ್ಲಿ ತನ್ನ ಕೈತಪ್ಪಿ ಹೋಗುತ್ತಾಳೋ ಎನ್ನುವ ಚಿಂತೆಯಲ್ಲಿದ್ದಾಳೆ ಸೀತಮ್ಮಾ. ಯಾರ ಬಳಿಯೂ ಸತ್ಯ ಹೇಳಿಕೊಳ್ಳಲಾಗದ ಸ್ಥಿತಿ. ಕಾನೂನಿನ ಪ್ರಕಾರ ಈಕೆ ಅಮ್ಮ ಅಲ್ಲ. ಅದೇ ಇನ್ನೊಂದೆಡೆ ಡಾ.ಮೇಘಶ್ಯಾಮನ ಮಗುವನ್ನು ಹುಡುಕಿಕೊಡುವ ಪಣ ತೊಟ್ಟಿದ್ದಾನೆ ರಾಮ್​. ಆದ್ದರಿಂದ ರಾಮ್​ಗೂ ಸತ್ಯ ಹೇಳುವಂತಿಲ್ಲ ಸೀತಾ. ಇದೇ ಕಾರಣಕ್ಕೆ ಅವಳಿಗೆ ಸಿಹಿ ಎಲ್ಲಿ ದೂರವಾಗುತ್ತಾಳೋ ಎನ್ನುವ ಭಯ ಕಾಡುತ್ತಿದೆ. ಏಕೆಂದರೆ, ವರ್ಷದಿಂದ ಕಾಯುತ್ತಿದ್ದ ಸಿಹಿಯ ಜನ್ಮರಹಸ್ಯ ಕೊನೆಗೂ ತಿಳಿದುಬಿಟ್ಟಿದೆ. ಮೇಘಶ್ಯಾಮ್​ ಸಿಹಿಯ ಅಪ್ಪ ಎನ್ನುವ ವಿಷಯ ರಿವೀಲ್​ ಆಗಿದೆ. ಸಿಹಿ ಸೀತಾಳ ಮಗಳು ಅಲ್ಲ ಎನ್ನುವುದು ಇದಾಗಲೇ ತಿಳಿದಿದ್ದರೂ, ಆಕೆ ಬಾಡಿಗೆ ತಾಯಿ, ಜನ್ಮ ಕೊಟ್ಟ ತಾಯಿ. ಆದರೆ ಕಾನೂನಿನ ಪ್ರಕಾರ ತಾಯಿಯಲ್ಲ. ಅದೇ ಇನ್ನೊಂದೆಡೆ,  ಡಾ.ಮೇಘಶ್ಯಾಮಗೆ ತಮ್ಮ ಮಗಳು ಬದುಕಿರುವ ಸತ್ಯ ತಿಳಿದಿದೆ. ಸಿಹಿಯ ಮೇಲೆ ಆತನಿಗೆ ಇನ್ನಿಲ್ಲದ ಪ್ರೀತಿ. ಆದರೆ ಅವಳೇ ತನ್ನ ಮಗಳು ಎನ್ನುವ ಸತ್ಯ ಗೊತ್ತಿಲ್ಲ. ಆದರೆ ಸೀತಾಳಿಗೆ ವಿಷಯ ಗೊತ್ತಾಗಿ ಕಂಗಾಲಾಗಿ ಹೋಗಿದ್ದಾಳೆ.  ಇದರ ನಡುವೆಯೇ ಶಾಲಿನಿ ನಾವು ಬಾಡಿಗೆ ತಾಯಿಯ ಮೋಸಕ್ಕೆ ಒಳಗಾಗಿ ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಭಾರ್ಗವಿ   ಮುಂದೆ ಹೇಳಿದ್ದಾಳೆ. ಅವಳು ಸೀತಾಳ ಮುಖದಲ್ಲಿ ಆಗುತ್ತಿದ್ದ ಬದಲಾವಣೆ ಗಮನಿಸಿ, ಸಿಹಿಯೇ ಅವರ ಮಗು ಎನ್ನುವ ಅನುಮಾನ ಶುರುವಾಗಿದೆ. 

ಇದೀಗ ಸಿಹಿಗಾಗಿ ಸೀತಾ ಮತ್ತು ರಾಮ್​ ಶಾಲಾ  ಮಕ್ಕಳಾಗಿದ್ದಾರೆ. ಇಬ್ಬರೂ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾ ಬೋರ್ಡ್​ ಮೇಲೆ ಮಗುವಿನ ಚಿತ್ರ ಬಿಡಿಸಿದ್ದಾಳೆ. ಇದನ್ನು ನೋಡಿ ಇವಳು ಯಾರು ಎಂದು ಸಿಹಿ ಕೇಳಿದ್ದಾಳೆ. ಇವಳು ನನ್ನ ಮಗಳು ಎಂದಿದ್ದಾಳೆ ಸೀತಾ. ಆಗ ಸಿಹಿ, ಸೀತಾ ಸಿಹಿ ನಿನ್ನ ಮಗಳಲ್ಲ ಎಂದು ಆ ಚಿತ್ರವನ್ನು ಅಳಿಸಿ ಹಾಕಿದ್ದಾಳೆ ಸಿಹಿ. ಇದನ್ನು ನೋಡಿ ಸೀತಾಗೆ ನೆಲವೇ ಕುಸಿದ ಅನುಭವವಾಗಿದೆ. ಇದಾಗಲೇ ಹಲವು ಬಾರಿ ಸೀತಾಳಿಗೆ ಸಿಹಿ ಕೈತಪ್ಪಿ ಹೋಗುವ ರೀತಿ ಕನಸು ಕಂಡಿದೆ. ಇದು ಕೂಡ ಕನಸೋ, ನನಸೋ ಗೊತ್ತಿಲ್ಲ. ಆದರೂ ಸಿಹಿಯ ಕ್ಯಾರೆಕ್ಟರ್​ ಬಗ್ಗೆ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ದಯವಿಟ್ಟು ಸಿಹಿಯ ಕ್ಯಾರೆಕ್ಟರ್​ ಬದಲು ಮಾಡಿ. ಚಿಕ್ಕ ಮಗುವಿನ ಕೈಯಲ್ಲಿ ಇಂಥ ಅಸಭ್ಯ ಡೈಲಾಗ್​ ಹೇಳಿಸಬೇಡಿ. ಒಳ್ಳೆಯ ಸೀರಿಯಲ್​ ಹಾಳು ಮಾಡಬೇಡಿ ಎನ್ನುತ್ತಿದ್ದಾರೆ ಪ್ರೇಕ್ಷಕರು.

Tap to resize

Latest Videos

ಬೆಡ್​ರೂಮ್​ನಲ್ಲಿ 3 ಸೊಳ್ಳೆಯಲ್ಲಿ ಒಂದು ಮಲಗಿರುತ್ತೆ, ಎರಡು ಎಚ್ಚರವಿರುತ್ತೆ, ಯಾಕೆ? ಸಿಹಿ ಪ್ರಶ್ನೆಗೆ ಉತ್ತರ ಗೊತ್ತಾ?


ಏಕೆಂದೆಡೆ, ಒಂದೆಡೆ  ಸೀತಾ ಮತ್ತು ಸಿಹಿಯ ಸಂಬಂಧದ ಬಗ್ಗೆ ಇದೀಗ ಸೀರಿಯಲ್​ ಪ್ರೇಮಿಗಳಲ್ಲಿ ಆತಂಕ ಶುರುವಾಗಿದೆ. ಅದೇ ಇನ್ನೊಂದೆಡೆ ಸಿಹಿ ಮೇಘಶ್ಯಾಮ್​  ಮತ್ತು ಶಾಲಿನಿಗೆ ಹತ್ತಿರವಾಗುತ್ತಿದ್ದಾಳೆ. ಸೀತಾ ಮತ್ತು ಸಿಹಿಗೂ ಇರುವ ಸಂಬಂಧ ತಾಯಿ-ಮಗಳದ್ದೇ  ಆಗಿದ್ದರೂ ಅವರು ಕಾನೂನಿನ ದೃಷ್ಟಿಯಲ್ಲಿ ತಾಯಿ-ಮಗಳು ಅಲ್ಲ. ಸೀತಾ ತನ್ನ ಗರ್ಭದಲ್ಲಿ ಈ ಮಗುವನ್ನು ಇಟ್ಟು ಒಂಬತ್ತು ತಿಂಗಳು ಹೊತ್ತು ಹೆತ್ತಿದ್ದರೂ ಆಕೆ ಬಾಡಿಗೆ ತಾಯಿ ಮಾತ್ರ!  ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುವ ಹಾಗೆ ಸಿಹಿ ಮತ್ತು ಡಾ.ಮೇಘಶ್ಯಾಮ್​ ನಡುವೆ ಪ್ರೀತಿ ಹೆಚ್ಚಾಗುತ್ತಿದೆ. ಮೇಘಶ್ಯಾಮ್​ಗೂ ಸಿಹಿಯನ್ನು ಘಳಿಗೆ ಬಿಟ್ಟಿರಲಾಗದ ಸ್ಥಿತಿ. ಶಾಲಿನಿಗೆ ಸಿಹಿಯನ್ನು ಕಂಡರೆ ಆಗದಿದ್ದರೂ, ಅವಳು ತೋರುವ ಪ್ರೀತಿಗೆ ಒಮ್ಮೊಮ್ಮೆ ಸೋತು ಹೋಗಿದ್ದು ಇದೆ. ಅನಿವಾರ್ಯವಾಗಿ ಅವರಿಬ್ಬರಿಗೂ ಸೀತಾಳ ಮನೆಯಲ್ಲಿ ಉಳಿದುಕೊಳ್ಳುವ ಸ್ಥಿತಿ ಬಂದಿದೆ. ಅಪ್ಪ ಮತ್ತು ಮಗಳ ನಡುವೆ ಬಾಂಡಿಂಗ್​ ಹೆಚ್ಚಾಗುತ್ತಿದೆ. ಮೇಘಶ್ಯಾಮ್​  ಅಂತೂ ಸಿಹಿಯನ್ನು ತನ್ನ ಮಗಳಂತೆಯೇ ನೋಡುತ್ತಿದ್ದಾನೆ. 
  
ಅದೆ ಇನ್ನೊಂದೆಡೆ, ಭಾರ್ಗವಿ ಡಾ.ವಸಂತ ಲಕ್ಷ್ಮಿಯ ಬಳಿ ಹೋಗಿ ನಿಜವನ್ನು ತಿಳಿಯಲು ಸಂಚು ರೂಪಿಸಿದ್ದಾರೆ. ಡಾ.ಮೇಘಶ್ಯಾಮ್​ ಮತ್ತು ಶಾಲಿನಿ ದಂಪತಿಯ ವಿಷಯ ಕೇಳಲು ಶುರು ಮಾಡಿದ್ದಾಳೆ. ಇದನ್ನು ಕೇಳಿ ವಸಂತಲಕ್ಷ್ಮಿಗೆ ಶಾಕ್​ ಆಗಿದೆ. ಏಕೆಂದರೆ ಸೀತಾಳ ಸತ್ಯ ಅವಳಿಗೆ ಗೊತ್ತಿದೆ. ಈಗ ಭಾರ್ಗವಿ ಈ ವಿಷಯವನ್ನು ಕೆದಕುತ್ತಿರುವ ಹಿಂದಿರುವ ಉದ್ದೇಶ ಏನು ಎಂಬ ಬಗ್ಗೆ ಅವರಿಗೆ ಆತಂಕ ಎದುರಾಗಿದೆ. ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ. 

ಸೀತಾರಾಮ ಸಿಹಿಯಿಂದ ಇಂಥ ಡಾನ್ಸಾ? ಏನು ಸಂದೇಶ ಕೊಡ ಹೊರಟಿರುವಿರಿ- ವಿಡಿಯೋ ನೋಡಿ ನೆಟ್ಟಿಗರು ಗರಂ!
 

click me!