ವರ್ಕೌಟ್ ಮಾಡುವಾಗ ಹೃದಯಾಘಾತ; 'ಕಸೌಟಿ ಜಿಂದಗಿ ಕಿ' ಖ್ಯಾತಿಯ ನಟ ಸಿದ್ದಾಂತ್ ನಿಧನ

Published : Nov 11, 2022, 04:36 PM ISTUpdated : Nov 11, 2022, 04:40 PM IST
ವರ್ಕೌಟ್ ಮಾಡುವಾಗ ಹೃದಯಾಘಾತ; 'ಕಸೌಟಿ ಜಿಂದಗಿ ಕಿ' ಖ್ಯಾತಿಯ ನಟ ಸಿದ್ದಾಂತ್ ನಿಧನ

ಸಾರಾಂಶ

ಹಿಂದಿ ಕಿರುತೆರೆಯ ಖ್ಯಾತ ನಟ ಸಿದ್ದಾಂತ್ ಸೂರ್ಯವಂಶಿ ನಿಧನ ಹೊಂದಿದ್ದಾರೆ. ಇಂದು (ನವೆಂಬರ್ 11) ಬೆಳಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೇಳೆ ಹೃದಯಾಘಾತ ಸಂಭವಿಸಿ ನಟ ಸಿದ್ಧಾಂತ್ ಕೊನೆಯುಸಿರೆಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. 

ಹಿಂದಿ ಕಿರುತೆರೆಯ ಖ್ಯಾತ ನಟ ಸಿದ್ದಾಂತ್ ಸೂರ್ಯವಂಶಿ ನಿಧನ ಹೊಂದಿದ್ದಾರೆ. ಇಂದು (ನವೆಂಬರ್ 11) ಬೆಳಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೇಳೆ ಹೃದಯಾಘಾತ ಸಂಭವಿಸಿ ನಟ ಸಿದ್ಧಾಂತ್ ಕೊನೆಯುಸಿರೆಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಿಂದಿ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ನಟ ಸಿದ್ದಾಂತ್. ಅನೇಕ ಪ್ರಸಿದ್ಧ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 46 ವರ್ಷದ ನಟ ಸಿದ್ಧಾಂತ್ ಪತ್ನಿ ಮತ್ತು ಇಬ್ಬರೂ ಮಕ್ಕಳನ್ನು ಅಗಲಿದ್ದಾರೆ. 

ಸಿದ್ದಾಂತ್ ಅವರ ಹಠಾತ್ ಅಗಲಿಕೆ ಅವರ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ಶಾಕ್ ನೀಡಿದೆ. ಅಭಿಮಾನಿಗಳು ಮತ್ತು ಕಿರುತೆರೆಯ ಗಣ್ಯರು ಸಿದ್ದಾಂತ್ ಆತ್ಮಕ್ಕೆ ಕೋರಿ ಪೋಸ್ಟ್ ಹಾಕುತ್ತಿದ್ದಾರೆ. ಸಿದ್ಧಾಂತ್ ಬೆಳಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಾಗ ದಿಢೀರ್ ಕುಸಿದು ಬಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಿದ್ದಾಂತ್ ಸ್ನೇಹಿತ ಹಾಗೂ ನಟ ಜಯ್ ಭಾನುಶಾಲಿ ಖಚಿತ ಪಡಿಸಿದ್ದಾರೆ. ಸಿದ್ದಾಂತ್ ಫೋಟೋ ಶೇರ್ ಮಾಡಿ ಸಂತಾಪ ಸೂಚಿಸಿದ್ದಾರೆ. 

ಫಲಿಸದ ಚಿಕಿತ್ಸೆ; ಹಿರಿಯ ನಟ ಲೋಹಿತಾಶ್ವ ವಿಧಿವಶ

ಸಿದ್ಧಾಂತ್ ಅವರ ಪತ್ನಿ ಆಲಿಶಾ ರಾವುತ್ ಖ್ಯಾತ ಮಾಡೆಲ್ ಆಗಿದ್ದಾರೆ. ಅಂದಹಾಗೆ ಸಿದ್ಧಾಂತ್ ಕೂಡ ಮಾಡೆಲ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು. ಬಳಿಕ ಕುಸುಮ್ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. 'ಕಸೌಟಿ ಜಿಂದಗಿ ಕಿ' ಧಾರಾವಾಹಿ ಸಿದ್ದಾಂತ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಇನ್ನು ಉಳಿದಂತೆ ಸಿದ್ದಾಂತ್ ಕ್ಯೂನ್ ರಿಶ್ಟನ್ ನಲ್ಲಿ ಮೇ ಕಟ್ಟಿ ಬಟ್ಟಿ, ಮಮತಾ ವಾರಿಸ್, ಸುಫಿಯಾನ್ ಪ್ಯಾರ್ ಮೇರಾ, ಸೂರ್ಯಪುತ್ರ ಕರ್ಣ ಸೇರಿದಂತೆ ಇನ್ನು ಅನೇಕ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.   

Syed Ashraf Death ಹೃದಯಾಘಾತದಿಂದ ಕಿರುತೆರೆ ಖ್ಯಾತ ನಿರ್ದೇಶಕ ಸಯ್ಯದ್ ಅಶ್ರಫ್‌ ಇನ್ನಿಲ್ಲ

ಅಂದಹಾಗೆ ಸಿದ್ದಾಂತ್ ಮೂಲ ಹೆಸರು ಆನಂದ್ ವೀರ್ ಸೂರ್ಯವಂಶಿ. ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬಳಿಕ ಸಿದ್ದಾಂತ್ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರನ್ನು ಸಿದ್ದಾಂತ್ ಎಂದು ಬದಲಾಯಿಸಿಕೊಂಡರು. 2001ರಲ್ಲಿ ಸಿದ್ದಾಂತ್ ಸೂರ್ಯವಂಶಿ ಇರಾ ಸೂರ್ಯವಂಶಿ ಅವರನ್ನು ಮದುವೆಯಾದರು. 15 ವರ್ಷಗಳ ಕಾಲ ಸಿದ್ದಾಂತ್ ಮತ್ತು ಇರಾ ಇಬ್ಬರೂ ಸಂಸಾರ ಮಾಡಿದರು. ಆದರೆ 2015ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರ ದೂರ ಆದರು. ಬಳಿಕ 2017ರಲ್ಲಿ ಸೂಪರ್ ಮಾಡೆಲ್ ಆಲಿಶಾ ರಾವುತ್ ಅವರನ್ನು ಮದುವೆಯಾದರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?