ಕುಟುಂಬಕ್ಕೆ ಮುದ್ದು ಲಕ್ಷ್ಮಿಯನ್ನು ಬರ ಮಾಡಿಕೊಂಡ ಕಿರುತೆರೆ ನಟಿ ಮಾನಸ ಜೋಶಿ ಮತ್ತು ಪ್ರಸಾದ್ ದಂಪತಿ...
ಕನ್ನಡ ಕಿರುತೆರೆ ಜನಪ್ರಿಯ ಧಾರಾವಾಹಿಗಳಾದ ಮಹಾದೇವಿ ಮತ್ತು ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಅಭಿನಯಿಸಿರುವ ಮಾನಸ ಜೋಶಿ ಅಕ್ಟೋಬರ್ 10ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳ ಜೊತೆ ಸಿಹಿ ವಿಚಾರ ಹಂಚಿಕೊಂಡಿದ್ದಾರೆ. ಕಾಮೆಂಟ್ಸ್‌ಗಳಲ್ಲಿ ಶುಭಾಶಯಗಳು ಹರಿದು ಬರುತ್ತಿದೆ.
'ನಗು ಮತ್ತು ಕರ್ಲಿ ಕೂದಲು, ರಿಬ್ಬನ್ ಮತ್ತು ಬೋ, ಅಡಿಯಿಂದ ಮುಡಿವರೆಗೆ ಆಕೆ ಎಷ್ಟು ಮುದ್ದಾಗಿದ್ದಾರಳೆ...ಹೆಣ್ಣು ಮಗುವಿಗೆ ಹೆಮ್ಮೆಯ ಪೋಷಕರು' ಎಂದು ಮಾನಸ ಬರೆದುಕೊಂಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಈ ಪ್ರೆಗ್ನೆನ್ಸಿ ಜರ್ನಿಯನ್ನು ಪೋಸ್ಟ್‌ಗಳ ಮೂಲಕ ತಮ್ಮ ಫಾಲೋವರ್ಸ್ ಜೊತೆ ಮಾನಸ ಹಂಚಿಕೊಂಡಿದ್ದಾರೆ, ಕಾಮೆಂಟ್ಸ್‌ನಲ್ಲಿ ಜನ ಸಾಮಾನ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
undefined
ಪ್ರೆಗ್ನೆನ್ಸಿ ಜರ್ನಿ:
'ಯಾವುದೇ ಫಿಲ್ಟರ್ ಹಾಕದೆ ನಿಮ್ಮ ಜೊತೆ ಫೋಟೋ ಹಂಚಿಕೊಳ್ಳುತ್ತಿರುವೆ. ನಿಜಕ್ಕೂ ಇದೊಂದು ಅದ್ಭುತ ಜರ್ನಿ. ನನಗೆ ಕಾಣಿಸಿಕೊಂಡ ಮೊದಲ ಲಕ್ಷಣವೇ ವಾಕರಿಕೆ. ಹೆರಿಗೆ ಆಗುವ ಕ್ಷಣದವರೆಗೂ ವಾಕರಿಕೆ ಇತ್ತು. ಪ್ರತಿಯೊಬ್ಬರ ಜರ್ನಿ ಪ್ರತಿಯೊಬ್ಬರ ದೇಹ ತುಂಬಾನೇ ಡಿಫರೆಂಟ್ ಆದರೆ ನನ್ನದು ಕೊಂಚ ಕಷ್ಟಕರವಾಗಿತ್ತು.ಇಷ್ಟೊಂದು ಪೋಸ್ಟ್ ಹಾಕುತ್ತಿರುವುದು ಒಂದೇ ಕಾರಣಕ್ಕೆ ಜನರಿಗೆ ಈ ಜರ್ನಿ ಹೇಗಿದೆ ಎಂದು ತೋರಿಸಲು ಯಾವುದೇ ಸುಳ್ಳು ಹೇಳದೆ.' ಎಂದು ಮಾನಸ ಬರೆದುಕೊಂಡಿದ್ದಾರೆ.
'ಪ್ರೆಗ್ನೆನ್ಸಿ ಸಮಯದಲ್ಲಿ ಬಯಕೆಗಳ, ಊಟ ಮತ್ತು ದೇಹದ ತೂಕ ಹೆಚ್ಚಾಗುವುದುರ ಬಗ್ಗೆ ಜನರು ಮಾತನಾಡುವುದನ್ನು ಕೇಳಿಸಿಕೊಂಡಿರುವೆ. ಮೊದಲ ಟ್ರೈಮಿಸ್ಟರ್‌ನಲ್ಲಿ ನಾನು 4 ಕೆಜಿ ಕಳೆದುಕೊಂಡಿರುವೆ. ನನಗೆ ಇಷ್ಟವಿರುವ ಯಾವ ಪದಾರ್ಥವನ್ನು 9 ತಿಂಗಳು ತುಂಬುವವರೆಗೂ ತಿನ್ನಲು ಆಗುತ್ತಿರಲಿಲ್ಲ. ನನಗೆ ಯಾವುದೇ ರೀತಿಯ ಬಯಕೆಗಳು ಇರಲಿಲ್ಲ. ನೀರು ಕೂಡ ಸಣ್ಣ ಸ್ಪೂನ್‌ನಲ್ಲಿ ಕುಡಿಯುತ್ತಿದ್ದೆ ಇಲ್ಲ ಅಂದ್ರೆ ಅದೂ ಇಲ್ಲ. ಆದರೆ ಸುಸ್ತು ಹೆಚ್ಚಿಗೆ ಇರುತ್ತಿತ್ತು' ಎಂದು ಹೇಳಿದ್ದಾರೆ ಮಾನಸ.
ಒಂದೊಳ್ಳೆ ಕಾರಣಕ್ಕೆ ಕೂದಲು ದಾನ ಮಾಡಿದ ಗರ್ಭಿಣಿ ನಟಿ ಮಾನಸಾ ಜೋಶಿ
'ಪ್ರೆಗ್ನೆನ್ಸಿ ಜರ್ನಿಯಲ್ಲಿ ತಾಯಿ ಮಾತ್ರವಲ್ಲ ತಂದೆ ಕೂಡ ಪ್ರಯಾಣ ಮಾಡಬೇಕು ಅನ್ನೋದನ್ನು ಅದೆಷ್ಟೋ ಮಂದಿ ಬರೆತು ಬಿಟ್ಟಿದ್ದಾರೆ. ನನ್ನ ಪತಿಗಿಂತ ಒಳ್ಳೆ ಪಾರ್ಟನರ್‌ನ ಆ ದೇವರ ಬಳಿ ಕೇಳಲು ಆಗುತ್ತಿರಲಿಲ್ಲ. ನನ್ನ ಕಷ್ಟದ ಸಮಯದಲ್ಲಿ ನನ್ನ ಬೆನ್ನೆಲುಬಾಗಿ ನಿಂತಿದ್ದರು. ಬೆಟ್ಟದಷ್ಟು ತಾಳ್ಮೆ ಸಮುದ್ರದಷ್ಟು ಪ್ರೀತಿ ಕೊಡುವ ವ್ಯಕ್ತಿ. ಅಡುಗೆ ಮಾಡುತ್ತಿದ್ದರು, ನಿದ್ರೆ ಮಾಡದೆ ಕಾಯುತ್ತಿದ್ದರು, ಕೆಲಸ ಮತ್ತು ನನ್ನನ್ನು ಮ್ಯಾನೇಜ್ ಮಾಡುತ್ತಿದ್ದರು...ಯಾವ ಕ್ಷಣವೂ ಆಗುವುದಿಲ್ಲ ಎಂದು ನನ್ನನ್ನು ಬಿಟ್ಟು ಕೊಡಲಿಲ್ಲ' ಎಂದಿದ್ದಾರೆ ಮಾನಸ.
'ಮೂಡ್ ಸ್ವಿಂಗ್ಸ್ ಎಲ್ಲಾ ತುಂಬಾನೇ ಸತ್ಯ. ಗರ್ಭಿಣಿ ಎಂದು ತಿಳಿದ ಮೊದಲ ದಿನದಿಂದಲ್ಲೂ ಊಟ , ನಿದ್ರೆ, ನಡೆಯುವುದು ಹೇಗೆ ಒಂದೊಂದೇ ಚಾಲೆಂಜ್ ಆಗಿತ್ತು ಹಾಗೆ ನನ್ನ ಮೂಡ್ ಸ್ವಿಂಗ್ ಕೂಡ ಒಂದು ಚಾಲೆಂಜ್ ಆಗಿತ್ತು. ಭರತನಾಟ್ಯದಲ್ಲಿ ನವರಸ ಮಾಡುವುದಕ್ಕೆ ಇನ್ನೆರಡಲು ತಿಂಗಳು ನನಗೆ ಯಾವುದೇ ತರಬೇತಿ ಬೇಡ ಅನಿಸುತ್ತದೆ. ಒಂದು ಕ್ಷಣದಲ್ಲಿ ಒಂದು ಭಾವನೆಯಿಂದ ಮತ್ತೊಂದು ಭಾವನೆಗೆ ಜಂಪ್ ಆಗುತ್ತಿದ್ದೆ. ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ಒಪ್ಪಿಕೊಳ್ಳುವುದು ಮುಖ್ಯ. ದಿನಕ್ಕೊಂದು ಬದಲಾವಣೆಗಳನ್ನು ಗಮನಕ್ಕೆ ಬರುತ್ತದೆ ಅದರಲ್ಲೂ ದೇಹದ ಮೇಲೆ ಮಾರ್ಕ್ ಮತ್ತು ವಿಚಿತ್ರ ಭಾವನೆ. ಕನ್ನಡಿ ಮುಂದೆ ನಿಂತುಕೊಂಡರೆ ನಾವು ನಮ್ಮಂತೆ ಕಾಣಿಸುವುದಿಲ್ಲ' ಎಂದು ಮಾನಸ ಹೇಳಿದ್ದಾರೆ.