ಬಿಗ್ ಬಾಸ್ ಮನೆಯಲ್ಲಿ ಇನ್ಮುಂದೆ ಕಾರ್ತಿಕ್ ಹವಾ ಶುರು; ಸಂಗೀತಾಗೆ ಖುಷಿ, ಹಲವರಿಗೆ ಅಸಮಾಧಾನ!

Published : Nov 18, 2023, 06:31 PM ISTUpdated : Nov 18, 2023, 06:34 PM IST
ಬಿಗ್ ಬಾಸ್ ಮನೆಯಲ್ಲಿ ಇನ್ಮುಂದೆ ಕಾರ್ತಿಕ್ ಹವಾ ಶುರು; ಸಂಗೀತಾಗೆ ಖುಷಿ, ಹಲವರಿಗೆ ಅಸಮಾಧಾನ!

ಸಾರಾಂಶ

ಕಾರ್ತಿಕ್ ಮನೆಯ ಕ್ಯಾಪ್ಟನ್ ಆಗುತ್ತಿದ್ದಂತೆ ಬಿಗ್ ಬಾಸ್ ಮನೆಯ ಸದಸ್ಯರೆಲ್ಲರ ಮನೋಸ್ಥಿತಿ ಮತ್ತು ವರ್ತನೆ ಬದಲಾಗಿದೆ. ಹಲವರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ತನಿಷಾ ಸದ್ಯ ಜೈಲುಶಿಕ್ಷೆಗೆ ಗುರಿಯಾಗಿದ್ದು, ಕಾರ್ತಿಕ್ ಮಹೇಶ್ ಗೆಲುವಿಗೆ, ಕ್ಯಾಪ್ಟನ್ಸಿಗೆ ಯಾವ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

ಬಿಗ್ ಬಾಸ್ ಮನೆಯ ಹೊಸ ಕ್ಯಾಪ್ಟನ್ ಆಗಿ ನಟ, ಹಾಲಿ ಬಿಗ್ ಬಾಸ್ ಸ್ಪರ್ಧಿ ಕಾರ್ತಿಕ್ ಮಹೇಶ್ ಆಯ್ಕೆಯಾಗಿದ್ದಾರೆ. ಇಲ್ಲಿಯವರೆಗೆ ಕ್ಯಾಪ್ಟನ್‌ ಆಗಿರದ ಕಾರ್ತಿಕ್ ಅವರು ಇದೀಗ ಮನೆಯ ಯಜಮಾನರಾಗಿ ಆಯ್ಕೆಯಾಗಿದ್ದು, ಮನೆಯ ಉಸ್ತುವಾರಿ ನೋಡಿಕೊಳ್ಳಬೇಕಿದೆ. ಮನೆಯಲ್ಲಿನ ಡೇ ಟುಡೇ ಟಾಸ್ಕ್‌ಗಳು ಹಾಗೂ ಮನೆಯ ಸದಸ್ಯರು ಮಾಡಬೇಕಾದ ಕೆಲಸದ ಜವಾಬ್ದಾರಿ ಕೂಡ ಕಾರ್ತಿಕ್ ಮಹೇಶ್ ಹೆಗಲಿಗೇರಿದೆ ಎನ್ನಬಹುದು. 

ವಿನಯ್ ಕ್ಯಾಪ್ಟನ್ಸಿ ಮುಗಿದು ಇದೀಗ ಕಾರ್ತಿಕ್ ಆಟ ಶುರುವಾಗಿದೆ. ನಮ್ರತಾ ಗೌಡ, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ಮುಂತಾದವರು ವೋಟ್ ಮಾಡಿ ಕ್ಯಾಪ್ಟನ್ ಆಗಿದ್ದಾರೆ ಕಾರ್ತಿಕ್. ಬಿಗ್ ಬಾಸ್ ಅನೌನ್ಸ್ ಮಾಡುವ ಮೂಲಕ ಕಾರ್ತಿಕ್ ಮಹೇಶ್ ಕ್ಯಾಪ್ಟನ್‌ಶಿಪ್ ಕನ್ಫರ್ಮ್‌ ಆಗಿದೆ. ಕಾರ್ತಿಕ್ ಕ್ಯಾಪ್ಟನ್ ಆಗುತ್ತಿದ್ದಂತೆ ಅತ್ಯಂತ ಖುಷಿ ಆಗಿದ್ದು ಸಂಗೀತಾ ಶೃಂಗೇರಿ ಅವರಿಗೆ ಎಂಬುದು ಅವರ ರಿಯಾಕ್ಷನ್ಸ್ ಹಾಗೂ ರೆಸ್ಪಾನ್ಸ್ ಮೂಲಕವೇ ವ್ಯಕ್ತವಾಗಿದೆ. ಆದರೆ, ಸದ್ಯಕ್ಕೆ ವಿನಯ್ ಪ್ರತಿಕ್ರಿಯೆ ಏನು ಎಂಬುದು ತಿಳಿಯುತ್ತಿಲ್ಲ.

ಅಪ್ಪನ ನಂಬರ್ ಬ್ಲಾಕ್ ಮಾಡಿದ್ದ ಡ್ರೋನ್ ಪ್ರತಾಪ್, ಈಗ ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತರು!

ಕಾರ್ತಿಕ್ ಮನೆಯ ಕ್ಯಾಪ್ಟನ್ ಆಗುತ್ತಿದ್ದಂತೆ ಬಿಗ್ ಬಾಸ್ ಮನೆಯ ಸದಸ್ಯರೆಲ್ಲರ ಮನೋಸ್ಥಿತಿ ಮತ್ತು ವರ್ತನೆ ಬದಲಾಗಿದೆ. ಹಲವರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ತನಿಷಾ ಸದ್ಯ ಜೈಲುಶಿಕ್ಷೆಗೆ ಗುರಿಯಾಗಿದ್ದು, ಕಾರ್ತಿಕ್ ಮಹೇಶ್ ಗೆಲುವಿಗೆ, ಕ್ಯಾಪ್ಟನ್ಸಿಗೆ ಯಾವ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಜತೆಗೆ, ಮನೆಯ ಇತರ ಸದಸ್ಯರು ಕೂಡ ಯಾವ ರೀತಿಯಲ್ಲಿ ರೆಸ್ಪಾನ್ಸ್ ಮಾಡಬಹುದು ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ. 

ಸತ್ಯ ತಿಳಿಸಲು ಅಪ್ಪನನ್ನು ಹುಡುಕುತ್ತಿರುವ ಲಚ್ಚಿ; ಸತ್ಯ ಅರಿಯದೇ ಹೆಂಡತಿ-ಮಗಳನ್ನು ನೋಡಲು ಅಲೆಯುತ್ತಿರುವ ಸಂಗಮ್!

ಒಟ್ಟಿನಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಹಲವು ಕ್ಯಾಪ್ಟನ್ಸಿಗಳನ್ನು ನೋಡಿರುವ ಬಿಗ್ ಬಾಸ್ ಮನೆ, ಇದೀಗ ಕಾರ್ತಿಕ್ ಕಂಟ್ರೋಲ್‌ಗೆ ಸಿಕ್ಕಿದೆ. ಸಂಗೀತಾ ಲವರ್ ಎಂದೇ ಬಿಂಬಿತವಾಗಿರುವ ಕಾರ್ತಿಕ್, ತನಿಷಾಗೆ ಕೂಡ ಒಳ್ಳೆಯ ಫ್ರೆಂಡ್ ಎಂಬುದು ಬಿಗ್ ಬಾಸ್ ವೀಕ್ಷಕರಿಗೆ ಗೊತ್ತು. ಉಳಿದಂತೆ, ಕಾರ್ತಿಕ್ ಕ್ಯಾಪ್ಟನ್ಸಿಯನ್ನು ಹೇಗೆ ನಿರ್ವಹಿಸುತ್ತಾರೆ, ಮನೆಯ ಸದಸ್ಯರ ವಿಶ್ವಾಸವನ್ನು ಎಷ್ಟರ ಮಟ್ಟಿಗೆ ಗಳಿಸುತ್ತಾರೆ ಎಂಬುದು ಭವಿಷ್ಯದ ದಿನಗಳು ನಿರ್ಧಾರ ಮಾಡಲಿವೆ. ಕಾರ್ತಿಕ್ ಮಹೇಶ್ ಕ್ಯಾಪ್ಟನ್ಸಿ ಬಗ್ಗೆ ಬಿಗ್ ಬಾಸ್ ಅಭಿಪ್ರಾಯ ಕೂಡ ಮುಂದಿನ ದಿನಗಳಲ್ಲಿ ಬರಲಿದ್ದು, ಅದು ಯಾವ ರೀತಿ ಇರಲಿದೆ ಎಂಬ ಕುತೂಹಲ ಹಲವರಲ್ಲಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!
ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು: Suhana Syed ಎಂದೂ ಹೇಳಿರದ ರಿಯಲ್ ಕಥೆ