
ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ಸ್ವಭಾವ, ವರ್ತನೆಗಳು ಬದಲಾಗುತ್ತಲೇ ಇವೆ. ಅದರಲ್ಲಿಯೂ ಡ್ರೋಣ್ ಪ್ರತಾಪ್ ಅವರು ಮೊದಲ ವಾರದಲ್ಲಿದ್ದ ರೀತಿಗೂ ಇಂದಿನ ರೀತಿಗೂ ಅಜ-ಗಜ ಎನ್ನುವಷ್ಟು ವ್ಯತ್ಯಾಸ! ಒಬ್ಬೊಬ್ಬರೇ ಇರುತ್ತಿದ್ದ, ಯಾರೊಂದಿಗೂ ಬೆರೆಯದ ಅವರು ನಂತರ ನಿಧಾನಕ್ಕೆ ಬೆರೆಯತೊಡಗಿದ್ದರು. ಆಗ ಅವರು ಸಾಕಷ್ಟು ವಿರೋಧವನ್ನೂ ಎದುರಿಸಬೇಕಾಯ್ತು. ಅದನ್ನು ಎದುರಿಸಿ ಅವರು ತಮ್ಮನ್ನು ತಾವು ಸ್ಥಾಪಿಸಿಕೊಂಡ ರೀತಿ ನಿಜಕ್ಕೂ ಪ್ರಶಂಸನೀಯ.
ಮೊದಲಿನಿಂದಲೂ ಪ್ರತಾಪ್, ತಮ್ಮ ಕುಟುಂಬದವರ ಬಗ್ಗೆ ಮಾತಾಡಿದ್ದು ಕಡಿಮೆಯೇ. ಆದರೆ ಅವರು ಎಷ್ಟೋ ವರ್ಷಗಳಿಂದ ಕುಟುಂಬದಿಂದ ದೂರವಿದ್ದಾರೆ ಎಂಬುದನ್ನು ಹೇಳಿದ್ದರು. ಅಲ್ಲದೇ ತಂದೆ ತಾಯಿ ಜೊತೆಗೆ ತಂಗಿಯ ಜೊತೆಗೆ ಮಾತಾಡಬೇಕು ಅನಿಸುತ್ತಿದೆ ಎಂದೂ ಹೇಳಿದ್ದರು. ಕಳೆದ ವಾರ ಸ್ಪರ್ಧಿಗಳಿಗೆ ತಮ್ಮ ಕುಟುಂಬದವರು ಬರೆದ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಆದರೆ ಅದರಲ್ಲಿ ಪ್ರತಾಪ್ ವಿಫಲರಾದರು. ಹಾಗಾಗಿ ಅವರು ನಿರಾಶೆಗೊಂಡಿದ್ದರು.
ಈಗ ವೀಕೆಂಡ್‌ನ ‘ಕಿಚ್ಚನ ಪಂಚಾಯಿತಿ’ಯಲ್ಲಿ ಸುದೀಪ್, ಪ್ರತಾಪ್‌ಗೆ ಒಂದು ಸ್ವೀಟ್ ಸರ್ಪೈಸ್ ಕೊಟ್ಟಿದ್ದಾರೆ. ಈ ಸರ್ಫೈಸ್ ಅಷ್ಟೇ ಭಾವುಕವಾದದ್ದೂ ಆಗಿದೆ. ‘ನಿಮ್ಮ ಮನೆಯಿಂದ ಬರುತ್ತಿದ್ದ ಪತ್ರದಲ್ಲಿ ನೀವು ಏನು ನಿರೀಕ್ಷಿಸಿದ್ದೀರಿ?’ ಎಂದು ಪ್ರತಾಪ್ ಅವರನ್ನು ಕೇಳಿದ್ದಾರೆ. ಅದನ್ನು ಹೇಳುವ ಮೊದಲೇ ಮನೆಯೊಳಗೆ ಪ್ರತಾಪ್ ತಂದೆಯ ಧ್ವನಿ ಮೊಳಗಿದೆ. ಫೋನ್‌ನಲ್ಲಿ ತಂದೆಯ ಧ್ವನಿಯನ್ನು ಕೇಳಿದ ಪ್ರತಾಪ್, ‘ಅಪ್ಪಾ ನನ್ನ ಕ್ಷಮಿಸಿಬಿಡಿ. ನಿಮಗೆ ಸಾಕಷ್ಟು ನೋವು ಕೊಟ್ಟಿದ್ದೀನಿ’ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಸತ್ಯ ತಿಳಿಸಲು ಅಪ್ಪನನ್ನು ಹುಡುಕುತ್ತಿರುವ ಲಚ್ಚಿ; ಸತ್ಯ ಅರಿಯದೇ ಹೆಂಡತಿ-ಮಗಳನ್ನು ನೋಡಲು ಅಲೆಯುತ್ತಿರುವ ಸಂಗಮ್!
ಇದು JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಜಾಹೀರಾಗಿದೆ. ಹಾಗಾದರೆ ಪ್ರತಾಪ್ ತಂದೆಯ ಜೊತೆಗೆ ಏನು ಮಾತಾಡಿದರು. ಮಗನ ಕ್ಷಮೆಯನ್ನು ತಂದೆ ಮನ್ನಿಸುತ್ತಾರಾ? ಇದನ್ನು ತಿಳಿದುಕೊಳ್ಳಲು JioCinemaದಲ್ಲಿ ಬಿಗ್‌ಬಾಸ್ ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.