Cute ಆಗಿ ನಗಲು ಪರದಾಟ: ಅನುಭವ ಬಿಚ್ಚಿಟ್ಟ ಸತ್ಯ ಸೀರಿಯಲ್​ 'ಅಮೂಲ್ ಬೇಬಿ'

By Suvarna News  |  First Published Aug 4, 2023, 5:50 PM IST

ಸತ್ಯ ಧಾರಾವಾಹಿಯ ಕಾರ್ತಿಕ್​ ಅಲಿಯಾಸ್​ ಅಮುಲ್​ ಬೇಬಿ ಪಾತ್ರದ ಮೂಲಕ ಮುಗ್ಧತೆಯ ಪ್ರತಿರೂಪ ಎನಿಸಿರುವ ಸಾಗರ್​ ಬಿಳಿಗೌಡ ಅವರು ಕ್ಯೂಟ್​ ಆಗಿ ನಗಲು ಪಟ್ಟ ಕಷ್ಟದ ಬಗ್ಗೆ ಹೇಳಿದ್ದಾರೆ. 
 


ಜೀ ಕನ್ನಡ ಚಾನೆಲ್​ನಲ್ಲಿ ಪ್ರಸಾರವಾಗ್ತಿರೋ ಸತ್ಯ (Sathya) ಸೀರಿಯಸ್​ ವಿಭಿನ್ನ ಕಥಾಹಂದರವನ್ನು ಹೊಂದಿದ್ದು ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎನಿಸಿದೆ. ಗಂಡುಬೀರಿಯಂತೆ ಬೆಳೆದಿರೋ ಸತ್ಯಾ ಒಂದೆಡೆಯಾದರೆ ಹೆಣ್ಣಿನಂತೆ ಅತಿ ಸಾಫ್ಟ್​ ಆಗಿರೋ  ಅತೀ ಮುಗ್ಧ ಎನ್ನುವ ಪಾತ್ರಧಾರಿ ಕಾರ್ತಿಕ್​. ಪತ್ನಿ ಸತ್ಯ ಬಾಯಲ್ಲಿ ಕಾರ್ತಿಕ್​ ಪ್ರೀತಿಯ ಹೆಸರು ಅಮುಲ್​ ಬೇಬಿ.  ಈ ಪಾತ್ರಕ್ಕೆ ತಕ್ಕಂತೆ ಮುಗ್ಧ ಮುಖ ಹೊಂದಿರೋ ಕಾರ್ತಿಕ್​ ನಿಜವಾದ ಹೆಸರು ಸಾಗರ್​ ಬಿಳಿಗೌಡ. ಕಳೆದ ಜನವರಿ 20ರಂದು ಸಾಗರ್​ ಅವರು  ಸಿರಿ ಎನ್ನುವವರ ಜೊತೆ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ. ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಮದುವೆಗೆ ಕೆಲ ದಿನಗಳ ಮುಂಚೆಯಷ್ಟೇ  ಫೋಟೋ ಶೇರ್ ಮಾಡುವ ಮೂಲಕ ಅಧಿಕೃತ ಗೊಳಿಸಿದ್ದರು. ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ  ಹಸೆಮಣೆ ಏರಿದೆ.  ಸಿರಿ ರಾಜು ಕೂಡ ಮಾಡೆಲ್ ಕಮ್ ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಜೊತೆಗೆ FIR 6 to 6 ಸಿನಿಮಾದಲ್ಲಿ ಸಿರಿ ರಾಜು ಅಭಿನಯಿಸುತ್ತಿದ್ದಾರೆ. ಇನ್ನು ಕೆಲವು ವೆಬ್ ಸೀರೀಸ್ ಗಳಲ್ಲೂ ನಟಿಸಿದ್ದಾರೆ.

ಇನ್ನು ಸತ್ಯ ಧಾರಾವಾಹಿಯಲ್ಲಿನ  ಅಮುಲ್​ ಬೇಬಿಯ (Amul Baby) ಮುಗ್ಧತೆ ಬಗ್ಗೆ ಹೇಳಬೇಕಾಗಿಲ್ಲ.  ಮುಗ್ಧ ಹುಡುಗನಾಗಿ, ಅಮ್ಮನ ಮುದ್ದಿನ ಮಗನಾಗಿ ಅಭಿನಯಿಸುತ್ತಿದ್ದಾರೆ.  ತಮ್ಮ ನಟನೆ ಮೂಲಕ ಜನರಿಗೆ ಹತ್ತಿರವಾಗ್ತಿರೋ ಕಾರ್ತಿಕ್​ ಕ್ಯೂಟ್​ ನಗು ಎಂದರೆ ಎಲ್ಲರಿಗೂ ಬಹಳ ಇಷ್ಟ ಎಂದೇ ಹೇಳಬೇಕು. ಚಿಕ್ಕಮಕ್ಕಳಂತೆ ಮುದ್ದು ಮುದ್ದಾಗಿ ನಗುತ್ತಾ ಧಾರಾವಾಹಿಯಲ್ಲಿ ಎಲ್ಲರನ್ನೂ ಮರಳುಗೊಳಿಸುತ್ತಾರೆ ಇವರು. ಆದರೆ ಈ ಕ್ಯೂಟ್​ ನಗು ನಗಲು ಎಷ್ಟೆಲ್ಲಾ ಕಷ್ಟಪಟ್ಟಿದ್ದರಂತೆ ಸಾಗರ್​. ನಿರ್ದೇಶಕರು ಕ್ಯೂಟ್​ ಆಗಿ ನಗಲು ಹೇಳಿದ್ದಂತೆ. ಆದರೆ ಕ್ಯೂಟ್​ ಹೇಗೆ ಎನ್ನುವುದೇ ತಮಗೆ ತಿಳಿದಿಲ್ಲ ಎಂದು ಸಾಗರ್​ ಅವರು ಹೇಳಿದ್ದು, ಅದರ ವಿಡಿಯೋ ವೈರಲ್​ ಆಗುತ್ತಿದೆ. ತಾವು ಹೇಗೆಲ್ಲಾ ನಕ್ಕು ತೋರಿಸಿದ್ರೂ ಅದು ಕ್ಯೂಟ್​ ಎನಿಸಿರಲಿಲ್ಲ. ಆಮೇಲೆ ಕ್ಯೂಟ್​ ಆಗಿ ನಗೋದು ಹೇಗೆ ಅಂತಾನೇ ಗೊತ್ತಾಗ್ತಿಲ್ಲ ಎಂದೆ. ನಂತರ ನಿರ್ದೇಶಕರು ಮಗುವನ್ನು ನೋಡಿ, ಅದಕ್ಕೆ ತಾನು ಯಾಕೆ ನಗ್ತೇನೆ ಅಂತಾನೇ ಗೊತ್ತಿರಲಿಲ್ಲ. ಅದರಲ್ಲಿ ಮುಗ್ಧತೆ, ಕ್ಯೂಟ್​ನೆಸ್​ ಇರುತ್ತದೆ. ಅದನ್ನು ನೋಡಿ ಹಾಗೆಯೇ ನಗಬೇಕು ಎಂದಾಗ ನಾನು ಪ್ರಾಕ್ಟೀಸ್​ ಮಾಡಿಕೊಂಡೆ ಎಂದಿದ್ದಾರೆ ಸಾಗರ್​. 

Tap to resize

Latest Videos

ಗೋವಾದಲ್ಲಿ ನಿವೇದಿತಾ ಗೌಡ ಪೋಸ್​, ಬಾಲಿವುಡ್ ರೇಂಜಿಗೆ ಕಾಣಿಸ್ತೀರಿ ಎಂದ ನೆಟ್ಟಿಗರು!

ಇದೇ ವೇಳೆ ನಟನಾಗುವ ಕನಸು ಹೊತ್ತು ತುಂಬಾ ಮಂದಿ ಆಡಿಷನ್​ಗೆ ಹೋಗಿ ಅಲ್ಲಿ ಸೆಲೆಕ್ಟ್​ ಆಗಿಲ್ಲ ಎಂದರೆ ಬೇಸರಪಟ್ಟುಕೊಳ್ಳುವ ಬಗ್ಗೆ ಹೇಳಿದ ಸಾಗರ್ (Sagar) ಅವರು, ಆಡಿಷನ್​ಗೆ ಹೋದಾಗ ಸೆಲೆಕ್ಟ್​ ಆಗಿಲ್ಲ ಅಂದರೆ ಬೇಸರ ಮಾಡಿಕೊಳ್ಳಬಾರದು. ಆ್ಯಕ್ಟರ್​ ಆಗುವ ಆ್ಯಕ್ಟಿಂಗ್​ ಮಾಡುವುದನ್ನು ಕಲಿಯಬೇಕು. ಅವಕಾಶಗಳು ತುಂಬಾ ಇರುತ್ತವೆ. ಎಲ್ಲಿಯಾದರೂ ಅವಕಾಶ ಸಿಕ್ಕೇ ಸಿಗುತ್ತದೆ ಎಂದಿದ್ದಾರೆ. 

ಅಂದಹಾಗೆ ಕಾರ್ತಿಕ್​ ಅವರು ಕಾರ್ತಿಕ್ ಅವರು ವೃತ್ತಿಯಲ್ಲಿ  ಸಾಫ್ಟವೇರ್ (Software) ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಬಳಿಕ ಕೆಲಸ ಬಿಟ್ಟು ಧಾರಾವಾಹಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಸತ್ಯ ಧಾರಾವಾಹಿಗೂ ಮೊದಲು ಅವರು,  'ಕಿನ್ನರಿ', 'ಮನಸಾರೆ'ಯಲ್ಲಿಯೂ ನಟಿಸಿದ್ದಾರೆ.  

ಆ್ಯಂಕರ್ ಅನುಶ್ರೀಗೆ ಇಷ್ಟು ದಿನ ಮದುವೆ ಯಾವಾಗ ಅಂತಿದ್ದ ಫ್ಯಾನ್ಸ್​ , ಈಗ ಸಿನಿಮಾ ಯಾವಾಗ ಕೇಳ್ತಿದ್ದಾರೆ!

click me!