ಬಿಗ್ ಬಾಸ್ ಶೋ ಶುರುವಾಗ್ತಿದ್ದಂತೆ ಸ್ಪರ್ಧಿಗಳ ಪರ – ವಿರೋಧಿಗಳು ಕಚ್ಚಾಡಿಕೊಳ್ಳೋದು ಸಾಮಾನ್ಯ. ಆದ್ರೆ ಈ ಬಾರಿ ಸ್ವಲ್ಪ ಚೇಂಜ್ ಕಾಣ್ತಿದೆ. ಇಲ್ಲಿ ಕನ್ನಡ, ಕರ್ನಾಟಕ ನುಸುಳಿದೆ. ಪರ ಭಾಷೆಯ ಬಿಗ್ ಬಾಸ್ ನಲ್ಲಿ ಕನ್ನಡಿಗರು ಮಿಂಚುತ್ತಿದ್ರೆ, ಅದನ್ನೇ ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ.
ತೆಲುಗು ಬಿಗ್ ಬಾಸ್ ಸೀಸನ್ 8 ಶೋ (Telugu Bigg Boss Season 8 Show) ಶುರುವಾಗಿ 18 ದಿನ ಕಳೆದಿದೆ. ಸೆಪ್ಟೆಂಬರ್ ಒಂದರಿಂದ ಆನ್ ಏರ್ ಹೋಗ್ತಿರೋ ಬಿಗ್ ಬಾಸ್ ಶೋನಲ್ಲಿ ಕನ್ನಡಿಗರು ಹವಾ ಮೆಂಟೇನ್ ಮಾಡಿದ್ದಾರೆ. ಸತತ ಆರನೇ ಬಾರಿ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಶೋ ಹೋಸ್ಟ್ ಮಾಡ್ತಿದ್ದು, ಕರ್ನಾಟಕದ ನಾಲ್ವರು ಸ್ಪರ್ಧಿಗಳು, ಕನ್ನಡ ವೀಕ್ಷಕರನ್ನು ಸೆಳೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ ಮಾತ್ರ ನೋಡ್ತಿದ್ದ ಅನೇಕ ಕನ್ನಡಿಗರು ಈಗ ತೆಲಗು ಬಿಗ್ ಬಾಸ್ ಗೆ ಅಟ್ರ್ಯಾಕ್ಟ್ ಆಗಿದ್ದಾರೆ.
ತೆಲಗು ಬಿಗ್ ಬಾಸ್ ನಲ್ಲಿ ನಿಖಿಲ್, ಪೃಥ್ವಿ, ಪ್ರೇರಣಾ ಮತು ಯಶ್ಮಿ ಗೌಡ ಕರ್ನಾಟಕದವರು. ನಿನ್ನೆ ನಡೆದ ಶೋನಲ್ಲಿ ನಾಗಾರ್ಜುನ್, ಮೈಸೂರು ಹುಡುಗ ನಿಖಿಲ್ ಅವರನ್ನು ಹಾಡಿ ಹೊಗಳಿದ್ದಾರೆ. ಅವರನ್ನು ತಂಡದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ್ದಾರೆ. ಸದ್ಯ ಬಿಗ್ ಬಾಸ್ ನ ನೆಚ್ಚಿನ ಸ್ಪರ್ಧಿಯಾಗಿರುವ ನಿಖಿಲ್, ಬಿಗ್ ಬಾಸ್ 8ರ ಕೊನೆಯವರೆಗೂ ಇರೋದು ಬಹುತೇಕ ಖಚಿತವಾಗಿದೆ. ಅವರು ಹೀಗೆ ಆಟ ಮುಂದುವರೆಸಿದ್ರೆ ಕಪ್ ಎತ್ತೋದ್ರಲ್ಲಿ ಸಂಶಯವಿಲ್ಲ ಎನ್ನುತ್ತಿದ್ದಾರೆ ಕನ್ನಡಿಗರು. ಆದ್ರೆ ನಿಖಿಲ್, ಸೋನಿಯಾ ಹಿಂದೆ ಬಿದ್ದಿದ್ದು, ಫ್ಯಾನ್ಸ್ ಗೆ ಯಾಕೋ ಇಷ್ಟ ಆಗ್ತಿಲ್ಲ. ಹುಡುಗಿ ಹಿಂದೆ ಹೋಗಿ ಆಟ ಹಾಳ್ಮಾಡ್ಕೊಳ್ಬೇಡ ಗುರು ಅಂತ ವೀಕ್ಷಕರು ನಿಖಿಲ್ ಗೆ ಸಲಹೆ ನೀಡ್ತಿದ್ದಾರೆ.
ಇದು ಗೊಂಬೆಯಲ್ಲ ಭೂತ, ಐಶ್ವರ್ಯ ರೈ ಡಾಲ್ ನೋಡಿ ನೆಟ್ಟಿಗರು ಗರಂ
ತೆಲುಗು ಬಿಗ್ ಬಾಸ್ ವಿಡಿಯೋ ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗ್ತಿದ್ದಂತೆ ಕನ್ನಡಿಗರ ಕಚ್ಚಾಟ ಶುರುವಾಗಿದೆ. ಒಂದಿಷ್ಟು ಮಂದಿ ನಿಖಿಲ್ ಕನ್ನಡಿಗ, ಎಲ್ಲಿ ಹೋದ್ರೂ ಕನ್ನಡಿಗರು ಕರ್ನಾಟಕಕ್ಕೆ ಹೆಮ್ಮೆ ತರುವ ಕೆಲಸ ಮಾಡ್ತಾರೆ ಅಂತ ಕನ್ನಡ, ಕರ್ನಾಟಕದ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಆದ್ರೆ ಇದು ಕೆಲ ಕನ್ನಡಿಗರಿಗೆ ಇಷ್ಟವಾದಂತೆ ಕಾಣ್ತಿಲ್ಲ. ಕನ್ನಡ ಬಿಟ್ಟು ಬೇರೆ ಇಂಡಸ್ಟ್ರಿಗೆ ಹೋದವರಿಗೆ ಯಾಕಿಷ್ಟು ಫೇಮ್ ನೀಡ್ತಿರಿ. ಅವರು ಕರ್ನಾಟಕದವರು ನಿಜ. ಹಾಗಂತ ಕನ್ನಡಕ್ಕೆ, ಕರ್ನಾಟಕಕ್ಕೆ ಏನೂ ಮಾಡಿಲ್ಲ ಎಂದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ನಿಖಿಲ್, ಕರ್ನಾಟಕದವರಾದ್ರೂ ಕನ್ನಡ ಇಂಡಸ್ಟ್ರಿ ಅವರಿಗೆ ಏನೂ ನೀಡಿಲ್ಲ. ಅವರು ಆಂಧ್ರ, ತೆಲಂಗಾಣದಲ್ಲಿ ಖ್ಯಾತರಾಗಿದ್ದಾರೆ. ಹಾಗಾಗಿ ಕರ್ನಾಟಕವನ್ನು ಹೈಪರ್ ಮಾಡ್ಬೇಡಿ ಎಂದಿದ್ದಾರೆ ಬಳಕೆದಾರರು.
ನಿಖಿಲ್ ಮೈಸೂರು ಮೂಲದ ಹುಡುಗ. ಅವರು ಕನ್ನಡದಲ್ಲೂ ಸಿನಿಮಾ ಮಾಡಿದ್ದರು. ಈಗ ತೆಲುಗು ಇಂಡಸ್ಟ್ರಿಯಲ್ಲಿ ತಮ್ಮ ವೃತ್ತಿ ಮುಂದುವರೆಸಿದ್ದಾರೆ. ಕನ್ನಡಿಗರು ಬೇರೆ ಇಂಡಸ್ಟ್ರಿಗೆ ಹೋಗುವ ಬಗ್ಗೆ ವಾದ – ವಿವಾದ ಮೊದಲಿನಿಂದಲೂ ಇದೆ. ಕನ್ನಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಕಲಾವಿದರು ನಂತ್ರ ಬೇರೆ ಭಾಷೆಗೆ ಹೋಗಿ ಅಲ್ಲಿ ತಮ್ಮ ದರ್ಬಾರ್ ನಡೆಸ್ತಾರೆ. ಕನ್ನಡ, ಕರ್ನಾಟಕವನ್ನು ಸಂಪೂರ್ಣ ಮರೆಯುತ್ತಾರೆ ಎನ್ನುವ ಚರ್ಚೆ ಆಗಾಗ ನಡೆಯುತ್ತಿರುತ್ತದೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಯಿಂದ ಹಿಡಿದು ರಶ್ಮಿಕಾ ಮಂದಣ್ಣ ಸೇರಿದಂತೆ ಕಿರುತೆರೆಯ ಅನೇಕ ಕಲಾವಿದರು, ಕನ್ನಡ ಇಂಡಸ್ಟ್ರಿಯಲ್ಲಿ ಮೊದಲು ಅವಕಾಶಪಡೆದು ನಂತ್ರ ಬೇರೆ ಭಾಷೆಗೆ ಹಾರಿದ್ದಾರೆ. ತಮಿಳು, ತೆಲುಗು, ಬಾಲಿವುಡ್ ನಲ್ಲಿ ಸಿಗುವಷ್ಟು ಅವಕಾಶ, ಮನ್ನಣೆ ಸ್ಯಾಂಡಲ್ವುಡ್ ನಲ್ಲಿ ಸಿಗೋದಿಲ್ಲ ಎಂಬುದು ಕೆಲ ಕಲಾವಿದರ ವಾದ.
ಸಿನಿಮಾಗಳಲ್ಲಿ ನಟಿಸಿದ್ರೂ, ಈ ನಟ ಕನ್ನಡಿಗರ ಮನೆ ಮಗ ಆಗಿದ್ದು ಲಕ್ಷ್ಮೀ ನಿವಾಸದ ಸಿದ್ದೇ ಗೌಡರಾಗಿ…
ಅದೇನೇ ಇರಲಿ ಈಗ ಬಿಗ್ ಬಾಸ್ ಶೋನದ್ದೇ ಹವಾ. ಬಿಗ್ ಬಾಸ್ ತೆಲಗು ಶೋ, ಕನ್ನಡ ಬಿಗ್ ಬಾಸ್ ಗಿಂತ ಮೊದಲೇ ಶುರುವಾಗಿದ್ದು, ಸಾಕಷ್ಟು ಅಭಿಮಾನಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಕನ್ನಡ ಮತ್ತು ಹಿಂದಿ ಬಿಗ್ ಬಾಸ್ ಶೋಗಳು ಇದೇ ತಿಂಗಳ ಕೊನೆಯಲ್ಲಿ ಶುರುವಾಗಲಿದ್ದು, ವೀಕ್ಷಕರು ಶೋ ವೀಕ್ಷಣೆಗೆ ತುದಿಗಾಲಿನಲ್ಲಿ ಕುಳಿತಿದ್ದಾರೆ.