ಮೌನಿ ಅಮವಾಸ್ಯೆಯಂದು ಅನುಶ್ರೀ ಅಮೃತ ಸ್ನಾನ, ಜೊತೆಯಾದವರೇ ಜೋಡಿಯಾಗ್ತಾರಾ?

ಮಹಾಕುಂಭ ಮೇಳಕ್ಕೆ ತೆರಳಿರುವ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಅಮೃತ ಸ್ನಾನದ ಅವಕಾಶ ಸಿಕ್ಕಿದೆ. ಮೌನಿ ಅಮವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಅನುಶ್ರೀ ಮಿಂದೆದ್ದಿದ್ದಾರೆ. 
 

Karnataka anchor Anushree  takes holy dip in Triveni Sangam

ಪ್ರಯಾಗರಾಜ್ (Prayagraj) ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ (Mahakumbh Mela)ಕ್ಕೆ ಕರ್ನಾಟಕದ ಪ್ರಸಿದ್ಧ ನಟಿ ಹಾಗೂ ನಿರೂಪಕಿ ಅನುಶ್ರೀ ತೆರಳಿದ್ದಾರೆ. ಮೌನಿ ಅಮಾವಾಸ್ಯೆ ಶುಭ ದಿನದಂದು ಅನುಶ್ರೀ (famous actress and anchor Anushree), ತ್ರಿವೇಣಿ ಸಂಗಮ (Triveni Sangam)ದಲ್ಲಿ ಮಿಂದೆದ್ದಿದ್ದಾರೆ. ಅನುಶ್ರೀ ತಮ್ಮ ಇನ್ಸ್ಟಾ ಖಾತೆಯಲ್ಲಿ ಮಹಾಕುಂಭ ಮೇಳದ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅನುಶ್ರೀ ಜೊತೆ ನಟ ಹಾಗೂ ನಿರ್ದೇಶ ರಾಜ್ ಬಿ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಹಾಗೂ ರಂಜನ್ ಎಸ್ ಸೇರಿದಂತೆ ಏಳು ಮಂದಿಯ ಟೀಮನ್ನು ನೀವು ಕಾಣ್ಬಹುದು. 

ಇನ್ಸ್ಟಾ ಪೋಸ್ಟ್ ನಲ್ಲಿ ಅನುಶ್ರೀ ಎರಡು ಫೋಟೋ ಹಾಗೂ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅನುಶ್ರೀ ಮಾತ್ರ ಕಾಣಿಸಿಕೊಂಡಿದ್ದು, ಹಣೆಗೆ ತಿಲಕವಿಟ್ಟು, ಎಂದಿನಂತೆ ಸಹಜ ನಗೆ ಬೀರಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್, ಮೇಕಪ್ ಇಲ್ಲದೆಯೂ ಅನುಶ್ರೀ ತುಂಬಾ ಸುಂದರವಾಗಿ ಕಾಣ್ತಾರೆಂದು ಕಮೆಂಟ್ ಹಾಕಿದ್ದಾರೆ. ಇನ್ನೊಂದು ಫೋಟೋದಲ್ಲಿ ಅನುಶ್ರೀ ಜೊತೆ ತೆರಳಿರುವ ಟೀಂನ ಎಲ್ಲ ಸದಸ್ಯರನ್ನು ಒಟ್ಟಿಗೆ ನೋಡ್ಬಹುದು. ಕೊನೆಯ ಹಾಗೂ ಮೂರನೇ ಪೋಸ್ಟ್ ನಲ್ಲಿ ಎಲ್ಲರೂ ಒಟ್ಟಾಗಿ ಹರ ಹರ ಮಹದೇವ್ ಅಂತ ಹೇಳೋದನ್ನು ಕಾಣ್ಬಹುದು.  

Latest Videos

ಆ್ಯಂಕರ್​ ಅನುಶ್ರೀ @37: ಹುಟ್ಟುಹಬ್ಬಕ್ಕೆ ವಿಶೇಷ ವಿಡಿಯೋ ರಿಲೀಸ್​- ಮುಂದಿನ ತಿಂಗಳೇ ಮದುವೆ?

ಸಂಗಮದಲ್ಲಿ ಮಿಂದು, ಕಣ್ಣುಗಳು ನೆಂದು, ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು.  ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು. ಕೋಟಿ ಜನ ಸೇರೋ ಜಾಗ. ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ದ್ರೆ ಈ ದೈವಿಕ ಅನುಭವ ಸಿಗ್ತಿರ್ಲಿಲ್ಲ. 29/01/2025 ಮೌನಿ ಅಮಾವಾಸ್ಯ. ಹರ ಹರ ಮಹದೇವ್  ಎಂದು ಅನುಶ್ರೀ ಶೀರ್ಷಿಕೆ ಹಾಕಿದ್ದಾರೆ. ಮೌನಿ ಅಮವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ರೆ ಪುಣ್ಯ ಲಭಿಸುತ್ತದೆ. ಆದ್ರೆ ಮಹಾ ಕುಂಭ ಮೇಳದ ಸಮಯದಲ್ಲಿ ಮೌನಿ ಅಮವಾಸ್ಯೆ ದಿನ ತ್ರಿವೇಣಿ ಸಂಗಮ ತಲುಪೋದು ಸುಲಭದ ಮಾತಲ್ಲ. ಅನುಶ್ರೀ ಅದನ್ನೇ ತಮ್ಮ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಕಷ್ಟ ಅಂತ ಮನೆಯಲ್ಲಿ ಕುಳಿತಿದ್ರೆ ಈ ಅವಕಾಶ ಸಿಗ್ತಿರಲಿಲ್ಲ ಎಂದಿದ್ದಾರೆ.

ಮಹಾಕುಂಭ ಮೇಳದಲ್ಲಿ ನಟ ರಾಜ್ ಬಿ ಶೆಟ್ಟಿ... ಜೊತೆಯಾದ ನಿರೂಪಕಿ ಅನುಶ್ರೀ, ಕಿರಣ್ ರಾಜ್

ಅನುಶ್ರೀ ಪೋಸ್ಟ್ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ನೀವೇ ಅದೃಷ್ಟವಂತರು. ಮೌನಿ ಅಮವಾಸ್ಯೆ ದಿನ ಪುಣ್ಯ ಸ್ನಾನದ ಅವಕಾಶ ಸಿಕ್ಕಿದೆ ಅಂತ ಕಮೆಂಟ್ ಮಾಡಿದ್ದಾರೆ. ಹುಷಾರಾಗಿರಿ ಅಂತ ಫ್ಯಾನ್ಸ್ ಅನುಶ್ರೀಗೆ ಸಲಹೆ ನೀಡಿದ್ರೆ ಮತ್ತೆ ಕೆಲವರು ಕಾಲ್ತುಳಿತದ ಸುದ್ದಿ ಸಾಕಷ್ಟು ಭಯ ಹುಟ್ಟಿಸಿತ್ತು, ಆದ್ರೆ ನಿಮ್ಮ ಪೋಸ್ಟ್, ಮಹಾಕುಂಭ ಮೇಳಕ್ಕೆ ಹೋಗಲು ಧೈರ್ಯ ನೀಡಿದೆ ಎಂದಿದ್ದಾರೆ. ಮದುವೆ ಬೇಗ ಆಗ್ಲಿ ಅಂತ ಕೆಲವರು ಹರಸಿದ್ರೆ, ಹಿಂದಿನ ವಾರ ಸರಿಗಮಪದಲ್ಲಿ ಮಿಸ್ ಆಗಿದ್ದು ಇದೇ ಕಾರಣಕ್ಕಾ ಅಂತ ಮತ್ತೊಂದಿಷ್ಟು ಮಂದಿ ಪ್ರಶ್ನೆ ಮಾಡಿದ್ದಾರೆ. ಆದ್ರೆ ಅನುಶ್ರೀ ಸರಿಗಮಪ ಕಾರ್ಯಕ್ರಮದಲ್ಲಿ ಯಾಕೆ ಮಿಸ್ ಆದ್ರೂ ಎನ್ನುವ ಪ್ರಶ್ನೆಗೆ ಉತ್ತರ ನೀಡಿಲ್ಲ. ಸದ್ಯ ಅನುಶ್ರೀ, ನಟ ರಾಜ್ ಬಿ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದು ಕೆಲ ಅನುಮಾನಕ್ಕೂ ಕಾರಣವಾಗಿದೆ. ಇಬ್ಬರು ಮದುವೆ ಆಗ್ತಾರೆ ಎನ್ನುವ ಸುದ್ದಿ ಮಧ್ಯೆ ಇಬ್ಬರೂ ಒಟ್ಟಿಗೆ ಪ್ರಯಾಗರಾಜ್ ಗೆ ಹೋಗಿರೋದು, ವದಂತಿಗೆ ರೆಕ್ಕೆ ಪುಕ್ಕ ಸಿಕ್ಕಂತಾಗಿದೆ. ಮದುವೆಗೆ ಮುನ್ನ ಮಹಾದೇವನ ಆಶೀರ್ವಾದ ಪಡೆಯಲು ಜೋಡಿ ಮುಂದಾಗಿದ್ಯಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. 37 ವರ್ಷದ ಅನುಶ್ರೀ ಮದುವೆ ಮೇಲೆ ಸದ್ಯ ಎಲ್ಲರ ಕಣ್ಣಿದೆ. 

vuukle one pixel image
click me!
vuukle one pixel image vuukle one pixel image