
ಡಾನ್ಸ್ ಕರ್ನಾಟಕ ಡಾನ್ಸ್ನ ಮತ್ತೊಂದು ಸೀಸನ್ ನಿನ್ನೆ ಅಂದರೆ ನವೆಂಬರ್ 15ರಿಂದ ಶುರುವಾಗಿದೆ. ಇದಕ್ಕೆ ಇದಾಗಲೇ ಭರ್ಜರಿ ಓಪನಿಂಗ್ ಸಿಕ್ಕಿದೆ. ಪ್ರತಿಬಾರಿಯಂತೆ ಈಗಲೂ ನಟರಾದ ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ, ರಚಿತಾ ರಾಮ್ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರರಾಗಿದ್ದಾರೆ. ಇದರ ಗ್ರ್ಯಾಂಡ್ ಓಪನಿಂಗ್ ಸಮಯದಲ್ಲಿ ಕರ್ಣ ಸೀರಿಯಲ್ ನಿಧಿ ಅರ್ಥಾತ್ ಭವ್ಯ ಗೌಡ (Bhavya Gowda) ಅವರು ಕೋಟಿಗೊಬ್ಬ-2 ಚಿತ್ರದ 'ಸಾಲುತಿಲ್ಲವೇ ಸಾಲುತಿಲ್ಲವೇ. ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ' ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಚಿಟ್ಟೆಯಂತೆ ಬಂದು ಅವರು ಡಾನ್ಸ್ ಮಾಡಿದ್ದಾರೆ. ತಮ್ಮ ಡಾನ್ಸ್ ಮೂವ್ನಿಂದ ತೀರ್ಪುಗಾರರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಇವರು ಡಾನ್ಸ್ ಆರಂಭಿಸುತ್ತಿದ್ದಂತೆಯೇ ತೀರ್ಪುಗಾರರಲ್ಲಿ ಒಬ್ಬರಾಗಿರುವ ನಟ ಶಿವರಾಜ್ ಕುಮಾರ್ ಅವರು ಎದ್ದು ನಿಂತು ಮೆಚ್ಚುಗೆಯಿಂದ ಚಪ್ಪಾಳೆ ಹೊಡೆದಿದ್ದಾರೆ. ವಿಜಯ ರಾಘವೇಂದ್ರ ಅವರೂ ಕುತೂಹಲದಿಂದ ಈ ನೃತ್ಯವನ್ನು ವೀಕ್ಷಿಸಿದರೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕುಳಿತಲ್ಲಿಯೇ ಜಿಗಿದಾಡಿದ್ದಾರೆ. ನೀಲಿಯ ಬಟ್ಟೆ ಜೊತೆ ನೀಲಿಯ ಬ್ಯಾಕ್ಗ್ರೌಂಡ್ನಲ್ಲಿ ಬಂದ ನಿಧಿ (Karna Serial Nidhi) ಅರ್ಥಾತ್ ಭವ್ಯ ಗೌಡ ಅವರು, ಚಿಟ್ಟೆಯಂತೆಯೇ ಕಂಗೊಳಿಸುತ್ತಿದ್ದಾರೆ. ಇದರ ಪ್ರೊಮೋ ಅನ್ನು ಜೀ ವಾಹಿನಿ ಹಂಚಿಕೊಂಡಿದೆ.
ಅಷ್ಟಕ್ಕೂ ಭವ್ಯ ಗೌಡ ಅವರು, ಇದಾಗಲೇ ಕರ್ಣ ಸೀರಿಯಲ್ ಮೂಲಕ ನಟನೆಯಲ್ಲಿ ಸೈ ಎನ್ನಿಸಿಕೊಂಡಿದ್ದಾರೆ. ಅಕ್ಕನಿಗಾಗಿಯೇ ಪ್ರೀತಿಯಿಂದ ದೂರವಾಗಿ, ಕಣ್ಣೆದುರೇ ಪ್ರಿಯಕರ ಇದ್ದರೂ ಹೇಳಿಕೊಳ್ಳಲಾಗದ ಸಂಕಷ್ಟದ ಮೂಲಕ ವೀಕ್ಷಕರ ಕಣ್ಣಲ್ಲೂ ನೀರು ತರಿಸುವಂಥ ನಟನೆ ಮಾಡುತ್ತಿದ್ದಾರೆ ಭವ್ಯ ಗೌಡ. ನಟನೆಯಲ್ಲಿಯೂ ಭೇಷ್ ಎನ್ನಿಸಿಕೊಂಡಿರೋ ನಟಿ ಈಗ ಡಾನ್ಸ್ನಲ್ಲಿಯೂ ವ್ಹಾರೆವ್ಹಾ ಎನ್ನಿಸಿಕೊಂಡಿದ್ದಾರೆ.
1996ರ ನವೆಂಬರ್ 17ರಂದು ಜನಿಸಿರೋ ಭವ್ಯಾ ಗೌಡ ಅವರಿಗೆ ಈಗ 29 ವರ್ಷ ವಯಸ್ಸು. ಬಿಕಾಂ ಪದವೀಧರ ಆಗಿರುವ ಅವರ ಆಸೆ ಇದ್ದುದು ಗಗನಸಖಿಯಾಗು ಎಂದು. ಅದಕ್ಕಾಗಿ ತಯಾರಿ ಕೂಡ ನಡೆಸಿದ್ದರು. ಆದರೆ, ಭವ್ಯಾ ಅವರ ಪಾಲಕರಿಗೆ ನಟಿಯಾಗಿ ಮಾಡುವ ಆಸೆ ಇತ್ತು. ಅಪ್ಪ-ಅಮ್ಮನ ಆಸೆ ಈಡೇರಿದೆ. ಅಷ್ಟಕ್ಕೂ ಟಿಕ್‌ಟಾಕ್‌ನಲ್ಲಿ ಲಿಪ್ ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದವರು ಭವ್ಯಾ. ಅದೇ ಅವರನ್ನು ಬಣ್ಣದ ಲೋಕಕ್ಕೆ ಕರೆತಂದಿದೆ. ಆರಂಭದಲ್ಲಿ ಗೀತಾ ಸೀರಿಯಲ್ಗೆ ಆಡಿಷನ್ ಕೊಟ್ಟರು. ಅಲ್ಲಿ ಅವರು ಸೆಲೆಕ್ಟ್ ಆದರು. ಟಿಕ್ಟಾಕ್ನಿಂದ ಆಯ್ಕೆ ಆಗಿರುವ ಬಗ್ಗೆ ಕೆಲವರು ಅಸಮಾಧಾನ ಕೂಡ ಹೊರಹಾಕಿದ್ದರು ಎನ್ನಲಾಗಿದೆ. ಆದರೆ 2020ರಲ್ಲಿ ಪ್ರಸಾರ ಆಗ್ತಿದ್ದ ಮೊದಲ ಸೀರಿಯಲ್ ಗೀತಾದಲ್ಲಿಯೇ ಭೇಟಿ ಎನ್ನಿಸಿಕೊಂಡರು. ಕೊನೆಗೆ ಸಿನಿಮಾದಲ್ಲಿಯೂ ಅವಕಾಶ ಗಿಟ್ಟಿಸಿಕೊಂಡರು. ವಿಸ್ಮಯಾ ಗೌಡ ನಿರ್ದೇಶನದ 'ಡಿಯರ್ ಕಣ್ಮಣಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಬಳಿಕ ಬಿಗ್ಬಾಸ್ನಲ್ಲಿಯೂ ಅವಕಾಶ ಸಿಕ್ಕಿತು. ಬಿಗ್‌ಬಾಸ್ ಸೀಸನ್ 11ರಲ್ಲಿ ಮೊದಲ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು. 6 ಫೈನಲಿಸ್ಟ್‌ಗಳ ಪೈಕಿ ಒಬ್ಬರಾಗಿ ಫಿನಾಲೆ ಕೂಡ ತಲುಪಿದ್ದರು. 6ನೇ ಸ್ಥಾನ ಅವರಿಗೆ ಲಭಿಸಿತ್ತು. ಈಗ ಕರ್ಣ ಸೀರಿಯಲ್ (Karna Serial) ಮೂಲಕ ಮನೆಮಾತಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.