
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ (Bhagyalakshmi Serial) ಗೆ ಟ್ವಿಸ್ಟ್ ಸಿಕ್ಕಿದೆ. ಆದಿಗೆ ಭಾಗ್ಯಾ ಮಾಜಿ ಪತಿ ಯಾರು ಅನ್ನೋ ವಿಷ್ಯ ಗೊತ್ತಾಗಿದೆ. ಇದ್ರಿಂದ ಬೇಸತ್ತಿರುವ ಆದಿ, ತಾಂಡವ್ – ಶ್ರೇಷ್ಠಾಗೆ ಈಗಾಗಲೇ ಗೇಟ್ ಪಾಸ್ ನೀಡಿದ್ದಾನೆ. ಭಾಗ್ಯಾ ಕೂಡ ರಿಸೈನ್ ಲೆಟರ್ ನೀಡಿದ್ದಾಳೆ. ಈ ಬಗ್ಗೆ ಆದಿ ಏನು ಪ್ರತಿಕ್ರಿಯೆ ನೀಡ್ತಾನೆ ಅನ್ನೋದನ್ನು ಕಾಯದೇ ಆಫೀಸ್ನಿಂದ ಭಾಗ್ಯಾ ಹೊರಗೆ ಬಂದಿದ್ದಾಳೆ. ಆದ್ರೆ ಮಕ್ಕಳ ಮಾತಿಗೆ ಭಾಗ್ಯಾ ಕರಗಿ ಮತ್ತೆ ಕೆಲ್ಸಕ್ಕೆ ವಾಪಸ್ ಆಗ್ತಾಳಾ ಕಾದು ನೋಡ್ಬೇಕಿದೆ. ಸೀರಿಯಲ್ ನಲ್ಲಿ ಏನೇ ದ್ವೇಷ ಇರ್ಲಿ, ಶೂಟಿಂಗ್ ಟೈಂನಲ್ಲಿ ಭಾಗ್ಯಾ ಅಲಿಯಾಸ್ ಸುಷ್ಮಾ ಕೆ ರಾವ್ ಹಾಗೂ ಉಳಿದ ಕಲಾವಿದರು ಸಖತ್ ಎಂಜಾಯ್ ಮಾಡ್ತಾರೆ. ಬಿಡುವು ಸಿಕ್ಕಾಗೆಲ್ಲ ರೀಲ್ಸ್ ಮಾಡಿ, ಪ್ರೇಕ್ಷಕರನ್ನು ಖುಷಿಗೊಳಿಸ್ತಾರೆ. ಈಗ ಮತ್ತೊಂದು ರೀಲ್ ವೈರಲ್ ಆಗಿದೆ. ಈ ರೀಲ್ ನಲ್ಲಿಟೀಂ ಒಂದು ಡಾನ್ಸ್ ಮಾಡೋಕೆ ಎಷ್ಟು ರೀಟೇಕ್ ತಗೊಳುತ್ತೆ ಅನ್ನೋದನ್ನು ನೀವು ಕಾಣ್ಬಹುದು.
ರೀಲ್ಸ್ ಮಾಡೋಕೂ ಎಕ್ಸ್ ಪಿರಿಯನ್ಸ್ ಬೇಕು. ಒಂದೇ ಟೇಕ್ ನಲ್ಲಿ ರೀಲ್ಸ್ ಓಕೆ ಆಗೋದು ಕಷ್ಟ. ಒಬ್ಬರೇ ಮಾಡ್ತಿದ್ದರೆ ತಪ್ಪು ಮಾಡಿದ್ರೂ ನಡೆದುಹೋಗುತ್ತೆ. ಅದೇ ಒಂದು ಟೀಂನಲ್ಲಿ ಡಾನ್ಸ್ ಮಾಡೋವಾಗ ಒಬ್ಬರು ತಪ್ಪು ಮಾಡಿದ್ರೂ ಮತ್ತೆ ರೀ ಶೂಟ್ ಮಾಡ್ಬೇಕಾಗುತ್ತೆ. ಈ ಬಾರಿ ತಾಂಡವ್ ತಪ್ಪು ಮಾಡಿದ್ದಾರೆ. ಕೊನೆಯಲ್ಲಿ ಭಾಗ್ಯಾ ಹೇಳೋ ಮಾತು ಕೇಳಿದ್ರೆ ಪ್ರತಿ ಬಾರಿ ತಾಂಡವ್ ತಪ್ಪು ಮಾಡ್ತಾರೆ ಅನ್ನೋದು ಪಕ್ಕಾ ಆಗ್ತಿದೆ.
Bigg Boss: ವಿದಾಯ ಭಾಷಣಕ್ಕೂ ಮುನ್ನ ಸುದೀಪ್ರ ನಕಲು ಮಾಡುವ ಸಾಹಸ ತೋರಿದ ಗಿಲ್ಲಿ ನಟ! ಆಗಿದ್ದೇನು ನೋಡಿ
ಸೀರಿಯಲ್ ನ ಬಹುತೇಕ ಕಲಾವಿದರು ಈ ರೀಲ್ಸ್ ನಲ್ಲಿದ್ದಾರೆ. ಭಾಗ್ಯಾ, ತಾಂಡವ್, ಶ್ರೇಷ್ಠಾ, ಆದಿ, ತನ್ವಿ, ಪೂಜಾ, ಗುಂಡಣ್ಣ ರೀಲ್ಸ್ ಮಾಡ್ತಿದ್ದಾರೆ. ಸುಷ್ಮಾ, ಟುಮಕ್ ಟುಮಕ್ ಹಾಡು ಹೇಳ್ತಿದ್ರೆ ಉಳಿದವರೆಲ್ಲ ಸ್ಟೆಪ್ಸ್ ಹಾಕ್ತಿದ್ದಾರೆ. ಹಾಡು ಮುಗಿದು, ರೀಲ್ಸ್ ಓಕೆ ಆಯ್ತು ಎನ್ನೋವಾಗ ತಾಂಡವ್ ಮಾಡಿದ ತಪ್ಪು ಗೊತ್ತಾಗುತ್ತೆ. ಎಲ್ಲರೂ ಲೆಫ್ಟ್ ಹ್ಯಾಂಡ್ ಮೇಲೆ ಎತ್ತಿದ್ರೆ ತಾಂಡವ್ ಮಾತ್ರ ರೈಟ್ ಹ್ಯಾಂಡ್ ಮೇಲೆತ್ತಿದ್ದಾರೆ. ಇದನ್ನು ಆದಿ ಹೇಳ್ತಿರೋದನ್ನು ನೀವು ಕೇಳ್ಬಹುದು. ಮತ್ತೆ ವಿಡಿಯೋ ಮಾಡ್ಬೇಕಲ್ಲ ಅಂತ ಭಾಗ್ಯಾ ಹೇಳೋದಲ್ದೆ, ತಾಂಡವ್ ಅವರಿಂದ ವಿಡಿಯೋ ಹಾಳಾಯ್ತು ಅಂತ ಕಾಲು ಎಳೆಯುತ್ತಿದ್ದಾರೆ. ರೀಲ್ಸ್ ಹಾಳು ಮಾಡೋರೇ ಇವರು ಅಂತ ಭಾಗ್ಯಾ ಹೇಳ್ತಾರೆ. ರೀಲ್ಸ್ ಕಲ್ಪ್ರಿಟ್ ಅಂತ ತಾಂಡವ್ ಗೆ ಚುಡಾಯಿಸ್ತಾರೆ. ಕಿಷನ್ ಅಲಿಯಾಸ್ ರಾಜೇಶ್ ಇದ್ರ ವಿಡಿಯೋ ಮಾಡ್ತಿದ್ದಾರೆ. ಹಳ್ಳಿಯ ಶಾಲೆಯೊಂದರ ಮುಂದೆ ಇವರು ವಿಡಿಯೋ ಮಾಡ್ತಿರೋದನ್ನು ನೀವು ಕಾಣ್ಬಹುದು.
ಪುರುಷ ಸ್ಪರ್ಧಿ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡಿದ ಮಹಿಳಾ ಸ್ಪರ್ಧಿಗಳ ವಿರುದ್ಧ ಸುದೀಪ್ ಕೆಂಡಾಮಂಡಲ
ಈ ವಿಡಿಯೋ ನೋಡಿದ ಫ್ಯಾನ್ಸ್ ಲೈಕ್ ಒತ್ತಿದ್ದಾರೆ. ಬಹುತೇಕರಿಗೆ ಸುಷ್ಮಾ ರಾವ್ ಹಾಡು ಇಷ್ಟವಾಗಿದೆ. ನಿಮ್ಮ ಧ್ವನಿ ಚೆನ್ನಾಗಿದೆ ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಸೂಪರ್ ಟೀಂ ಎನ್ನುವ ಮೆಚ್ಚುಗೆ ವ್ಯಕ್ತವಾಗಿದೆ. ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಕೆಲ ದಿನಗಳ ಹಿಂದಷ್ಟೆ ಕಲಾವಿದರ ಬದಲಾವಣೆಯಾಗಿದೆ. ಭಾಗ್ಯಾ ತಂಗಿ ಪೂಜಾ ಪಾತ್ರ ಮಾಡ್ತಿದ್ದ ಆಶಾ ಹೊರ ಬಿದ್ದಿದ್ದು, ಹರ್ಷಿತಾ ಈ ಪಾತ್ರ ನಿಭಾಯಿಸ್ತಿದ್ದಾರೆ. ಅವರೂ ಭಾಗ್ಯಾ ಟೀಂ ಜೊತೆ ಫ್ರೆಂಡ್ಲಿಯಾಗಿದ್ದು, ರೀಲ್ಸ್ ಮಾಡ್ತಾ ಶೂಟಿಂಗ್ ಎಂಜಾಯ್ ಮಾಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.