
ನಟಿ ರೇಣುಕಾ ಶಹಾನೆ ಅವರು, 90ರ ದಶಕದಲ್ಲಿ ದೂರದರ್ಶನದಲ್ಲಿ ಬರುತ್ತಿದ್ದ, ಬಲು ಪ್ರಸಿದ್ಧ ಕ್ವಿಜ್ ಕಾರ್ಯಕ್ರಮ ಸುರಭಿ ಮೂಲಕ ಚಿರಪರಿಚಿತರು. ನಟಿ ಈಗ ಹಿಂದಿ ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಫೇಮಸ್ ಆಗಿದ್ದಾರೆ. ಕಿರುತೆರೆಯಲ್ಲಿಯೂ ಇವರ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇಷ್ಟು ಖ್ಯಾತಿಯನ್ನು ಏರುವ ನಡುವೆ ತಾವು ಅನುಭವಿಸಿದ ಕಠಿಣ ಪರಿಶ್ರಮ, ಹೋರಾಟ ಮತ್ತು ಧೈರ್ಯದ ಕಥೆಗಳ ಬಗ್ಗೆ ನಟಿ ಇದೀಗ ಹೇಳಿದ್ದಾರೆ. ಕಾಸ್ಟಿಂಗ್ ಕೌಚ್ ಎನ್ನುವ ಬಲೆಯಲ್ಲಿ ಬೀಳಿಸಲು ಪಣತೊಟ್ಟ ಕೆಲವರ ಬಗ್ಗೆ, ಅದನ್ನು ತಾವು ಒಪ್ಪದಿದ್ದಾಗ ಕಳೆದುಕೊಂಡಿರುವ ಅವಕಾಶಗಳ ಬಗ್ಗೆಯೂ ಅವರು ಇದೇ ವೇಳೆ ಮಾತನಾಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ಹಲವು ಭಾಷೆಗಳ ಗ್ಲಾಮರ್ ಹಿಂದೆ ಒಂದು ಕರಾಳ ಸತ್ಯವಿದೆ, ಈ ವಿಷಯದ ಬಗ್ಗೆ ಅನೇಕ ಮಂದಿ ಮಾತನಾಡಿದ್ದಾರೆ.
ಈಗ ನಟಿ ರೇಣುಕಾ ಶಹಾನೆ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳ ಅನುಭವವನ್ನು ಹಂಚಿಕೊಂಡಿದ್ದಾರೆ. ಜೂಮ್‌ಗೆ ನೀಡಿದ ಸಂದರ್ಶನದಲ್ಲಿ, ರೇಣುಕಾ ಶಹಾನೆ ತಮ್ಮ ಜೀವನದಲ್ಲಿ ಘಟಿಸಿದ್ದ ದುರಂತ ಘಟನೆಯನ್ನು ವಿವರಿಸಿದ್ದಾರೆ. ಚಲನಚಿತ್ರ ನಿರೂಪಣೆಯ ಸಮಯದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಲಾಗಿತ್ತು ಎನ್ನುವ ಆಘಾತಕಾರಿ ಸಂಗತಿಯನ್ನೂ ಅವರು ವಿವರಿಸಿದ್ದಾರೆ.
ವಿವಾಹಿತ ನಿರ್ಮಾಪಕರೊಬ್ಬರು ನನ್ನನ್ನು ಸೀರೆ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಲು ಕೇಳಿಕೊಂಡರು. ಅದಕ್ಕೆ ನಾನು ಒಪ್ಪಿದ್ದೆ. ಆದರೆ ಅದಕ್ಕೆ ಅವರು ಒಂದು ಷರತ್ತು ವಿಧಿಸಿದರು. ಅದೂ ನನ್ನ ತಾಯಿಯ ಮುಂದೆನೇ. ಅದೇನೆಂದರೆ, ಈ ಅವಕಾಶ ಬೇಕು ಎಂದರೆ ತಿಂಗಳ ಸಂಬಳದ ಆಧಾರದ ಮೇಲೆ ತಮ್ಮ ಜೊತೆ ಇರಬೇಕು ಎಂದರು! ಎಷ್ಟು ಹಣ ನೀಡುತ್ತೇನೆ ಎನ್ನುವ ಬಗ್ಗೆ ಮಾತನಾಡಿದರು. ಇದನ್ನು ಕೇಳಿ ನನಗೆ ಮತ್ತು ನನ್ನ ತಾಯಿಗೆ ಆಘಾತವಾಯಿತು ಎಂದಿದ್ದಾರೆ. ನಾನು ತಕ್ಷಣ ಈ ಪ್ರಸ್ತಾಪ ತಿರಸ್ಕರಿಸಿದೆ. ಆಗ ಬೇರೊಬ್ಬಳಿಗೆ ಈ ಅಂಬಾಸಿಡರ್ ಪೋಸ್ಟ್ ನೀಡಲಾಯಿತು. ಇಷ್ಟೇ ಅಲ್ಲದೇ, ಈ ಆಫರ್ ತಿರಸ್ಕರಿಸಿದ ಕಾರಣಕ್ಕೆ ಆ ನಿರ್ಮಾಪಕ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಿ ಹಲವು ಪ್ರಾಜೆಕ್ಟ್ಗಳು ನನ್ನ ಕೈಬಿಡುವಂತೆ ಮಾಡಿದರು ಎಂದಿದ್ದಾರೆ.
"ಕೆಲವೊಮ್ಮೆ, ನೀವು ಯಾರೊಬ್ಬರ ಅನುಚಿತ ಪ್ರಸ್ತಾಪವನ್ನು ತಿರಸ್ಕರಿಸಿದಾಗ, ಆ ವ್ಯಕ್ತಿಯು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಅವರು ನಿಮ್ಮನ್ನು ನೇಮಿಸಿಕೊಳ್ಳಬೇಡಿ ಎಂದು ಇತರರಿಗೆ ಹೇಳುತ್ತಾರೆ. ಇದು ದೊಡ್ಡ ಅಪಾಯ. ಹಲವರಿಗೆ ಹೀಗೆಯೇ ಆಗಿದೆ. ಕೆಲವು ಜನರನ್ನು ಯೋಜನೆಗಳಿಂದ ವಜಾಗೊಳಿಸಲಾಗುತ್ತದೆ, ಕಿರುಕುಳ ನೀಡಲಾಗುತ್ತದೆ. ಅಥವಾ ಅವರ ಕೆಲಸಕ್ಕೆ ಸಂಭಾವನೆ ನೀಡದೇ ಕಳುಹಿಸಲಾಗುತ್ತದೆ. ಇಂಥವರು ಇಂಡಸ್ಟ್ರಿಯಲ್ಲಿ ಬೇಕಾದಷ್ಟು ಜನ ಇದ್ದಾರೆ. ರಾಜಿ ಮಾಡಿಸಿಕೊಂಡವರು ದೊಡ್ಡ ಹೆಸರನ್ನೂ ಮಾಡಿದ್ದಾರೆ ಎಂದು ರೇಣುಕಾ ವಿವರಿಸಿದ್ದಾರೆ.
ರೇಣುಕಾ ಶಹಾನೆ ರವೀನಾ ಟಂಡನ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಚಲನಚಿತ್ರೋದ್ಯಮದ ಪ್ರಮುಖ ನಾಯಕಿಯರು ಸಹ ಅಂತಹ ಸಂದರ್ಭಗಳಿಗೆ ಹೊರತಾಗಿಲ್ಲ ಎಂದು ಹೇಳಿದರು. ರೇಣುಕಾ ವಿವರಿಸಿದರು, "ಆ ಸಮಯದಲ್ಲಿ ರವೀನಾ ಬಹಳ ಪ್ರಸಿದ್ಧ ನಾಯಕಿ ಮತ್ತು ಚಲನಚಿತ್ರ ಕುಟುಂಬದಿಂದ ಬಂದವರು, ಆದರೆ ನಾವು ಹೊರಾಂಗಣ ಚಿತ್ರೀಕರಣಕ್ಕೆ ಹೋದಾಗ, ನಾವು ಯಾವ ಕೋಣೆಯಲ್ಲಿದ್ದೇವೆ ಎಂದು ಯಾರಿಗೂ ತಿಳಿಯದಂತೆ ಪ್ರತಿದಿನ ನಮ್ಮ ಕೊಠಡಿಗಳನ್ನು ಬದಲಾಯಿಸುತ್ತಿದ್ದೆವು, ಏಕೆಂದರೆ ಕೆಲವರು ಬಂದು ತೊಂದರೆ ಉಂಟುಮಾಡುವ ಆತಂಕವಿತ್ತು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.