ನಿತ್ಯಾಳ ರೋಲ್​ ಡಮ್ಮಿ ಮಾಡಿ ಸಾಯಿಸಿದ್ರಿ, ಈಗ ನಿಧಿ ಸರದಿನಾ? Karna Serial ವಿರುದ್ಧ ರೊಚ್ಚಿಗೆದ್ದ ವೀಕ್ಷಕರು

Published : Nov 13, 2026, 01:15 PM IST
Karna Serial

ಸಾರಾಂಶ

ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರದ ಹಠಾತ್ ಸಾವಿನಿಂದ ಕಥೆ ವಿಚಿತ್ರ ತಿರುವು ಪಡೆದಿದೆ. ನಯನತಾರಾಳ ಸಂಚಿನಿಂದಾಗಿ ನಿಧಿ ಈಗ ತನ್ನ ಗಂಡ ಕರ್ಣನನ್ನೇ ದೂಷಿಸುತ್ತಿದ್ದು, ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾರದ್ದೋ ಮಾತು ಕೇಳಿ ತನ್ನ ಗಂಡ ಎಂಥವನು ಎಂದು ತಿಳಿದ ನಿಧಿಯನ್ನು ಈ ರೀತಿ ಚಿತ್ರಿಸಿರುವುದು ಅಭಿಮಾನಿಗಳ ಕೋಪಕ್ಕ ಕಾರಣವಾಗಿದೆ.

ಬೆಂಗಳೂರು: ಒಂದು ಸೊಗಸಾದ, ನವಿರಾದ ಕಥೆಯ ಜೊತೆ ಸಾಗುತ್ತಲಿದ್ದ ಕರ್ಣ ಸೀರಿಯಲ್​ (Karna Serial) ಇದೀಗ ವಿಚಿತ್ರ ತಿರುವು ಪಡೆದುಕೊಂಡಿದೆ. ನಿತ್ಯಾಳನ್ನು ಸಾಯಿಸಲಾಗಿದೆ. ನಿತ್ಯಾ ಪಾತ್ರದ ಬಗ್ಗೆ ನಟಿ ನಮ್ರತಾ ಗೌಡ ಅಸಮಾಧಾನ ವ್ಯಕ್ತಪಡಿಸಿ, ಸೀರಿಯಲ್​ ಬಿಟ್ಟು ಹೋಗುವುದಾಗಿ ಹೇಳಿದ್ದರಿಂದ , ಕಥೆಯನ್ನೇ ಬದಲಿಸಿ ಆ ಪಾತ್ರ ಸಾಯಿಸಲಾಗಿದೆ ಎಂದೇ ಹೇಳಲಾಗುತ್ತಿದೆ. ಅದೇನೇ ಇದ್ದರೂ ನಿತ್ಯಾ ಪಾತ್ರವನ್ನು ಸಾಯಿಸಿರುವ ಬಗ್ಗೆ ವೀಕ್ಷಕರು ಸಿಕ್ಕಾಪಟ್ಟೆ ಗರಂ ಆಗಿರುವ ಬೆನ್ನಲ್ಲೇ ಇದೀಗ ನಿಧಿಯ ಸರದಿ.

ಮಗುವನ್ನು ಹೆತ್ತ ಬಳಿಕ ನಿತ್ಯಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿಯೇ ಇದ್ದರು. ನಂತರ ನಿತ್ಯಾ- ನಿಧಿಯ ತಂದೆ-ತಾಯಿಯನ್ನು ಕೊಂದಿರುವ ಸತ್ಯ ನಿತ್ಯಾಗೆ ತಿಳಿಯುತ್ತಲೇ ನಯನತಾರಾ ರೌಡಿಗಳನ್ನು ಬಿಟ್ಟು ಸಾಯಿಸಲು ಹೋಗಿದ್ದಳು. ಆದರೆ ಅದು ಸಾಧ್ಯವಾಗಿರಲಿಲ್ಲ. ಬಳಿಕ, ನಿತ್ಯಾ ಚೇತರಿಸಿಕೊಳ್ಳುತ್ತಲೇ ಆಕೆಗೆ ವಿಷದ ಇಂಜೆಕ್ಷನ್​ ಕೊಟ್ಟು ಸಾಯಿಸಿದ್ದಾಳೆ ನಯನತಾರಾ. ನಿತ್ಯಾ ಸಾಯುವಾಗ ಬಾಯಲ್ಲಿ ನೊರೆ ಬಂದಿದ್ದರೂ, ಆ ಬಗ್ಗೆ ಖ್ಯಾತ ವೈದ್ಯ ಕರ್ಣನಿಗೂ ಡೌಟ್​ ಬರದೇ ಇರುವುದು ಅಚ್ಚರಿ ಎಂದೇ ವೀಕ್ಷಕರು ಹೇಳಿದ್ದುಂಟು. ಅದೇನೇ ಇದ್ದರೂ, ಇದೀಗ ಕರ್ಣನೇ ನಿತ್ಯಾಳ ಸಾವಿಗೆ ಕಾರಣ ಎನ್ನುವಂತೆ ನಯನತಾರಾ ನಿಧಿಯ ತಲೆಗೆ ತುಂಬಿದ್ದಾಳೆ.

ನಿಧಿ ಪಾತ್ರನೂ ಡಮ್ಮಿ ಆಗೋಯ್ತಾ?

ಎಲ್ಲರ ಒಳಿತಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುವವ ತನ್ನ ಗಂಡ ಕರ್ಣ ಎನ್ನುವುದು ನಿಧಿಗೆ ಗೊತ್ತು. ತನ್ನ ಅತ್ತೆ ಮಾಲತಿ ಎಷ್ಟು ಒಳ್ಳೆಯವಳು, ತಾನೆಂದರೆ ಆಕೆಗೆ ಎಷ್ಟು ಪ್ರೀತಿ ಎನ್ನುವುದೂ ನಿಧಿಗೆ ಗೊತ್ತು. ಇಷ್ಟಿದ್ದರೂ ನಯನತಾರಾ ಏನೋ ಹೇಳಿದಳು ಎನ್ನುವ ಮಾತ್ರಕ್ಕೆ ಗಂಡ, ಅತ್ತೆಯನ್ನೇ ದೂಷಿಸಿದ್ದಾಳೆ ನಿಧಿ. ಅಲ್ಲಿಗೆ ನಿತ್ಯಾ ಪಾತ್ರದಂತೆಯೇ ನಿಧಿ ಪಾತ್ರವನ್ನೂ ಡಮ್ಮಿ ಮಾಡಲು ಹೊರಟಿದ್ದೀರಿ ಎಂದು ಕರ್ಣ ಸೀರಿಯಲ್ ವಿರುದ್ಧ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ.

ಸೀರಿಯಲ್​ ಫ್ಯಾನ್ಸ್​ ಆಕ್ರೋಶ

ಒಂದಿಷ್ಟಾದರೂ ವಾಸ್ತವಕ್ಕೆ ಹತ್ತಿರವಾಗಿರುವುದನ್ನು ತೋರಿಸಿ. ತನ್ನ ಗಂಡ ಕರ್ಣ ಎಂಥವನು ಎಂದು ಗೊತ್ತಿರುವ ನಿಧಿ, ಯಾರದ್ದೋ ಮಾತು ಕೇಳಿ ಆತನ ಮೇಲೆ ಪೊಲೀಸ್​ ಕಂಪ್ಲೇಂಟ್​ ಕೊಡುವ ಮಟ್ಟಿಗೆ ಹೋಗುತ್ತಾಳೆ ಎಂದರೆ ಈ ಕಥೆ ವಿಚಿತ್ರ ಎನ್ನಿಸುತ್ತದೆ. ಆಕೆಗೆ ಅಕ್ಕ ನಿತ್ಯಾ ಮೇಲೆ ಪ್ರೀತಿ ಹೆಚ್ಚೇ ಇರಬಹುದು. ಆದರೆ, ಹಿಂದೆ ಮುಂದೆ ಯೋಚಿಸದೇ ಗಂಡನ ವಿರುದ್ಧವೇ ಕ್ರಮಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ, ಸ್ವಲ್ಪನಾದರೂ ಬುದ್ಧಿ ಇರುವವರು ಹೀಗೆ ಮಾಡುವುದಿಲ್ಲ ಎಂದೆಲ್ಲಾ ಹೇಳ್ತಿರೋ ಸೀರಿಯಲ್​ ಫ್ಯಾನ್ಸ್​, ಒಂದೊಳ್ಳೆ ಸೀರಿಯಲ್​ ಹಾದಿ ತಪ್ಪಿಸೋದು ಎಂದರೆ ಇದೇ ಎಂದು ಕಿಡಿ ಕಾರುತ್ತಿದ್ದಾರೆ. ಒಂದು ಸೀರಿಯಲ್​ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆದುಕೊಂಡರೇನೇ ಅದನ್ನು ಮುಂದುವರೆಸಲು ಸಾಧ್ಯ ಎಂದು ಕೆಲವರು ರೊಚ್ಚಿಗೆದ್ದವರನ್ನು ಸಮಾಧಾನ ಮಾಡುತ್ತಿದ್ದಾರೆ. ಇನ್ನು ಸೀರಿಯಲ್​ ವಿಷ್ಯಕ್ಕೆ ಬರುವುದಾದರೆ, ನಿಧಿ ಕೊಟ್ಟಿರುವ ದೂರಿನ ಮೇಲೆ ಪೊಲೀಸರು ಕರ್ಣನನ್ನು ಅರೆಸ್ಟ್​ ಮಾಡಲು ಬಂದಿದ್ದಾರೆ. ಕೂಡಲೇ ರಮೇಶ್​ ತಾನೇ ನಿತ್ಯಾಳನ್ನು ಕೊಲೆ ಮಾಡಿದ್ದು ಎಂದು ಸುಳ್ಳು ಹೇಳಿದ್ದಾನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

"70 ವರ್ಷವಾದ್ರೂ ತಾಯಿ ತರ ಕಾಣಲ್ಲ" ಎಂದ ಅನು ಪ್ರಭಾಕರ್... 'ಗೌರಿಪುತ್ರ' ಸೆಟ್‌ನಲ್ಲಿ ಸಹನಟಿಯರೇ ಶಾಕ್ ಆಗಿದ್ದರಂತೆ!
ಪಾಪಾ ಪಾಂಡು ನೆನಪಿದ್ದಾರಾ? 1,016 ಸಂಚಿಕೆಗಳಲ್ಲಿ ನಗಿಸಿದ್ದ ನಟ ಚಿದಾನಂದ್ ಈಗ ಏನು ಮಾಡುತ್ತಿದ್ದಾರೆ ಗೊತ್ತಾ?