ನಿಜವಾಗ್ಲೂ ಆರುಂಧತಿ ಮುಂದೆ ಕಣ್ಣು ಬಿಟ್ಳಾ ಸಾಹಿತ್ಯ? ಇದು ಬರೀ ಪ್ರೋಮೋ ಅಂತಿದ್ದಾರೆ ನೆಟ್ಟಿಗರು

Published : May 21, 2025, 11:40 AM IST
ನಿಜವಾಗ್ಲೂ ಆರುಂಧತಿ ಮುಂದೆ ಕಣ್ಣು ಬಿಟ್ಳಾ ಸಾಹಿತ್ಯ? ಇದು ಬರೀ ಪ್ರೋಮೋ ಅಂತಿದ್ದಾರೆ ನೆಟ್ಟಿಗರು

ಸಾರಾಂಶ

ಕರಿಮಣಿ ಧಾರಾವಾಹಿಯಲ್ಲಿ ಬ್ಲಾಕ್ ರೋಸ್ ಯಾರೆಂಬ ಹುಡುಕಾಟ ತೀವ್ರಗೊಂಡಿದೆ. ಕರ್ಣ ಮತ್ತು ಸಾಹಿತ್ಯ ಇಬ್ಬರೂ ಸುಳಿವುಗಳನ್ನು ಹಿಡಿದು ತನಿಖೆ ನಡೆಸುತ್ತಿದ್ದಾರೆ. ಅರುಂಧತಿಯೇ ಬ್ಲಾಕ್ ರೋಸ್ ಎಂಬುದನ್ನು ಸಾಹಿತ್ಯ ಪ್ರಜ್ಞೆ ತಪ್ಪಿದ ನಾಟಕ ಮಾಡಿ ಪತ್ತೆ ಹಚ್ಚಿದ್ದಾಳೆ ಎಂದು ಪ್ರೋಮೋ ತೋರಿಸುತ್ತಿದೆ. ಆದರೆ, ಪ್ರೇಕ್ಷಕರು ಇದನ್ನು ನಂಬಲು ಸಿದ್ಧರಿಲ್ಲ, ಪ್ರೋಮೋ ದೃಶ್ಯಗಳು ಭ್ರಮಾತ್ಮಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಲರ್ಸ್ ಕನ್ನಡ (Colors Kannada )ದಲ್ಲಿ ಪ್ರಸಾರ ಆಗ್ತಿರುವ ಪ್ರತಿಯೊಂದು ಸೀರಿಯಲ್ ಹೊಸ ತಿರುವಿನೊಂದಿಗೆ ಬರ್ತಿದೆ. ಅದ್ರಲ್ಲಿ ಕರಿಮಣಿ ಸೀರಿಯಲ್ (Karimani Serial) ಕೂಡ ಸಾಕಷ್ಟು ಟ್ವಿಸ್ಟ್ ಪಡೆದುಕೊಂಡಿದೆ. ಬ್ಲಾಕ್ ರೋಸ್ ಯಾರು, ಮನೆಯವರಿಗೆ ತೊಂದ್ರೆ ಕೊಡ್ತಿರೋರು ಯಾರು ಎಂಬ ವಿಷ್ಯ ಇಟ್ಕೊಂಡು ಇಷ್ಟುದಿನ ಎಳೆಯುತ್ತಿದ್ದ ಸೀರಿಯಲ್  ಈಗ ಸ್ವಲ್ಪ ಆಸಕ್ತಿ ಪಡೆದುಕೊಂಡಿದೆ. ಒಂದ್ಕಡೆ ಕರ್ಣ ಹಾಗೂ ಮತ್ತೊಂದು ಕಡೆ ಸಾಹಿತ್ಯ, ಬ್ಲಾಕ್ ರೋಸ್ ಯಾರು ಅನ್ನೋದನ್ನು ಪತ್ತೆ ಮಾಡೋ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಎಂದಿನಂತೆ ಇಂದು ಪ್ರಸಾರವಾಗಲಿರುವ ಕರಿಮಣಿ ಸೀರಿಯಲ್ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ. ಪ್ರೋಮೋ ನೋಡಿದ ಬಳಕೆದಾರರು, ಪ್ರೋಮೋದಲ್ಲಿ ತೋರಿಸಿದಂತೆ ಏನೂ ನಡೆಯಲ್ಲ ಅಂತ ಕಮೆಂಟ್ ಮಾಡೋಕೆ ಶುರು ಮಾಡಿದ್ದಾರೆ.

ಕರ್ಣನಿಗೆ ಬೀಳ್ಬೇಕಾಗಿದ್ದ ಗುಂಡು ಭರತ್ ಗೆ ತಾಗ್ತಿದ್ದಂತೆ ಎಲ್ಲ ಬದಲಾವಣೆ ಶುರುವಾಗಿದೆ. ಬೆಡ್ ಮೇಲೆ ಭರತ್ ಮಲಗಿದ್ರೆ, ಗುಂಡು ಹಾರಿಸಿದೋರು ಯಾರು ಎಂಬುದನ್ನು ಪತ್ತೆ ಮಾಡೋಕೆ ಕರ್ಣ ಮುಂದಾಗಿದ್ದಾನೆ. ಮನೆಯವರಿಂದ್ಲೇ ತೊಂದ್ರೆ ಆಗ್ತಿದೆ ಅಂತ ರಾಧಾ ಮೇಡಂ ನೀಡಿರುವ ಕ್ಲ್ಯೂ ಮೇಲೆ ಸಾಹಿತ್ಯ ಕೂಡ ಆರೋಪಿ ಪತ್ತೆಗೆ ಪ್ರಯತ್ನ ನಡೆಸಿದ್ದಾಳೆ. ಶೂಟರ್ ಬಳಿ ಹೋಗಿ ಆತನಿಗೆ ಆವಾಜ್ ಹಾಕಿದ್ದ ಪ್ರಸನ್ನನ ಬಣ್ಣ, ಕರ್ಣನಿಗೆ ಗೊತ್ತಾಗಿದೆ. ಕರ್ಣನ ಕೈಗೆ ಪ್ರಸನ್ನನ ಫೋಟೋ ಹಾಗೂ ಬ್ಲಾಕ್ ರೋಸ್ ಬಳಸ್ತಿದ್ದ ಲೆನ್ಸ್ ಸಿಕ್ಕಿದೆ. ಪ್ರಸನ್ನನ ಮೋಸವನ್ನು ಕರ್ಣನಿಗೆ ನಂಬೋಕೆ ಆಗ್ತಿಲ್ಲ. 

ಅರುಂಧತಿ ಮುಂದೆ ಕಣ್ಣು ಬಿಟ್ಟಳಾ ಸಾಹಿತ್ಯ? : ಇತ್ತ ಸಾಹಿತ್ಯ ಕೂಡ ತನ್ನ ಪ್ರಯತ್ನ ಮುಂದುವರೆಸಿದ್ದಾಳೆ. ಈಗಾಗಲೇ ಪಾಪಮ್ಮನ ಬಳಿ ಒಂದಿಷ್ಟು ಫೋಟೋ ಹಿಡಿದು, ನಿಮಗೆ ತೊಂದರೆ ನೀಡಿದ್ದು ಯಾರು ಅಂತ ಕೇಳಿದ್ದಾಳೆ. ಸಾಹಿತ್ಯ ಮನೆ ಉದ್ಧಾರ ಮಾಡ್ತಾಳೆ, ನನ್ನ ದಾರಿಗೆ ಅಡ್ಡವಾಗ್ತಾಳೆ ಅನ್ನೋದು ಗೊತ್ತಾಗ್ತಿದ್ದಂತೆ ಮತ್ತಷ್ಟು ಅಲರ್ಟ್ ಆಗಿರುವ ಅರುಂಧತಿ, ಜ್ಯೂಸ್ ನಲ್ಲಿ ಏನೋ ಬೆರೆಸಿದಂತಿದೆ. ಸಾಹಿತ್ಯಾಳನ್ನು ನಾನು ಕಾಳಜಿ ಮಾಡ್ತೇನೆ ಅನ್ನೋ ರೀತಿಯಲ್ಲಿ ಪ್ರೀತಿಯಿಂದ ಮಾತನಾಡಿದ ಅರುಂಧತಿ ಜ್ಯೂಸ್ ನೀಡಿದ್ದಾಳೆ. 

ಪ್ರೋಮೋ ಪ್ರಕಾರ, ಅರುಂಧತಿ ನೀಡಿದ ಜ್ಯೂಸ್ ಕುಡಿದು ಸಾಹಿತ್ಯ ಪಾಪಮ್ಮನ ರೂಮಿನಲ್ಲಿ ಪ್ರಜ್ಞೆ ತಪ್ಪಿದ್ದಾಳೆ. ಮನೆ ಉದ್ದಾರ ಮಾಡ್ತಾಳೆ ಅಂತ ಪಾಪಮ್ಮ ನಂಬಿದ್ದ ಸಾಹಿತ್ಯ ಈಗ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ, ಆಕೆಯನ್ನು ಕೊಲೆ ಮಾಡ್ತೇನೆ ಅಂತ ಅರುಂಧತಿ ಚಾಕು ಹಿಡಿದು ಸಾಹಿತ್ಯ ಬಳಿ ಬರ್ತಾಳೆ. ಪ್ರೋಮೋ ಪ್ರಕಾರ, ಇದೇ ಸಮಯದಲ್ಲಿ ಸಾಹಿತ್ಯ ಕಣ್ಣು ಬಿಡ್ತಾಳೆ. ಬ್ಲಾಕ್ ರೋಸ್ ಯಾರು ಅನ್ನೋದನ್ನು ಪತ್ತೆ ಮಾಡೋಕೆ ಸಾಹಿತ್ಯ ಪ್ರಜ್ಞೆ ತಪ್ಪಿದ ನಾಟಕ ಆಡಿದ್ಲು. ಮನೆ ಸಂತೋಷ ಹಾಳು ಮಾಡ್ತಿರೋದು ಅರುಂಧತಿ ಎಂಬ ಸತ್ಯ ಸಾಹಿತ್ಯಾಗೆ ಗೊತ್ತಾಗಿದೆ ಎನ್ನುವ ರೀತಿಯಲ್ಲಿ ಪ್ರೋಮೋ ನೀಡಲಾಗಿದೆ. 

ಪ್ರೋಮೋ ನೋಡಿದ ಬಳಕೆದಾರರು ಇದನ್ನು ನಂಬೋಕೆ ಸಿದ್ಧ ಇಲ್ಲ. ಪ್ರೋಮೋವನ್ನು ಎಡಿಟ್ ಮಾಡಿರ್ತಾರೆ. ಪ್ರೋಮೋದಲ್ಲಿ ತೋರಿಸೋದೇ ಒಂದು, ಸೀರಿಯಲ್ ನಲ್ಲಿ ಆಗೋದೇ ಒಂದು. ಅರುಂಧತಿ ಹೋದ್ಮೇಲೆ ಸಾಹಿತ್ಯ ಕಣ್ಣು ಬಿಡ್ತಾಳೆ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲ ಬಳಕೆದಾರರಿಗೆ ಸೀರಿಯಲ್ ಇಷ್ಟವಾಗಿದೆ. ಸಾಹಿತ್ಯ ಹಾಗೂ ಕರ್ಣ ಇಬ್ಬರೂ ತಮಗೆ ಸಿಕ್ಕ ಮಾಹಿತಿಯನ್ನು ಹೇಳಿಕೊಂಡಿದ್ರೆ ಕೆಲ್ಸ ಮತ್ತಷ್ಟು ಸುಲಭ ಆಗ್ತಿತ್ತು ಅಂತ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರಿಗೆ ಅರುಂಧತಿ ಡೈಲಾಗ್ ಬೋರ್ ಆಗಿದೆ.  ಅರುಂಧತಿಯೇ ಬ್ಲಾಕ್ ರೋಸ್ ಅಂತ ಗೊತ್ತಾದ್ಮೇಲೆ ಒಂದೇ ರೀತಿ ಡೈಲಾಗ್ ಹೇಳ್ತಿದ್ದಾಳೆ ಅರುಂಧತಿ, ಇದು ಬೇಸರತರಿಸಿದೆ ಎಂದು ಕಮೆಂಟ್ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?