
ಹಿಂದಿ ಕಿರುತೆರೆ ಲೋಕದ ಸುಪ್ರಸಿದ್ಧ ಜೋಡಿ ಕಿರಣ್‌ವೀರ್ ಹಾಗೂ ತೀಜಯ್ ಸೋಮವಾರ (ಡಿಸೆಂಬರ್ 21) ಕುಟುಂಬಕ್ಕೆ ಮೂರನೇ ಮಗುವನ್ನು ಬರ ಮಾಡಿಕೊಂಡಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಮೂರನೇ ಹೆಣ್ಣು ಮಗು ವ್ಯಾಂಕೋವರ್, ಕ್ಯಾನಡಾದಲ್ಲಿ ಜನಿಸಿದೆ.
ತಂದೆಯಾದ ಸಂಭ್ರಮದಲ್ಲಿ ಮಜಾಭಾರತ ಹರೀಶ್; ಮನೆಗೆ ಬಂದಿದ್ದಾಳೆ ಪುಟಾಣಿ!
'ನಾನು ಊಹಿಸಿಕೊಳ್ಳಲಾಗದಷ್ಟು ಸಂತೋಷವಾಗುತ್ತಿದೆ. ನನಗೆ ನಂಬಲು ಸಾಧ್ಯವಾಗುತ್ತಿಲ್ಲ, ನಾನು ಮೂವರು ಹೆಣ್ಣು ಮಕ್ಕಳ ತಂದೆ ಎಂಬುದನ್ನು' ಎಂದು ಕರಣ್‌ವೀರ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಕರಣ್ ದಂಪತಿ ಮೊದಲು ಅವಳಿ ಹೆಣ್ಣು ಮಕ್ಕಳಿಗೆ ಪೋಷಕರಾಗಿದ್ದರು. ಈಗ ಮತ್ತೊಂದು ಏಂಜಲ್ ಬರ ಮಾಡಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಮೂವರೊಟ್ಟಿಗಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
'ಈ ಮೂವರು ಹೆಣ್ಣು ಮಕ್ಕಳ ಜೊತೆ ನಾನು ದೇಶ ಆಳಲು ಹೊರಡಲು ಸಿದ್ಧನಾಗಿರುವೆ. ನನ್ನ ಕೈಲಾಗುವಷ್ಟು ಬೆಸ್ಟ್ ಕೇರ್ ಇವುಗಳಿಗೆ ನೀಡುತ್ತೇನೆ. ನೀವು ಇವರನ್ನು ಲಕ್ಷ್ಮಿ, ಪಾರ್ವತಿ ಹಾಗೂ ಸರಸ್ವತಿ ಎಂದೂ ಕರೆಯಬಹುದು,' ಎಂದು ಕರಣ್‌ವೀರ್ ಹೇಳಿದ್ದಾರೆ.
ರೋಷನ್ ಅಗ್ನಿಶ್ರೀಧರ್ ದಂಪತಿ ಕುಟುಂಬಕ್ಕೆ ಹೊಸ ಅತಿಥಿ ಆಗಮನ; ಹೇಗಿದೆ ನೋಡಿ ಫೋಟೋಸ್!
ಗರ್ಭಿಣಿಯಾಗಿದ್ದಾಗ ಸೆರೆ ಹಿಡಿದ ಫೋಟೋ ಶೇರ್ ಮಾಡಿಕೊಂಡ ತೀಜಯ್ 'ನನ್ನ ಡಾರ್ಲಿಂಗ್ ಬೇಬಿ ಗರ್ಲ್. ಎಷ್ಟು ಹೆಮ್ಮೆಯಾಗುತ್ತಿದೆ! ನಿನ್ನ ತಾಯಿಯಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ,' ಎಂದು ಫೋಸ್ಟ್ ಮಾಡಿದ್ದಾರೆ.
ಮಗುವಿಗೆ ಜನ್ಮ ಕೊಟ್ಟ ಕಿರುತೆರೆ ನಟಿ ರಾಧಿಕಾ ಶ್ರವಂತ್!
ಕರಣ್‌ವೀರ್ ಹಾಗೂ ತೀಜಯ್ 2006ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು, 2016ರಲ್ಲಿ ಅವಳಿ ಹೆಣ್ಣು ಮಕ್ಕಳನ್ನು ಬರ ಮಾಡಿಕೊಂಡರು. ಕರಣ್‌ವೀರ್ ಕುಟುಂಬದಲ್ಲಿ ಸಂತೋಷ ಹೀಗೆ ಎಂದೆಂದಿಗೂ ಇರಲಿ ಎಂದು ಅಭಿಮಾನಿಗಳು ಹಾಗೂ ಸಿನಿ ತಾರೆಯರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.