
ಮೈಸೂರು(ಡಿ. 21) 'ಬೆಸಿಕಲಿ ನಾನು ಮೈಸೂರಿನವನು.. ಆದರೆ ಹುಟ್ಟಿ ಬೆಳೆದಿದ್ದು ಕರಾವಳಿ..ಕುಂದಾಪುರ..ನಾನು ಅವಳನ್ನು ಫಸ್ಟ್ ಟೈಮ್ ನೋಡಿದ್ದೆ ಆ ಯಕ್ಷಗಾನದ ಡ್ರೆಸ್ ನಲ್ಲಿ.'.. ಹೀಗೆ ಡೈಲಾಗ್ ಒಂದು ಮುಗಿದ ತಕ್ಷಣ ಹಾಡು ಆರಂಭವಾಗಿತ್ತದೆ. ಯೂಟ್ಯೂಬ್ ನಲ್ಲಿ ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ.
ಕನ್ನಡಿಗರೆ ಮಾಡಿರುವ ಸಾಹಸ.. ಮೈಸೂರಿನ ಹುಡುಗನ ಸಾಹಸಕ್ಕೆ ಮೆಚ್ಚುಗೆಗಳ ಮಹಾಪೂರ ಹರಿದು ಬಂದಿದೆ. 'ಅಲೆಯಾಗಿ ಬಾ' ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಕುಂದಾಪುರದ ತಾಣಗಳಲ್ಲಿ ಶೂಟಿಂಗ್ ಮಾಡಿರುವ ಒಂದು ಹಾಡು ಪ್ರೇಮ ಕತೆಯನ್ನು ತೆರೆದಿಡುತ್ತದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಕಿರಣ್ , ರಥ ಕಿರಣ ಎಂಬ ಹೆಸರಿನಲ್ಲಿ ಸ್ಕ್ರೀನ್ ಆವರಿಸಿಕೊಳ್ಳುತ್ತಾರೆ. ಸಮುದ್ರ ತೀರದಿಂದಲೇ ಆರಂಭವಾಗುವ ಕತೆ ಬಾಲ್ಯ-ಶಾಲೆ ಎಲ್ಲವನ್ನು ತಂದಿಡುತ್ತದೆ.
ಕತೆ ಸಹನ ಸುಧಾಕರ ಅವರದ್ದಾಗಿದ್ದರೆ ಪುನೀತ್ ರಾಜ್ ಕುಮಾರ್ ಅವರ ಪಿಆರ್‌ಕೆ ಆಡಿಯೋ ಜವಾಬ್ದಾರಿ ತೆಗೆದುಕೊಂಡಿದೆ. ರಾಜೇಶ್ ಕೃಷನ್ ಮತ್ತು ಆಶಾ ಭಟ್ ಅವರ ಕಂಠಸಿರಿ ಇದೆ. ರಥ ಕಿರಣ ತೆರೆಯಲ್ಲಿ ಕಾಣಿಸಿಕೊಂಡಿದ್ದು ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ಮೂಡಿಬಂದಿದೆ.
ನಿರ್ಮಾಪಕರಾಗಿ ಮಲ್ಲೇಶ್-ಸುರೇಶ್ ಹಣ ಹಾಕಿದ್ದಾರೆ. ಲೋಹಿತ್ ಕೀರ್ತಿ ಆಕ್ಷನ್ ಕಟ್ ಹೇಳಿದ್ದರೆ ಸಂಗೀತ ಭರತ್ ಬಿಜೆ ಅವರದ್ದು. ಒಟ್ಟಿನಲ್ಲಿ ಅಲೆ ಸಾಂಗ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಸಿನಿಮಾ ಜಗತ್ತಿನ ಕಡೆಗೂ ಡಾ. ಕಿರಣ್ ಅವರ ಪ್ರತಿಭೆ ಸಿಗಲಿ ಎಂಬುದು ಆಶಯ. ಸಿಂಪಲ್ ಸುನಿ ಸಾಹಿತ್ಯ ನೀಡಿದ್ದಾರೆ.
ಸಿನಿಮಾ ಜಗತ್ತಿನಲ್ಲಿ ಹೊಸ ಸಾಹಸ ಮಾಡುವ ಹೆಬ್ಬಯಕೆ ನನಗಿದೆ. ನಾವು ಅನಾವರಣ ಮಾಡಿರುವ ಗೀತೆಗೆ ಮೆಚ್ಚುಗೆಗಳು ಹರಿದು ಬಂದಿವೆ. ಒಂದು ಗುಣಮಟ್ಟದ ಜತೆಗೆ ಸುಂದರ ಗೀತೆ ಕಟ್ಟಿಕೊಟ್ಟ ತೃಪ್ತಿ ಇದೆ ಎಂದು ಡಾ. ಕಿರಣ್ ತಿಳಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.